newsfirstkannada.com

ಬಿಗ್ ಸಿಕ್ಸರ್​ ಬಾರಿಸಿದ ಕ್ಯಾಪ್ಟನ್ ರೋಹಿತ್.. ಹಿಟ್​ಮ್ಯಾನ್ ಸಿಡಿಸಿದ ಸಿಕ್ಸ್ ಎಷ್ಟು ಮೀಟರ್​ ಹೋಗಿದೆ ಗೊತ್ತಾ?

Share :

Published June 25, 2024 at 6:09am

    ರೋಹಿತ್ ಬಾರಿಸಿದ ಸಿಕ್ಸರ್​ನಿಂದ​ ಅಚ್ಚರಿಗೆ ಒಳಗಾದ ಪ್ಯಾಟ್ ಕಮಿನ್ಸ್

    ಆಸಿಸ್ ವಿರುದ್ಧದ ಪಂದ್ಯದಲ್ಲಿ ಅತಿ ದೊಡ್ಡ ಸಿಕ್ಸರ್ ಬಾರಿಸಿದ ನಾಯಕ

    T20ಯಲ್ಲೇ ಹೆಚ್ಚು ಸಿಕ್ಸರ್ ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್​​ಮನ್

T20 ವರ್ಲ್ಡ್​​ಕಪ್​ನ​ ಆಸ್ಟ್ರೇಲಿಯಾ ಜೊತೆಗಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಕ್ಯಾಪ್ಟನ್​ ರೋಹಿತ್ ಶರ್ಮಾ ಬಾರಿಸಿದ ಚೆಂಡು ಸ್ಟೇಡಿಯಂನ ಟಾಪ್​ನಲ್ಲಿ ಬಿದ್ದಿದೆ. ಇದು 100 ಮೀಟರ್​ನಷ್ಟು ದೂರ ಹೋಗಿದೆ. ಈ ಶಾಟ್​ ನೋಡಿ ಆಸಿಸ್​ ಆಲ್​ರೌಂಡರ್​ ಪ್ಯಾಟ್ ಕಮಿನ್ಸ್ ಒಂದು ಕ್ಷಣ ಅವಾಕ್ ಆಗಿದ್ದಾರೆ.

ಇದನ್ನೂ ಓದಿ: ರೋಹಿತ್ ಬ್ಯಾಟಿಂಗ್​ ಅಬ್ಬರಕ್ಕೆ ಬೆಚ್ಚಿಬಿದ್ದ ಆಸಿಸ್​.. ಸೆಂಚುರಿ ಬಾರಿಸದೇ ನಿರಾಸೆಯಿಂದ ಹೊರನಡೆದ ಹಿಟ್​ಮ್ಯಾನ್

ಗ್ರಾಸ್ ಐಲೆಟ್​ನ ಡೇರೆನ್ ಸಾಮಿ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಕ್ಯಾಪ್ಟನ್​ ರೋಹಿತ್ ಶರ್ಮಾ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಮುಂದಾದರು. ಪ್ಯಾಟ್​ ಕಮಿನ್ಸ್​ ಬೌಲಿಂಗ್​ನಲ್ಲಿ ಮಿಡ್-ವಿಕೆಟ್ ಮೇಲೆ ರೋಹಿತ್ ಶರ್ಮಾ ಬಾರಿಸಿದ ಬಾಲ್ ಸ್ಟೇಡಿಯಂನ ಟಾಪ್​ನಲ್ಲಿ ಹೋಗಿ ಬಿದ್ದಿದೆ. ಇದು ಬರೋಬ್ಬರಿ 100 ಮೀಟರ್ ದೂರ ಹೋಗಿದ್ದು ಈ ಟೂರ್ನಿಯಲ್ಲಿ ಅತ್ಯಂತ ದೊಡ್ಡ ಸಿಕ್ಸ್​ ಆಗಿದೆ. ಅಲ್ಲದೇ T20ಯಲ್ಲಿ 200 ಸಿಕ್ಸರ್​ಗಳನ್ನು ಬಾರಿಸಿದ ವಿಶ್ವದ ಮೊಟ್ಟ ಮೊದಲ ಬ್ಯಾಟ್ಸ್​​ಮನ್ ಎನ್ನುವ ಖ್ಯಾತಿಗೆ ರೋಹಿತ್ ಶರ್ಮಾ ಕಾರಣರಾದರು.

ಇದನ್ನೂ ಓದಿ: ಹೊಡಿಬಡಿ ಬ್ಯಾಟಿಂಗ್ ಮಾಡ್ತಿರೋ ಕ್ಯಾಪ್ಟನ್ ರೋಹಿತ್.. ಹಾಫ್​ಸೆಂಚುರಿ ಸಿಡಿಸಿದ ಹಿಟ್​ ಮ್ಯಾನ್

ಓಪನರ್ ಆಗಿ ಕ್ರೀಸ್​ ಆಗಮಿಸಿದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ಉತ್ತಮ ಆರಂಭ ಪಡೆಯಲಿಲ್ಲ. ವಿರಾಟ್ ಕೊಹ್ಲಿ ಡಕೌಟ್ ಆದರು. ಆದರೆ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ರೋಹಿತ್, ಕೇವಲ 41 ಎಸೆತಗಳಲ್ಲಿ 7 ಬೌಂಡರಿ, 8 ಸಿಕ್ಸರ್ ಸಮೇತ 92 ರನ್​ಗಳನ್ನ ಸಿಡಿಸಿದರು. ಇನ್ನೇನು ಸೆಂಚುರಿಗೆ ಕೇವಲ 8 ರನ್​ ಬಾಕಿ ಇರುವಾಗಲೇ ಮಿಚೆಲ್ ಸ್ಟಾರ್ಕ್​ ಬೌಲಿಂಗ್​ನಲ್ಲಿ ಔಟ್ ಆದರು.

T20 ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟ್ಸ್​​ಮನ್ಸ್​

  • ರೋಹಿತ್ ಶರ್ಮಾ- 157 ಇನ್ನಿಂಗ್ಸ್​​ನಲ್ಲಿ 203 ಸಿಕ್ಸ್​ಗಳು
  • ಮಾರ್ಟಿನ್ ಗಪ್ಟಿಲ್- 122 ಪಂದ್ಯಗಳಿಂದ 173 ಸಿಕ್ಸ್​ಗಳು
  • ಮ್ಯಾಕ್ಸ್​ವೆಲ್​- 113 ಮ್ಯಾಚ್​ಗಳಲ್ಲಿ 133 ಸಿಕ್ಸರ್​ಗಳು
  • ನಿಕೋಲಸ್ ಪೂರನ್- 95 ಪಂದ್ಯಗಳಲ್ಲಿ 132 ಸಿಕ್ಸರ್ಸ್​ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಬಿಗ್ ಸಿಕ್ಸರ್​ ಬಾರಿಸಿದ ಕ್ಯಾಪ್ಟನ್ ರೋಹಿತ್.. ಹಿಟ್​ಮ್ಯಾನ್ ಸಿಡಿಸಿದ ಸಿಕ್ಸ್ ಎಷ್ಟು ಮೀಟರ್​ ಹೋಗಿದೆ ಗೊತ್ತಾ?

https://newsfirstlive.com/wp-content/uploads/2024/06/ROHIT_SHARMA_BIG_SIX.jpg

Load More