Advertisment

ಕಾಂತಾರದಲ್ಲಿ ಕನ್ನಡದ ಕಲಾವಿದರಿಗೆ ಮೊದಲ ಅವಕಾಶ.. ಫಸ್ಟ್​ಲುಕ್​ ರಿಲೀಸ್​ ಬೆನ್ನಲ್ಲೇ ರಿಷಬ್​ ಟಾಕ್; ಏನಂದ್ರು?

author-image
AS Harshith
Updated On
ಕಾಂತಾರದಲ್ಲಿ ಕನ್ನಡದ ಕಲಾವಿದರಿಗೆ ಮೊದಲ ಅವಕಾಶ.. ಫಸ್ಟ್​ಲುಕ್​ ರಿಲೀಸ್​ ಬೆನ್ನಲ್ಲೇ ರಿಷಬ್​ ಟಾಕ್; ಏನಂದ್ರು?
Advertisment
  • ಆನೆಗುಡ್ಡೆ ಗಣಪತಿ ದೇವಸ್ಥಾನದಲ್ಲಿ ಸಿನಿಮಾ ಮುಹೂರ್ತ
  • ಕಾಂತಾರದಲ್ಲಿ ಹೊಸ ಸ್ಥಳೀಯ ಮುಖಗಳಿಗೆ ಅವಕಾಶ
  • ಹೊಂಬಾಳೆ ನಮಗೆ ದೊಡ್ಡ ಶಕ್ತಿ ಎಂದ ರಿಷಬ್​ ಶೆಟ್ಟಿ

ಉಡುಪಿ: ಕಾಂತಾರದ ಅಧ್ಯಾಯ 1 ಶೂಟಿಂಗ್ ಶುರು ಮಾಡಿದ್ದೆ ಮಾಡಲಿದ್ದೇವೆ. ಕಾಂತಾರವನ್ನು ಎಲ್ಲರೂ ಸಕ್ಸಸ್ ಮಾಡಿದ್ದೀರಿ. ಕಾಂತಾರ ಪಯಣ ಈ ಮೂಲಕ ಮುಂದುವರೆಯಲಿದೆ. ಹಿಂದೆ ಏನು ನಡೆಯಿತು ಎಂದು ಹೇಳಲು ಹೊರಟಿದ್ದೇವೆ ಎಂದು ನಟ ಮತ್ತು ನಿರ್ದೇಶಕ ರಿಷಬ್​ ಶೆಟ್ಟಿ ಆನೆಗುಡ್ಡೆಯಲ್ಲಿ ಮಾತನಾಡಿದ್ದಾರೆ.

Advertisment

ಕಾಂತಾರ ಮೂಲಕ ತುಂಬಾ ದೊಡ್ಡ ಯಶಸ್ಸನ್ನು ಕೊಟ್ಟಿದಿರಿ ನಮ್ಮ ಜವಾಬ್ದಾರಿ ಹೆಚ್ಚಿದೆ. ಇನ್ನು ಅದ್ಭುತವಾದ ಕೆಲಸ ಮಾಡುವ ಪ್ರಯತ್ನದಲ್ಲಿ ನಮ್ಮ ತಂಡ ಇದೆ. ನನಗೆ ಆನೆಗುಡ್ಡೆ ಎಂದರೆ ತುಂಬಾ ಭಕ್ತಿ. ವಿಜಯ್ ಕಿರಂಗದೂರು ಅವರು ಕೂಡ ಇಲ್ಲಿಗೆ ನಿರಂತರ ಬರುತ್ತಾರೆ. ನಿರ್ಮಾಪಕರು ಬೆಂಗಳೂರಿನಿಂದ ಯಾವತ್ತೂ ಆನೆಗುಡ್ಡೆಗೆ ಬಂದು ನಮಸ್ಕರಿಸಿ ಹೋಗುತ್ತಾರೆ. ಹಾಗಾಗಿ ಕಳೆದ ಬಾರಿಯೂ ಕೂಡ ಇಲ್ಲೇ ಮುಹೂರ್ತ ಮಾಡಿದ್ದೆವು. ಆನೆಗುಡ್ಡೆ ಗಣಪತಿ ದೇವರ ಆಶೀರ್ವಾದ ತೆಗೆದುಕೊಂಡು ಕೆಲಸ ಶುರು ಮಾಡುತ್ತೇವೆ. ಮುಂದಿನ ತಿಂಗಳು ಶೂಟಿಂಗ್ ಶುರು ಮಾಡುತ್ತೇವೆ ಎಂದು ಹೇಳಿದ್ದಾರೆ.


">November 27, 2023

ಮುಹೂರ್ತದ ವಿಚಾರ ಮಾಧ್ಯಮಗಳಿಗೆ ತಿಳಿಸಿರಲಿಲ್ಲ

ಬಳಿಕ ಮಾತನಾಡಿದ ರಿಷಬ್​ ಶೆಟ್ಟಿ, ದೇವಸ್ಥಾನದಲ್ಲಿ ಮುಹೂರ್ತದ ವಿಚಾರ ಮಾಧ್ಯಮಗಳಿಗೆ ತಿಳಿಸಿರಲಿಲ್ಲ. ಜನರಿಗೆ ಅನಾನುಕೂಲವಾಗಬಾರದು ಎಂಬ ಕಾರಣಕ್ಕೆ ತಿಳಿಸಿರಲಿಲ್ಲ. ಸಿಂಪಲ್ ಆಗಿ ಪೂಜೆ ಮಾಡಿ ಹೋಗೋಣ ಎಂದು ಬಂದಿದ್ದೆವು. ಜನರ ರೆಸ್ಪಾನ್ಸ್ ನೋಡಿ ತುಂಬಾ ಖುಷಿಯಾಗುತ್ತಿದೆ. ಕಥೆಯ ಬಗ್ಗೆ ಏನು ಹೇಳಲ್ಲ. ಮಾತಿಗಿಂತ ಕೆಲಸ ಮುಖ್ಯ. ಒಂದು ಸಣ್ಣ ಕ್ಲಿಮ್ಸ್ ಬಿಟ್ಟಿದ್ದೇವೆ ಪೋಸ್ಟರ್ ಬಿಡುಗಡೆ ಮಾಡಿದ್ದೇವೆ. ಹೋಗ್ತಾ ಹೋಗ್ತಾ ಸಿನಿಮಾನೇ ಮಾತಾಡುತ್ತೆ ಎಂದು ಹೇಳಿದ್ದಾರೆ.

Advertisment


">November 27, 2023

ಕನ್ನಡದ ಕಲಾವಿದರಿಗೆ ಕಾಂತಾರದಲ್ಲಿ ಅವಕಾಶ

ಇದು ಕರಾವಳಿ ಭಾಗಕ್ಕೆ ಸಂಬಂಧಪಟ್ಟ ಸಿನಿಮಾ. ಹಾಗಾಗಿ ಇಲ್ಲೇ ಲೊಕೇಶನ್ ಬಳಸಿಕೊಳ್ಳುತ್ತೇವೆ. ಸದ್ಯಕ್ಕೆ ನನ್ನನ್ನು ನಾನು ಕಾಸ್ಟ್ ಮಾಡಿಕೊಂಡಿದ್ದೇನೆ. ಕನ್ನಡದ ಕಲಾವಿದರಿಗೆ ಮೊದಲನೇ ಕಾಂತಾರದಲ್ಲೂ ಅವಕಾಶ ನೀಡಿದ್ದೆ ಈಗಲೂ ಅವಕಾಶ ನೀಡುತ್ತೇನೆ. ಈ ಬಾರಿ ಮತ್ತಷ್ಟು ಹೊಸ ಸ್ಥಳೀಯ ಮುಖಗಳಿಗೆ ಅವಕಾಶ ನೀಡುತ್ತೇವೆ ಎಂದಿದ್ದಾರೆ.

Advertisment


">November 27, 2023

ಹೊಂಬಾಳೆ ದೇಶದ ಪವರ್ ಹೌಸ್

ಕರಾವಳಿ ಸೇರಿದಂತೆ ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಕಲಾವಿದರನ್ನು ಬಳಸಿಕೊಳ್ಳುತ್ತೇವೆ. ರಂಗಭೂಮಿ ಹಿನ್ನೆಲೆಯವರಿಗೂ ಅವಕಾಶ ನೀಡುತ್ತೇವೆ. ಹೊಂಬಾಳೆ ನಮಗೆ ದೊಡ್ಡ ಶಕ್ತಿ. ಹೊಂಬಾಳೆ ದೇಶದ ಪವರ್ ಹೌಸ್. ಕಾಂತಾರ ಈ ಮಟ್ಟಕ್ಕೆ ಹೋಗಲು ಹೊಂಬಾಳೆ ಕಾರಣ. ಹೊಂಬಾಳೆಯವರಲ್ಲಿ ಅತ್ಯುತ್ತಮ ತಂಡವಿದೆ ಎಂದು ರಿಷಬ್​ ಶೆಟ್ಟಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment