ರೋಹಿತ್- ಹಾರ್ದಿಕ್ ಪಾಂಡ್ಯ ಮುನಿಸು ಮರೆಸಿದ್ಯಾರು..?
ಟಿ20 ವಿಶ್ವಕಪ್ ಗೆಲುವಿನ ಹಿಂದೆ ಇವರು ಪಾತ್ರವೇ ಮುಖ್ಯ
ವಿಲನ್ಸ್ ಆಗಬೇಕಿದ್ದ ರೋಹಿತ್-ಪಾಂಡ್ಯ ಹೀರೋಗಳಾದರು
ರೋಹಿತ್ ಶರ್ಮಾ ಅಂಡ್ ಹಾರ್ದಿಕ್ ಪಾಂಡ್ಯ. ಟಿ20 ವಿಶ್ವಕಪ್ ಗೆಲುವಿನ ಹಿಂದಿನ ಹೀರೋಗಳು.. ಇವರಿಬ್ಬರು ತಂಡದಲ್ಲಿಲ್ಲ ಅಂದಿದ್ರೆ, ವಿಶ್ವಕಪ್ ಗೆಲುವು ನಿಜಕ್ಕೂ ಅಸಾಧ್ಯ. ಇವರಿಂದಲೇ ವಿಶ್ವಕಪ್ ಸೋಲ್ತೀವಾ ಅನ್ನೋ ಭಯವೂ ಇತ್ತು. ಆದ್ರೆ ಅದಕ್ಕೆಲ್ಲಾ ಮದ್ದು ನೀಡಿದ್ದು ಮತ್ತಿಬ್ಬರು.
ಜುಲೈ 29.. 2024 ಇಡೀ ದೇಶವೇ ಸಂಭ್ರಮದಲ್ಲಿ ಮಿಂದೆದ್ದ ದಿನ. ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ಕನಸು ಕಂಡಿದ್ದ ದಿನ. ಟಿ20 ವಿಶ್ವಕಪ್ ಗೆದ್ದ ಸಂಭ್ರಮಲ್ಲಿದ್ದ ಅಭಿಮಾನಿಗಳ ಕಣ್ಣಾಲೆಯಲ್ಲಿ ನೀರು ಜಿನುಗಿದ್ದ ದಿನ. ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಭಾವನಾತ್ಮಕ ಕ್ಷಣವಾಗಿತ್ತು.
ಇದನ್ನೂ ಓದಿ:ತುಂಬಾ ವರ್ಷಗಳ ನಂತರ.. ಮತ್ತೆ ತಂಡ ಕೂಡಿಕೊಳ್ಳಲಿದ್ದಾರೆ RCB ಮೂವರು ಹಳೇ ಆಟಗಾರರು..!
ಈ ಭಾವನಾತ್ಮಕ ಕ್ಷಣದಲ್ಲಿ ಎಲ್ಲರ ಗಮನ ಸೆಳೆದಿದ್ದು ನಾಯಕ ರೋಹಿತ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ. ಈ ಇಬ್ಬರ ಪ್ರೀತಿಯ ಅಪ್ಪುಗೆ ನೋಡಿದ್ದ ಫ್ಯಾನ್ಸ್ ಮನದಲ್ಲಿ ಮಂದಹಾಸ ಮೂಡಿತ್ತು. ರೋಹಿತ್ ಶರ್ಮಾ, ಹಾರ್ದಿಕ್ಗೆ ನೀಡಿದ ಸಿಹಿ ಮುತ್ತು ನೋಡಿದ ಅಭಿಮಾನಿಗಳ ಮನಸ್ಸು ಹಗುರವಾಗಿತ್ತು. ವಿಶ್ವಕಪ್ಗೂ ಮುನ್ನ ಇವರಿಬ್ಬರೇ ಟೀಮ್ ಇಂಡಿಯಾ ಪಾಲಿಗೆ ವಿಲನ್ಸ್ ಆಗ್ತಾರಾ ಅನ್ನೋ ಭಯ ಕಾಡಿತ್ತು. ಇದಕ್ಕೆಲ್ಲಾ ಕಾರಣವಾಗಿದ್ದು ಐಪಿಎಲ್..
ವೇಳೆ ಫ್ಯಾನ್ಸ್ಗೆ ಕಾಡಿತ್ತು ರೋಹಿತ್-ಪಾಂಡ್ಯ ಭಯ
ಸೀಸನ್-18ರ ಐಪಿಎಲ್ನಲ್ಲಿ ಮೋಸ್ಟ್ ಹಾಟ್ ಟಾಪಿಕ್. ರೋಹಿತ್ ಶರ್ಮಾ ಆ್ಯಂಡ್ ಹಾರ್ದಿಕ್ ನಡುವಿನ ಮುನಿಸು. ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ಸಿ ವಿಚಾರವಾಗಿ ಶುರುವಾದ ಕಿತ್ತಾಟ ಭಾರೀ ಸೌಂಡ್ ಮಾಡಿತ್ತು. ಇದೇ ಕಿತ್ತಾಟ ಟಿ20 ವಿಶ್ವಕಪ್ ಮೇಲೆ ಎಫೆಕ್ಟ್ ಆಗುತ್ತೆ ಅನ್ನೋ ಆತಂಕ, ಭಯ ಫ್ಯಾನ್ಸ್ಗೆ ಮಾತ್ರವಲ್ಲ, ಟೀಮ್ ಮ್ಯಾನೇಜ್ಮೆಂಟ್ ಕಾಡಿತ್ತು. ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡ ಪಾಂಡ್ಯ-ರೋಹಿತ್ ಟ್ರೋಫಿ ಗೆದ್ದು ತರುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ:ಸ್ಟಾರ್ಗಳಿಗೊಂದು ನ್ಯಾಯ, ಉಳಿದವರಿಗೊಂದು ನ್ಯಾಯ; ಬಿಸಿಸಿಐ ವಿರುದ್ಧ ಭುಗಿಲೆದ್ದ ಆಕ್ರೋಶ
T20 ವಿಶ್ವಕಪ್ ಆರಂಭದಲ್ಲಿ ಮುಂದುವರಿದಿತ್ತು IPL ಮುನಿಸು..!
ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಟಿ20 ವಿಶ್ವಕಪ್ಗಾಗಿ ಅಮೆರಿಕಾಗೆ ಹಾರಿತ್ತು. ಮೊದಲೇ ನಾನೊಂದು ತೀರಾ, ನೀನೊಂದು ತೀರಾ ಎಂಬಂತಿದ್ದ ರೋಹಿತ್, ಹಾರ್ದಿಕ್ ಪಾಂಡ್ಯ ವೈಮನಸ್ಸು ವಿಶ್ವಕಪ್ನಲ್ಲಿ ಮುಂದುವರಿದಿತ್ತು. ಮೊದಲ ದಿನದ ಅಭ್ಯಾಸದ ವೇಳೆಯೇ ಇವರಿಬ್ಬರ ಮುನಿಸು ಬಟಾಬಯಲಾಗಿತ್ತು. ಮರುದಿನ ಇದೆಲ್ಲವೂ ಬದಲಾಗಿತ್ತು. ಮುಖಕ್ಕೆ ಮುಖ ಕೊಟ್ಟು ಮಾತನಾಡದ ರೋಹಿತ್, ಹಾರ್ದಿಕ್. 2ನೇ ದಿನ ನಗು ನಗುತ್ತಾ ಜೊತೆಯಾಗಿ ಕಂಡಿದ್ದರು.
ನಾನು ನೆಟ್ಸ್‌ಗೆ ಹೋದಾಗ ಹಾರ್ದಿಕ್, ರೋಹಿತ್ ನಡುವೆ ಏನು ನಡೀತಿದೆ ಎಂದು ಗಮನಿಸಿದೆ. ಮೊದಲ ದಿನ ಅಭ್ಯಾಸದ ವೇಳೆ ಇಬ್ಬರೂ ದೂರ ದೂರ ಉಳಿದಿದ್ದರು, ಅವರಿಬ್ಬರು ಮಾತನಾಡುವುದು ಕಾಣಲಿಲ್ಲ. 2ನೇ ದಿನ ನೋಡಿದಾಗ ಅವರಿಬ್ಬರು ಅಕ್ಕಪಕ್ಕ ಕುಳಿತು ಮಾತನಾಡುತ್ತಿದ್ದರು. ಆ ಕ್ಷಣ ನನಗೆ ಟೀಮ್ ಇಂಡಿಯಾ ಗೆಲ್ಲುವ ಬಗ್ಗೆ ಭರವಸೆ ಮೂಡಿತ್ತು. ಅಲ್ಲಿ ಕ್ಯಾಮರಾ ಕೂಡ ಇರಲಿಲ್ಲ. ರೋಹಿತ್, ಹಾರ್ದಿಕ್ ಮಾತನಾಡುತ್ತಿದ್ದ ರೀತಿ ನೋಡಿ ನಂಬಲಾಗಲಿಲ್ಲ. ನಂತರದ 3 ದಿನಗಳ ಇಬ್ಬರು ಜೊತೆಯಲ್ಲೇ ಅಭ್ಯಾಸ ಮಾಡಿದರು-ವಿಮಲ್ ಕುಮಾರ್, ಹಿರಿಯ ಪತ್ರಕರ್ತ
ಹಿರಿಯ ಪತ್ರಕರ್ತ ವಿಮಲ್ ಕುಮಾರ್ ಹೇಳಿದ್ರಲ್ಲಿ ಸತ್ಯ ಇದೆ. ಇವರಿಬ್ಬರ ಕಿತ್ತಾಟಕ್ಕೆ ಬ್ರೇಕ್ ಹಾಕಿದ್ದು ಆ ಇಬ್ಬರು. ಅವ್ರೇ ಮಾಜಿ ಕೋಚ್ ರಾಹುಲ್ ದ್ರಾವಿಡ್ ಆ್ಯಂಡ್ ವಿರಾಟ್ ಕೊಹ್ಲಿ!
ಇದನ್ನೂ ಓದಿ:ಗಾಯಕ್ವಾಡ್ಗೆ ಬಿಗ್ ಶಾಕ್; ಧೋನಿ ಶಿಷ್ಯನಿಗೆ ಗಾಳ ಹಾಕಿದ CSK, ಕ್ಯಾಪ್ಟನ್ಸಿ ಆಫರ್..!
ಇಬ್ಬರನ್ನು ಒಂದಾಗಿಸಿದ ರಾಹುಲ್ ದ್ರಾವಿಡ್
ರೋಹಿತ್, ಪಾಂಡ್ಯ ನಡುವಿನ ಸಂಬಂಧ ಹದಗೆಟ್ಟಿತ್ತು. ಇದನ್ನೆಲ್ಲಾ ಗಮನಿಸಿದ್ದ ದ್ರಾವಿಡ್, ಇಬ್ಬರ ಜೊತೆ ಮಾತುಕತೆ ನಡೆಸಿದ್ದರು. ತಂಡದ ಮೇಲಾಗುವ ಪರಿಣಾಮವೇನು ಅನ್ನೋದನ್ನ ತಿಳಿ ಹೇಳಿದ್ದರು. ಇದರ ಪ್ರತಿಫಲವೇ ನೋಡಿ ಮರುದಿನ, ಇಬ್ಬರು ನಗ್ ನಗ್ತಾ ಕಾಣೋಕೆ ಕಾರಣವಾಗಿದ್ದು. ಇವ್ರನ್ನೇ ಅಲ್ಲ. ತಂಡದಲ್ಲಿದ್ದ ಪ್ರತಿ ಆಟಗಾರರನ್ನ ದ್ರಾವಿಡ್, ಅದ್ಬುತವಾಗಿ ಹ್ಯಾಂಡಲ್ ಮಾಡಿದರು.
ಹಾರ್ದಿಕ್, ವಿರಾಟ್ರಂಥ ಬಿಗ್ ಪ್ಲೇಯರ್ಗಳನ್ನ ಅದ್ಬುತವಾಗಿ ನಿಭಾಯಿಸಿದರು. ವಿರಾಟ್ ರೋಲ್ ಕೂಡ ಮುಖ್ಯವಾಗಿತ್ತು. ತಂಡದ ಫೈಟಿಂಗ್ ಸ್ಪಿರಿಟ್ನ ಕ್ರೆಡಿಟ್ ರಾಹುಲ್ ದ್ರಾವಿಡ್, ರೋಹಿತ್ ಶರ್ಮಾಗೆ ಸೇರಬೇಕು. ರಾಹುಲ್ ದ್ರಾವಿಡ್ನಿಂದಲೇ ಡ್ರೆಸ್ಸಿಂಗ್ ರೂಮ್ ಉತ್ತಮವಾಗಿತ್ತು-ವಿಮಲ್ ಕುಮಾರ್, ಹಿರಿಯ ಪತ್ರಕರ್ತ
ಇದು ಜಸ್ಟ್ ಟಿ20 ವಿಶ್ವಕಪ್ ವೇಳೆ ಮಾತ್ರವೇ ಅಲ್ಲ. ಟೀಮ್ ಇಂಡಿಯಾ ಕೋಚ್ ಪಟ್ಟಕ್ಕೇರಿದ ಕ್ಷಣದಿಂದಲೂ ದ್ರಾವಿಡ್, ತಂಡದಲ್ಲಿ ಒಂದಾಣಿಕೆ ಮೂಡಿಸಿದ್ದರು. ಪ್ರಮುಖವಾಗಿ ರೋಹಿತ್, ಕೊಹ್ಲಿ ನಡುವಿನ ಮನಸ್ತಾಪಕ್ಕೆ ಬ್ರೇಕ್ ಹಾಕಿದರು. ಆ ಮೂಲಕ ಒಡೆದ ಮನೆಯನ್ನ ಒಂದಾಗಿಸಿದ್ರು. ಇದೇ ಕಾರಣಕ್ಕೆ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಗೆಲ್ಲುವಂತಾಯ್ತು ಅನ್ನೋದ್ರಲ್ಲಿ ಡೌಟೇ ಇಲ್ಲ.
ಇದನ್ನೂ ಓದಿ:ಕ್ರಿಕೆಟ್ ಜಗತ್ತಿಗೆ ಜಯ್ ಶಾ ಬಾಸ್.. ತೆರವಾದ BCCI ಕಾರ್ಯಾಧ್ಯಕ್ಷ ಸ್ಥಾನದ ರೇಸ್ನಲ್ಲಿ ಮೂವರು..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್