ಬಹುನಿರೀಕ್ಷಿತ 2023ರ ಏಕದಿನ ವಿಶ್ವಕಪ್ ಟೂರ್ನಿ
ನವೆಂಬರ್ 5ಕ್ಕೆ ಸೌತ್ ಆಫ್ರಿಕಾ VS ಟೀಂ ಇಂಡಿಯಾ
ಅಂದು ಟೀಂ ಇಂಡಿಯಾದ ದಿಗ್ಗಜ ಕೊಹ್ಲಿ ಬರ್ತ್ಡೇ!
ಸದ್ಯ ನಡೆಯುತ್ತಿರೋ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ನೀಡುತ್ತಿದೆ. ಬ್ಯಾಕ್ ಟು ಬ್ಯಾಕ್ 6ಕ್ಕೆ ಆರು ಪಂದ್ಯ ಗೆದ್ದು ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಭಾರತ ತಂಡದ ಈ ಪ್ರದರ್ಶನಕ್ಕೆ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್ನಲ್ಲಿರೋದೇ ಕಾರಣ.
ಇನ್ನು, ವಿರಾಟ್ ಕೊಹ್ಲಿ 49ನೇ ಶತಕಕ್ಕಾಗಿ ಇಡೀ ಕ್ರೀಡಾ ಜಗತ್ತೇ ಕಾಯುತ್ತಿದೆ. ಕೊಹ್ಲಿ ಇನ್ನೊಂದು ಶತಕ ಸಿಡಿಸಿದ್ರೆ ಸಚಿನ್ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಸಾರ್ವಕಾಲಿಕ ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಏಕದಿನ ಶತಕ ದಾಖಲಿಸಿದ ಏಕೈಕ ಆಟಗಾರ ಎನಿಸಿಕೊಳ್ಳಲು ಕೊಹ್ಲಿಗೆ ಬೇಕಿರುವುದು ಇನ್ನೆರಡೇ ಸೆಂಚೂರಿ.
ನವೆಂಬರ್ 5ನೇ ತಾರೀಕು ಕೊಹ್ಲಿ ಬರ್ತ್ಡೇ. ಅಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಮ್ನಲ್ಲಿ ಸೌತ್ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಸೆಣಸಲಿದೆ. ಜನ್ಮದಿನದ ಪ್ರಯುಕ್ತ ಕೊಹ್ಲಿ 49ನೇ ಏಕದಿನ ಶತಕವನ್ನು ಗಳಿಸುತ್ತಾರೆ ಎಂದು ನಾನು ನಂಬಿದ್ದೇನೆ ಎಂದು ಪಾಕ್ ಸ್ಟಾರ್ ಕ್ರಿಕೆಟರ್ ಮೊಹಮ್ಮದ್ ರಿಜ್ವಾನ್ ಹೇಳಿದ್ದಾರೆ.
ಕೊಹ್ಲಿ ಅವರಿಗೆ ಜನ್ಮದಿನದ ಶುಭಾಶಯಗಳು. ಅಂದು ಕೊಹ್ಲಿಗೆ ಎಲ್ಲಾ ರೀತಿಯ ಶ್ರೇಷ್ಠತೆ ಸಿಗಲೆಂದು ಹಾರೈಸುತ್ತೇನೆ. ಅವರು ತಮ್ಮ 49ನೇ ಏಕದಿನ ಶತಕ ಗಳಿಸುತ್ತಾರೆ ಎಂದು ಭಾವಿಸುತ್ತೇನೆ. ಜತೆಗೆ ಈ ಟೂರ್ನಿಯಲ್ಲೇ ತಮ್ಮ 50ನೇ ಏಕದಿನ ಶತಕವನ್ನು ಕೂಡ ಬಾರಿಸಲಿದ್ದಾರೆ ಎಂದು ಬಯಸುತ್ತೇನೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ