newsfirstkannada.com

‘ಕನ್ನಡಿಗರಿಗೆ ಮೊದಲು ತಲೆ ಬಾಗಲೇಬೇಕು’.. ವೇದಿಕೆ ಮೇಲೆ ನಿಂತು ಫ್ಯಾನ್ಸ್​ಗೆ ‘I Love You’ ಎಂದ ರಿಷಬ್​ ಶೆಟ್ಟಿ

Share :

07-07-2023

    40ನೇ ವರ್ಷಕ್ಕೆ ಕಾಲಿಟ್ಟ ಖ್ಯಾತ ನಟ, ನಿರ್ದೇಶಕ ರಿಷಬ್​ ಶೆಟ್ಟಿ

    ನಿಮ್ಮನ್ನ ರಂಜಿಸೋ ಮೂಲಕ ನಿಮ್ಮೆಲ್ಲರ ಋಣ ತೀರಿಸುತ್ತೇನೆ

    ಭಾರತೀಯ ಪ್ರೇಕ್ಷಕರಿಗೆ ತಲೆ ಬಾಗುತ್ತೇನೆ ಎಂದ ಶೆಟ್ರು

ಡಿವೈನ್​ ಸ್ಟಾರ್​​ ರಿಷಬ್ ಶೆಟ್ಟಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 40ನೇ ವರ್ಷಕ್ಕೆ ಶೆಟ್ರು ಕಾಲಿಟ್ಟಿದ್ದಾರೆ. ಹೀಗಾಗಿ ಹುಟ್ಟುಹಬ್ಬದ ಪ್ರಯುಕ್ತ ಬೆಂಗಳೂರಿನ ನಾಯಂಡಹಳ್ಳಿ ಬಳಿಯ ನಂದಿ ಗ್ರೌಂಡ್​ನಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಒಟ್ಟು ಸೇರಿದ್ದ ಅಭಿಮಾನಿಗಳನ್ನು ಕಂಡು ಸಂತಸಗೊಂಡ ರಿಷಬ್​ ಶೆಟ್ಟಿ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.

ವೇದಿಕೆ ವೇಲೆ ನಿಂತು ಅಭಿಮಾನಿಗಳನ್ನು ಕಂಡು ಮಾತನಾಡಿದ ರಿಷಬ್​ ಶೆಟ್ಟಿ, ಸಂಪಾದನೆ ಹೆಂಗಿರಬೇಕು ಅಂದ್ರೆ, ಎಷ್ಟೆ ಮಳೆ ಬಂದರೂ ನನಗಾಗಿ ಕಾದರಲ್ಲಾ ಅದೇ ನನ್ನ ಜೀವಮಾನದ ಸಂಪಾದನೆ. ಇದು ಖರ್ಚು ಮಾಡೋಕೆ ಸಂಪಾದಿಸಿರೋದು ಅಲ್ಲ. ನನಗೆ ಗಾಂಧಿನಗರದಲ್ಲಿ ಥಿಯೇಟರ್ ಎಲ್ಲಿದೆ ಅಂತ ಗೊತ್ತಿರಲಿಲ್ಲ. ಮಳೆಯಲ್ಲಿ ಇದು ಸಕ್ಸಸ್ ಆಗಲ್ಲ ಅಂದುಕೊ‌‌ಂಡಿದ್ದೆ. ನಿಮ್ಮ ಕಾಯುವಿಕೆ ನನಗೆ ದೊಡ್ಡ ಗಿಫ್ಟ್. ಮಳೆ ಬಂದು ಭೂಮಿ ತಂಪೆರೆದಿದೆ. ಇಡೀ ಭಾರತೀಯ ಪ್ರೇಕ್ಷಕರಿಗೆ ತಲೆ ಬಾಗುತ್ತೇನೆ. ಕನ್ನಡಿಗರಿಗೆ ಮೊದಲ ತಲೆ ಬಾಗಲೇಬೇಕು. ನಿಮ್ಮನ್ನ ರಂಜಿಸೋ ಮೂಲಕ ನಿಮ್ಮೆಲ್ಲರ ಋಣ ತೀರಿಸುತ್ತೇನೆ ಎಂದು ಹೇಳಿದ್ದಾರೆ.

‘ಐ ಲವ್​ ಯೂ ಆಲ್’

ನಂತರ ಸ.ಹಿ.ಪ್ರಾ. ಶಾಲೆ ಕಾಸರಗೋಡು ಚಿತ್ರದ ಮತ್ತು ಕಾಂತಾರ ಚಿತ್ರದ ಎರಡು ಡೈಲಾಗ್ ಹೊಡೆದು ಶಿಳ್ಳೆ, ಚಪ್ಪಾಳೆ ಗಿಟ್ಟಿಸಿದ ಡಿವೈನ್ ಸ್ಟಾರ್. ನಾನು ಜಾಸ್ತಿ ಡೈಲಾಗ್ ಹೇಳುವ ಹೀರೊ ಅಲ್ಲ. ಸಿನಿಮಾದಲ್ಲಿ ಬರೋ ಸಂಭಾಷಣೆಯನ್ನ ಮಾತಾಡ್ತಾ ಹೋಗ್ತೀವಿ. ಇಲ್ಲಿ ಬಂದಿರೋ ಎಲ್ಲಾ ಸ್ಟಾರ್ಸ್ ಅಭಿಮಾನಿಗಳಿಗೂ ನಾನು ಋಣಿ. ಐ ಲವ್​ ಯೂ ಆಲ್​, ಥ್ಯಾಂಕ್​ ಯೂ ಸೋ ಮಚ್ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಕನ್ನಡಿಗರಿಗೆ ಮೊದಲು ತಲೆ ಬಾಗಲೇಬೇಕು’.. ವೇದಿಕೆ ಮೇಲೆ ನಿಂತು ಫ್ಯಾನ್ಸ್​ಗೆ ‘I Love You’ ಎಂದ ರಿಷಬ್​ ಶೆಟ್ಟಿ

https://newsfirstlive.com/wp-content/uploads/2023/07/rishab-5.jpg

Load More