ಪೊಲೀಸ್ ಸ್ಟೇಷನ್ ಬಳಿಯೇ ಬಿಗ್ ರಾಬರಿ.. ಸ್ಥಳೀಯರು ಶಾಕ್!
ಸಾಕ್ಷಿ ಬಿಟ್ಟಿಲ್ಲ.. ಸುಳಿವು ಸಿಕ್ಕಿಲ್ಲ.. ಖತರ್ನಾಕ್ ಖದೀಮರ ಕೈಚಳಕ!
ಒಂದೇ ವಾರದಲ್ಲಿ 2 ಪ್ರಯತ್ನ.. ಫಸ್ಟ್ ಪ್ಲಾಫ್.. ಆಮೇಲೆ ಸಕ್ಸಸ್
ಬೆಂಗಳೂರು: ಚಿನ್ನ ಹಾಕ್ಕೋಳದ್ರಲ್ಲಿರೋ ಖುಷಿ ಮನೆಯಲ್ಲಿ ಇಟ್ಕೊಳ್ಳೋದ್ರಲ್ಲಿ ಇರಲ್ಲ ಬಿಡಿ. ಇನ್ನು, ಚಿನ್ನನ ಅಂಗಡಿಯಲ್ಲಿಟ್ಟು ನೆಮ್ಮದಿಯಾಗಿ ಮನೆಯಲ್ಲಿ ಮಲಂಗಂಗೂ ಇರಲ್ಲ. ಮೊನ್ನೆ ಮೊನ್ನೆಯಷ್ಟೇ ಬ್ಯಾಡರಹಳ್ಳಿಯಲ್ಲಿ ಹಾಡುಹಗಲೇ ಗನ್ ತೋರಿಸಿ ಜ್ಯೂವಲರ್ ಶಾಪ್ ರಾಬರಿ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಮತ್ತೊಂದು ಜ್ಯೂವಲೆರ್ಸ್ ಶಾಪ್ನಲ್ಲಿ ಖತರ್ನಕ್ ರಾಬರಿ ನಡೆದು ಹೋಗಿದೆ.
ಪಕ್ಕಾ ಸ್ಕೆಚ್ಚು, ಪಕ್ಕಾ ಪ್ಲಾನ್, ಈ ಅಟೆಂಪ್ಟ್ ನೋಡಿದ್ರೆ ಯಾರ್ ಬೇಕಾದರೂ ಹೇಳ್ತಾರೆ ಇದು ಖತರ್ನಾಕ್ ಖದೀಮರದ್ದೇ ಕೈ ಚಳಕ ಅಂತೆ. ಅಷ್ಟು ನೀಟ್ ಆಗಿ ಕೆಲಸ ಮಾಡಿ ಮುಗಿಸಿದ್ದಾರೆ. ಕನ್ಫರ್ಮ್ ಆಗಿ ಆ ಖದೀಮರು ಈ ಶಾಪ್ನ ತುಂಬಾ ದಿನದಿಂದ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಅಂತಾ ಓಡಾಡುತ್ತಾ ಇರುತ್ತಾರೆ. ಸುತ್ತಮುತ್ತ ಏರಿಯಾ ಬಗ್ಗೆ ತಿಳಿದುಕೊಂಡು ಗ್ರೌಂಡ್ ವರ್ಕ್ ಮಾಡಿದ್ದಾರೆ. ಆಮೇಲೆ ನೀಟ್ ಆಗಿ ಮಧ್ಯರಾತ್ರಿ ಅಖಾಡಕ್ಕಿಳಿದು ಭರ್ಜರಿ ಚಿನ್ನದ ಬೇಟೆಯಾಡಿದ್ದಾರೆ. ಇನ್ಫ್ಯಾಕ್ಟ್ ಇದಕ್ಕೂ ಮೊದಲ ಒಂದು ವಾರದ ಹಿಂದೆ ಪಕ್ಕದ ಅಂಗಡಿಯಲ್ಲಿ ಒಂದು ರಾಬರಿ ಅಟೆಂಪ್ಟ್ ಆಗಿತ್ತಂತೆ. ಆದ್ರೆ, ಆ ಪ್ರಯತ್ನ ವಿಫಲವಾದ ಬೆನ್ನಲ್ಲೇ ಈ ಘಟನೆ ನಡೆದಿದ್ದು, ಈ ರಾತ್ರಿಗಳ್ಳರು ಎರಡನೇ ಸಲ ಸಕ್ಸಸ್ ಆಗಿದ್ದಾರೆ.
ಹೌದು, ಜ್ಯೂವಲರ್ಸ್ ಶಾಪ್ಗೆ ಕನ್ನ ಹಾಕಿ ಭಾರಿ ಬೆಲೆಯ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನ ಎತ್ಕೊಂಡು ಎಸ್ಕೇಪ್ ಆಗಿರೋ ಖದೀಮರ ಕಥೆ. ಬರೀ ಎಸ್ಕೇಪ್ ಆಗೋದು ಮಾತ್ರವಲ್ಲ ಒಂದೇ ಒಂದು ಸುಳಿವು ಸಹ ಬಿಟ್ಟುಕೊಡದಷ್ಟು ಬುದ್ದಿವಂತಿಕೆ ಪ್ರದರ್ಶಿಸಿದ್ದಾರೆ. ಇದರೊಂದಿಗೆ ಒಂದೇ ವಾರದಲ್ಲಿ ಒಂದೇ ಏರಿಯಾದಲ್ಲಿ ಎರಡು ಸಲ ರಾಬರಿ ಘಟನೆಗಳು ಆಗಿರೋದು ಸಾರ್ವಜನಿಕರನ್ನ ಬೆಚ್ಚಿಬೀಳಸುವಂತೆ ಮಾಡಿದೆ.
ಗ್ಯಾಸ್ ಕಟರ್ ಬಳಸಿ ಜ್ಯುವೆಲರಿ ಶಾಪ್ಗೆ ಕನ್ನ!
ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ-ಬೆಳ್ಳಿ ಲೂಟಿ!
ಈ ಘಟನೆ ನಡೆದಿರೋದು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿಯಲ್ಲಿ. ಹೆಬ್ಬಗೋಡಿಯಿಂದ ಕಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿರುವ ಮಾತಾಜಿ ಜ್ಯುವೆಲ್ಲರ್ಸ್ ಆಂಡ್ ಬ್ಯಾಂಕರ್ಸ್ನ ಮಳಿಗೆಯಲ್ಲಿ. ಜ್ಯೂವಲರ್ಸ್ ಶಾಪ್ ಬಾಗಿಲನ್ನು ಗ್ಯಾಸ್ ಕಟರ್ ಮೂಲಕ ಕಟ್ ಮಾಡಿ ಒಳ ನುಗ್ಗಿರುವ ಖತರ್ನಾಕ್ ಖದೀಮರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಹೊತ್ಯೊಯ್ದಿದ್ದಾರೆ. ಬುಧವಾರ ರಾತ್ರಿ ಎಂದಿನಂತೆ ಕೆಲಸ ಮುಗಿಸಿ ಜ್ಯೂವಲರ್ಸ್ ಶಾಪ್ ಮಾಲೀಕ ಸುನೀಲ್ ಮನೆಗೆ ಹೋಗಿದ್ದಾರೆ. ಬೆಳಗೆದ್ದು ನೋಡಿದ್ರೆ ಪಕ್ಕದ ಅಂಗಡಿಯವ್ರು ಫೋನ್ ಮಾಡಿ ನಿಮ್ಮ ಅಂಗಡಿಯಲ್ಲಿ ಈ ಥರಾ ಆಗಿದೆಯಂತ ವಿಷ್ಯ ಮುಟ್ಟಿಸಿದ್ದಾರೆ. ಬೆಳಂ ಬೆಳಗ್ಗೆ ವಿಷಯ ಕೇಳಿ ಗಾಬರಿಯಾದ ಮಾಲೀಕ ಓಡಿ ಬಂದವನಿಗೆ ದೊಡ್ಡ ಶಾಕ್ ಎದುರಾಗಿತ್ತು.
ಗ್ಯಾಸ್ ಕಟರ್ ಬಳಸಿ ಜ್ಯುವೆಲರಿ ಶಾಪ್ನ ಕಬ್ಬಿಣದ ಗೇಟ್ ಹಾಗೂ ರೋಲಿಂಗ್ ಶಟರ್ ಡೋರ್ ಕಟ್ ಮಾಡಿರುವ ಖದೀಮರ ಗ್ಯಾಂಗ್ ಅಂಗಡಿಯಲ್ಲಿದ್ದ ಸುಮಾರು ಇಪ್ಪತ್ತೈದರಿಂದ ಮೂವತ್ತು ಲಕ್ಷ ರೂ ಬೆಲೆಬಾಳುವ ಚಿನ್ನ ಹಾಗೂ 50 ಕೆಜಿಯಷ್ಟು ಬೆಳ್ಳಿ ವಸ್ತುಗಳನ್ನ ಕದ್ದಿದ್ದಾರೆ. ಒಳಗಿರುವ ಲಾಕರ್ ಹೊಡೆಯುವ ಪ್ರಯತ್ನ ಮಾಡಿದ್ದಾರೆ, ಆದರೆ ಅದು ಸಾಧ್ಯವಾಗದ ಕಾರಣ ಹೊರಗಿದ್ದ ಚಿನ್ನ ಬೆಳ್ಳಿಯನ್ನ ಮಾತ್ರ ಹೆಗರಿಸಿದ್ದಾರೆ. ಇನ್ನು ಎಸ್ಕೇಪ್ ಆಗುವಾಗ ಸಿಸಿಟಿವಿ ಇಟ್ಟಿರೋದನ್ನು ಗಮನಿಸಿದ ಕಳ್ಳರು ಪೊಲೀಸರಿಗೆ ಯಾವುದೇ ಸುಳಿವು ಸಿಗಬಾರದೆಂದು ಸಿಸಿಟಿವಿ ಕ್ಯಾಮಾರಾದ ಡಿವಿಆರ್ ಸಮೇತವಾಗಿ ಎಸ್ಕೇಪ್ ಆಗಿದ್ದಾರೆ. ದಸರಾ ಪ್ರಯುಕ್ತ ಏರಿಯಾದಲ್ಲಿ ನವರಾತ್ರಿ ಕಾರ್ಯಕ್ರಮಗಳು ನಡೆದಿವೆ. ಈ ವೇಳೆ ಕಾರ್ಯಕ್ರಮಕ್ಕೆ ಹೋದವರು ಇದೇ ಮಾರ್ಗವಾಗಿ ರಾತ್ರಿ ಒಂದು ಗಂಟೆಗೆ ವಾಪಸ್ ಸಹ ಬಂದಿದ್ದಾರೆ. ಅದಾದ ಮೇಲೆ ಈ ಘಟನೆ ಆಗಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಒಂದು ವಾರದ ಹಿಂದೆ ಅದೇ ಏರಿಯಾದಲ್ಲಿ ನಡೆದಿತ್ತು ರಾಬರಿ ಪ್ರಯತ್ನ!
ಅಂದ್ಹಾಗೆ, ಈ ಘಟನೆ ನಡೆಯುವ ಒಂದು ವಾರದ ಹಿಂದೆ ಅಂದ್ರೆ ಅಕ್ಟೋಬರ್ 13ನೇ ತಾರೀಖು ರಾತ್ರಿ ಅದೇ ಏರಿಯಾದಲ್ಲಿದ್ದ ಪೂಜಾ ಜ್ಯೂವಲರ್ಸ್ ಶಾಪ್ನಲ್ಲೂ ಕಳ್ಳತನದ ಯತ್ನ ನಡೆದಿದೆ. ಆದ್ರೆ, ಅವತ್ತು ಖದೀಮರ ಪ್ಲಾನ್ ಸಕ್ಸಸ್ ಆಗಿಲ್ಲ. ಇನೋವಾ ಕಾರಿನಲ್ಲಿ ಬಂದಿದ್ದ ಕಳ್ಳರು ಗ್ಯಾಸ್ ಕಟರ್ ಬಳಸಿ ರಾಬರಿಗೆ ಯತ್ನಿಸಿದ್ದರು. ಆದರೆ ಗ್ಯಾಸ್ ಕಟ್ಟಿಂಗ್ ವೇಳೆ ಶಬ್ದ ಬಂದ ಕಾರಣ ಅಕ್ಕಪಕ್ಕದ ಅಂಗಡಿ ಹಾಗೂ ಮನೆಯವರು ಅಲರ್ಟ್ ಆಗಿದ್ದರು. ಇದರಿಂದ ಗಾಬರಿಗೊಂಡು ಕಳ್ಳರು ಅರ್ಧಕ್ಕೆ ಬಿಟ್ಟು ಎಸ್ಕೇಪ್ ಆಗಿದ್ದರು. ಆದ್ರೀಗ ಒಂದು ವಾರ ಕಳೆಯವಷ್ಟರಲ್ಲಿ ಮಾತಾಜಿ ಜ್ಯೂವಲರ್ಸ್ ಶಾಪ್ನಲ್ಲಿ ಚಿನ್ನ ಬೆಳ್ಳಿಯನ್ನ ಹೆಗಿರಿಸಿದ್ದಾರೆ.
ಈ ರಾಬರಿಯಾಗಿರೋದು ಹೊಸೂರು ಮುಖ್ಯರಸ್ತೆಯ ಹೆದ್ದಾರಿಯ ಸಮೀಪ. ಹೆಚ್ಚು ಕಡಿಮೆ ಹೆದ್ದಾರಿಯಿಂದ 100 ಮೀಟರ್. ದುರಂತ ಅಂದ್ರೆ ಇಲ್ಲಿಂದ ಹೆಬ್ಬಗೋಡಿ ಪೊಲೀಸ್ ಸ್ಟೇಷನ್ ಸಹ 200 ಮೀಟರ್ ದೂರದಲ್ಲಿದೆ. ಹೀಗಿದ್ದರೂ ಆ ಕಳ್ಳರು ಧೈರ್ಯವಾಗಿ ರಾಬರಿ ಮಾಡಿರೋದು ಅಚ್ಚರಿ ತಂದಿದೆ.
ಅಂದ್ಹಾಗೆ, ಮೊದಲ ಸಲ ರಾಬರಿಗೆ ಬಂದಿದ್ದ ಖದೀಮರು ಇನೋವಾ ಕಾರಿನಲ್ಲಿ ಓಡಾಡಿರುವ ದೃಶ್ಯ ಸಿಸಿಟಿವಿ ಕ್ಯಾಮಾರಾದಲ್ಲಿ ಸೆರೆಯಾಗಿದೆ. ಆದರೀಗ ಮತಾಜಿ ಜ್ಯೂವಲರ್ಸ್ನಲ್ಲೂ ಇವರೇ ಕಳ್ಳತನ ಮಾಡಿದ್ದಾರೆ ಅನ್ನೋದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ ಒಂದೇ ವಾರದ ಅಂತರದಲ್ಲಿ ಅಕ್ಕಪಕ್ಕನೇ ಎರಡು ಘಟನೆ ನಡೆದಿರೋದ್ರಿಂದ ಬಹುಶಃ ಒಂದೇ ಗ್ಯಾಂಗ್ನವರು ಮಾಡಿರಬಹುದು ಅಂತ ಅನುಮಾನ ವ್ಯಕ್ತಪಡಿಸಲಾಗ್ತಿದೆ. ಈ ಘಟನಾ ಸಂಬಂಧ ಹೆಬ್ಬಗೋಡಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ಪುರುಷೋತ್ತಮ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ತಂಡವೂ ಘಟನಾ ಸ್ಥಳಕ್ಕೆ ಬಂದಿದ್ದು ಹಲವು ಸಾಕ್ಷ್ಯಗಳನ್ನ ಕಲೆಹಾಕಿದ್ದಾರೆ. ಒಟ್ಟಿನಲ್ಲಿ ಜನವಸತಿ ಪ್ರದೇಶದಲ್ಲಿ, ಜನರ ಓಡಾಟ ಇರುವಾಗಲೇ ಕಳ್ಳರು ಕೃತ್ಯ ನಡೆಸಿರೋದು ಜನರನ್ನ ಬೆಚ್ಚಿ ಬೀಳಿಸುವಂತೆ ಮಾಡಿದೆ. ಹಾಗಾಗಿ, ಆದಷ್ಟು ಬೇಗ ಪೊಲೀಸರು ಖತರ್ನಾಕ್ ಖದೀಮರ ಹೆಡೆಮುರಿ ಕಟ್ಟುವ ಮೂಲಕ ಜನರಲ್ಲಿನ ಆತಂಕವನ್ನ ದೂರ ಮಾಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ