newsfirstkannada.com

ಚಿನ್ನಾರಿ ಮುತ್ತನಿಗೆ ಯಶ್ ಸಾಂತ್ವನ.. ಸ್ಪಂದನಾ ಅಂತಿಮ ದರ್ಶನಕ್ಕೆ ಸ್ಯಾಂಡಲ್‌ವುಡ್ ತಾರೆಯರ ದಂಡು

Share :

09-08-2023

  ವಿಜಯ ರಾಘವೇಂದ್ರ ಅವರನ್ನು ತಬ್ಬಿಕೊಂಡ ಯಶ್ ಸಾಂತ್ವನ

  ಸ್ಪಂದನಾ ಹಠಾತ್ ಸಾವಿಗೆ ರಾಕಿಂಗ್ ಸ್ಟಾರ್ ಯಶ್ ಕಂಬನಿ

  ಸ್ಪಂದನಾ ಅಂತಿಮ ದರ್ಶನಕ್ಕೆ ಬಂದ ಸ್ಯಾಂಡಲ್‌ವುಡ್ ತಾರೆಯರು

ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಹಠಾತ್ ಸಾವು ಇಡೀ ಕರುನಾಡಿಗೆ ಬರಸಿಡಿಲು ಬಡಿದಂತೆ ಆಗಿದೆ. ಚಿನ್ನಾರಿ ಮುತ್ತನ ಮುದ್ದಾದ ಬಾಳಲ್ಲಿ ದುರಂತ ಸಂಭವಿಸಿರೋದಕ್ಕೆ ಪ್ರತಿಯೊಬ್ಬರು ಕಂಬನಿ ಮಿಡಿಯುತ್ತಿದ್ದಾರೆ. ಸ್ಪಂದನಾ ಅವರ ಅಂತಿಮ ದರ್ಶನ ಪಡೆಯಲು ಸ್ಯಾಂಡಲ್‌ವುಡ್‌ನ ನಟ, ನಟಿಯರು ಆಗಮಿಸುತ್ತಿದ್ದು, ವಿಜಯ ರಾಘವೇಂದ್ರ ಅವರಿಗೆ ಸಾಂತ್ವನ ಹೇಳಿ ಸಂತೈಸೋ ಪ್ರಯತ್ನ ಮಾಡುತ್ತಿದ್ದಾರೆ.

ಸ್ಪಂದನಾ ಅವರ ಅಂತಿಮ ದರ್ಶನ ಪಡೆದ ರಾಕಿಂಗ್ ಸ್ಟಾರ್ ಯಶ್

ಸ್ಪಂದನಾ ಅವರ ಅಂತಿಮ ದರ್ಶನ ಪಡೆಯಲು ಬಂದ ರಾಕಿಂಗ್ ಸ್ಟಾರ್ ಯಶ್ ಅವರು ಪಾರ್ಥಿವ ಶರೀರಕ್ಕೆ ಶ್ರದ್ಧಾಂಜಲಿ ಅರ್ಪಿಸಿದರು. ಸ್ಪಂದನಾ ಮೃತದೇಹದ ಪಕ್ಕದಲ್ಲಿದ್ದ ವಿಜಯ ರಾಘವೇಂದ್ರ ಅವರನ್ನ ನೋಡಿದ ಯಶ್, ಗಟ್ಟಿಯಾಗಿ ತಬ್ಬಿಕೊಂಡು ಭಾವುಕರಾದರು. ಚಿನ್ನಾರಿ ಮುತ್ತನಿಗೆ ಮುತ್ತು ಕೊಟ್ಟು ಸಮಾಧಾನ ಪಡಿಸೋ ಪ್ರಯತ್ನ ಮಾಡಿದರು.

ಸ್ಪಂದನಾ ಅವರ ಅಂತಿಮ ದರ್ಶನ ಪಡೆದ ನಟ ಜಗ್ಗೇಶ್, ಶ್ರೀಮುರುಳಿ

ಸ್ಪಂದನಾ ಅವರ ಅಂತಿಮ ದರ್ಶನಕ್ಕೆ ಇಂದು ಬೆಳಗ್ಗೆಯಿಂದ ಬಿ.ಕೆ ಶಿವರಾಮ್ ಅವರ ನಿವಾಸದ ಬಳಿ ಸ್ಯಾಂಡಲ್‌ವುಡ್ ತಾರೆಯರ ದಂಡೇ ಹರಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿನ್ನಾರಿ ಮುತ್ತನಿಗೆ ಯಶ್ ಸಾಂತ್ವನ.. ಸ್ಪಂದನಾ ಅಂತಿಮ ದರ್ಶನಕ್ಕೆ ಸ್ಯಾಂಡಲ್‌ವುಡ್ ತಾರೆಯರ ದಂಡು

https://newsfirstlive.com/wp-content/uploads/2023/08/Yash-Vijay-Raghavendra.jpg

Load More