ಯಶ್ ನಂ.1 ಆಗಬೇಕು ಅಂತ ಅಂದುಕೊಂಡಿದ್ದು ಯಾವಾಗ..?
ನಟ ರಾಕಿಂಗ್ ಸ್ಟಾರ್ ಯಶ್ಗೆ ಕಿಚ್ಚು ಹಚ್ಚಿದ ಆ ಘಟನೆ ಇದೇ!
'ಡ್ರಾಮಾ' ಶೂಟಿಂಗ್ ವೇಳೆ ಯಶ್ಗೆ ಆಗಿತ್ತು ಬಹಳ ಬೇಸರ..!
ರಾಕಿಂಗ್ ಸ್ಟಾರ್ ಸದ್ಯ ಈ ಹೆಸರು ಪ್ಯಾನ್ ಇಂಡಿಯಾದ ಪವರ್ ಸ್ಟೇಷನ್ ಅಂತಾನೇ ಹೇಳಬಹುದು. ಇಡೀ ಭಾರತೀಯ ಸಿನಿಮಾರಂಗ ಇವತ್ತು ರಾಕಿಂಗ್ ಸ್ಟಾರ್ ಕಡೆ ನೋಡುತ್ತಿದೆ. ಯಶ್ ಹೋದಲ್ಲಿ ಬಂದಲ್ಲೆಲ್ಲಾ ಸಲಾಂ ರಾಕಿ ಭಾಯ್ ಅಂತ ಸಲಾಮ್ ಹೊಡೆಯೋ ಥರಾ ಆಗಿದೆ. ಯಶ್ ಅನ್ನೋದೀಗ ಒಂದು ಟ್ರೆಂಡ್ ಕೂಡ ಹೌದು ಹೊಸ ಬ್ರ್ಯಾಂಡು ಹೌದು. ಇಂದಿನ ಮಕ್ಕಳು ನಿಮ್ಮ ಫೆವರೇಟ್ ಹೀರೋ ಯಾರು ಅಂತ ಕೇಳಿದ್ರೆ ಸಾಕು ಥಟ್ ಅಂತ ಎರಡನೇ ಆಪ್ಷನ್ ಇಲ್ಲದೇ ರಾಕಿ ಭಾಯ್ ಅಂತಾರೆ. ಆ ಮಟ್ಟಕ್ಕೆ ಯಶ್ ಇಂಪ್ಯಾಕ್ಟ್ ಮಾಡಿದ್ದಾರೆ.
ಹೌದು ಯಶ್ ಇವತ್ತು ಇಡೀ ಸಿನಿಮಾ ಪ್ರಪಂಚ ಎದುರು ನೋಡ್ತಿರುವ ನಟ. ಕೆಜಿಎಫ್ ಸಿರೀಸ್ ಆದ್ಮೇಲಂತೂ ಯಶ್ ಹವಾ ಮತ್ತು ಹಾವಳಿ ಬೇರೆನೆ ಲೆವಲ್ನಲ್ಲಿದೆ. ಇದರ ಅರಿವು ಸ್ವತಃ ಯಶ್ ಅವರಿಗೂ ಇದ್ದು, ಹಾಗಾಗಿಯೇ ಹೊಸ ಸಿನಿಮಾ ಅನೌನ್ಸ್ ಮಾಡೋಕೆ ಇಷ್ಟೊಂದು ಸಮಯ ತೆಗೆದುಕೊಳ್ತಿದ್ದಾರೆ. ಯಶ್ ಏಕಾಏಕಿ ಸೂಪರ್ಸ್ಟಾರ್ ಆದವರಲ್ಲ. ಯಶ್ ಪಕ್ಕಾ ಮಿಡಲ್ ಕ್ಲಾಸ್ ಫ್ಯಾಮಿಲಿಯ ಹಳ್ಳಿ ಹುಡುಗ. ತಂದೆ ಸಾಮಾನ್ಯ ಬಸ್ ಡ್ರೈವರ್. ಇಂಥಾ ಸಾಮಾನ್ಯ ಕುಟುಂಬದಿಂದ ಬಂದ ನಟ ಇವತ್ತು ಇಡೀ ವಿಶ್ವವೇ ಬೆರಗುಗುಳಿಸೋ ಥರಾ ಬೆಳೆದು ನಿಂತಿದ್ದಾರೆ ಅಂದ್ರೆ ಇದು ನಿಜಕ್ಕೂ ಸಾಧನೆಯೇ ಸರಿ.
ಒಂದು ಟೈಮ್ಲ್ಲಿ ಪಾತ್ರಕ್ಕಾಗಿ ನಿರ್ಮಾಪಕರ ಮನೆ ಬಾಗಿಲು ಅಲೆದಿದ್ದ ಯಶ್, ಇವತ್ತು ಅಂಥಹ ದೊಡ್ಡ ದೊಡ್ಡ ನಿರ್ಮಾಪಕ, ನಿರ್ದೇಶಕರನ್ನೇ ತನ್ನ ಮನೆ ವಿಳಾಸ ಹುಡುಕಿಕೊಂಡು ಬರೋ ಥರಾ ಮಾಡ್ಕೊಂಡಿದ್ದಾರೆ. ‘ಎಷ್ಟು ಕೋಟಿ ಬೇಕಾದರೂ ಕೊಡ್ತೀನಿ ಸಿನಿಮಾ ಮಾಡಿಕೊಡಿ’ ಅಂತ ಕೇಳ್ತಿದ್ರು ‘ನೋಡೋಣ ಇರಿ’ ಅಂತ ಕಾಯಿಸ್ತಿದ್ದಾರೆ. ಅಂದ್ಹಾಗೆ, ಯಶ್ ಇಷ್ಟು ದೊಡ್ಡ ಸ್ಟಾರ್ಡಂ ಮೇಯ್ಟಂನ್ ಮಾಡೋಕೆ ಕಾರಣ ಅವತ್ತು ತಾನು ಎದುರಿಸಿದ ಅವಮಾನಗಳು, ಟೀಕೆಗಳು ಎನ್ನಲಾಗ್ತಿದೆ. ರಾಕಿಂಗ್ ಸ್ಟಾರ್ ಸಿನಿಮಾ ಜರ್ನಿ ನಿಮಗೆಲ್ಲಾ ಗೊತ್ತೇ ಇರುತ್ತೆ. ಅವತ್ತು ‘ಮೊಗ್ಗಿನ ಮನಸು’ ಚಿತ್ರದಲ್ಲಿ ಹೀರೋ ಆದಾಗಿಂತ ಒಂದೊಂದೇ ಮೆಟ್ಟಿಲು ಹತ್ತಿ ಇಲ್ಲಿವರೆಗೂ ಬಂದಿದ್ದಾರೆ. ಸೋಲು ಗೆಲುವುಗಳನ್ನ ಕಂಡಿದ್ದಾರೆ. ಆದ್ರೆ ಯಶ್ ಎದುರಿಸಿದ ಅವಮಾನ, ಯಶ್ ಅವರಲ್ಲಿ ಹೊತ್ತಿದ ಆ ಕಿಚ್ಚಿನ ಬಗ್ಗೆ ಬಹಳಷ್ಟು ಮಂದಿಗೆ ಗೊತ್ತೇ ಇಲ್ಲ.
ಯಶ್ ಸಿನಿಮಾರಂಗಕ್ಕೆ ಬಂದಾಗ ನಾನು ನಂಬರ್ 1 ಹೀರೋ ಆಗಬೇಕು ಅನ್ನೋ ಹಠ ಇರಲಿಲ್ಲ. ನಾನೊಬ್ಬ ಹೀರೋ ಆದ್ರೆ ಸಾಕು ಅಂದ್ಕೊಂಡು ಬಂದವರು ಯಶ್. ಆರಂಭದ ದಿನಗಳಲ್ಲಿ ಪ್ರತಿಯೊಬ್ಬರ ತುಡಿತ, ಭಾವನೆ ಹಿಂಗೆ ಇರುತ್ತೆ. ಆದ್ರೆ ಸಿನಿಮಾ ಜಗತ್ತಿನಲ್ಲಿ ಸಿಗುವ ಅನುಭವಗಳು, ಆಗುವ ಅವಮಾನಗಳು ಆ ಭಾವನೆಯನ್ನ ಬಡಿದೆಬ್ಬಿಸುತ್ತೆ. ಕನಸೆಂಬ ಕುದುರೆಯನ್ನೇರಲು ಹುಚ್ಚೆಬ್ಬಿಸುತ್ತೆ. ನಾನೇನಾದ್ರು ಸಾಧಿಸಲೇಬೇಕು ಅನ್ನೋ ಕಿಡಿ ಹೊತ್ತಿಸುತ್ತದೆ. ಇಂಥದ್ದೇ ಕಿಡಿವೊಂದು ಅವತ್ತು ಯಶ್ಗೆ ಹೊತ್ತಿದ್ದಕ್ಕೆ ಇವತ್ತು ನಂಬರ್ 1 ಸ್ಟಾರ್ ಆಗಿದ್ದಾರೆ ಎನ್ನುವ ಘಟನೆಯೊಂದನ್ನ ನೀವು ತಿಳಿಯಲೇಬೇಕು. ಯಶ್ ಪಕ್ಕಾ ಕ್ಲಿಯರ್ ಮೈಂಡ್ಸೈಟ್ ಹೊಂದಿರುವ ವ್ಯಕ್ತಿತ್ವ. ಏನ್ ಹೇಳ್ತಾರೋ ಅದನ್ನೇ ಮಾಡ್ತಾರೆ. ಏನ್ ಮಾಡಬೇಕು ಅಂದ್ಕೊಂಡು ಇರ್ತಾರೋ ಅದನ್ನೇ ಹೇಳ್ತಾರೆ. ಅವತ್ತು ಕೆಜಿಎಫ್ ಮಾಡೋ ಮುಂಚೆ ‘ನೋಡ್ತಾ ಇರಿ ಕನ್ನಡ ಇಂಡಸ್ಟ್ರಿನ ಎಲ್ಲರೂ ತಿರುಗಿನೋಡೋಥಾರ ಸಿನಿಮಾ ಮಾಡ್ತೀನಿ’ ಅಂತ ಮಾತುಕೊಟ್ರು. ಕೆಜಿಎಫ್ ವಿಷ್ಯದಲ್ಲಿ ಆ ಮಾತು ನಿಜ ಆಯ್ತು. ‘ಕೆಜಿಎಫ್ ಚಾಪ್ಟರ್ 2 ಅದಕ್ಕಿಂತ ಇನ್ನೊಂದು ಲೆವೆಲ್ ಜಾಸ್ತಿ ಇರುತ್ತೆ’ ಅಂದ್ರು. ಚಾಪ್ಟರ್ 2 ಬಂದ್ಮೇಲೆ ಅದು ನಿಜ ಆಯ್ತು.. ಈಗ ‘ಇಡೀ ವಿಶ್ವವೇ ಸ್ಯಾಂಡಲ್ವುಡ್ ಕಡೆ ನೋಡ್ತಿದೆ, ಅಂಥದ್ದೇ ಸಿನಿಮಾ ಮಾಡ್ತೀನಿ’ ಅಂತಿದ್ದಾರೆ. ಯಶ್ ಹೇಳಿದ್ರೆ ಅದನ್ನ ಸಿಲ್ಲಿಯಾಗಿ ತಗೊಳ್ಳೋಂಗೆ ಇಲ್ಲ. ಪಕ್ಕಾ ಮಾಡೇ ಮಾಡ್ತಾರೆ ಅನ್ನೋ ನಂಬಿಕೆ ಈಗ ಗಟ್ಟಿಯಾಗಿದೆ. ಹೀಗೆ ಯಶ್ ಏನಾದರೂ ಅಂದ್ಕೊಂಡ್ರೆ ಅದನ್ನ ಸಾಧಿಸೋವರೆಗೂ ಸುಮ್ಮನೆ ಕೂರೂ ಆಸಾಮಿ ಅಂತೂ ಅಲ್ಲವೇ ಅಲ್ಲ.. ಅವತ್ತು ಅಷ್ಟೇ ನಾನು ನಂಬರ್ 1 ಆಗ್ಬೇಕು ಅಂತ ಶಪಥ ಮಾಡ್ಕೊಂಡ್ರು. ಇವತ್ತು ನಂಬರ್ 1 ಎನಿಸಿಕೊಳ್ತಿದ್ದಾರೆ.
ಯಶ್ಗೆ ನಂ 1 ಆಗ್ಬೇಕು ಅನ್ನೋ ಕಿಡಿ ಹೊತ್ತಿದ್ಯಾವಾಗ?
‘ಡ್ರಾಮ್’ ಶೂಟಿಂಗ್ ವೇಳೆ ನಡೆದ ಆ ಕಹಿ ಘಟನೆ ಏನು?
ಸೀರಿಯಲ್ ಮಾಡ್ತಿದ್ದ ಯಶ್ ‘ಜಂಬದ ಹುಡುಗಿ’ ಚಿತ್ರದೊಂದಿಗೆ ಸ್ಯಾಂಡಲ್ವುಡ್ ಪ್ರವೇಶಿಸಿದ್ರು. ‘ಮೊಗ್ಗಿನ ಮನಸು’ ಚಿತ್ರದಲ್ಲಿ ಗಮನ ಸೆಳೆದು ಆಮೇಲೆ ಒಂದಿಷ್ಟು ಸಿನಿಮಾಗಳನ್ನ ಮಾಡಿದ್ರು. ‘ಕಿರಾತಕ’ ಯಶ್ಗೆ ದೊಡ್ಡ ಬ್ರೇಕ್ ಕೊಡ್ತು. ಅಲ್ಲಿಂದ ಯಶ್ ಸಿನಿಮಾ ಲೈಫೇ ಬದಲಾಯ್ತು. ಬ್ಯಾಕ್ ಟು ಬ್ಯಾಕ್ ಹೀರೋ ಆಗಿ ಮಾಸ್ ಮಹಾರಾಜನಾಗಿ ನಿಂತ್ಕೊಂಡ್ರು. ಈ ನಡುವೆ ಯೋಗರಾಜ್ ಭಟ್ ನಿರ್ದೇಶನದಲ್ಲಿ ‘ಡ್ರಾಮಾ’ ಎನ್ನುವ ಸಿನಿಮಾ ಮಾಡಿದ ಯಶ್ಗೆ ಇದು ಬಹುದೊಡ್ಡ ಟರ್ನಿಂಗ್ ಪಾಯಿಂಟ್ ಅಂದ್ರೆ ನಂಬಲೇಬೇಕು. ‘ಡ್ರಾಮಾ’ ಕಮರ್ಷಿಯಲ್ ಸೂಪರ್ಹಿಟ್ ಅಂತ ಎಲ್ಲರಿಗೂ ಗೊತ್ತು. ಆದ್ರೆ ಈ ಸಿನಿಮಾ ಮಾಡ್ಬೇಕಾದ್ರೆ ಯಶ್ ಒಡಲೊಳಗೆ ಹೊತ್ತಿದ ಕಿಡಿ ಬಗ್ಗೆ ಯಾರಿಗೂ ಗೊತ್ತಿಲ್ಲ. ಅವತ್ತು ‘ಡ್ರಾಮಾ’ ಸೆಟ್ನಲ್ಲಿ ನಡೆದ ಆ ಘಟನೆ ರಾಕಿಂಗ್ ಸ್ಟಾರ್ ಮನಸ್ಥಿತಿಯನ್ನೇ ಬದಲಿಸಿಬಿಡ್ತು. ಸೂಪರ್ಸ್ಟಾರ್ ಆಗ್ಬೇಕು ಅನ್ನೋ ಹಠ ಹತ್ಕೊಳ್ತು. ನಂಬರ್ ಒನ್ ಆಗಬೇಕು ಅನ್ನೋ ಛಲ ಹುಟ್ಕೊಳ್ತು. ‘ಕಿರಾತಕ’ ಸಿನಿಮಾ ಮಾಡಬೇಕಾದರೆ ಯಶ್ ಸಖತ್ ಸ್ಲಿಮ್ ಆಗಿದ್ರು. ಆದ್ರೆ ‘ಡ್ರಾಮಾ’ ಆರಂಭಿಸುವಷ್ಟರಲ್ಲಿ ಯಶ್ ಸ್ವಲ್ಪ ದಪ್ಪ ಆಗಿಬಿಟ್ಟರು. ಬಹುಶಃ ಆ ಪಾತ್ರಕ್ಕೆ ಹಾಗೇ ಬೇಕಿತ್ತೋ ಏನು. ಎಲ್ಲವೂ ಚೆನ್ನಾಗಿ ನಡೀತಿರಬೇಕಾದ್ರೆ ‘ಡ್ರಾಮಾ’ ಚಿತ್ರದಲ್ಲಿ ಒಂದು ಫೈಟ್ ಸೀನ್ ಬರುತ್ತೆ. ಈ ಫೈಟ್ನಲ್ಲಿ ಯಶ್ ಓಡಿ ಬಂದು ಬಾಗಿದ ತೆಂಗಿನಮರದ ಮೇಲೆ ಹತ್ತಿ ರಿವರ್ಸ್ ಜಂಪ್ ಮಾಡಬೇಕಿತ್ತು. ಎಷ್ಟೇ ಟೇಕ್ ತಗೊಂಡ್ರು ಈ ಸೀನ್ ಓಕೆ ಆಗ್ತಿರಲಿಲ್ಲ. ಇದರಿಂದ ಅಪ್ಸೆಟ್ ಆದ ಫೈಟ್ ಮಾಸ್ಟರ್, ಯಶ್ಗೆ ಬಾಯಿಗೆ ಬಂದಂಗೆ ಬೈದ್ರಂತೆ. ‘ಯಾರೀ ಇವನನ್ನ ಎಲ್ಲಿಂದಾ ಕರ್ಕೊಂಡು ಬರ್ತೀರಾ, ಒಂದು ಫೈಟ್ ಮಾಡೋಕೆ ಆಗ್ಲಿಲ್ಲ ಅಂದ್ರೆ ಇನ್ಯಾವ ಥರಾ ಹೀರೋ ಆಗ್ತಾರೆ’ ಅಂತ ರೇಗಾಡಿದ್ರಂತೆ. ಇದನ್ನ ದೂರದಿಂದ ಕೇಳಿದ ಯಶ್ ಸಿಕ್ಕಾಪಟ್ಟೆ ಬೇಜಾರ್ ಮಾಡ್ಕೊಂಡ್ರಂತೆ.
ಶೂಟಿಂಗ್ ಅರ್ಧಕ್ಕೆ ಬಿಟ್ಟು ರೂಂಗೆ ಹೋಗಿ ಕಣ್ಣೀರು ಕೂಡ ಹಾಕಿದ್ರಂತೆ. ಆದ್ರೆ ಇದನ್ನ ಸವಾಲಾಗಿ ಸ್ವೀಕರಿಸಿದ ಯಶ್, ಅವತ್ತೇ ಶಪಥ ಮಾಡಿದ್ರಂತೆ. ‘ನನ್ನ ಟೈಮ್ ಬರುತ್ತೆ, ಆಮೇಲೆ ಒಂದೇ ಒಂದು ಟೇಕ್ನಲ್ಲಿ ಫೈಟ್ ಮಾಡೋಥರಾ ಆಗ್ತೀನಿ ನೋಡು’ ಅಂತ ಅವತ್ತಿನ ಸೆಟ್ನಲ್ಲಿ ಕ್ಲಾಪ್ ಬಾಯ್ ಆಗಿದ್ದವನ ಹತ್ರಾ ಆಕ್ರೋಶ ತೋಡಿಕೊಂಡಿದ್ರಂತೆ ಯಶ್.. ಅವತ್ತು ಆ ಫೈಟ್ ಮಾಸ್ಟರ್ ಅವಮಾನಿಸಿದ ಕಿಚ್ಚು ಯಶ್ ಅವರಲ್ಲಿ ಕೊತ ಕೊತ ಅಂತ ಉರಿದಿತ್ತು. ನಾನು ಸೂಪರ್ಸ್ಟಾರ್ ಆಗ್ಬೇಕು, ನಾನು ನಂಬರ್ 1 ನಟ ಆಗ್ಬೇಕು ಅನ್ನೋ ಕಿಡಿ ಹೊತ್ತಿತ್ತು. ಇದೇ ಕೋಪ, ಇದೇ ಆಕ್ರೋಶದಲ್ಲಿ ಅರ್ಧಕ್ಕೆ ಬಿಟ್ಟಿದ ಸೀನ್ನ ಮತ್ತೆ ಹೋಗಿ ಪೂರ್ಣಗೊಳಿಸಿದ್ರಂತೆ. ಆದ್ರೆ ಈ ಸಲ ಒಂದೇ ಟೇಕ್ನಲ್ಲಿ ಆ ಸೀನ್ನ ಮುಗಿಸಿದ್ರಂತೆ ರಾಕಿಂಗ್ ಸ್ಟಾರ್.
ಪ್ರತಿಯೊಬ್ಬರಲ್ಲೂ ಇಂಥದ್ದೇ ಒಂದು ಕಿಚ್ಚಿರುತ್ತೆ. ಅದಕ್ಕೆ ಕಿಡಿ ಹಚ್ಚುವ ಘಟನೆಗಳು ಆದಾಗ ಮಾತ್ರ ಇಂಥಹ ಹಠ ಹುಟ್ಟೋಕೆ ಸಾಧ್ಯ. ಇದು ಸಿನಿಮಾ ಆಗಿರಬಹುದು ಅಥವಾ ಇನ್ಯಾವುದೇ ಕೆಲಸ ಆಗಿರಬಹುದು. ಅವತ್ತು ಡ್ರಾಮಾ ಸೆಟ್ನಲ್ಲಿ ನಡೆದ ಆ ಘಟನೆ ಯಶ್ ಮನಸ್ಸಿನಲ್ಲಿ ಬೆಂಕಿಯಂಥ ಹಠ ಸೃಷ್ಟಿಸಿತು. ಆ ಹಠದ ಪ್ರತಿಫಲವೇ ಇವತ್ತು ರಾಕಿ ಭಾಯ್ ಸಾಮ್ರಾಜ್ಯ ಸೃಷ್ಟಿಯಾಗಿದೆ. ಹತ್ತಾರು ಕಾರು, ಬಂಗಲೆ, ಸುತ್ತಮುತ್ತ ಅಸಿಸ್ಟಂಟ್ಗಳು, ಕೋಟಿ ಕೋಟಿ ಸಂಭಾವನೆ ತೆಗೆದುಕೊಳ್ಳುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಇದು ಯಶ್ ಜೀವನದಲ್ಲಿ ನಡೆದ ಒಂದು ಕಿಚ್ಚಿನ ಘಟನೆ. ಇಂಥದ್ದೇ ಹತ್ತು ಹಲವು ಘಟನೆಗಳು ಅವರ ಲೈಫ್ಲ್ಲಿ ನಡೆದಿರಬಹುದು. ಅದೇನೇ ಇರಲಿ, ಯಶ್ ಇವತ್ತು ನಂಬರ್ 1 ನಟ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ