ವಿರಾಟ್ ಕೊಹ್ಲಿ, ರಿಷಬ್ ಪಂತ್ ನಡುವೆ ಎಲ್ಲ ಸರಿ ಇಲ್ವಾ?
ಅಭಿಮಾನಿಗೆ ಸಖತ್ ಕ್ಲಾಸ್ ತೆಗೆದುಕೊಂಡ ರಿಷಬ್ ಪಂತ್
RCB ಮ್ಯಾನೇಜ್ಮೆಂಟ್ ಸಂಪರ್ಕ ಮಾಡಿದ್ರಾ ಪಂತ್?
ಐಪಿಎಲ್ ವಲಯದಲ್ಲಿ ಸದ್ಯ ಫ್ರಾಂಚೈಸಿಗಳು ರಿಲೀಸ್ ಹಾಗೂ ರಿಟೈನ್ ಮಾಡುವ ಕುರಿತು ತಮ್ಮ ತಮ್ಮಲ್ಲೇ ಚರ್ಚೆ ಮಾಡುತ್ತಿವೆ. ಕೆಲ ತಂಡದ ನಾಯಕರು ಬೇರೆ ಟೀಮ್ಗೆ ಹೋಗುತ್ತಾರೆ ಎನ್ನಲಾಗುತ್ತಿದೆ. ಈ ಕುರಿತು ಯಾವುದೇ ನಿಖರ ಮಾಹಿತಿ ಇಲ್ಲ. ಸದ್ಯ ಇಂತಹದ್ದೆ ಸುಳ್ಳು ಸುದ್ದಿಯಿಂದ ಬೇಸರಗೊಂಡ ರಿಷಬ್ ಪಂತ್ ಫುಲ್ ಗರಂ ಆಗಿದ್ದಾರೆ. ಆರ್ಸಿಬಿ ಸೇರಲು ಬಯಸಿದ್ದರು ಎಂದು ಹೇಳಿದ್ದ ಅಭಿಮಾನಿಗೆ ಚಳಿ ಬಿಡಿಸಿದ್ದಾರೆ.
ಇದನ್ನೂ ಓದಿ: ಬಾಂಗ್ಲಾಗೆ ಡಿಚ್ಚಿಕೊಟ್ಟ R ಅಶ್ವಿನ್.. ಇತಿಹಾಸ ನೆನಪಿಸಿದ ಸ್ಟಾರ್ ಆಲ್ರೌಂಡರ್..! ಏನದು
ಅಭಿಮಾನಿಯೊಬ್ಬ ಎಕ್ಸ್ ಅಕೌಂಟ್ನಲ್ಲಿ ಪೋಸ್ಟ್ವೊಂದನ್ನ ಶೇರ್ ಮಾಡಿದ್ದು, ಅದರಲ್ಲಿ ಆರ್ಸಿಬಿಯಲ್ಲಿ ಕ್ಯಾಪ್ಟನ್ ಸ್ಥಾನ ಖಾಲಿ ಇದೆ. ಈ ಸಂಬಂಧ ಇದೇ ವಾರ ರಿಷಬ್ ಪಂತ್ ತಮ್ಮ ಮ್ಯಾನೇಜರ್ ಮೂಲಕ ಆರ್ಸಿಬಿ ಫ್ರಾಂಚೈಸಿಯನ್ನು ಸಂಪರ್ಕಿಸಿ ತಂಡಕ್ಕೆ ಸೇರಲು ಬಯಸಿದ್ದರು. ಆದರೆ ಆರ್ಸಿಬಿ ನಿರಾಕರಣೆ ಮಾಡಿದೆ. ಟೀಮ್ ಇಂಡಿಯಾ ಹಾಗೂ ಡೆಲ್ಲಿ ತಂಡದಲ್ಲಿ ನಡೆಯುತ್ತಿರುವ ತಂತ್ರಗಳಿಂದ ಆರ್ಸಿಬಿಗೆ ಪಂತ್ ಬರುವುದು ವಿರಾಟ್ಗೆ ಇಷ್ಟವಿಲ್ಲ ಎಂದು ಬರೆದುಕೊಂಡಿದ್ದನು.
Fake news . Why do you guys spread so much fake news on social media. Be sensible guys so bad . Don’t create untrustworthy environment for no reason. It’s not the first time and won’t be last but I had to put this out .please always re check with your so called sources. Everyday…
— Rishabh Pant (@RishabhPant17) September 26, 2024
ಸದ್ಯ ಇದಕ್ಕೆ ಗರಂ ಆಗಿಯೇ ಪ್ರತಿಕ್ರಿಯೆ ನೀಡಿರುವ ಡೆಲ್ಲಿ ಕ್ಯಾಪ್ಟನ್ ಪಂತ್, ಸೋಶಿಯಲ್ ಮೀಡಿಯಾದಲ್ಲಿ ಯಾಕೆ ಫೇಕ್ ನ್ಯೂಸ್ ಶೇರ್ ಮಾಡುತ್ತೀರಾ?. ಸೆನ್ಸಬಲ್ ಯುವಕರು ತುಂಬಾ ಕೆಟ್ಟವರು. ಫೇಕ್ ನ್ಯೂಸ್ನಿಂದ ಬೇರೆ ವಾತಾವರಣ ಸೃಷ್ಟಿ ಮಾಡಬೇಡಿ. ಇದೇ ಫಸ್ಟ್, ಇದೇ ಲಾಸ್ಟ್. ಈ ರೀತಿ ಮತ್ತೊಮ್ಮೆ ಫೇಕ್ ನ್ಯೂಸ್ ಹರಿಬಿಡಬಾರದು. ದಿನ ಇದೇ ಆದರೆ ಕೆಟ್ಟದ್ದು ಎನಿಸುತ್ತದೆ. ತಪ್ಪು ಮಾಹಿತಿಯಿಂದ ಬೇರೆ ರೀತಿಯ ವಾತಾವರಣ ನಿರ್ಮಾಣ ಆಗುತ್ತದೆ ಎಂದು ಯಂಗ್ ಕ್ರಿಕೆಟರ್ ಪ್ರತಿಕ್ರಿಯೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ