newsfirstkannada.com

WATCH: ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಮಿಸ್ಟೇಕ್‌ಗೆ ಗಾಬರಿಯಾದ ರಿಷಿ ಸುನಕ್‌; ಏನಾಯ್ತು?

Share :

09-06-2023

    ಪದೇ ಪದೆ ಅಮೆರಿಕಾ ಅಧ್ಯಕ್ಷ ಜೋ ಬೈಡನ್‌ ಯಡವಟ್ಟು

    ಇಂಗ್ಲೆಂಡ್ PM ರಿಷಿ ಸುನಿಕ್ ಒಂದು ಕ್ಷಣ ಫುಲ್ ಶಾಕ್

    ಅಮೆರಿಕಾ ಅಧ್ಯಕ್ಷರ ಮಿಸ್ಟೇಕ್ಸ್‌ಗಳ ಬಗ್ಗೆ ಭಾರೀ ಚರ್ಚೆ

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಜೋ ಬೈಡನ್‌ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾರೆ. ಇಂಗ್ಲೆಂಡ್ ಪ್ರಧಾನಿ ರಿಷಿ ಸುನಿಕ್ ಜೊತೆ ಮಾತನಾಡುವ ಭರದಲ್ಲಿ ಬಾಯ್ತಪ್ಪಿದ್ದು ನಗೆಪಾಟಲಿಗೀಡಾಗಿದ್ದಾರೆ. ಜೋ ಬೈಡನ್ ಮಿಸ್ಟೇಕ್‌ಗೆ ಪಕ್ಕದಲ್ಲಿದ್ದ ರಿಷಿ ಸುನಿಕ್ ಒಂದು ಕ್ಷಣ ಗಾಬರಿಯಾಗಿ ನಕ್ಕು ಸುಮ್ಮನಾಗಿದ್ದಾರೆ.

ವಾಷಿಂಗ್ಟನ್‌ನಲ್ಲಿ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಹಾಗೂ ಇಂಗ್ಲೆಂಡ್ ಪ್ರಧಾನಿ ರಿಷಿ ಸುನಿಕ್‌ರ ಮಧ್ಯೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆದಿದೆ. ಈ ಸಂಭಾಷಣೆಯ ಮಧ್ಯೆ ಬೈಡನ್ ಅವರು ರಿಷಿ ಸುನಿಕ್ ಜೊತೆ ಆತ್ಮೀಯವಾಗಿ ಚರ್ಚೆ ನಡೆಸಲು ಮುಂದಾಗಿದ್ದಾರೆ.

ಇದನ್ನೂ ಓದಿ: ಸ್ಟಾರ್​​ ಆಟಗಾರರ ಮುಂದೆ ನಡೆಯಲಿಲ್ಲ ದ್ರಾವಿಡ್ ಆಟ.. ಕೊಚ್ ಸ್ಥಾನಕ್ಕೆ ಗುಡ್​ಬೈ ಹೇಳ್ತಾರಾ?

ಆಗ ರಿಷಿ ಸುನಿಕ್ ಅವರನ್ನ ಪ್ರೆಸಿಡೆಂಟ್ ಎಂದು ಕರೆದಿದ್ದು ಕೂಡಲೇ ಅವರು ಮಾಡಿದ ತಪ್ಪು ಅವರಿಗೆ ಅರಿವಾಗಿದೆ. ಪ್ರೆಸಿಡೆಂಟ್ ಎಂದ ಜೋ ಬೈಡನ್ ತಕ್ಷಣವೇ ನಾನು ನಿಮ್ಮನ್ನ ಪ್ರಧಾನಿಯಿಂದ ಪ್ರೆಸಿಡೆಂಟ್ ಆಗಲು ಬಯಸುತ್ತಿದ್ದೇನೆ ಎಂದು ಮಾತು ಬದಲಾಯಿಸಿದ್ದಾರೆ ಎನ್ನುತ್ತಾ ನಕ್ಕಿದ್ದಾರೆ.

ಜೋ ಬೈಡನ್ ಮಿಸ್ಟೇಕ್ ಆಗಿ ರಿಷಿ ಸುನಕ್ ಅವರನ್ನ ಪ್ರೆಸಿಡೆಂಟ್ ಎಂದು ಕರೆದಿರೋದು ಕಾಮಿಡಿಯಾದ್ರೂ ನಗೆಪಾಟಲಿಗೀಡಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಬೈಡನ್ ಮಿಸ್ಟೇಕ್‌ ಸರಣಿಗೆ ಮತ್ತೊಂದು ಸೇರ್ಪಡೆಯಾಗಿದೆ. ಇದಕ್ಕೂ ಮುನ್ನ ಬೈಡನ್ ಅವರು ರಿಷಿ ಸುನಕ್ ಅವರನ್ನ ರಷಿದ್ ಸುನೂಕ್ ಎಂದು ಕರೆದಿದ್ದರು. ಭಾಷಣದ ಮಧ್ಯೆ ವಿನ್ಸ್‌ಟನ್‌ ಚರ್ಚಿಲ್ ಅವರ ಹೆಸರನ್ನೇ ಹೇಳಲು ಮರೆತಿದ್ದರು. ಪದೆ ಪದೇ ಬೈಡನ್ ಅವರು ಈ ರೀತಿಯ ಮಿಸ್ಟೇಕ್ಸ್‌ ಮಾಡ್ತಿರೋದು ಸಾಕಷ್ಟು ಚರ್ಚೆಗೆ ಗುರಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

WATCH: ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಮಿಸ್ಟೇಕ್‌ಗೆ ಗಾಬರಿಯಾದ ರಿಷಿ ಸುನಕ್‌; ಏನಾಯ್ತು?

https://newsfirstlive.com/wp-content/uploads/2023/06/Joe-Biden-1.jpg

Load More