ಪೊಲೀಸರಿಂದ ಬರೋಬ್ಬರಿ 150 ಸಿಸಿಟಿವಿ ಪರಿಶೀಲನೆ
ಕೊನೆಗೂ ಪೊಲೀಸ್ಗೆ ಸಿಕ್ಕಿಬಿದ್ದ ಖತರ್ನಾಕ್ ಫ್ಯಾಮಿಲಿ
ಈ ಖತರ್ನಾಕ್ ಫ್ಯಾಮಿಲಿ ಕಾಯಕವೇ ಹಗಲು ದರೋಡೆ
ಬೆಂಗಳೂರು: ಪೊಲೀಸರು ಕೈ ಇಟ್ಟರೆ ಯಾವುದು ಅಸಾಧ್ಯವಲ್ಲ ಅನ್ನೋದಕ್ಕೆ ಈ ಸ್ಟೋರಿಯೇ ಸಾಕ್ಷಿ. ಈ ಪ್ರಕರಣವನ್ನ ಭೇದಿಸುವುದಕ್ಕೆ ಪೊಲೀಸರು ಬರೋಬ್ಬರಿ 150 ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಕೊನೆಗೂ ಖತರ್ನಾಕ್ ಕಳ್ಳರ ಗ್ಯಾಂಗ್ ಅನ್ನು ಅರೆಸ್ಟ್ ಮಾಡಿದೆ.
ಇನ್ನು, ಪೊಲೀಸರಿಂದ ಬಂಧನಕ್ಕೆ ಒಳಗಾದ ಆರೋಪಿಗಳು ಕನ್ಯಾಕುಮಾರ್, ಮಹೇಶ್, ಕದ್ರಿ ವೇಲು, ಸುಂದರ್ ರಾಜ್ ಎಂಬುವರು. ಇವರು ದೊಡ್ಡಪ್ಪ ,ಚಿಕ್ಕಪ್ಪ, ಮಾವನ ಸೋದರಳಿಯ ಹೀಗೆ ಸಂಬಂಧಿಕರು. ಈ ಗ್ಯಾಂಗ್ ಕಸುಬು ಪಿಕ್ ಪಾಕೆಟ್, ಸರಗಳ್ಳತನ.
ಖತರ್ನಾಕ್ ಗ್ಯಾಂಗ್ ಹಿನ್ನೆಲೆಯೇನು?
ಖತರ್ನಾಕ್ ಗ್ಯಾಂಗ್ ಮೊದಲೇ ಪ್ಲಾನ್ ಮಾಡಿಕೊಂಡು ಬೆಳ್ಳಗ್ಗೆಯಿಂದಲೇ ತಮ್ಮ ಕಾಯಕ ಶುರು ಮಾಡುತ್ತಾರೆ. ಬಲಗಾಲಿಟ್ಟು ಕಲಾಸಿಪಾಳ್ಯಕ್ಕೆ ಬರೋ ಈ ಆರೋಪಿಗಳು ನಾಲ್ಕು ವಿಭಾಗಗಳಾಗಿ ವಿಂಗಡಣೆಗೊಂಡು ತಮ್ಮ ಕೈಚಳಕ ತೋರಿಸ್ತಾರೆ. ಪ್ರಯಾಣಿಕರ ಸೋಗಿನಲ್ಲೇ ಬಂದು ಬಸ್ ಹತ್ತುತ್ತಾರೆ. ಹೇಗಾದರೂ ಮಾಡಿ ಬಹಳ ಸಲೀಸಾಗಿ ಪಿಕ್ ಪಾಕ್ಯೇಟ್ ಮಾಡೇ ಬಿಡುತ್ತಾರೆ. ಇದಿಷ್ಟು ಮಾತ್ರವಲ್ಲದೆ ಈ ಕಳ್ಳರ ಕುಟುಂಬ ಸೆಂಟಿಮೆಂಟ್ ಇಟ್ಟುಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕದ್ದ ಚೈನ್ ಮಾತ್ರ ತಮ್ಮ ಬಳಿ ಇರಿಸಿಕೊಂಡು ಬಳಿ ತಾಳಿಯನ್ನ ಹುಂಡಿಯಲ್ಲಿ ಹಾಕಿದ್ರಂತೆ. ಕೇವಲ ಕಲಾಸಿಪಾಳ್ಯ ಮಾತ್ರವಲ್ಲದೆ ಮೆಜೆಸ್ಟಿಕ್, ಸಿಟಿ ಮಾರ್ಕೆಟ್, ವಿಲ್ಸನ್ ಗಾರ್ಡನ್, ಶಾಂತಿನಗರದಲ್ಲೂ ಜನರನ್ನ ಬಹಳ ಸಲೀಸಾಗಿ ಯಾಮಾರಿಸುತ್ತಿದ್ದರು. ಬನಶಂಕರಿ, ಶ್ರೀರಾಮಪುರದಲ್ಲಿ ಮನೆ ಮಾಡಿಕೊಂಡಿದ್ದ ಈ ಗ್ಯಾಂಗ್, ಬಳಿಕ ಕದ್ದ ವಸ್ತುಗಳನ್ನು ಮಾರಾಟ ಮಾಡಿ ಶೋಕಿ ಜೀವನ ನಡೆಸುತ್ತಿದ್ದರು.
ಅದೇ ರೀತಿ ಕಳೆದ ವಾರ BMTC ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವೆಂಕಟರೆಡ್ಡಿ ಎಂಬುವವರಿಂದ 70 ಸಾವಿರ ಹಣ ಹಾಗೂ ತಾಳಿ ಚೈನ್ ಕದ್ದು ಎಸ್ಕೇಪ್ ಆಗಿದ್ರು. ಸದ್ಯ ಎಸ್.ಆರ್ ನಗರ ಪೊಲೀಸರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಹಿರಿಯ ಅಕ್ಕನ ಚಾಳಿ ಮನೆ ಮಂದಿಗೆಲ್ಲ ಎಂಬಂತೆ ಕಳ್ಳತನ ಹಾದಿಯಲ್ಲೇ ಎಲ್ಲರೂ ನಡೆಯುತ್ತಿದ್ದಾರೆ ಎಂಬುದು ಮಾತ್ರ ವಿಪರ್ಯಾಸ.