newsfirstkannada.com

ಯಶ್​ ಬಗ್ಗೆ ಕೇಳಿದ ಸುದ್ದಿ ನಿಜಾನಾ?; ವೈರಲ್ ಸುದ್ದಿಯ ಅಸಲಿ ಕಥೆ..!

Share :

10-06-2023

  ಇಂಡಿಯಾ ಕಾಸ್ಟ್ಲೀ ಪ್ರಾಜೆಕ್ಟ್​ನಲ್ಲಿ ರಾಕಿಂಗ್ ಸ್ಟಾರ್..!

  ‘ರಾಮಾಯಣ’ಕ್ಕೆ ಶಕ್ತಿ ತುಂಬುತ್ತಾರಾ ರಾಕಿ ಭಾಯ್?

  ಅಭಿಮಾನಿಗಳ ಮಿಲಿಯನ್ ಡಾಲರ್ ಪ್ರಶ್ನೆ

ಕೆಜಿಎಫ್ ಸಿನಿಮಾ ಆದ್ಮೇಲೆ ರಾಕಿಂಗ್ ಸ್ಟಾರ್​ ಯಶ್​ ಪ್ಯಾನ್ ಇಂಡಿಯಾಗೆ ಒಂಥರಾ ಹೊಸ ಸಿಇಓನೇ ಆಗಿದ್ದಾರೆ. ಸದ್ಯ ಸಿನಿಮಾ ಜಗತ್ತಿನಲ್ಲಿ ರಾಕಿ ಭಾಯ್​ ನೆಕ್ಸ್ಟ್​ ಸಿನಿಮಾ ಯಾವುದು ಅನ್ನೋದು ಅತಿ ದೊಡ್ಡ ಸೆನ್ಸೇಷನ್. ಈ ಸೆನ್ಸೇಷನ್​​ಗೆ ಉತ್ತರ ಸಿಗೋಕೆ ಮುಂಚೆಯೇ ಈಗ ಮತ್ತೊಂದು ಮೆಗಾ ಸೆನ್ಸೇಷನ್​​ ಸುದ್ದಿ ಹೊರಬಿದ್ದಿದೆ.

ಎಲ್ಲವೂ ಅಂದ್ಕೊಂಡಂತೆ ಆಗಿದ್ರೆ ಕೆಜಿಎಫ್ ಚಾಪ್ಟರ್ 2 ಆಗ್ತಿದ್ದಂತೆ ಮಫ್ತಿ ಖ್ಯಾತಿಯ ನರ್ತನ್ ಜೊತೆ ಯಶ್​ 19ನೇ ಚಿತ್ರ ಶುರು ಮಾಡ್ಬೇಕಿತ್ತು. ಆದರೆ ಸ್ಕ್ರಿಪ್ಟ್​ ವಿಷಯದಲ್ಲಿ ಕಾಂಪ್ರುಮೈಸ್ ಆಗದ ಯಶ್ ದೊಡ್ಡದಾಗಿ ಬೇರೇ ಏನೋ ಮಾಡಬೇಕು ಅಂತ ಅನ್ವೇಷಣೆಗೆ ಹೊರಟರು. ಕೆಜಿಎಫ್ ತೆರೆಕಂಡು ಆಲ್​ಮೋಸ್ಟ್​ ಒಂದೂವರೆ ವರ್ಷ ಆಗ್ತಿದ್ರು ಯಶ್​ 19 ಮಾತ್ರ ಪಕ್ಕಾ ಆಗ್ಲಿಲ್ಲ. ಸ್ಯಾಂಡಲ್​ವುಡ್​, ಟಾಲಿವುಡ್​, ಬಾಲಿವುಡ್​ ಡೈರೆಕ್ಟರ್​ಗಳು ಯಶ್​ ಮನೆಗೂ ಬಂದ್ರು ರಾಕಿ ಮಾತ್ರ ಯಾವುದನ್ನೂ ಫೈನಲ್ ಮಾಡಿಲ್ಲ. ಹಾಗಾಗಿ ಯಶ್​ ಹೊಸ ಸಿನಿಮಾ ಯಾವುದು ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ.

ಯಶ್​ ಮನಸ್ಸು ಮಾಡಿದ್ರೆ ಇಷ್ಟೊತ್ತಿಗಾಗಲೇ ಯಾರಾದ್ರೂ ಸ್ಟಾರ್ ನಿರ್ದೇಶಕರ ಜೊತೆ ಹೊಸ ಸಿನಿಮಾ ಶುರು ಮಾಡಬಹುದಿತ್ತು. ಆದ್ರೆ ಕೆಜಿಎಫ್​ನಿಂದ ಸಿಕ್ಕ ಯಶಸ್ಸನ್ನ ಇನ್ನೊಂದ್​ ಲೆವೆಲ್​ಗೆ ತಗೊಂಡು ಹೋಗಬೇಕು ಅನ್ನೋ ಉದ್ದೇಶದಿಂದ ‘ಹೊಡೆದ್ರೆ ಆನೇನೆ ಹೊಡಿಬೇಕು’ ಅನ್ನೋ ಪ್ಲಾನ್​ನಲ್ಲಿದ್ದಾರೆ. ಸದ್ಯಕ್ಕೆ ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಕೆವಿಎನ್​ ಜೊತೆ ಮುಂದಿನ ಚಿತ್ರ ಮಾಡೋದು ಕನ್ಫರ್ಮ್ ಆಗಿದೆ. ಆದ್ರೆ ಡೈರೆಕ್ಟರ್ ವಿಷ್ಯದಲ್ಲಿ ರಾಕಿಗೆ ಇನ್ನೂ ಕ್ಲಾರಿಟಿ ಸಿಕ್ಕಂತಿಲ್ಲ. ಒಂದು ಮೂಲದ ಪ್ರಕಾರ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಜೊತೆ ಸಿನಿಮಾ ಮಾಡ್ತಾರೆ ಎನ್ನಲಾಗ್ತಿದೆ. ಆ ಕಡೆ ಶಂಕರ್ ಜೊತೆನೂ ಮಾತುಕತೆ ಆಗ್ತಿದೆ ಅಂತಾರೆ. ಬಟ್ ಯಾವುದು ಖಚಿತವಾಗಿಲ್ಲ. ಇಂಥಾ ಟೈಮಲ್ಲೇ ಈಗ ಪ್ಯಾನ್ ಇಂಡಿಯಾ ಬೆರಗಾಗೋ ಸುದ್ದಿಯೊಂದು ರಾಕಿ ಬಳಗದಲ್ಲಿ ಕೋಲಾಹಲ ಸೃಷ್ಟಿಸಿದೆ.

ರಾಮಾಯಣಕ್ಕೆ ಶಕ್ತಿ ತುಂಬ್ತಾರಾ ರಾಕಿ ಭಾಯ್?

ಬಾಲಿವುಡ್​ನಲ್ಲಿ ರಾಮಾಯಣ ಆಧರಿತವಾಗಿ ಬಹುಕೋಟಿ ವೆಚ್ಚದ ಸಿನಿಮಾವೊಂದು ತಯಾರಾಗುತ್ತಿದೆ. ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್, ಮಧು ಮಂತೇನಾ ಹಾಗೂ ನಮಿತಾ ಮಲ್ಹೋತ್ರಾ ಸೇರಿ ಸುಮಾರು 1000 ಕೋಟಿ ವೆಚ್ಚದಲ್ಲಿ ರಾಮಾಯಾಣ ಸಿನಿಮಾ ಮಾಡೋಕೆ ಹೊರಟಿದ್ದಾರೆ. ದಂಗಲ್, ಚಿಚ್ಚೋರೆ ಸೇರಿ ಹಲವು ಹಿಟ್ ಚಿತ್ರಗಳನ್ನ ಕೊಟ್ಟಿರೋ ನಿತೇಶ್ ತಿವಾರಿ ಈ ಸಿನಿಮಾ ನಿರ್ದೇಶಿಸೋ ಸಿದ್ಧತೆಯಲ್ಲಿದ್ದಾರೆ. ಪ್ರೊಡಕ್ಷನ್ ಟೀಮ್ ಆಲ್​ಮೋಸ್ಟ್​ ಫೈನಲ್ ಆಗಿದ್ದು, ಪೂರ್ವ ತಯಾರಿನೂ ನಡೀತಿದೆ.

ಆದ್ರೀಗ ಸಿನಿಮಾ ಮಂದಿಯನ್ನ ಬೆರಗುಗೊಳಿಸಿರೋದೇ ಸ್ಟಾರ್​ ಕಾಸ್ಟ್​. ಈ ಪ್ರಾಜೆಕ್ಟ್​ನಲ್ಲಿ ಎಂಥೆಂಥಾ ನಟರು ಆ್ಯಕ್ಟ್​ ಮಾಡಬಹುದು ಅಂತ. ರಾಮ್ ಚರಣ್, ಹೃತಿಕ್ ರೋಷನ್, ರಣ್ಬೀರ್ ಕಪೂರ್ ಅಂಥವರ ಹೆಸರು ಚಾಲ್ತಿಯಲ್ಲಿದೆ. ಅಷ್ಟೇ ಯಾಕೆ ರಾಕಿ ಭಾಯ್​ ಹೆಸರು ಕೂಡ ರಾಮಾಯಣದಲ್ಲಿ ಕೇಳಿ ಬರ್ತಿದೆ. ಸಾವಿರ ಕೋಟಿ ವೆಚ್ಚದ ರಾಮಾಯಣದಲ್ಲಿ ರಾಕಿಂಗ್ ಸ್ಟಾರ್​ ಇರಲಿದ್ದಾರೆ ಎಂಬ ಸುದ್ದಿ ಲೋಕಲ್ ಟು ನ್ಯಾಷನಲ್ ವೆಬ್​ಸೈಟ್​ಗಳಲ್ಲಿ ವರದಿಯಾಗಿದೆ. ರಾಮಾಯಣ ಪ್ರಾಜೆಕ್ಟ್​ಗೆ ಯಶ್​ ಎಂಟ್ರಿಯಾಗಿದ್ದೇ ಆದ್ರೆ ರಾಕಿ ಭಾಯ್ ಪಾತ್ರವೇನು ಅನ್ನೋದಕ್ಕೆ ಉತ್ತರ ರಾವಣನ.

ಸಾವಿರ ಕೋಟಿಯ ರಾಮಾಯಣದಲ್ಲಿ ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್​ ಶ್ರೀರಾಮ ಮತ್ತು ಸೀತೆಯಾಗಿ ನಟಿಸುವ ಸಾಧ್ಯತೆ ಹೆಚ್ಚಿದೆಯಂತೆ. ಇವರಿಬ್ಬರ ಜೊತೆ ಈಗಾಗಲೇ ಅಲ್ಲು ಅರವಿಂದ್ ಅಂಡ್ ಟೀಮ್ ಡಿಸ್ಕಸ್​ ಮಾಡಿ ಫೈನಲ್ ಮಾಡಿದ್ದು, ರಾವಣನ ಪಾತ್ರಕ್ಕೆ ರಾಕಿ ಬೆಸ್ಟ್​ ಆ್ಯಪ್ಷನ್ ​ ಅಂದ್ಕೊಂಡಿದ್ದಾರಂತೆ. ಈ ಸಂಬಂಧ ಯಶ್​ನ ಮೀಟ್ ಮಾಡಿ ಆಫರ್ ಕೂಡ ಮಾಡಿದ್ದಾರಂತೆ.

ಬೇರೆನೇ ಲೆವೆಲ್​ನಲ್ಲಿ ಸಿನಿಮಾ ಮಾಡಬೇಕು ಅಂದ್ಕೊಂಡಿರೋ ಯಶ್​ ಮಾತ್ರ ಯಾವುದೇ ಸುಳಿವು ಸೂಚನೆ ಕೂಡ ಕೊಡ್ತಿಲ್ಲ. ಒಂದಂತೂ ನಿಜ. ಕೆಜಿಎಫ್ ಅದ್ಮೇಲೆ ಯಶ್​ಗಾಗಿ ಕಥೆ ಮಾಡೋರು ಜಾಸ್ತಿ ಆಗಿದ್ದಾರೆ. ತಾವು ಮಾಡ್ಕೊಂಡಿರೋ ಕಥೆಗೆ ಯಶ್​ ಕರೆಕ್ಟ್​ ಅಂತ ಆಫರ್ ಮಾಡಿರೋದು ನಿಜಾನೇ. ಹಾಗಂತ ಬಂದಿರೋ ಆಫರ್​ನ್ನೆಲ್ಲ ಒಪ್ಕೊಳ್ಳೋ ಮನಸ್ಥಿತಿಯಲ್ಲಿ ಯಶ್​ ಇಲ್ಲ. ಯಶ್​ ಉದ್ದೇಶನೇ ಬೇರೆ. ಅವರ ಆಲೋಚನೇ ಬೇರೆ ಇದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಯಶ್​ ಬಗ್ಗೆ ಕೇಳಿದ ಸುದ್ದಿ ನಿಜಾನಾ?; ವೈರಲ್ ಸುದ್ದಿಯ ಅಸಲಿ ಕಥೆ..!

https://newsfirstlive.com/wp-content/uploads/2023/06/yash.jpg

Load More