newsfirstkannada.com

ಟೀಮ್​ ಇಂಡಿಯಾಗೆ ಬಂತು ಆನೆಬಲ.. ರಿಷಬ್ ಪಂತ್​ ಬ್ಯಾಟಿಂಗ್​ಗೆ ಶಿಳ್ಳೆ, ಕೇಕೆ ಹಾಕಿದ ಫ್ಯಾನ್ಸ್..!​

Share :

16-08-2023

    ಕಳೆದ ವರ್ಷ ರಸ್ತೆ ಅಪಘಾತಕ್ಕೀಡಾಗಿದ್ದ ಯುವ ಆಟಗಾರ

    BCCI ನಿರ್ದೇಶನದಂತೆ ಫಿಟ್ನೆಸ್​ ಕಾರ್ಯಕ್ರಮದಲ್ಲಿ ಪಂತ್

    ಪಂತ್​ ಭರ್ಜರಿ ಬ್ಯಾಟಿಂಗ್​, ಸಿಕ್ಸರ್​ ಸಿಡಿಸಿದ್ದಕ್ಕೆ ಫುಲ್ ಖುಷ್

ಡೆಡ್ಲಿ ಆಕ್ಸಿಡೆಂಟ್​ ಆದ ಬಳಿಕ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾದ ಬ್ಯಾಟ್ಸ್​ಮನ್​ ಕಮ್​ ವಿಕೆಟ್​ ಕೀಪರ್​ ರಿಷಬ್​ ಪಂತ್​ ಮೈದಾನದಲ್ಲಿ ಸಖತ್​ ಜೋಶ್​ನಲ್ಲಿ ಬ್ಯಾಟ್ ಬೀಸಿದ್ದಾರೆ. ಸದ್ಯ ಪಂತ್​ ಸ್ಫೋಟಕ ಬ್ಯಾಟಿಂಗ್​ ಮಾಡುತ್ತಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ.

ಭಾರತ ಕ್ರಿಕೆಟ್ ತಂಡದ ಭರವಸೆಯ ಯುವ ಆಟಗಾರ ರಿಷಬ್​ ಪಂತ್​, ಸದ್ಯ ಬೆಂಗಳೂರಿನಲ್ಲಿದ್ದು ಬಿಸಿಸಿಐ ಹೇಳಿದಂತೆ ಫಿಟ್ನೆಸ್​ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ನಿನ್ನೆ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಡೆಲ್ಲಿ ಕ್ಯಾಪಿಟಲ್ಸ್​ ಸಹ ಮಾಲೀಕ JSW ಫೌಂಡೇಶನ್ ಈವೆಂಟ್​ವೊಂದನ್ನು ನಗರದಲ್ಲಿ ಆಯೋಜನೆ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಿಷಬ್​ ಪಂತ್​ ಮೈದಾನದಲ್ಲಿ ಸಖತ್​ ಆಗಿ ಬ್ಯಾಟಿಂಗ್ ಮಾಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ 3 ಬಾಲ್​ಗಳನ್ನು ಎದುರಿಸಿದ್ದು ಕೊನೆ ಬಾಲ್​ ಅನ್ನು ಸಿಕ್ಸರ್​ ಸಿಡಿಸಿದ್ದಾರೆ. ಪಂತ್ ಸಿಕ್ಸರ್​ ಸಿಡಿಸುತ್ತಿದ್ದಂತೆ ಫ್ಯಾನ್ಸ್​ ಶಿಳ್ಳೆ, ಕೇಕೆ ಹಾಕಿ ಪ್ರೋತ್ಸಾಹ ನೀಡಿದ್ದಾರೆ.

ಕಾರು ಆ್ಯಕ್ಸಿಡೆಂಟ್​ನಲ್ಲಿ ಗಾಯಗೊಂಡಿದ್ದ ಪಂತ್

ಆಟ ಮುಗಿದ ಬಳಿಕ ಮಾತನಾಡಿದ ಪಂತ್, ನಮಗೆ ವಯಸ್ಸು ಆಗುತ್ತಾ ಹೋದಂತೆ ಜಾಸ್ತಿ ಒತ್ತಡದಿಂದ ಕ್ರಿಕೆಟ್​ ಮೇಲಿನ ಪ್ರೀತಿ ಕಡಿಮೆ ಆಗುತ್ತದೆ. ಹೀಗಾಗಿ ಲೈಫ್​ನಲ್ಲಿ ಯಾರೂ ಎಂಜಾಯ್​ಮೆಂಟ್​ ಅನ್ನು ಮಿಸ್​ ಮಾಡಿಕೊಳ್ಳಬೇಡಿ ಎಂದು ಹೇಳಿದ್ದಾರೆ.

2022ರ ಡಿಸೆಂಬರ್​ 30 ರಂದು ರಾತ್ರಿ ಐಷಾರಾಮಿ ಕಾರನ್ನು ವೇಗವಾಗಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಪಂತ್​ ದೆಹಲಿ-ಡೆಹ್ರಾಡೂನ್​ ಹೆದ್ದಾರಿಯಲ್ಲಿ ಡೆಡ್ಲಿ ಆಕ್ಸಿಡೆಂಟ್​ಗೆ ಗುರಿಯಾಗಿದ್ದರು. ಈ ವೇಳೆ ಅವರಿಗೆ ಮೊಣಕಾಲಿಗೆ ಬಲವಾಗಿ ಪೆಟ್ಟು ಬಿದ್ದು, ಕೈ, ಮುಖ, ಬೆನ್ನಿಗೆ ಗಂಭೀರ ಗಾಯಗಳಾಗಿದ್ದವು. ಸದ್ಯ ಗಾಯಗಳಿಂದ ಚೇತರಿಸಿಕೊಂಡಿರುವ ಪಂತ್​ ಸದ್ಯದಲ್ಲೇ ಟೀಮ್​ ಇಂಡಿಯಾಕ್ಕೆ ಎಂಟ್ರಿ ಕೊಡಬಹುದು ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಮ್​ ಇಂಡಿಯಾಗೆ ಬಂತು ಆನೆಬಲ.. ರಿಷಬ್ ಪಂತ್​ ಬ್ಯಾಟಿಂಗ್​ಗೆ ಶಿಳ್ಳೆ, ಕೇಕೆ ಹಾಕಿದ ಫ್ಯಾನ್ಸ್..!​

https://newsfirstlive.com/wp-content/uploads/2023/08/RISHABH_PANT_BATTING.jpg

Load More