newsfirstkannada.com

ರಾಕಿ ಬಾಯ್​ಗೆ ಮೊದಲ ಕಾರು ಗಿಫ್ಟ್​​ ಕೊಟ್ಟಿದ್ದು ರಾಧಿಕಾ ಅಲ್ಲ! ಮತ್ತ್ಯಾರು?

Share :

16-06-2023

  ಬಲು ದುಬಾರಿ ಕಾರು ಖರೀದಿಸಿದ ರಾಕಿಂಗ್​​ ಸ್ಟಾರ್​​ ಯಶ್!

  ಹೊಸ ಕಾರಿನ ಬೆಲೆ ಕೇಳಿದ್ರೆ ಶಾಕ್​ ಆಗೋದು ಗ್ಯಾರಂಟಿ!

  ಸದ್ಯ ರಾಕಿ ಬಾಯ್​​​ ಗ್ಯಾರೇಜ್​ನಲ್ಲಿ ಎಷ್ಟು ಕಾರುಗಳಿವೆ?

ರಾಕಿಂಗ್ ಸ್ಟಾರ್ ಯಶ್ ಅವರ 19ನೇ ಸಿನಿಮಾ ಯಾವಾಗ ಮತ್ತು ಯಾವುದು ಹೇಗಿರಲಿದೆ ಇತ್ಯಾದಿ ಸಮಾಚಾರ ಅಧಿಕೃತ ರಾಕಿ ಭಾಯ್ ಬಳಗದಿಂದ ಇನ್ನೂ ಕೂಡ ಬಂದಿಲ್ಲ. ಅಂತೆ-ಕಂತೆ ಊಹಾಪೋಹಗಳು ಇಡೀ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಂಚರಿಸುತ್ತಿವೆ. ಆದ್ರೆ ಯಶ್ ಬಳಗದಿಂದಲೇ ಒಂದು ಅಧಿಕೃತ ಸ್ವೀಟ್ ಮಾಹಿತಿ ರಾಕಿ ಭಾಯ್ ಫ್ಯಾನ್ಸ್​​ಗೆ ಸಿಕ್ಕಿದೆ. ಫಾರ್​​ ದಿ ಫಸ್ಟ್ ಟೈಮ್ ರಾಮಾಚಾರಿ ಜೋಡಿ ಹೊಸ ಕಾರಿನ ಜೊತೆ ಜಾಮ್ ಜೂಮ್ ಟ್ರಿಪ್ ಮಾಡಲು ಸಜ್ಜಾಗಿದ್ದಾರೆ.

ಬಣ್ಣದ ಲೋಕದಲ್ಲಿ ದಿನ ಬಾಟಕ್ಕೆ ಬದುಕಿನ ಹಠಕ್ಕೆ ಸಣ್ಣಪುಟ್ಟ ಪಾತ್ರವನ್ನ ಮಾಡ್ತಾ ಒಂದೊಂದೆ ಹೆಜ್ಜೆ ಇಡ್ತಾ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮೆರವಣಿಗೆ ಮಾಡ್ತಿರೋರು ರಾಕಿಂಗ್ ಸ್ಟಾರ್ ಯಶ್. ಒಂದು ಕಾಲದಲ್ಲಿ ಬಸ್​, ಬೈಕ್ ಅಂತ ಓಡಾಡ್ತಿದ್ದ ಯಶ್ ಈಗ ಕೋಟಿ ಕೋಟಿ ರೂಪಾಯಿ ಮೌಲ್ಯಗಳ ಕಾರುಗಳು ಒಡೆಯ. ಈಗ ಯಶ್ ಮನೆಯ ಕಾರ್ ಪಾರ್ಕಿಂಗ್ ಮತ್ತೊಂದು ದುಬಾರಿ ಕಾರ್ ಬಂದು ವಿರಾಜಮಾನವಾಗಿದೆ.

ರಾಕಿಭಾಯ್ ಯಶ್‌ ಕಾರ್ ಗ್ಯಾರೇಜ್‌ನಲ್ಲಿ ಈಗಾಗಲೇ ಬಹಳಷ್ಟು ದುಬಾರಿ ಬೆಲೆಯ ಕಾರ್‌ಗಳು ಪಾರ್ಕ್ ಆಗಿವೆ. ಇದೀಗ 5 ಕೋಟಿ ಬೆಲೆಯ ರೇಂಜ್ ರೋವರ್ ಸ್ಪೆಷಲ್ ಅಡಿಷನ್ ಕಾರನ್ನು ಯಶ್ ಖರೀದಿಸಿದ್ದಾರೆ. ಹೊಸ ಕಾರ್ ಎಂಟ್ರಿ ಕೊಟ್ಟ ಸಂತಸದಲ್ಲಿ ಒಂದು ರೌಂಡ್ ಡ್ರೈವ್ ಮಾಡಿರುವ ರಾಕಿಂಗ್ ದಂಪತಿ ಮಕ್ಕಳ ಜೊತೆ ಖುಷಿಯನ್ನು ಹಂಚಿಕೊಂಡಿದ್ದಾರೆ. ಹೌದು ರಾಕಿಂಗ್ ಸ್ಟಾರ್ ಯಶ್ ಮನೆಗೆ ಮತ್ತೊಂದು ಕ್ವಾಸ್ಲಿಯೆಸ್ಟ್ ಕಾರು ಎಂಟ್ರಿಯಾಗಿದೆ.

ವಿಶ್ವದ ಅತ್ಯಾಧುನಿಕ ಕಾರುಗಳಲ್ಲಿ ಒಂದಾಗಿರುವ ರೇಂಜ್ ರೋವರ್ ಕಾರನ್ನ ಖರೀದಿ ಮಾಡಿದ್ದಾರೆ. ಇದಕ್ಕೆ ನಾಲ್ಕುವರೆಯಿಂದ ಐದು ಕೋಟಿ ಬೆಲೆ ಇದೆ. ಇನ್ನು ಯಶ್ ಅವರ ಕರಿಯರ್​​ನಲ್ಲೇ ಫಸ್ಟ್ ಟೈಮ್ ಕಾರು ತೆಗೆದುಕೊಂಡಿದ್ದು ಯಾವಾಗ ಗೊತ್ತಾ? ಡ್ರಾಮಾ ಸಿನಿಮಾದ ಶೂಟಿಂಗ್ ಟೈಮ್​​ನಲ್ಲಿ ಯಶ್ ಅವರ ಸಹೋದರಿ ಪಜೆರೋ ಸ್ಪೋರ್ಟ್ ಕಾರ್ ಅನ್ನ ಗಿಫ್ಟ್ ನೀಡಿದ್ದರಂತೆ. ತದ ನಂತರ ಯಶ್ ಅವರ ಮನೆಯಲ್ಲಿ ಈಗ ಬರೋಬ್ಬರಿ 10 ಕಾರುಗಳಿವೆ.

ಮರ್ಸಿಡಿಸ್ ಬೆನ್ಸ್ ಕಂಪನಿಯ ಮೂರು ಕಾರುಗಳಿವೆ. ಮರ್ಸಿಡಿಸ್ ಜಿಎಲ್ಎಸ್ 350, ಮರ್ಸಿಡಿಸ್ ಬೆಂಜ್ ಸ್ಪೋರ್ಟ್ಸ್ ಕಾರ್, ಮರ್ಸಿಡಿಸ್ ಬೆಂಜ್ ಕ್ಲಾಸಿಕೊ ಕಾರುಗಳಾಗಿವೆ. ಇನ್ನು, ಟೊಯೊಟಾ ವೆಲ್‌ಫೇರ್‌, ಫಾರ್ಚೂನರ್, 2 ಇನ್ನೋವಾ, 2 ಮಹೇಂದ್ರ ಥಾರ್ ಕಾರುಗಳು ರಾಕಿಭಾಯ್ ಒಡೆತನದಲ್ಲಿದೆ. ಯಶ್ ಹೊಸ ಕಾರು ಕೊಂಡಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾ ಸದ್ದು ಮಾಡ್ತಾ ವೈರಲ್ ಆಗುತ್ತಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ರಾಕಿ ಬಾಯ್​ಗೆ ಮೊದಲ ಕಾರು ಗಿಫ್ಟ್​​ ಕೊಟ್ಟಿದ್ದು ರಾಧಿಕಾ ಅಲ್ಲ! ಮತ್ತ್ಯಾರು?

https://newsfirstlive.com/wp-content/uploads/2023/06/yash-13.jpg

Load More