newsfirstkannada.com

ಮಲೇಷ್ಯಾಗೆ ಹಾರಿದ ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಜೋಡಿ; ಫ್ಯಾನ್ಸ್‌ಗೆ ಮತ್ತೆ ಶಾಕ್ ಕೊಟ್ಟ ಸಮಂತಾ; ಇಲ್ಲಿವೆ ಟಾಪ್​ 5 ಸಿನಿ ಸುದ್ದಿಗಳು

Share :

05-07-2023

  ಹೆಣ್ಣು ಮಗುವಿಗೆ ತಂದೆಯಾದ ಖುಷಿಯಲ್ಲಿ ಗೂಗ್ಲಿ ಪವನ್ ಒಡೆಯರ್

  ಸೂಪರ್​ ಸ್ಟಾರ್​ ಕಮಲ್ ಹಾಸನ್ ನಟನೆಯ 233ನೇ ಸಿನಿಮಾ ಅನೌನ್ಸ್

  ಮುಂದಿನ ಒಂದು ವರ್ಷ ಸಿನಿಮಾ ಶೂಟಿಂಗ್‌ನಿಂದ ನಟಿ ಸಮಂತಾ ದೂರ

2ನೇ ಮಗು ಸ್ವಾಗತಿಸಿದ ಪವನ್ ಒಡೆಯರ್ ದಂಪತಿ! 

ಗೂಗ್ಲಿ, ರಣವಿಕ್ರಮ, ನಟಸಾರ್ವಭೌಮ ಚಿತ್ರಗಳ ಖ್ಯಾತಿಯ ನಿರ್ದೇಶಕ ಪವನ್ ಒಡೆಯರ್​ ಹಾಗೂ ಪ್ರಗತಿ ದಂಪತಿ ಎರಡನೇ ಮಗುವನ್ನ ಸ್ವಾಗತಿಸಿದ್ದಾರೆ. 2018ರಲ್ಲಿ ಮದುವೆಯಾಗಿದ್ದ ಒಡೆಯರ್ ಹಾಗೂ ಪ್ರಗತಿ ದಂಪತಿಗೆ ಈಗಾಗಲೇ ಶೌರ್ಯ ಎನ್ನುವ ಮಗ ಇದ್ದಾನೆ. ಈಗ ಎರಡನೇ ಬಾರಿ ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಪವನ್ ಒಡೆಯರ್ ಸಂತಸ ಹಂಚಿಕೊಂಡಿದ್ದಾರೆ.

ಮಲೇಶಿಯಾಗೆ ಹೊರಟ ಯಶ್​-ರಾಧಿಕಾ

ರಾಕಿಂಗ್ ಸ್ಟಾರ್ ಯಶ್​ ಮತ್ತು ರಾಧಿಕಾ ಪಂಡಿತ್​ ಮಲೇಶಿಯಾಗೆ ಹೊರಟಿದ್ದಾರೆ ಎನ್ನಲಾಗಿದೆ. ಕಳೆದ ರಾತ್ರಿ ಹೈದರಾಬಾದ್​ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡ ಯಶ್​-ರಾಧಿಕಾ ದಂಪತಿ ಖಾಸಗಿ ಕಾರ್ಯಕ್ರಮದ ಹಿನ್ನೆಲೆ ಮಲೇಶಿಯಾಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಯಶ್​-ರಾಧಿಕಾ ಅವರ ಏರ್​ಪೋರ್ಟ್​ ಫೋಟೋ ಮತ್ತು ವಿಡಿಯೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಕಮಲ್ ಹಾಸನ್ 233ನೇ ಸಿನಿಮಾ ಅನೌನ್ಸ್

ಸೂಪರ್ ​ಸ್ಟಾರ್​ ಕಮಲ್ ಹಾಸನ್ ಅವರ 233ನೇ ಸಿನಿಮಾ ಅನೌನ್ಸ್ ಆಗಿದೆ. ಸದ್ಯ ಶಂಕರ್ ಜೊತೆ ‘ಇಂಡಿಯನ್-2’ ಸಿನಿಮಾ ಮಾಡುತ್ತಿರುವ ಕಮಲ್ ಹಾಸನ್ ತಮ್ಮ ಮುಂದಿನ ಚಿತ್ರವನ್ನ ತಮಿಳು ನಿರ್ದೇಶಕ ಎಚ್​ ವಿನೋದ್​ ಜೊತೆ ಮಾಡ್ತಿದ್ದಾರೆ. ಈ ಚಿತ್ರವನ್ನ ಸ್ವತಃ ಕಮಲ್ ಹಾಸನ್ ಅವರೇ ರಾಜ್ ಕಮಲ್ ಸ್ಟುಡಿಯೋ ಫಿಲಂಸ್ ಸಂಸ್ಥೆ ಅಡಿ ನಿರ್ಮಾಣ ಮಾಡ್ತಿದ್ದಾರೆ.

ನಟನೆಯಿಂದ ಸಮಂತಾ ಬ್ರೇಕ್!

ನಟಿ ಸಮಂತಾ ನಟನೆಯಿಂದ ಬ್ರೇಕ್ ತೆಗೆದುಕೊಳ್ಳಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಸದ್ಯ ವಿಜಯ್ ದೇವರಕೊಂಡ ಜೊತೆ ‘ಖುಷಿ’ ಸಿನಿಮಾ ಮಾಡುತ್ತಿ ರುವ ಸಮಂತಾ ಈ ಸಿನಿಮಾ ಮುಗಿಸಿ ಒಂದು ವರ್ಷ ಬ್ರೇಕ್ ತೆಗೆದುಕೊಳ್ಳುವ ಲೆಕ್ಕಾಚಾರದಲ್ಲಿದ್ದಾರಂತೆ. ಮತ್ತೊಂದೆಡೆ ಸಿಟಾಡೆಲ್​ ಚಿತ್ರವೂ ಬಹುತೇಕ ಕೊನೆಯ ಹಂತದಲ್ಲಿದೆಯಂತೆ. ಈ ಎರಡು ಚಿತ್ರಗಳ ಬಳಿಕ ಸದ್ಯ ಸಮಂತಾ ಯಾವುದೇ ಹೊಸ ಚಿತ್ರ ಕೈಗೆತ್ತಿಕೊಂಡಿಲ್ಲ ಎನ್ನುವುದು ಗಮನ ಸೆಳೆಯುತ್ತಿದೆ. ಒಂದು ವರ್ಷದ ಬ್ರೇಕ್‌ಗಾಗಿ ನಿರ್ಮಾಪಕರಿಂದ ಪಡೆದ ಅಡ್ವಾನ್ಸ್‌ ಹಣವನ್ನು ಸಮಂತಾ ಹಿಂತಿರುಗಿಸುತ್ತಿದ್ದಾರೆ.

ಡೆವಿಲ್​ ಎಂಟ್ರಿ!

ಜ್ಯೂನಿಯರ್ ಎನ್​ಟಿಆರ್ ಸಹೋದರ ನಟ ಕಲ್ಯಾಣ್ ರಾಮ್ ನಟನೆಯ ಡೆವಿಲ್ ಚಿತ್ರದ ಟೀಸರ್​ ಬಿಡುಗಡೆಯಾಗಿದೆ. ಶ್ರೀಕಾಂತ್ ವಿಸಾ ಈ ಚಿತ್ರ ನಿರ್ದೇಶಿಸ್ತಿದ್ದು, ಸಂಯುಕ್ತ ಮೆನನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಡೆವಿಲ್​ ಟೀಸರ್​​ಗೆ ಒಳ್ಳೆಯ ರೆಸ್ಪಾನ್ಸ್​ ಸಿಕ್ಕಿದ್ದು, ಮೆಚ್ಚುಗೆ ಪಡೆದುಕೊಳ್ತಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಮಲೇಷ್ಯಾಗೆ ಹಾರಿದ ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಜೋಡಿ; ಫ್ಯಾನ್ಸ್‌ಗೆ ಮತ್ತೆ ಶಾಕ್ ಕೊಟ್ಟ ಸಮಂತಾ; ಇಲ್ಲಿವೆ ಟಾಪ್​ 5 ಸಿನಿ ಸುದ್ದಿಗಳು

https://newsfirstlive.com/wp-content/uploads/2023/07/yash-18.jpg

Load More