newsfirstkannada.com

ವೆಸ್ಟ್​ ಇಂಡೀಸ್​​​ ಟೆಸ್ಟ್​ ಸೀರೀಸ್​​.. ಕೊಹ್ಲಿ, ರೋಹಿತ್​ಗಿಲ್ಲ ರೆಸ್ಟ್​.. ಯುವ ಆಟಗಾರರ ಕನಸು ಭಗ್ನ!

Share :

21-06-2023

    ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ಟೀಂ ಇಂಡಿಯಾಗೆ ಸೋಲು

    ಈ ಬೆನ್ನಲ್ಲೇ ವೆಸ್ಟ್​ ಇಂಡೀಸ್​ ಟೆಸ್ಟ್​ ಸೀರೀಸ್​ಗೆ ಟೀಂ ಇಂಡಿಯಾ ಭರ್ಜರಿ ಸಿದ್ಧತೆ

    ವೆಸ್ಟ್​ ಇಂಡೀಸ್​​ ಸೀರೀಸ್​​ನಲ್ಲಿ ರೋಹಿತ್​​, ಕೊಹ್ಲಿ ಸೇರಿ ಸೀನಿಯರ್ಸ್​​ಗಿಲ್ಲ ರೆಸ್ಟ್​​

ಇತ್ತೀಚೆಗೆ ನಡೆದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಟೀಂ ಇಂಡಿಯಾ ಹೀನಾಯ ಸೋಲು ಕಂಡಿತ್ತು. ಈ ಬೆನ್ನಲ್ಲೇ ಮತ್ತೊಂದು ಟೆಸ್ಟ್​ ಸೀರೀಸ್​​ಗೆ ಟೀಂ ಇಂಡಿಯಾ ಸಜ್ಜಾಗುತ್ತಿದೆ. ಹೀಗಾಗಿ ಜುಲೈನಲ್ಲಿ ನಡೆಯಲಿರೋ ವೆಸ್ಟ್​ ಇಂಡೀಸ್​​​ ಸರಣಿಯಲ್ಲಿ ಟೀಂ ಇಂಡಿಯಾದ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಿ ಯಂಗ್​ ಪ್ಲೇಯರ್ಸ್​ಗೆ ಅವಕಾಶ ನೀಡುವ ನಿರ್ಧಾರವನ್ನು ಬಿಸಿಸಿಐ ಹಿಂದಕ್ಕೆ ತೆಗೆದುಕೊಂಡಿದೆ.

ಕ್ಯಾಪ್ಟನ್​​ ರೋಹಿತ್​ ಶರ್ಮಾ, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಹಲವು ಸೀನಿಯರ್​ ಪ್ಲೇಯರ್ಸ್​​ಗೆ ರೆಸ್ಟ್​ ನೀಡಲಾಗುವುದು. ಇವರ ಜಾಗದಲ್ಲಿ ಯುವ ಆಟಗಾರರಿಗೆ ಅವಕಾಶ ನೀಡಲಾಗುವುದು. ಜತೆಗೆ ರೋಹಿತ್​ ಅಲ್ಲದೆ ಬೇರೆ ಯಾರಿಗಾದ್ರೂ ನಾಯಕತ್ವದ ಜವಾಬ್ಧಾರಿ ನೀಡುವ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆದರೀಗ ಈ ನಿರ್ಧಾರದಿಂದ ಬಿಸಿಸಿಐ ಹಿಂದೆ ಸರಿದಿದೆ.

ಇನ್ನು, ಈ ಸೀರೀಸ್​ಗೂ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್​​, ಜಸ್ಪ್ರೀತ್ ಬೂಮ್ರಾ ಅವರಂಥಾ ಆಟಗಾರರು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಅಲಭ್ಯವಾಗಿದ್ದಾರೆ. ಹೀಗಾಗಿ ಸೀನಿಯರ್​ ಪ್ಲೇಯರ್ಸ್​ಗೆ ರೆಸ್ಟ್​ ನೀಡಲು ಬಿಸಿಸಿಐ ಹಿಂದೆ ಮುಂದೆ ನೋಡುತ್ತಿದೆ.

ಈ ಸಂಬಂಧ ಮಾತಾಡಿದ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು, ರೋಹಿತ್​ ಸೇರಿದಂತೆ ಎಲ್ಲಾ ಸೀನಿಯರ್ಸ್​ಗೂ ಸಾಕಾಗುವಷ್ಟು ವಿಶ್ರಾಂತಿ ಸಿಕ್ಕಿದೆ. ಹಾಗಾಗಿ ವರ್ಕ್‌ಲೋಡ್ ಮ್ಯಾನೇಜ್‌ಮೆಮಟ್ ಬಗ್ಗೆ ಆತಂಕಪಡೋ ಅಗತ್ಯವಿಲ್ಲ. ವೆಸ್ಟ್ ಇಂಡೀಸ್ ಸರಣಿಗೆ ಟೀಂ ಇಂಡಿಯಾ ರೋಹಿತ್ ಶರ್ಮಾ ನಾಯಕತ್ವದಲ್ಲೇ ಆಡಲಿದೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೆಸ್ಟ್​ ಇಂಡೀಸ್​​​ ಟೆಸ್ಟ್​ ಸೀರೀಸ್​​.. ಕೊಹ್ಲಿ, ರೋಹಿತ್​ಗಿಲ್ಲ ರೆಸ್ಟ್​.. ಯುವ ಆಟಗಾರರ ಕನಸು ಭಗ್ನ!

https://newsfirstlive.com/wp-content/uploads/2023/06/Kohli_8.jpg

Load More