ಟೀಂ ಇಂಡಿಯಾ, ಪಾಕ್ ಮಧ್ಯದ ರೋಚಕ ಪಂದ್ಯ
ಶುಭ್ಮನ್ ಗಿಲ್, ಕ್ಯಾಪ್ಟನ್ ರೋಹಿತ್ ಶರ್ಮಾ ಔಟ್!
ಭಾರತ ತಂಡದ ಅಭಿಮಾನಿಗಳಿಗೆ ಶಾಕ್ ಕೊಟ್ಟ ದಿಗ್ಗಜರು
ಇಂದು ಶ್ರೀಲಂಕಾದ ಕೊಲಂಬೋ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರೋ ಏಷ್ಯಾಕಪ್ ಟೂರ್ನಿ ಪಾಕ್ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯಾಗೆ ಆರಂಭಿಕ ಆಘಾತ ಕಾದಿದೆ. ಟೀಂ ಇಂಡಿಯಾದ ಓಪನರ್ ಆಗಿ ಬಂದ ಕ್ಯಾಪ್ಟನ್ ರೋಹಿತ್ ಶರ್ಮಾ, ಯಂಗ್ ಬ್ಯಾಟ್ಸ್ಮನ್ ಶುಭ್ಮನ್ ಗಿಲ್ ಇಬ್ಬರು ವಿಕೆಟ್ ಒಪ್ಪಿಸಿದ್ದಾರೆ.
ಯೆಸ್, ಇಬ್ಬರು ವಿಕೆಟ್ ಒಪ್ಪಿಸಿ ಟೀಂ ಇಂಡಿಯಾ ಫ್ಯಾನ್ಸ್ಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ಮೊದಲು ರೋಹಿತ್ ಶರ್ಮಾ 56 ರನ್ ಆಗಿದ್ದಾಗ ಡಿಫೆಕ್ಸ್ ಆಡಲು ಹೋಗಿ ಶಾಬಾದ್ ಖಾನ್ ಬೌಲಿಂಗ್ನಲ್ಲಿ ಅಶ್ರಫ್ಗೆ ಕ್ಯಾಚ್ ಕೊಟ್ಟರು. ಇದಾದ ಬಳಿಕ 58 ರನ್ ಇದ್ದಾಗ ಶುಭ್ಮನ್ ಗಿಲ್ ಬಾಲ್ ಬರೋ ಮುನ್ನವೇ ಬ್ಯಾಟ್ ಬೀಸಿ ಕ್ಯಾಚ್ ನೀಡಿ ಪೆವಿಲಿಯನ್ಗೆ ತೆರಳಿದರು. ಸದ್ಯ ಕ್ರೀಸ್ನಲ್ಲಿ ಕೊಹ್ಲಿ, ಕೆ.ಎಲ್ ರಾಹುಲ್ ಇದ್ದಾರೆ.
ಆರಂಭದಿಂದಲೂ ತಾಳ್ಮೆ ಆಟವಾಡಿದ್ದ ರೋಹಿತ್ ಹೋಗುತ್ತಾ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದರು. ಬರೋಬ್ಬರಿ 6 ಫೋರ್, 4 ಸಿಕ್ಸರ್ ಸಮೇತ ಹಿಟ್ಮ್ಯಾನ್ ಹೊಸ ದಾಖಲೆ ಬರೆದರು. ಇವರ ಸ್ಟ್ರೈಕ್ ರೇಟ್ 110ಕ್ಕೂ ಹೆಚ್ಚು ಇತ್ತು. ಕೊನೆಗೂ 49 ಬಾಲ್ಗಳಲ್ಲಿ 56 ರನ್ ಸಿಡಿಸಿ ಕ್ಯಾಚ್ ಒಪ್ಪಿಸಿದರು.
ಶುಭ್ಮನ್ ಗಿಲ್ ಕೂಡ ಪಾಕ್ ಬೌಲರ್ಗಳ ಬೆವರಿಳಿಸಿದರು. ಕೇವಲ 37 ಬಾಲ್ನಲ್ಲಿ ಬರೋಬ್ಬರಿ 140ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ನೊಂದಿಗೆ ಬ್ಯಾಟ್ ಬೀಸಿ ಅರ್ಧಶತಕ ಸಿಡಿಸಿದರು. ಅದರಲ್ಲೂ ಸುಮಾರು 10 ಫೋರ್ ಚಚ್ಚಿದ್ರು. ಇಬ್ಬರ ಆಟ ಅದ್ಭುತವಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ