newsfirstkannada.com

ಕೃಷ್ಣಾ ನದಿಯಲ್ಲಿ ಜಾರಿ ಬಿದ್ದ ಯುವಕರು.. ಒಬ್ಬ ನೀರುಪಾಲು, ಮತ್ತಿಬ್ಬರು ಜಸ್ಟ್​ ಮಿಸ್​​

Share :

21-08-2023

  ಸ್ಥಳೀಯರ ಸಹಾಯದಿಂದ ಇಬ್ಬರು ಪ್ರಾಣಾಪಾಯದಿಂದ ಪಾರು

  ಕುಡಚಿ ಪಟ್ಟಣದ ಹೊರ ವಲಯದ ಗಡ್ಡೆಯಲ್ಲಿ ನಡೆದ ದುರ್ಘಟನೆ

  ನೀರುಪಾಲಾದ ಹುಸೇನ್​​ಗಾಗಿ ಅಗ್ನಿಶಾಮಕ ಸಿಬ್ಬಂದಿ ತೀವ್ರ ಹುಡುಕಾಟ

ಚಿಕ್ಕೋಡಿ: ಕೃಷ್ಣಾ ನದಿಯಲ್ಲಿ ಯುವಕನೋರ್ವ ನೀರುಪಾಲಾಗಿರೋ ಘಟನೆ ಕುಡಚಿ ಪಟ್ಟಣ ಹೊರ ವಲಯದ ಗಡ್ಡೆಯಲ್ಲಿ ಸಂಭವಿಸಿದೆ. ಬೆಳಗಾವಿ ನಗರದ ಗಾಂಧಿ ನಗರ ನಿವಾಸಿ ಹುಸೇನ್ ಅರಕಟ್ಟೆ ನೀರು ಪಾಲಾದ ಯುವಕ.

ನಿನ್ನೆ ರಜೆ ಇದ್ದ ಕಾರಣ ಕುಟುಂಬ ಸಮೇತ ಮೂವರು ಯುವಕರು ಗಡ್ಡೆಯ ದರ್ಗಾಗೆ ತೆರಳಿದ್ದರು. ಹೀಗಾಗಿ ಮನೆಗೆ ಹೋಗುವ ಮೊದಲು ಮೂವರು ಯುವಕರು ನದಿ ದಡದಲ್ಲಿ ಕುಳಿತುಕೊಂಡಿದ್ದರು. ಇದೇ ವೇಳೆ ಆಕಸ್ಮಿಕವಾಗಿ ಆಯಾ ತಪ್ಪಿ ಹುಸೇನ್ ಕಾಲು ಜಾರಿ ನೀರು ಪಾಲಾಗಿದ್ದಾನೆ. ಅಲ್ಲೇ ಕುಳಿತುಕೊಂಡಿದ್ದ ಯುವಕರು ಕೂಡ ನೀರಿನಲ್ಲಿ ಜಾರಿ ಬಿದ್ದಿದ್ದಾರೆ. ಇದನ್ನು ನೋಡ ನೋಡುತ್ತಿದ್ದಂತೆ ಸ್ಥಳೀಯರು ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಕುಡಚಿ ಪೊಲೀಸ್​​ ಅಧಿಕಾರಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಹುಸೇನ್​ಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೃಷ್ಣಾ ನದಿಯಲ್ಲಿ ಜಾರಿ ಬಿದ್ದ ಯುವಕರು.. ಒಬ್ಬ ನೀರುಪಾಲು, ಮತ್ತಿಬ್ಬರು ಜಸ್ಟ್​ ಮಿಸ್​​

https://newsfirstlive.com/wp-content/uploads/2023/08/DEATH-4-1.jpg

Load More