newsfirstkannada.com

ರಿಷಬ್​ ಪಂತ್​ಗೆ ಬಂತು ಸಿಲ್ವರ್ ಬಟನ್.. YouTube​ನಿಂದ ಬರೋ ಹಣ ಏನ್ ಮಾಡ್ತಾರೆ ಯಂಗ್​​ಪ್ಲೇಯರ್?

Share :

Published June 16, 2024 at 5:47pm

  ಯುಟ್ಯೂಬ್​​ನಿಂದ ಬರೋ ಹಣವನ್ನ ರಿಷಬ್ ಏನ್ ಮಾಡ್ತಾರೆ.?

  ಟಿ20 ವರ್ಲ್ಡ್​​ಕಪ್​ನಲ್ಲಿ ಉತ್ತಮ ಫಾರ್ಮ್​​ನಲ್ಲಿರೋ ರಿಷಬ್ ಪಂತ್

  ರಿಷಬ್ ಚಾನೆಲ್​ಗೆ ಎಷ್ಟು ಲಕ್ಷ ಜನರು ಸಬ್ಸ್​ಕ್ರೈಬರ್ಸ್ ಆಗಿದ್ದಾರೆ?

ರಿಷಬ್ ಪಂತ್ ಭಾರತ ತಂಡದ ಭರವಸೆ ಬ್ಯಾಟ್ಸ್​ಮನ್ ಮತ್ತು ವಿಕೆಟ್ ಕೀಪರ್ ಆಗಿದ್ದು ಸದ್ಯದ ಟಿ20 ವರ್ಲ್ಡ್​​ಕಪ್​ನಲ್ಲಿ ಉತ್ತಮ ಫಾರ್ಮ್​​ನಲ್ಲಿದ್ದಾರೆ. ಆಡಿದ ಎಲ್ಲ ಪಂದ್ಯಗಳಲ್ಲೂ ಕ್ಲಾಸಿಕಲ್ ಆಗಿ ಪ್ರದರ್ಶನ ನೀಡಿದ್ದಾರೆ. ರಿಷಬ್ ಪಂತ್ ಅವರ ಯುಟ್ಯೂಬ್ ಚಾನೆಲ್ ಇದ್ದು ಇದೀಗ ಈ ಚಾನೆಲ್ ಬರೋಬ್ಬರಿ 1 ಲಕ್ಷ ಸಬ್ಸ್​ಕ್ರೈಬರ್ಸ್ ಹೊಂದುದೆ. ಈ ಮೂಲಕ ಯುಟ್ಯೂಬ್ ಕಂಪನಿಯಿಂದ ಸಿಲ್ವರ್ ಪ್ಲೇ ಬಟನ್ ಸಿಕ್ಕಿದ್ದಕ್ಕೆ ಯಂಗ್ ಬ್ಯಾಟ್ಸ್​ಮನ್​ ಸಂತಸ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಮುದ್ದು ನಾಯಿಗಳ ಜೊತೆ ಟೈಮ್ ಸ್ಪೆಂಡ್ ಮಾಡಿದ MS ಧೋನಿ, ಝೀವಾ.. ಬರ್ತ್​​ಡೇ ಯಾವಾಗ?

ಈಗ ಎಲ್ಲರಿಗೂ ಯುಟ್ಯೂಬ್ ಚಾನೆಲ್ ಇರುವುದು ಕಾಮಾನ್ ಆಗೋಗಿ ಬಿಟ್ಟಿದೆ. ಅದರಂತೆ ಪಂತ್ ಕೂಡ ತಮ್ಮದೇ ಆದ ಯುಟ್ಯೂಬ್ ಚಾನೆಲ್ ಅನ್ನು ಐಪಿಎಲ್ ಸಮಯದಲ್ಲಿ ಓಪನ್ ಮಾಡಿಕೊಂಡಿದ್ದರು. ಸದ್ಯ ಇದೀಗ ಈ ಯುಟ್ಯೂಬ್ ಚಾನೆಲ್​ 1 ಲಕ್ಷದ 20 ಸಾವಿರಕ್ಕೂ ಅಧಿಕ ಜನರು (100K) ಸಬ್ಸ್​ಕ್ರೈಬ್ ಮಾಡಿದ್ದಾರೆ. ಕಾರು ಆ್ಯಕ್ಷಿಡೆಂಟ್ ಆದ ಬಳಿಕ ಟೀಮ್ ಇಂಡಿಯಾಕ್ಕೆ ಮರಳಿರುವ ಪಂತ್ ಟಿ20 ವರ್ಲ್ಡ್​​​ಕಪ್​ನಲ್ಲಿ ಅಮೋಘವಾದ ಬ್ಯಾಟಿಂಗ್, ಕೀಪಿಂಗ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾ ಮೇಲೆ ಕೋಟಿ ಕೋಟಿ ಬೆಟ್ಟಿಂಗ್.. ಕ್ರಿಕೆಟ್​ ದುನಿಯಾದಲ್ಲಿ ಹೇಗೆ ನಡೀತಿದೆ ಬಾಜಿ?

ಪಂತ್ ಯುಟ್ಯೂಬ್ ಚಾನೆಲ್​ 1 ಲಕ್ಷದ 20 ಸಾವಿರ ಚಂದಾದಾರರನ್ನ ಹೊಂದಿದ್ದರಿಂದ ಯುಟ್ಯೂಬ್ ಕಂಪನಿ ಸಿಲ್ವರ್ ಪ್ಲೇ ಬಟನ್ ನೀಡಿದೆ. ಇನ್ನು ಯುಟ್ಯೂಬ್​ ಚಾನೆಲ್‌ನಿಂದ ಬರುವ ಎಲ್ಲ ಹಣವನ್ನು ಒಳ್ಳೆಯ ಉದ್ದೇಶಕ್ಕಾಗಿ ದೇಣಿಗೆಯಾಗಿ ನೀಡುವುದಾಗಿ ಪಂತ್ ಘೋಷಿಸಿದ್ದಾರೆ. ಈ ಮೂಲಕ ಕ್ರಿಕೆಟ್​ ಅಭಿಮಾನಿಗಳ ಮನ ಗೆದ್ದಿದ್ದಾರೆ. ಪಂತ್ ಅವರು ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಪೋಸ್ಟ್​ವೊಂದು ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಶುಭ್​​ಮನ್​ ಗಿಲ್​ಗೆ ಟೀಮ್​ ಇಂಡಿಯಾದಿಂದ ಗೇಟ್​ಪಾಸ್.. ಕ್ಯಾಪ್ಟನ್ ರೋಹಿತ್ ಜೊತೆ ಜಗಳ ಮಾಡಿಕೊಂಡ್ರಾ?

ಅಮೆರಿಕ-ವೆಸ್ಟ್​ ಇಂಡೀಸ್​​ನಲ್ಲಿ ನಡೆಯುತ್ತಿರುವ ಟಿ20ವರ್ಲ್ಡ್​ಕಪ್​​​ನಲ್ಲಿ ರಿಷಬ್ ಪಂತ್ ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದರು. ಐರ್ಲೆಂಡ್ ವಿರುದ್ಧ ಅಜೇಯ 26 ಎಸೆತಗಳಲ್ಲಿ 36 ರನ್ ಗಳಿಸಿದರು ಗೆಲುವಿಗೆ ಕಾರಣರಾಗಿದ್ದರು. ನಂತರ ಪಾಕಿಸ್ತಾನದ ವಿರುದ್ಧ 31 ಎಸೆತಗಳಲ್ಲಿ 42 ರನ್ ಗಳಿಸಿ, ಪಂದ್ಯವನ್ನು 6 ರನ್‌ಗಳಿಂದ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಮೆರಿಕ ಜೊತೆಗಿನ ಪಂದ್ಯದಲ್ಲೂ ಪಂತ್ ಒಳ್ಳೆಯ ಪ್ರದರ್ಶನ ನೀಡಿದ್ದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರಿಷಬ್​ ಪಂತ್​ಗೆ ಬಂತು ಸಿಲ್ವರ್ ಬಟನ್.. YouTube​ನಿಂದ ಬರೋ ಹಣ ಏನ್ ಮಾಡ್ತಾರೆ ಯಂಗ್​​ಪ್ಲೇಯರ್?

https://newsfirstlive.com/wp-content/uploads/2024/06/RISHAB_PANT_NEW.jpg

Load More