Advertisment

ಬಾರ್ಡರ್-ಗವಾಸ್ಕರ್​ ಟೂರ್ನಿಗೆ ಕೈಕೊಟ್ಟ ರೋಹಿತ್ ಶರ್ಮಾ; ಕಾರಣ ರಿವೀಲ್..!

author-image
Ganesh
Updated On
ಮೊದಲ ಪಂದ್ಯ ಗೆದ್ದರೂ ರೋಹಿತ್​ಗೆ ತಪ್ಪದ ಟೆನ್ಶನ್, ಟೆನ್ಶನ್.. ಅದಕ್ಕೆ ದೊಡ್ಡ ಕಾರಣ ಇದೆ
Advertisment
  • ಆಸ್ಟ್ರೇಲಿಯಾ ವಿರುದ್ಧ ನಡೆಯುವ ಟೆಸ್ಟ್​ ಸರಣಿ
  • ನವೆಂಬರ್ ರಿಂದ ಆಸ್ಟ್ರೇಲಿಯಾದಲ್ಲಿ ಟೂರ್ನಿ ಆರಂಭ
  • ಬಿಸಿಸಿಐ ಬಳಿ ರೋಹಿತ್ ಮನವಿ, ಅಂಥದ್ದು ಏನಾಯ್ತು?

ಬಾರ್ಡರ್​ ಗವಾಸ್ಕರ್​ ಟೂರ್ನಿ ನವೆಂಬರ್‌ನಲ್ಲಿ ಆರಂಭವಾಗಲಿದೆ. ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​ ಸರಣಿ ಮುಗಿದ ಬೆನ್ನಲ್ಲೇ ಭಾರತ ಆಸ್ಟ್ರೇಲಿಯಾಗೆ ಪ್ರವಾಸ ಬೆಳಸಲಿದೆ. ಇದೀಗ ಟೀಂ ಇಂಡಿಯಾಗೆ ಆಘಾತಕಾರಿ ಸುದ್ದಿಯೊಂದು ಸಿಕ್ಕಿದೆ.

Advertisment

ಕ್ಯಾಪ್ಟನ್ ರೋಹಿತ್ ಶರ್ಮಾ ಆಸಿಸ್​ ವಿರುದ್ಧ ಟೆಸ್ಟ್​ ಸರಣಿಯಲ್ಲಿ ಕೆಲವು ಪಂದ್ಯಗಳಿಂದ ದೂರ ಉಳಿಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರೋಹಿತ್ ಮೊದಲ ಎರಡು ಟೆಸ್ಟ್​ನಿಂದ ಹೊರಗುಳಿಯುವ ಸಾಧ್ಯತೆ ಇದೆ. ಈ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಬಂದಿಲ್ಲ.

ರೋಹಿತ್ ಇರುತ್ತಾರೋ? ಇಲ್ಲವೋ ಅನ್ನೋದು ಸಂದರ್ಭಗಳ ಮೇಲೆ ಅವಲಂಬಿತವಾಗಿರುತ್ತದೆ. ಈ ಸಂಬಂಧ ರೋಹಿತ್, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಮಾಹಿತಿ ನೀಡಿದ್ದಾರೆ. ಒಂದು ಅಥವಾ ಎರಡು ಟೆಸ್ಟ್ ಪಂದ್ಯಗಳಿಂದ ರೋಹಿತ್ ಹೊರಗುಳಿಯಬಹುದು. ಇನ್ನು ಎಲ್ಲವೂ ಅಂದುಕೊಂಡಂತೆ ನಡೆದರೆ ರೋಹಿತ್ ಆಸ್ಟ್ರೇಲಿಯಾ ವಿರುದ್ಧದ ಎಲ್ಲಾ ಪಂದ್ಯಗಳನ್ನು ಆಡಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:Bigg Boss: ಕ್ರೇನ್ ಮೂಲಕ ನುಗ್ಗಿದ ಮುಸುಕುಧಾರಿಗಳು.. ಬಿಗ್​​ಬಾಸ್​ ಮನೆಯ ವಸ್ತುಗಳೆಲ್ಲ ಪೀಸ್​ ಪೀಸ್..

Advertisment

ಯಾಕೆ ರೋಹಿತ್​ ಆಡಲ್ಲ..?

ರೋಹಿತ್ ಶರ್ಮಾ ವೈಯಕ್ತಿಕ ವಿಚಾರವಾಗಿ ಬಿಸಿಸಿಐ ಮನವಿ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಾರಣಗಳಿಂದ ಅವರು ದೂರ ಇರಲಿದ್ದಾರೆ ಎಂದು ವರದಿಯಾಗಿದೆ. ರೋಹಿತ್ ಪತ್ನಿ ಗರ್ಭಿಣಿ ಎಂಬ ವದಂತಿ ಇದೆ. ಇದೇ ವಿಚಾರಕ್ಕೆ ಅವರು ವಿಶ್ರಾಂತಿ ಕೇಳಿದ್ದಾರಾ ಎಂಬ ಅನುಮಾನ ಕೂಡ ಇದೆ. ಇಂಡಿಯಾ ನವೆಂಬರ್ 22 ರಿಂದ ಜನವರಿ 3 ರವರೆಗೆ ಆಸ್ಟ್ರೇಲಿಯಾ ವಿರುದ್ಧ ಐದು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಬೇಕಾಗಿದೆ.

ಅದಕ್ಕೂ ಮುನ್ನ ನ್ಯೂಜಿಲೆಂಡ್ ವಿರುದ್ಧ ರೋಹಿತ್ ಮೈದಾನಕ್ಕಿಳಿಯಲಿದ್ದಾರೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಅಕ್ಟೋಬರ್ 16 ರಿಂದ ಬೆಂಗಳೂರಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಅಕ್ಟೋಬರ್ 24 ರಿಂದ ಪುಣೆಯಲ್ಲಿ ನಡೆಯಲಿದೆ. ಮೂರನೇ ಟೆಸ್ಟ್ ನವೆಂಬರ್ 1 ರಿಂದ ಮುಂಬೈನಲ್ಲಿ ನಡೆಯಲಿದೆ.

ಇದನ್ನೂ ಓದಿ:ಮತ್ತೊಂದು ತಪ್ಪು ಮಾಡಿದ ಬಿಸಿಸಿಐ.. ಬಟಾ ಬಯಲಾಯ್ತು ಬಿಸಿಸಿಐನ ಇಬ್ಬಗೆಯ ನೀತಿ..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment