newsfirstkannada.com

ಪದೇ ಪದೇ ಶ್ರೀಲಂಕಾಗೆ ಹಾರೋದ್ಯಾಕೆ ರಾಕಿಂಗ್ ಸ್ಟಾರ್? ಇಲ್ಲಿದೆ ರಣರೋಚಕ ಕಥೆ..!

Share :

15-06-2023

  ಶ್ರೀಲಂಕಾದಲ್ಲಿ ನಡೀತಿದ್ಯಾ ರಾಕಿಂಗ್​​ ಸ್ಟಾರ್​ ಯಶ್​​19ನೇ ಚಿತ್ರದ ತಯಾರಿ..?

  ಆಗಾಗ ಶ್ರೀಲಂಕಾಗೆ ಹೋಗಿ ಬರ್ತಿರೋದ್ಯಾಕೆ ರಾಕಿಂಗ್ ಸ್ಟಾರ್ ಯಾಶ್​?

  ಗೀತು ಮೋಹನ್ ದಾಸ್ ಜೊತೆ ಯಶ್​​​ ಸಿನಿಮಾ ಮಾಡೋದು ಪಕ್ಕಾನಾ?

ರಾಕಿಂಗ್ ಸ್ಟಾರ್​​ ಯಶ್​ಗೆ ರಾವಣನ ಪಾತ್ರ ಆಫರ್ ಬಂದಿತ್ತು ಅನ್ನೋ ಸುದ್ದಿನ ನೀವೆಲ್ಲ ಕೇಳೇ ಇರ್ತೀರಾ. ಸದ್ಯದ ಲೆಕ್ಕಾಚಾರದಲ್ಲಿ ಯಶ್ ಯಾವುದೇ ಕಾರಣಕ್ಕೂ ರಾವಣ ಅಂತೂ ಆಗೋದೇ ಇಲ್ಲ. ಹಾಗಾದ್ರೆ ರಾಕಿ ಭಾಯ್ ಪದೇ ಪದೇ ಶ್ರೀಲಂಕಾಗೆ ಹೋಗ್ತಿರೋದೇಕೆ? ರಾವಣ ಆಗಲ್ಲ ಅಂದ್ಮೇಲೆ ಲಂಕಾಗೆ ವಿಸಿಟ್ ಕೊಡ್ತಿರೋದೇಕೆ ಅಂತ ಹುಡುಕಿದಾಗ ಸಿಕ್ಕಿದ್ದು ರಣರೋಚಕ ಕಥೆ.

ಕಳೆದ ನಾಲ್ಕೈದು ದಿನಗಳಿಂದ ಯಶ್ ರಾವಣನ ಪಾತ್ರ ಮಾಡ್ತಾರೆ ಅನ್ನೋದೇ ಸುದ್ದಿ. ಬಾಲಿವುಡ್​ನಲ್ಲಿ ರಾಮಾಯಣ ಆಧರಿಸಿ ಸಿನಿಮಾ ತಯಾರಾಗ್ತಿದೆ. ಅದರಲ್ಲಿ ರಣ್ಬೀರ್ ಕಪೂರ್ ರಾಮಾ ಹಾಗೂ ಆಲಿಯಾ ಭಟ್ ಸೀತೆ, ರಾಕಿಂಗ್ ಸ್ಟಾರ್ ರಾವಣ ಅನ್ನೋ ಸುದ್ದಿ. ಆದ್ರೆ ಇದು ಬರೀ ಸುದ್ದಿಯಷ್ಟೇ. ರಾಕಿ ಭಾಯ್ ಯಾವುದೇ ಕಾರಣಕ್ಕೂ ರಾವಣ ಆಗಲ್ಲ, ಆಗೋ ಉದ್ದೇಶನೂ ಅವರದ್ದಲ್ಲ. ಯಶ್ ರಾವಣ ಆಗಲ್ಲ ಅಂದ್ಮೇಲೆ ಮತ್ತೇನೂ ಅಂತ ಕೇಳಿದ್ರೆ ಹಲವು ಇಂಟರೆಸ್ಟಿಂಗ್ ವಿಷ್ಯಗಳು ಕೇಳೋಕೆ ಸಿಗ್ತಿದೆ. ಕೆಜಿಎಫ್ ಆದ್ಮೇಲೆ ಮುಂದೇನು ಅಂತ ತುಂಬಾ ತಲೆಕೆಡಿಸಿಕೊಂಡಿರೋ ಯಶ್ ಈಗಾಗಲೇ ಒಂದು ಕಮಿಟ್ಮೆಂಟ್​ಗೆ ಬಂದಿದ್ದಾರಂತೆ. ಕೆಜಿಎಫ್ ಆದ್ಮೇಲೆ ಯಾವ ಥರಾ ಸಿನಿಮಾ ಮಾಡ್ಬೇಕು ಅನ್ನೋದಕ್ಕೂ ಉತ್ತರ ಕಂಡುಕೊಂಡಿದ್ದಾರಂತೆ. ಅದನ್ನು ಆದಷ್ಟೂ ಬೇಗ ಕಾರ್ಯರೂಪಕ್ಕೆ ತರಬೇಕು ಅನ್ನೋ ಉದ್ದೇಶದಿಂದ ಬಹಳ ಸೀಕ್ರೆಟ್ ಆಗಿ ಕೆಲಸ ಮಾಡ್ತಿದ್ದಾರಂತೆ ರಾಕಿ ಭಾಯ್.

ಯಶ್ ಮುಂದಿನ ಸಿನಿಮಾ ಸದ್ಯಕ್ಕೆ ಬಹಳ ಸೀಕ್ರೆಟ್ ಆಗಿಯೇ ಇದೆ. ದೊಡ್ಡ ದೊಡ್ಡ ನಿರ್ದೇಶಕ, ನಿರ್ಮಾಪಕರ ಮುಂದೆ ಬಂದರೂ ಯಶ್ ಮಾತ್ರ ಯಾವುದಕ್ಕೂ ಒಪ್ಪದೇ ತನ್ನದೇ ಹಾದಿಯಲ್ಲಿ ಸಾಗ್ತಿದ್ದಾರೆ. ತಾನು ಅಂದುಕೊಂಡಂತೆ ಸಿನಿಮಾ ಮಾಡ್ಬೇಕು ಅನ್ನೋ ಗುರಿಯಿಂದ ಹೆಜ್ಜೆಯಿಡ್ತಿರೋ ಯಶ್ ಈ ಸಲ ಅಭಿಮಾನಿಗಳಿಗೆ ತುಂಬಾನೇ ಸ್ಪೆಷಲ್ ಪ್ರಾಜೆಕ್ಟ್ ಕೊಡಲಿದ್ದಾರಂತೆ. ಅದಕ್ಕಾಗಿ ತುಂಬಾನೇ ಸೀರಿಯಸ್ ಆಗಿ ಗ್ರೌಂಡ್ ವರ್ಕ್ ಮಾಡ್ತಿರೋ ಯಶ್ ಒಂಚೂರು ಸುಳಿವು ಕೊಡದಂತೆ ಆಪರೇಟ್ ಮಾಡ್ತಿದ್ದಾರಂತೆ.

ರಾವಣ ಆಗಲ್ಲ.. ಆದ್ರೂ ರಾವಣನ ನಾಡಲ್ಲಿ ರಾಕಿಭಾಯ್!

ಕೆಜಿಎಫ್ ರಿಲೀಸ್ ಆಗಿ ಹೆಚ್ಚು ಕಡಿಮೆ ಒಂದೂವರೆ ವರ್ಷ ಆಗ್ತಿದೆ. ಈವರೆಗೂ ಯಶ್ 19ನೇ ಚಿತ್ರದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ದಿನಕ್ಕೊಂದು ಸುದ್ದಿ, ದಿನಕ್ಕೊಂದು ಅಪ್ಡೇಟ್ ಎನ್ನುವಂತೆ ಇದುವರೆಗೂ ಹತ್ತು ಹಲವು ಸಮಾಚಾರಗಳು ಚರ್ಚೆಯಾಗಿವೆ. ಆದ್ರೀಗ ಈ ಸುದ್ದಿಗಳನ್ನ ಮೀರಿದ ಎಕ್ಸ್ಟ್ರೋಡಿನರಿ ಸಮಾಚಾರವೊಂದು ಸಿಕ್ಕಿದೆ. ಅದುವೇ ರಾವಣ ನಾಡಿಗೆ ಪದೇ ಪದೇ ಯಶ್ ಹೋಗ್ತಿರೋದು. ಹೌದು, ರಿಸೆಂಟ್ ಆಗಿ ಅಭಿಷೇಕ್-ಅವಿವಾ ಮದುವೆ ಹಿನ್ನೆಲೆ ಸಂಗೀತ ಪಾರ್ಟಿ ಆಯೋಜನೆ ಆಗಿತ್ತು. ಈ ಪಾರ್ಟಿಯಲ್ಲಿ ಯಶ್ ಹಾಗೂ ಯಶ್ ಆಪ್ತರು ಭಾಗಿಯಾಗಿದ್ದರು. ಇತ್ತೀಚಿನ ದಿನಗಳಲ್ಲಿ ಯಶ್ ಈ ಥರಾ ಯಾವುದೇ ಗೆಟ್ ಟು ಗೆದರ್​ಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆದ್ರೆ ಅಂಬಿ ಮನೆ ಸಂಭ್ರಮ ಅನ್ನೋ ಕಾರಣಕ್ಕೆ ಫ್ಯಾಮಿಲಿ ಸಮೇತ ಹೋಗಿದ್ರು. ಈ ವೇಳೆ ಮಾತಿಗೆ ಸಿಕ್ಕ ಯಶ್ ಆಪ್ತರು, ರಾಕಿಭಾಯ್ ಶ್ರೀಲಂಕಾ ರಹಸ್ಯವನ್ನ ಬಿಚ್ಚಿಟ್ಟಿದ್ದಾರೆ.

ಯಶ್ ಇತ್ತೀಚಿನ ದಿನಗಳಲ್ಲಿ ಪದೇ ಪದೇ ಶ್ರೀಲಂಕಾಗೆ ಹೋಗ್ತಿದ್ದಾರಂತೆ. ಮೂರ್ನಾಲ್ಕು ತಿಂಗಳ ಹಿಂದೆ ಯಶ್ ಶ್ರೀಲಂಕಾಗೆ ಭೇಟಿ ಕೊಟ್ಟಿದ್ದ ಕೆಲವು ಫೋಟೋಗಳು ವೈರಲ್ ಆಗಿದ್ದು ಬಹುಶಃ ನಿಮಗೆ ನೆನಪಿರಬಹುದು. ಆಗಿನ ಶ್ರೀಲಂಕಾ ಭೇಟಿ ಹಾಗೂ ಅದಾದ ನಂತರೂ ಹಲವು ಸಲ ಲಂಕಾಗೆ ಯಶ್ ವಿಸಿಟ್ ಕೊಟ್ಟಿದ್ದಾರಂತೆ. ಆದ್ರೆ ಇದುವರೆಗೂ ಈ ಮಾಹಿತಿ ಎಲ್ಲಿಯೂ ಹೊರಬಿದ್ದಿರಲಿಲ್ಲ. ಹಾಗಾದ್ರೆ ಯಶ್ ಶ್ರೀಲಂಕಾಗೆ ಹೋಗ್ತಿರೋದೇಕೆ ಅನ್ನೋದಕ್ಕೆ ಉತ್ತರ ಯಶ್ 19ನೇ ಸಿನಿಮಾ. ಪ್ಯಾನ್ ಇಂಡಿಯಾ ಸ್ಟಾರ್ ಯಶ್ ತಮ್ಮ ಹೊಸ ಚಿತ್ರವನ್ನ ಫೈನಲ್ ಮಾಡ್ಕೊಂಡಿದ್ದಾರೆ. ಈ ಚಿತ್ರದ ಕೆಲಸ ಸದ್ಯ ಶ್ರೀಲಂಕಾದಲ್ಲಿ ಸಾಗ್ತಿದೆಯಂತೆ. ಚಿತ್ರದ ಸ್ಕ್ರಿಪ್ಟ್ ವರ್ಕ್, ಕಲಾವಿದರ ಆಯ್ಕೆ ಹಾಗೂ ಇನ್ನಿತರ ಪ್ರಿ-ಪ್ರೊಡಕ್ಷನ್ ಕೆಲಸಗಳು ಲಂಕಾದಲ್ಲಿ ಸಾಗ್ತಿದ್ದು, ಹಾಗಾಗಿಯೇ ಯಶ್ ಕೂಡ ಆಗಾಗಾ ಲಂಕಾ ಭೇಟಿ ಕೊಡ್ತಾ ಇರ್ತಾರೆ ಎನ್ನುವ ವಿಚಾರವನ್ನ ಖುದ್ದು ಯಶ್ ಅವರ ಆಪ್ತರೇ ಫಿಲ್ಮಿಫಸ್ಟ್ ತಂಡದ ಜೊತೆ ಹೇಳಿಕೊಂಡಿದ್ದಾರೆ.

ಗೀತು ಮೋಹನ್ ದಾಸ್ ಜೊತೆ ಸಿನಿಮಾ ಪಕ್ಕಾ!

ಯಶ್ ಮುಂದಿನ ಸಿನಿಮಾವನ್ನ ಕೆವಿಎನ್ ನಿರ್ಮಾಣ ಮಾಡೋದು ಬಹುತೇಕ ಫಿಕ್ಸ್. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಇನ್ನು ಯಶ್​ಗೆ ಈ ಸಲ ಯಾರು ಆ್ಯಕ್ಷನ್ ಕಟ್ ಹೇಳಬಹುದು ಅನ್ನೋದಕ್ಕೆ ಉತ್ತರ ಮಲಯಾಳಂ ಸ್ಟಾರ್ ನಿರ್ದೇಶಕಿ ಗೀತು ಮೋಹನ್ ದಾಸ್. ಸದ್ಯ ಗೀತು ಮೋಹನ್ ದಾಸ್ ಶ್ರೀಲಂಕಾದಲ್ಲೇ ಇದ್ದಾರಂತೆ. ಹಾಗಾಗಿಯೇ ಯಶ್ ಪದೇ ಪದೇ ಲಂಕಾಗೆ ಹೋಗ್ತಿರೋದು ಎನ್ನಲಾಗ್ತಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಪದೇ ಪದೇ ಶ್ರೀಲಂಕಾಗೆ ಹಾರೋದ್ಯಾಕೆ ರಾಕಿಂಗ್ ಸ್ಟಾರ್? ಇಲ್ಲಿದೆ ರಣರೋಚಕ ಕಥೆ..!

https://newsfirstlive.com/wp-content/uploads/2023/06/yash-6.jpg

Load More