newsfirstkannada.com

ಕೊಹ್ಲಿಗಿಂತ ಕಮ್ಮಿ, ಸಚಿನ್​ಗಿಂತ ಜಾಸ್ತಿ.. ವಿಶೇಷ ದಾಖಲೆ ಬರೆದ ಕ್ಯಾಪ್ಟನ್ ರೋಹಿತ್ ಶರ್ಮಾ

Share :

12-09-2023

    ರನ್​ ಗಳಿಕೆಯಲ್ಲಿ ರೋಹಿತ್ ಶರ್ಮಾ ಹೊಸ ಮೈಲಿಗಲ್ಲು

    241 ಏಕದಿನ ಪಂದ್ಯ ಆಡಿ ಮಾಡಿದ ಸಾಧನೆ ಏನು ಗೊತ್ತಾ..?

    30 ಶತಕ, 50 ಅರ್ಧಶತಕ, ಇವತ್ತೂ ಒಂದು ಹಾಫ್ ಸೆಂಚೂರಿ

ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಕ್ರಿಕೆಟ್ ಬದುಕಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಏಷ್ಯಾಕಪ್ ಗೇಮ್​​​ನಲ್ಲಿ ಇವತ್ತು ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ 10 ಸಾವಿರ ರನ್​ ಪೂರೈಸುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ಅತೀ ವೇಗವಾಗಿ 10,000 ರನ್ ಪೂರೈಸಿದ ಎರಡನೇ ಆಟಗಾರ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಜೊತೆಗೆ ಏಕದಿನ ಕ್ರಿಕೆಟ್​ನಲ್ಲಿ 10 ಸಾವಿರ ರನ್ ಪೂರೈಸಿದ ಭಾರತದ 6ನೇ ಬ್ಯಾಟ್ಸ್​ಮನ್ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ. ಲಂಕಾ ವಿರುದ್ಧ 22 ರನ್​ ಗಳಿಸುತ್ತಿದ್ದಂತೆಯೇ ಶರ್ಮಾ ಈ ಸಾಧನೆ ಮಾಡಿದರು. ಅತೀ ವೇಗವಾಗಿ ಹತ್ತು ಸಾವಿರ ರನ್ ಪೂರೈಸಿದ ಆಟಗಾರರ ಪೈಕಿ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿ ಬರುತ್ತಾರೆ. 2018ರಲ್ಲಿ ವಿರಾಟ್ ಕೊಹ್ಲಿ 205 ಇನ್ನಿಂಗ್ಸ್ ಆಡಿ ಈ ಸಾಧನೆ ಮಾಡಿದ್ದರು. ರೋಹಿತ್ ಶರ್ಮಾ 241 ಇನ್ನಿಂಗ್ಸ್​ ಆಡಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಯಾರೆಲ್ಲ ಈ ಸಾಧನೆ ಮಾಡಿದ್ದಾರೆ..?

  • ವಿರಾಟ್ ಕೊಹ್ಲಿ- 2018ರಲ್ಲಿ 205 ಇನ್ನಿಂಗ್ಸ್
  • ರೋಹಿತ್ ಶರ್ಮಾ- 2023 ರಲ್ಲಿ 241 ಇನ್ನಿಂಗ್ಸ್
  • ಸಚಿನ್ ತೆಂಡುಲ್ಕರ್-2001 ರಲ್ಲಿ 259 ಇನ್ನಿಂಗ್ಸ್
  • ಸೌರವ್ ಗಂಗೂಲಿ- 2005 ರಲ್ಲಿ 263 ಇನ್ನಿಂಗ್ಸ್
  • ರಿಕಿ ಪಾಂಟಿಂಗ್-2007 ರಲ್ಲಿ 265 ಇನ್ನಿಂಗ್ಸ್

ಇನ್ನು ಇವತ್ತಿನ ಪಂದ್ಯದಲ್ಲಿ ರೋಹಿತ್ ಶರ್ಮಾ 48 ಬಾಲ್​ಗಳನ್ನು ಎದುರಿಸಿ 53 ರನ್​​ಗಳಿಸಿ ಔಟ್ ಆದರು. ರೋಹಿತ್ ಅವರ ಸ್ಫೋಟಕ ಇನ್ನಿಂಗ್ಸ್​ನಲ್ಲಿ 2 ಸಿಕ್ಸರ್, 7 ಬೌಂಡರಿ ಬಂದವು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೊಹ್ಲಿಗಿಂತ ಕಮ್ಮಿ, ಸಚಿನ್​ಗಿಂತ ಜಾಸ್ತಿ.. ವಿಶೇಷ ದಾಖಲೆ ಬರೆದ ಕ್ಯಾಪ್ಟನ್ ರೋಹಿತ್ ಶರ್ಮಾ

https://newsfirstlive.com/wp-content/uploads/2023/09/ROHIT-2.jpg

Load More