newsfirstkannada.com

Accident: ಮೈಸೂರು-ಬೆಂಗಳೂರು ದಶಪಥದಲ್ಲಿ ಮತ್ತೊಂದು ಸರಣಿ ಅಪಘಾತ.. ಲಾರಿ, ಬಸ್, ಬೈಕ್ ಮಧ್ಯೆ ಡಿಕ್ಕಿ

Share :

14-07-2023

  ಬಿಡದಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು

  ದಶಪಥ ಹೆದ್ದಾರಿಯಲ್ಲಿ ಸಾಲು, ಸಾಲು ಅಪಘಾತ

  ಸರ್ಕಾರದ ಕ್ರಮ ಉಪಯೋಗಕ್ಕೆ ಬರುತಿಲ್ವಾ..?

ರಾಮನಗರ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಸದ್ಯಕ್ಕೆ ನಿಲ್ಲುವ ಹಾಗೆ ಕಾಣ್ತುಲ್ಲ. ಇಂದು ಮತ್ತೊಂದು ಸರಣಿ ಅಪಘಾತ ಸಂಭವಿಸಿದೆ.

ರಾಮನಗರದ ಬಿಡದಿ ಬಳಿಯ ನೆಲ್ಲಿಗುಂಟಕೆರೆ ಬಳಿ ಲಾರಿ, ಬಸ್ಸು, ಕಾರು ನಡುವೆ ಅಪಘಾತವಾಗಿದೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಬಿಡದಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೀಡಾದ ವಾಹನವನ್ನು ಟೋಯಿಂಗ್ ಮೂಲಕ ತೆಗೆದುಕೊಂಡು ಹೋಗಲಾಗಿದೆ. ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 9 ತಿಂಗಳಲ್ಲಿ 600ಕ್ಕೂ ಹೆಚ್ಚು ಆ್ಯಕ್ಸಿಡೆಂಟ್: ಮೈಸೂರು ಎಕ್ಸ್​​​ಪ್ರೆಸ್​​ವೇನಲ್ಲಿ ಅಪಘಾತ ನಿಯಂತ್ರಣಕ್ಕೆ ಮೆಗಾ ಪ್ಲಾನ್ -ಅಂಥದ್ದೇನು ಮಾಡ್ತಿದ್ದಾರೆ ಗೊತ್ತಾ?

ದಶಪಥ ಲೋಕಾರ್ಪಣೆಗೊಂಡ ಬಳಿಕ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದುವರೆಗೆ 170ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, 500 ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ವಿಚಾರ ದೇಶಾದ್ಯಂತ ಸುದ್ದಿ ಆಗುತ್ತಿದ್ದಂತೆಯೇ, ಸರ್ಕಾರ ಅಪಘಾತ ತಡೆಗೆ ಪ್ಲಾನ್ ಮಾಡಿದೆ.
ಏನಿದು ಸರ್ಕಾರದ ಪ್ಲಾನ್​..?

 • 100 ಕಿ.ಮೀ ವೇಗ ಮಿತಿ ಇದ್ದರೂ ಹೆಚ್ಚಿನ ವೇಗದಲ್ಲಿ ಸಂಚಾರ
 • ಕಳೆದ 9 ತಿಂಗಳಲ್ಲಿ ದಶಪಥದಲ್ಲಿ 600ಕ್ಕೂ ಹೆಚ್ಚು ಅಪಘಾತಗಳು
 • ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ 256 ಅಪಘಾತಗಳು ನಡೆದಿವೆ
 • 170ಕ್ಕೂ ಹೆಚ್ಚು ಮಂದಿ ಸಾವು, 500ಕ್ಕೂ ಹೆಚ್ಚು ಮಂದಿ ಗಾಯ
 • ಅಪಘಾತ ತಡೆಯಲು ಗಂಟೆಗೆ 100 ಕಿ.ಮೀ ವೇಗ ಮಿತಿ ನಿಗದಿ
 • ಕೆಲವೆಡೆ 80 ಕಿ.ಮೀ ವೇಗದ ಮಿತಿ ವಿಧಿಸಿ ಫಲಕ ಅಳವಡಿಕೆ
 • ಶಿಸ್ತಿನಿಂದ ನಿಯಮ ಪಾಲಿಸಲು ಹೆದ್ದಾರಿಯಲ್ಲಿ ಸ್ಪೀಡ್ ರೇಡಾರ್ ಗನ್
 • ವಾಹನದ ನಂಬರ್ ಪ್ಲೇಟ್ ರೆಕಗ್ನಿಷನ್ ಕ್ಯಾಮೆರಾಗಳ ಅಳವಡಿಕೆ
 • 100 ಕಿ.ಮೀ.ಗಿಂತಲೂ ಅಧಿಕ ವೇಗದಲ್ಲಿ ಸಂಚಾರ ಮಾಡಿದ್ರೆ ಕೇಸ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Accident: ಮೈಸೂರು-ಬೆಂಗಳೂರು ದಶಪಥದಲ್ಲಿ ಮತ್ತೊಂದು ಸರಣಿ ಅಪಘಾತ.. ಲಾರಿ, ಬಸ್, ಬೈಕ್ ಮಧ್ಯೆ ಡಿಕ್ಕಿ

https://newsfirstlive.com/wp-content/uploads/2023/07/KSRTC.jpg

Load More