/newsfirstlive-kannada/media/post_attachments/wp-content/uploads/2024/07/Rishabh-Pant-CSK.jpg)
2024ರ ಐಪಿಎಲ್​ ಸೀಸನ್​ ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ ತಂಡದ ನಾಯಕನ ಸ್ಥಾನದಿಂದ ರೋಹಿತ್ ಶರ್ಮಾ ಅವರನ್ನು ಕಿತ್ತು ಎಸೆಯಲಾಗಿತ್ತು. ಅಲ್ಲದೆ ತಂಡದ ಹೊಸ ನಾಯಕನಾಗಿ ಹಾರ್ದಿಕ್ ಪಾಂಡ್ಯರನ್ನು ಆಯ್ಕೆ ಮಾಡಲಾಗಿತ್ತು. ಬಳಿಕ ಮುಂಬೈ ಇಂಡಿಯನ್ಸ್​ ಹಾರ್ದಿಕ್​ ಪಾಂಡ್ಯ ನೇತೃತ್ವದಲ್ಲಿ ಹೀನಾಯ ಸೋಲು ಕಂಡಿತ್ತು. ಈಗ 2025ರ ಐಪಿಎಲ್​ ಸೀಸನ್​ಗೆ ಭರ್ಜರಿ ತಯಾರಿ ನಡೆದಿದ್ದು, ರೋಹಿತ್​ ಶರ್ಮಾ ಮುಂಬೈ ತೊರೆಯೋದು ಪಕ್ಕಾ ಆಗಿದೆ.
ಇನ್ನು, ಮುಂಬೈ ಇಂಡಿಯನ್ಸ್​ ಬಿಡೋದು ಪಕ್ಕಾ ಆಗುತ್ತಿದ್ದಂತೆ ರೋಹಿತ್​​ ಶರ್ಮಾ ಅವರನ್ನು ಖರೀದಿಸಲು ಡೆಲ್ಲಿ ಕ್ಯಾಪಿಟಲ್ಸ್ ಪ್ಲ್ಯಾನ್ ರೂಪಿಸಿದೆ. ನಾಯಕನ ಸ್ಥಾನದಿಂದ ಕೆಳಗಿಳಿದಿರೋ ರೋಹಿತ್​ ಶರ್ಮಾ ಅವರನ್ನು ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಸಂಪರ್ಕಿಸಿದೆ. 2025ರ ಮೆಗಾ ಆಕ್ಷನ್​ಗೆ ಮುನ್ನವೇ ಹಿಟ್​ಮ್ಯಾನ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್​ ಟ್ರೇಡ್ ಮಾಡಿಕೊಳ್ಳುವ ಸಾಧ್ಯತೆ ಇದೆ.
ರಿಷಬ್​​​ ಪಂತ್​ಗೆ ತಂಡದಿಂದ ಕೊಕ್​​..!
ಸದ್ಯ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಕ್ಯಾಪ್ಟನ್​​ ಆಗಿರೋ ಪಂತ್​ಗೆ ಬ್ಯಾಡ್​ನ್ಯೂಸ್​ ಒಂದಿದೆ. ಡೆಲ್ಲಿ ಕ್ಯಾಪಿಟಲ್ಸ್​ ತಂಡವು ಪಂತ್​ ಅವರನ್ನು ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ಟ್ರೇಡ್​ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಕಳೆದ ಸೀಸನ್​ನಲ್ಲಿ ಪಂತ್​​​ ಡೆಲ್ಲಿ ಕ್ಯಾಪಿಟಲ್ಸ್​ ಪರ ಅದ್ಭುತ ಬ್ಯಾಟಿಂಗ್​ ಮಾಡಿ 400ಕ್ಕೂ ಹೆಚ್ಚು ರನ್​​ ಕಲೆ ಹಾಕಿದ್ರು.
ಚೆನ್ನೈ ತಂಡದ ಕ್ಯಾಪ್ಟನ್​ ಪಂತ್​​..!
ಕಳೆದ ಸೀಸನ್​ನಲ್ಲಿ ರುತುರಾಜ್​ ಗಾಯಕ್ವಾಡ್​​ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಕ್ಯಾಪ್ಟನ್​​ ಆಗಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಹಾಗಾಗಿ ಈ ಸಲ ಸಿಎಸ್​​ಕೆ ಕ್ಯಾಪ್ಟನ್​ ಚೇಂಜ್​ ಮಾಡೋ ಪ್ಲಾನ್​ ಇದೆ. ಡೆಲ್ಲಿ ಕ್ಯಾಪಿಟಲ್ಸ್​ಗೆ ರೋಹಿತ್​ ಕ್ಯಾಪ್ಟನ್​ ಆಗಲಿದ್ದು, ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಕ್ಯಾಪ್ಟನ್​ ಆಗಿ ಪಂತ್​ ನೇಮಕವಾಗಲಿದ್ದಾರೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us