newsfirstkannada.com

ಕನ್ನಡಿಗರಿಗೆ ಮತ್ತೆ ಕಾವೇರಿ ಶಾಕ್​​​.. ಜಲ ವಿವಾದದಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆ

Share :

19-09-2023

    ಗಾಯದ ಮೇಲೆ ಬರೆ ಎಳೆದ ಸಿಡಬ್ಲ್ಯೂಎಂಎ ಆದೇಶ!

    ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಅನ್ನದಾತರ ಕಿಡಿ

    ತ.ನಾಡಿಗೆ ನೀರು ಹರಿಸುತ್ತಾ? ಇಲ್ವಾ? ರಾಜ್ಯದ ನಡೆಯೇನು?

ರಾಜ್ಯದೆಲ್ಲೆಡೆ ಗೌರಿ-ಗಣೇಶ ಹಬ್ಬದ ಸಂಭ್ರಮ. ಆದ್ರೆ, ಈ ದಿನದಂದೇ ಕಾವೇರಿ ಕೊಳ್ಳದ ರೈತರ ಭರವಸೆಗೆ ಮತ್ತೊಂದು ಬರೆ ಬಿದ್ದಿದೆ. ಕಾವೇರಿ ಜಲ ವಿವಾದದಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದ್ದು, ತಮಿಳುನಾಡಿಗೆ ಇನ್ನಷ್ಟು ನೀರು ಹರಿಸುವಂತೆ ಪ್ರಾಧಿಕಾರ ಆದೇಶಿಸಿದೆ. ಇದು ಕರುನಾಡ ಪಾಲಿಗೆ ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತಾಗಿದೆ.

ಮಳೆರಾಯನ ಕಣ್ಣುಮುಚ್ಚಾಲೆ ಆಟಕ್ಕೆ ಸಂಕಷ್ಟಕ್ಕೆ ಸಿಲುಕಿರೋ ಕನ್ನಡ ನಾಡಿನ ಜೀವನದಿಗೆ ಈ ಬಾರಿ ಜಲ ಕಂಟಕದ ಗ್ರಹಣ ಕವಿದಿದೆ. ವರುಣನ ಅಬ್ಬರಕ್ಕೆ ಉಕ್ಕಿಹರಿಯಬೇಕಿದ್ದ ಕಾವೇರಿಯ ಒಡಲು ಈ ಬಾರಿ ಬರಿದಾಗಿದೆ. ಈ ಮಧ್ಯೆ ನೆರೆ ರಾಜ್ಯದ ನೀರಿನ ಹಪಾಹಪಿಗೆ ಕಾವೇರಿ ಹರಿಸುವಂತೆ ಮತ್ತೊಂದು ಆದೇಶ ಬಂದಿದೆ. ಕರುನಾಡು ಬಾಯಾಕಿಯಿಂದ ಬೇಸತ್ತರೂ ತಮಿಳುನಾಡಿನ ಹಿತಕ್ಕೆ ಕಾವೇರಿ ಹರಿಸುವಂತೆ ಕಟ್ಟಪ್ಪಣೆ ಬಂದಿದೆ.

ಗಣೇಶ ಹಬ್ಬದ ಸಂಭ್ರಮದಲ್ಲಿದ್ದ ಕರುನಾಡಿಗೆ ಕಾವೇರಿ ಶಾಕ್!
ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಹರಿಸಲು CWMA ಆದೇಶ

ತಮಿಳುನಾಡಿಗೆ 15 ದಿನ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಕಾವೇರಿ ನೀರು ನಿರ್ವಹಣಾ ಸಮಿತಿ ಶಿಫಾರಸು ಮಾಡಿತ್ತು.. ಈ ಆದೇಶವನ್ನ ತಿರಸ್ಕರಿಸಲು ಸರ್ಕಾರ ಕೂಡಾ ಸಿದ್ಧವಾಗಿತ್ತು. ಜೊತೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯ ಮೇಲೆ ರಾಜ್ಯದ ಚಿತ್ತ ನೆಟ್ಟಿತ್ತು. ಆದ್ರೀಗ ಕಾವೇರಿ ವಿಚಾರದಲ್ಲಿ ಕರುನಾಡಿಗೆ ಮತ್ತೆ ಅನ್ಯಾಯವಾಗಿದೆ.. ಸಿಡಬ್ಲೂಆರ್‌ಸಿ ನೀಡಿದ್ದ ಶಿಫಾರಸನ್ನೇ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಎತ್ತಿಹಿಡಿದಿದೆ.

ಇವತ್ತು ದೆಹಲಿಯಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಮಹತ್ವದ ಸಭೆ ನಡೀತು. ಈ ಸಭೆಯ ಆರಂಭದಲ್ಲೇ ತಮಿಳುನಾಡು 12 ಸಾವಿರದ 500 ಕ್ಯೂಸೆಕ್ ನೀರು ಹರಿಸುವಂತೆ ತಮಿಳುನಾಡು ಪಟ್ಟು ಹಿಡಿದಿತ್ತು. ಅಲ್ಲದೇ ಕರ್ನಾಟಕ ಕಾವೇರಿ ನೀರಿಗಾಗಿ ಸೆಪ್ಟೆಂಬರ್​ 12ರ ಆದೇಶವನ್ನ ಪಾಲಿಸುತ್ತಿಲ್ಲ ಅಂತ ಆರೋಪವನ್ನೂ ಮಾಡಿತ್ತು. ಬಳಿಕ ವಾದ ಮಂಡಿಸಿದ ಕರ್ನಾಟಕ ನಮ್ಮ ಬಳಿ ನೀರಿಲ್ಲ. ಹೀಗಾಗಿ ನೀರು ಬಿಡುವ ಪ್ರಶ್ನೆ ಉದ್ಭವಿಸೋದೆ ಇಲ್ಲ. ಬೇಕಾದರೆ CWMA ಅಧಿಕಾರಿಗಳು ಕಾವೇರಿ ಕಣಿವೆಗೆ ಬಂದು ವಾಸ್ತಪ ಸ್ಥಿತಿಯನ್ನ ಪರಿಶೀಲನೆ ಮಾಡಿ ಅಂತ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕ ವಾದ ಮಂಡಿಸಿತ್ತು. ಈ ವಾದವನ್ನೆಲ್ಲಾ ಆಲಿಸಿದ ಸಿಡಬ್ಲ್ಯೂಎಂಎ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ ಹೊರಡಿಸಿದೆ. CWRC ನೀಡಿದ್ದ ಆದೇಶವನ್ನೇ ಎತ್ತಿ ಹಿಡಿದಿದೆ. ಸೆ.13ರಿಂದ 15 ದಿನಗಳ ಕಾಲ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಆದೇಶ ಹೊರಡಿಸೋ ಮೂಲಕ ತಮಿಳುನಾಡು ಪರವಾಗಿ ಕಾವೇರಿ ನಿರ್ವಹಣಾ ಪ್ರಾಧಿಕಾರ ತೀರ್ಪು ನೀಡಿದೆ.

ಗಣೇಶ ಹಬ್ಬದಂದು ಮುಂದುವರಿದ ರೈತರ ಹೋರಾಟ

ಸಿಡಬ್ಲೂಎಂಎ ಆದೇಶದ ಬೆನ್ನಲ್ಲೇ ಈ ಬೆನ್ನಲ್ಲೇ ಮಂಡ್ಯದಲ್ಲಿ ರೈತರ ಹೋರಾಟ ತೀವ್ರಗೊಂಡಿದೆ. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದಿಂದ ಅನ್ಯಾಯವಾಗಿದೆ ಅಂತ ರೈತರ ಕಾವೇರಿ ಕಿಚ್ಚು ಮತ್ತಷ್ಟು ಧಗಧಗಿಸಿದೆ. ಮಂಡ್ಯದಲ್ಲಿ ರೈತ ಹಿತರಕ್ಷಣಾ ಸಮಿತಿ ಹೋರಾಟ ನಡೆಸಿದೆ. ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಹೋರಾಟ ನಡೆಸುತ್ತಾ ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ರೈತ ನಾಯಕರು ಆಕ್ರೋಶ ಹೊರಹಾಕಿದ್ದಾರೆ.

ಕೇಂದ್ರ ಜಲಶಕ್ತಿ ಸಚಿವರ ಭೇಟಿಯಾದ ಸಂಸದೆ ಸುಮಲತಾ

ಕಾವೇರಿ ಜಲ ವಿವಾದದ ಸಂಬಂಧ ಸಂಸದೆ ಸುಮಲತಾ, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶಿಖಾವತ್‌ರನ್ ಭೇಟಿ ಮಾಡಿದ್ರು. ಈಗಿರುವ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ. ಈ ಬಗ್ಗೆ ನೀವು ಮುತುವರ್ಜಿ ವಹಿಸಬೇಕು ಅಂತ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ. ಒಟ್ಟಾರೆ, ಕಾವೇರಿಯ ಒಡಲು ಬತ್ತಿ ಬರಿದಾಗುತ್ತಿದೆ. ಇಷ್ಟಾದ್ರೂ ನೆರೆಮನೆಯ ನೀರಿನ ಹಾಹಾಕಾರ ಮತ್ತಷ್ಟು ಹೆಚ್ಚಾಗುತ್ತಿದೆ. ಇದೀಗ ಕರ್ನಾಟಕ ಸರ್ಕಾರ ಕಾವೇರಿ ನದಿ ನೀರು ಪ್ರಾಧಿಕಾರದ ಆದೇಶ ಪಾಲಿಸುತ್ತಾ? ಅಥವಾ ರೈತರ ಹಿತಕ್ಕಾಗಿ ಆದೇಶವನ್ನ ಧಿಕ್ಕರಸಿ ದಿಟ್ಟ ಹೆಜ್ಜೆಯನ್ನ ಇಡುತ್ತಾ? ಇದೇ ಮುಂದಿರೋ ಪ್ರಶ್ನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕನ್ನಡಿಗರಿಗೆ ಮತ್ತೆ ಕಾವೇರಿ ಶಾಕ್​​​.. ಜಲ ವಿವಾದದಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆ

https://newsfirstlive.com/wp-content/uploads/2023/07/KRS-Dam-1.jpg

Load More