ವಾರಾಂತ್ಯದಲ್ಲಿ ಸಂಪುಟ ವಿಸ್ತರಣೆ ತೀರ್ಮಾನ ಸಾಧ್ಯತೆ
ಸಂಜೆ CM ಸಿದ್ದರಾಮಯ್ಯ, DCM ಡಿಕೆಶಿ ದೆಹಲಿ ಪ್ರವಾಸ
20 ಸಚಿವ ಸ್ಥಾನಕ್ಕೆ ಹಿರಿಯ ಕಾಂಗ್ರೆಸ್ ಶಾಸಕರ ಲಾಬಿ
ಸಂಪುಟ ವಿಸ್ತರಣೆ ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸಚಿವ ಸ್ಥಾನಕ್ಕಾಗಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಬಣದವರ ಮಧ್ಯೆ ಪೈಪೋಟಿ ಜೋರಾಗಿದೆ. ಹಿರಿಯ ಶಾಸಕರೂ ಕೂಡ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ. ಈ ಸಂಪುಟ ಸಂಕಟದಿಂದ ಪಾರಾಗಾಲು ಇವತ್ತು ಜೋಡೆತ್ತುಗಳು ದೆಹಲಿಗೆ ಹಾರಲಿದ್ದಾರೆ.
ಈಗಷ್ಟೇ ಕಣ್ಣು ತೆರೆದ ಕಾಂಗ್ರೆಸ್ ಸರ್ಕಾರಕ್ಕೆ ಸಾಲು ಸಾಲು ಸವಾಲು ಎದುರಾಗಿದೆ. ಸಿಎಂ ಪವರ್ ಶೇರಿಂಗ್ ಬಗ್ಗೆ ಎಂ.ಬಿ ಪಾಟೀಲ್ ನೀಡಿರೋ ಹೇಳಿಕೆ ಕೈ ಪಾಳಯದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ಮುಂಗಾರಿನ ಹೊಡೆತ ಒಂದು ಕಡೆಯಾದ್ರೆ 5 ಗ್ಯಾರೆಂಟಿಗಳನ್ನ ಜಾರಿಗೊಳಿಸಲೇಬೇಕಾದ ಅನಿವಾರ್ಯತೆ ಮತ್ತೊಂದು ಕಡೆ. ಈ ಎಲ್ಲಾ ಸವಾಲುಗಳ ಮಧ್ಯೆ ಸಂಪುಟ ವಿಸ್ತರಣೆ ಟೆನ್ಷನ್ ಹೆಚ್ಚಿಸಿದ್ದು, ಇವತ್ತು ಜೋಡೆತ್ತುಗಳು ದೆಹಲಿಗೆ ಹಾರೋಕೆ ಸಜ್ಜಾಗಿದ್ದಾರೆ.
ಸಂಜೆ 6 ಗಂಟೆಗೆ ಸಿಎಂ ಸಿದ್ದು, ಡಿಸಿಎಂ ಡಿ.ಕೆ ದೆಹಲಿ ಪ್ರವಾಸ
ಈಗಾಗಲೇ 8 ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದ್ರೆ, ಆ 8 ಸಚಿವರಿಗೂ ಇನ್ನೂ ಖಾತೆ ಹಂಚಿಕೆ ಆಗಿಲ್ಲ. ಸಿದ್ದು ಡಿಕೆಶಿ ಸೇರಿ 10 ಜನರ ಸಂಪುಟವಿದ್ದು, 20 ಜನರನ್ನ ಸೇರಿಸಿಕೊಂಡ್ರೆ, 30ಕ್ಕೆ ತಲುಪಲಿದೆ. ಆದ್ರೆ ಈ ಪೈಕಿ ಸಿದ್ದರಾಮಯ್ಯ ಬಣಕ್ಕೆ ಎಷ್ಟು? ಡಿಕೆಶಿ ಬಣಕ್ಕೆ ಎಷ್ಟು? ಹೈಕಮಾಂಡ್ ನಿರ್ದೇಶಿಸುವ ಸ್ಥಾನಗಳು ಎಷ್ಟು? ಫೈನಲಿ ಎಲ್ಲ ಸಚಿವರಿಗೂ ಯಾವ ಯಾವ ಖಾತೆಗಳು ಅನ್ನೋದನ್ನ ತೀರ್ಮಾನಿಸೋಕೆ ಇಂದು ಸಂಜೆ 6 ಗಂಟೆಗೆ ಜೋಡೆತ್ತುಗಳು ದೆಹಲಿಗೆ ಹಾರಲಿದ್ದಾರೆ. ಹೈಕಮಾಂಡ್ ಜೊತೆ ಸಿಎಂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಹೈ ವೋಲ್ಟೇಜ್ ಸಭೆ ನಡೆಸಲಿದ್ದಾರೆ.
ವಾರಾಂತ್ಯದಲ್ಲಿ ಸಂಪುಟ ವಿಸ್ತರಣೆ ಜೊತೆಗೆ ತೀರ್ಮಾನ
28 ಮಂದಿ ಬದಲಿಗೆ ಕೇವಲ 8 ಮಂದಿ ಸಂಪುಟ ಸೇರ್ಪಡೆ ಆಗಿದ್ದಾರೆ. ವಾರಾಂತ್ಯದಲ್ಲಿ ಸಂಪುಟ ವಿಸ್ತರಣೆ ಜೊತೆಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಬಾಕಿ 20 ಸ್ಥಾನಕ್ಕೆ ಕಾಂಗ್ರೆಸ್ನಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಸಂಪುಟದಲ್ಲಿ ತಮಗೆ ಸ್ಥಾನಬೇಕೆಂದು ಹಿರಿಯರು ಪಟ್ಟು ಹಿಡಿದಿದ್ದಾರೆ.. ಹಿರಿಯರಾದ ಆರ್ವಿ ದೇಶಪಾಂಡೆ, ಹೆಚ್ಕೆ ಪಾಟೀಲ್ ಪಟ್ಟು ಹಿಡಿದಿದ್ದಾರೆ. ಇತ್ತ, ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಎಂ.ಕೃಷ್ಣಪ್ಪ ಕೂಡ ಲಾಬಿ ನಡೆಸ್ತಿದ್ದಾರೆ. ಹೀಗಾಗಿ ಯಾರಿಗೆಲ್ಲಾ ಸ್ಥಾನ ನೀಡಬೇಕು ಅನ್ನೋದನ್ನ ವರಿಷ್ಠರ ಜತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಚರ್ಚಿಸಿ 20 ಮಂದಿ ಸಚಿವರ ಪಟ್ಟಿಯನ್ನ ಫೈನಲ್ ಮಾಡಿದ್ದಾರೆ.
ಬೆಳಗ್ಗೆ 9 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ
ಸಿಎಂ ಪವರ್ ಶೇರಿಂಗ್ ಬಗ್ಗೆ ಸಚಿವ ಎಂ.ಬಿ ಪಾಟೀಲ್ ನೀಡಿರೋ ಹೇಳಿಕೆ ಕೈ ಪಾಳಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಸಿದ್ದರಾಮಯ್ಯರೇ 5 ವರ್ಷ ಸಿಎಂ ಎಂಬ ಹೇಳಿಕೆಯಿಂದ ಕಾಂಗ್ರೆಸ್ನಲ್ಲಿ ಮತ್ತೆ ಗೊಂದಲಗಳು ಸೃಷ್ಟಿಯಾಗಿದೆ. ಎಂಬಿಪಿ ಹೇಳಿಕೆಯನ್ನ ಖುದ್ದು ಕಾಂಗ್ರೆಸ್ ನಾಯಕರೇ ಖಂಡಿಸಿದ್ದಾರೆ. ಈ ಬೆನ್ನಲ್ಲೇ ಇಂದು ಬೆಳಗ್ಗೆ 9 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಈ ವೇಳೆ ಎಂ.ಬಿ ಪಾಟೀಲ್ ಹೇಳಿಕೆ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ. ಈ ಕುರಿತೂ ಡಿಕೆಶಿ ಬಣದವರು ಪ್ರಸ್ತಾಪಿಸುವ ಸಾಧ್ಯತೆ ದಟ್ಟವಾಗಿದೆ.
ಸಂಪುಟ ವಿಸ್ತರಣೆಗೆ ಇವತ್ತು ಹೈಕಮಾಂಡ್ ಅಂತಿಮ ಮುದ್ರೆ ಹಾಕುವ ಸಾಧ್ಯತೆಗಳಿದೆ. ಜೋಡೆತ್ತುಗಳ ಹಗ್ಗಜಗ್ಗಾಟದಲ್ಲಿ ಯಾರಿಗೆ ಸಿಹಿ ಯಾರಿಗೆ ಕಹಿ ಅನ್ನೋದೆ ಸದ್ಯದ ಕುತೂಹಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ