ಡೆಲ್ಲಿ ಕ್ಯಾಪಿಟಲ್ಸ್ನಲ್ಲಿ ಯಾರು ಯಾರು ರಿಟೈನ್ ಆಗಲಿದ್ದಾರೆ?
ರಿಷಬ್ ಪಂತ್ ಈ IPL ಟೀಮ್ನಲ್ಲಿ ಬ್ಯಾಟ್ ಬೀಸುವುದು ಫಿಕ್ಸ್!
ರಿಷಬ್ ಪಂತ್ ಬಗ್ಗೆ ಡೆಲ್ಲಿ ಫ್ರಾಂಚೈಸಿ ಓನರ್ ಹೇಳುವುದೇನು?
ಬಾಂಗ್ಲಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ರಿಷಬ್ ಪಂತ್ ಭರ್ಜರಿ ಶತಕ ಸಿಡಿಸಿ ತಮ್ಮ ಬ್ಯಾಟಿಂಗ್ ಪ್ರಾಬಲ್ಯ ಏನೆಂದು ತೋರಿಸಿದ್ದಾರೆ. ಇದರ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯಿಂದ ರಿಷಬ್ ಪಂತ್ ಕುರಿತು ಮಹತ್ವವಾದ ಮಾಹಿತಿಯೊಂದು ಬಹಿರಂಗಗೊಂಡಿದೆ. ಸದ್ಯ 2025ರ ಐಪಿಎಲ್ ವೃತ್ತಿಯಲ್ಲಿ ಡೆಲ್ಲಿ ಕ್ಯಾಪ್ಟನ್ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ.
ಇದನ್ನೂ ಓದಿ: ಬಾಂಗ್ಲಾ ಆಟಗಾರರನ್ನ ಫೀಲ್ಡಿಂಗ್ ನಿಲ್ಲಿಸಿದ ರಿಷಬ್ ಪಂತ್.. ಕಾಮೆಂಟರಿ ಸೇರಿ ಎಲ್ಲರಿಗೂ ಶಾಕ್!
2022ರಲ್ಲಿ ಕಾರು ಆಕ್ಸಿಡೆಂಟ್ನಲ್ಲಿ ಗಂಭೀರವಾಗಿ ಗಾಯಗೊಂಡು ಮನೆ ಸೇರಿದ್ದ ಪಂತ್ 2024ರ ವೇಳೆಗೆ ಟ್ರ್ಯಾಕ್ಗೆ ಮರಳಿದ್ದರು. ಕಳೆದ ಐಪಿಎಲ್ ಸೀಸನ್ನಲ್ಲಿ 13 ಪಂದ್ಯಗಳಿಂದ 446 ರನ್ಗಳಿಸಿದ್ದು 155 ಸ್ಟ್ರೈಕ್ರೇಟ್ ಹೊಂದಿದ್ದರು. ಚೆನ್ನೈನಲ್ಲಿ ನಡೆಯುತ್ತಿರುವ ಬಾಂಗ್ಲಾ ವಿರುದ್ಧದ ಟೆಸ್ಟ್ ಶತಕವು ಡೆಲ್ಲಿ ಕ್ಯಾಪಿಟಲ್ಸ್ ಮಾತ್ರವಲ್ಲ, ಟೀಮ್ ಇಂಡಿಯಾದಲ್ಲೂ ಮುಂದುವರೆಯಲು ಪಂತ್ ಅರ್ಹ ಎನ್ನುವ ಮೌಲ್ಯವನ್ನು ಎತ್ತಿ ತೋರಿಸುತ್ತದೆ.
ಮುಂಬೈನಲ್ಲಿ ನಡೆದ ಸಭೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲೇ ರಿಷಬ್ ಪಂತ್ ಮುಂದುವರೆಯಲಿದ್ದಾರೆ ಎಂದು ಫ್ರಾಂಚೈಸಿ ಓನರ್ ಪಾರ್ಥ್ ಜಿಂದಾಲ್ ಹೇಳಿದ್ದಾರೆ. ಡೆಲ್ಲಿಯ ಫ್ಯೂಚರ್ ಪ್ಲೇಯರ್ ಆಗಿದ್ದಾರೆ. ಹೀಗಾಗಿ ತಂಡದ ರಿಟೈನ್ ಲಿಸ್ಟ್ನಲ್ಲಿ ಅವರು ಮೊದಲಿಗರು ಆಗಿದ್ದಾರೆ. ಈ ಮೂಲಕ ಮ್ಯಾನೇಜ್‌ಮೆಂಟ್ ಹಾಗೂ ಪಂತ್ ನಡುವಿನ ವದಂತಿಗಳು ಕೊನೆಗೊಂಡಂತೆ ಆಗಿವೆ. ಇಷ್ಟು ದಿನ ಚೆನ್ನೈಗೆ ಪಂತ್ ಹೋಗುತ್ತಾರೆಂದು ಹೇಳಲಾಗುತ್ತಿತ್ತು. ಆದರೆ ಡೆಲ್ಲಿ ಓನರ್ ಪ್ರಕಾರ, ಪಂತ್ ಮೊದಲಿನ ಟೀಮ್ನಲ್ಲೇ ಮುಂದುವರೆಯಲಿದ್ದಾರೆ.
ಇದನ್ನೂ ಓದಿ: PUC ಪಾಸ್ ಆದವರಿಗೆ ಭರ್ಜರಿ ಜಾಬ್ಗಳು.. ನೂರಲ್ಲ, ಸಾವಿರಲ್ಲ 3 ಸಾವಿರಕ್ಕೂ ಅಧಿಕ ಸರ್ಕಾರಿ ಹುದ್ದೆಗಳು
ಡೆಲ್ಲಿ ಪ್ಲೇಯರ್ಗಳಾದ ಜೇಕ್ ಫ್ರೇಸರ್ ಮೆಕ್‌ಗುರ್ಕ್, ಸ್ಟಬ್ಸ್ ಜೊತೆಗೆ ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್‌ರನ್ನ ತಂಡದಲ್ಲೇ ಉಳಿಸಿಕೊಳ್ಳುವುದು ಫ್ರಾಂಚೈಸಿಯ ಯೋಜನೆಯಾಗಿದೆ. ಅಲ್ಲದೇ ವಿಕೆಟ್ ಕೀಪರ್ ಕಮ್ ಬ್ಯಾಟರ್ ಆಗಿರುವ ಅಭಿಷೇಕ್ ಪೊರೆಲ್ರನ್ನ ಬಿಟ್ಟು ಕೊಡಲು ಡೆಲ್ಲಿಗೆ ಮನಸಿಲ್ಲ ಎನ್ನಲಾಗಿದೆ. ಸದ್ಯ ಡೆಲ್ಲಿ ಕ್ಯಾಪ್ಟನ್ ಪಂತ್ ತಂಡದಲ್ಲಿ ಉಳಿಯುವುದು ಖಾಯಂ ಆದಂತೆ ಅಗಿದೆ.
The Rishabh Pant heritage! 🫡
– A Test century by Pant returning after 634 days. 🤯pic.twitter.com/V8bQ3y7RCf
— Mufaddal Vohra (@mufaddal_vohra) September 21, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ