newsfirstkannada.com

Watch: ಮಲೇಷ್ಯಾ ಅಭಿಮಾನಿಯಿಂದ ಯಶ್​​ಗೆ ವಿಶೇಷ ಉಡುಗೊರೆ; ರಾಕಿಂಗ್ ಸ್ಟಾರ್ ಫುಲ್ ಖುಷ್..!

Share :

08-07-2023

  ಅಭಿಮಾನಿ ನೀಡಿದ್ದ ಸ್ಪೆಷಲ್ ಉಡುಗೊರೆ ವೈರಲ್

  ಮಲೇಷ್ಯಾ ಪ್ರವಾಸದಲ್ಲಿರುವ ರಾಕಿಂಗ್ ಸ್ಟಾರ್ ಯಶ್

  ಗುಟ್ಟಾಗಿ ಉಳಿದಿದೆ ಯಶ್ ಮುಂದಿನ ಚಿತ್ರದ ಸೀಕ್ರೆಟ್

ಕೆಜಿಎಫ್​ ನಂತರ ರಾಕಿಂಗ್ ಸ್ಟಾರ್​ ಯಶ್ ಯಾವ ಸಿನಿಮಾ ಮಾಡುತ್ತಿದ್ದಾರೆ ಎನ್ನುವುದು ಇನ್ನೂ ನಿಗೂಢವಾಗಿಯೆ ಉಳಿದಿದೆ. ಮೊನ್ನೆ ಮೊನ್ನೆ ನಿಮ್ಮ ಮುಂದಿನ ಸಿನಿಮಾ ಯಾವಾಗ ಎಂದು ಕರ್ನಾಟಕದಲ್ಲಿ ಪ್ರಶ್ನೆ ಮಾಡಿದ್ದಾಗ ಯಶ್ ಸದ್ಯದಲ್ಲೇ ಎಲ್ಲವನ್ನು ನಿಮಗೆ ತಿಳಿಸುತ್ತೇನೆ. ದೊಡ್ಡ ಪ್ರಾಜೆಕ್ಟ್​ ಮಾಡುವಲ್ಲಿ ಬ್ಯುಸಿಯಾಗಿದ್ದೇವೆ ಎಂದಿದ್ದರು. ಇದಾದ ಬೆನ್ನಲ್ಲೇ ಯಶ್ ಇದೀಗ ಮಲೇಷ್ಯಾದಲ್ಲಿ ಪ್ರತ್ಯಕ್ಷರಾಗಿದ್ದು ಅಭಿಮಾನಿಯೊಬ್ಬರು ಬಿಡಿಸಿದ ಫೋಟೋ ನೋಡಿ ರಾಕಿಂಗ್​ ಸ್ಟಾರ್ ಯಶ್ ಸಂತಸ ವ್ಯಕ್ತಪಡಿಸಿದ್ದಾರೆ.​

ಯಶ್​ ಅವ್ರು ಮಲೇಷ್ಯಾ ಟ್ರಿಪ್​ನಲ್ಲಿದ್ದರೋ ಅಥವಾ ಬೇರೆಯಾವುದಾದ್ರೂ ಸಿನಿಮಾ ಶೂಟಿಂಗ್​ಗೆ ಹೋಗಿದ್ದರೋ ತಿಳಿದಿಲ್ಲ. ಹಲವು ತಿಂಗಳಿಂದ ಯಶ್ ಅವ್ರು ಮುಂಬೈ, ಶ್ರೀಲಂಕಾ, ದುಬೈ, ಜರ್ಮನಿ ಅಂತಾ ಸುತ್ತಾಡುತ್ತಿದ್ದಾರೆ. ಸದ್ಯ ಇದೀಗ ಮಲೇಷ್ಯಾದಲ್ಲಿ ಯಶ್​, ಬಂಗಾರದ ಶೋ ರೂಮ್​ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಮಾರಂಭದಲ್ಲಿ ಅಭಿಮಾನಿಯೊಬ್ರು​ ಯಶ್​ ಕುಟುಂಬದ ಫೋಟೋವನ್ನು ಬ್ಯುಟಿಫುಲ್​ ಆಗಿ ಡ್ರಾಯಿಂಗ್ ಮಾಡಿದ್ದಾರೆ. ಇದನ್ನು ಯಶ್ ಅವರೇ ಲಾಂಚ್​ ಮಾಡಿದ್ದು ಫ್ಯಾಮಿಲಿ ನೋಡುತ್ತಿದ್ದಂತೆ ಫುಲ್ ಶಾಕ್​ ಆಗಿದ್ದಾರೆ. ಇದೇನು ಇಷ್ಟೊಂದು ಸಖತ್ ಆಗಿ ಫೋಟೋ ಡ್ರಾಯಿಂಗ್ ಮಾಡಿದ್ದಾರೆ ಎಂದು. ಬಳಿಕ ಸಂತಸದಿಂದ ಆ ಫೋಟೋ ಡ್ರಾಯಿಂಗ್ ಮಾಡಿದವರಿಗೆ ಥ್ಯಾಂಕ್ಸ್​ ಹೇಳಿದ್ದಾರೆ.

ಸದ್ಯ ಯಶ್ ಮೆಲೇಷ್ಯಾ ಟ್ರಿಪ್​ನಲ್ಲಿರುವ ಫೋಟೋಗಳು ವೈರಲ್ ಆಗುತ್ತಿವೆ. ಕಾರ್ಯಕ್ರಮದಲ್ಲಿ ಯಶ್ KGF ಸಿನಿಮಾದ ಡೈಲಾಗ್​ವೊಂದನ್ನು ಹೇಳಿ ಫ್ಯಾನ್ಸ್​ ಅನ್ನು ರಂಜಿಸಿದರು. ತಮ್ಮ ಫ್ಯಾಮಿಲಿ ಫೋಟೋ ಲಾಂಚ್​ ಮಾಡಿದ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಯಶ್ ಕಾರ್ಯಕ್ರಮಕ್ಕೆ ಬರುತ್ತಿದ್ದಂತೆ ಅಭಿಮಾನಿಗಳು ಆಟೋಗ್ರಾಫ್ ಹಾಗೂ ಸಿಲ್ಫಿಗಾಗಿ ಮುಗಿಬಿದ್ದಿದ್ದರು.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

Watch: ಮಲೇಷ್ಯಾ ಅಭಿಮಾನಿಯಿಂದ ಯಶ್​​ಗೆ ವಿಶೇಷ ಉಡುಗೊರೆ; ರಾಕಿಂಗ್ ಸ್ಟಾರ್ ಫುಲ್ ಖುಷ್..!

https://newsfirstlive.com/wp-content/uploads/2023/07/YASH_MALAYASIA.jpg

Load More