ನಾಳೆ ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್ ಪಂದ್ಯ
ಗುಜರಾತ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯಾಟ
BCCI ಹಂಚಿಕೊಂಡಿದೆ ವಿಶ್ವಕಪ್ ಜೊತೆಗೆ ನಾಯಕರ ಫೋಟೋಶೂಟ್
ನಾಳೆ ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್ ಪಂದ್ಯ ನಡೆಯಲಿಕ್ಕಿದೆ. ಗುಜರಾತ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯಾಟ ಏರ್ಪಡಲಿದೆ. ಇದೀಗ ನಾಳಿನ ವಿಶ್ವಕಪ್ ಪಂದ್ಯಕ್ಕೂ ಮೊದಲು ಬಿಸಿಸಿಐ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಮತ್ತು ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ವಿಶ್ವಕಪ್ ಜೊತೆಗೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ಹೌದು, ಸದ್ಯ ಬಿಸಿಸಿಐ ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ದೇಶದ ವಿವಿಧ ಜಾಗಗಳಲ್ಲಿ ವಿಶ್ವಕಪ್ ಜೊತೆಗೆ ರೋಹಿತ್ ಶರ್ಮಾ ಮತ್ತು ಪ್ಯಾಟ್ ಕಮಿನ್ಸ್ ಫೋಟೋ ತೆಗೆಸಿಕೊಂಡಿದ್ದಾರೆ.
ಈಗಾಗಲೇ ಟೀಂ ಇಂಡಿಯಾ ಎದುರಿಸಿರುವ 9 ಪಂದ್ಯದಲ್ಲಿ 9 ಪಂದ್ಯವನ್ನು ಗೆದ್ದಿದೆ. ಸೋಲಿಲ್ಲದ ಸರದಾರ ಎನಿಸಿಕೊಂಡುಬಂದಿದೆ. ನಾಳಿನ ಫೈನಲ್ ಪಂದ್ಯದ ಮೇಲೆ ನಿರೀಕ್ಷೆಯಿದೆ.
ಆಸೀಸ್ ತಂಡಕ್ಕೆ ಅದೃಷ್ಠ ಚೆನ್ನಾಗಿಯೇ ಇದೆ. ಈವರೆಗೆ 9 ಪಂದ್ಯದಲ್ಲಿ 7 ಪಂದ್ಯ ಗೆದ್ದು ಫೈನಲ್ ತಲುಪಿದ್ದು, ಟೀಂ ಇಂಡಿಯಾಗೆ ಸವಾಲೆಸೆದಿದೆ.
ವಿಶ್ವವೇ ನಾಳಿನ ಟೀಂ ಇಂಡಿಯಾ ಮತ್ತು ಆಸೀಸ್ ನಡುವಿನ ಸಮರಕ್ಕೆ ಕಾಯುತ್ತಿದೆ. ಯಾರ ಪಾಲಿಗೆ ಕಪ್ ಒಳಿಯಲಿದೆ ಎಂಬ ಕುತೂಹಲದಿಂದ ಇದ್ದಾರೆ.
ಸದ್ಯ ಭಾರತೀಯರ ಬಾಯಲ್ಲಂತೂ ಟೀಂ ಇಂಡಿಯಾದ ಜಪ ಮೊಳಗುತ್ತಿದೆ. 12 ವರ್ಷದ ಬಳಿಕ ಟೀಂ ಇಂಡಿಯಾ ಕಪ್ ಗೆಲ್ಲಲಿದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ