Advertisment

ಒಂದರ ನಂತರ ಒಂದು ವೈಫಲ್ಯ; ಟೀಮ್ ಇಂಡಿಯಾದ ಟೆಸ್ಟ್​ ಕ್ರಿಕೆಟ್​ಗೆ ಈ ದಿಗ್ಗಜರು ಗುಡ್​ಬೈ ಹೇಳ್ತಾರಾ?

author-image
Bheemappa
Updated On
ಟೀಮ್ ಇಂಡಿಯಾ ವಿಶ್ವಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​​ಗೆ ಹೋಗಬಹುದು.. ಆದ್ರೆ ಆ ಸೂತ್ರ ಕಷ್ಟ.. ಕಷ್ಟ!
Advertisment
  • ಭಾರತದ ಟೆಸ್ಟ್ ಟೀಮ್ ಬದಲಾವಣೆಗಳಿಗೆ ಇದೆನಾ ಸಮಯ..?
  • ವಿಶ್ವ ಕ್ರಿಕೆಟ್ ಆಳಿದವರು ತಮ್ಮ ಸ್ಥಾನದಿಂದ ಕೆಳಗಿಳಿಯಲೇಬೇಕು
  • ಭಾರತ ಸತತ ಸೋಲಿನಿಂದ ಈ ಪ್ಲೇಯರ್ಸ್​ಗೆ ಕುತ್ತು ಬಂದಿತಾ..?

ಒಳ್ಳೆಯದ್ದಾಗಲಿ, ಕೆಟ್ಟದಾಗಲಿ ಎಲ್ಲಕ್ಕೂ ಅಂತ್ಯ ಇದ್ದೇ ಇರುತ್ತೆ. ಯಾರೂ ಶಾಶ್ವತ ಅಲ್ಲ. ಇದು ಪ್ರಕೃತಿ ನಿಯಮ. ಸದ್ಯ ಟೀಮ್​ ಇಂಡಿಯಾ ಇಂಥಾ ಅಂತ್ಯಕ್ಕೆ ದಿಗ್ಗಜರು ಬಂದು ನಿಂತಿದ್ದಾರೆ. ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಟೆಸ್ಟ್​ ಕ್ರಿಕೆಟ್​ನಿಂದ ದೂರಾಗೋ ದಿನಗಳ ಹತ್ತಿರ ಬಂದಂತಿದೆ. ಟೀಮ್​ ಇಂಡಿಯಾದಲ್ಲಿರೋ ಸೀನಿಯರ್​ ಬ್ಯಾಟರ್​ಗಳು ಗುಡ್​ ಬೈ ಹೇಳ್ತಾರಾ?.

Advertisment

ಸೂರ್ಯೋದಯ, ಸೂರ್ಯಾಸ್ತ ಇದು ಪ್ರಕೃತಿ ನಿಯಮ. ಕ್ರಿಕೆಟ್​ನಲ್ಲೂ ಅಷ್ಟೇ. ವಿಶ್ವ ಕ್ರಿಕೆಟ್​​​ನ್ನಾಳಿದವರು ಕೆಳಗಿಳಿಯಬೇಕು. ಇದಕ್ಕೆ ಸಚಿನ್​​​​​ ತೆಂಡೂಲ್ಕರ್, ಬ್ರಿಯಾನ್ ಲಾರಾ, ಸುನಿಲ್ ಗವಾಸ್ಕರ್, ರಿಕಿ ಪಾಂಟಿಂಗ್​ರಂಥ ದಂತಕಥೆಗಳು ಹೊರತಾಗಿಲ್ಲ. ಇದೀಗ ಸೂರ್ಯಸ್ತದತ್ತ ಭಾರತೀಯ ಕ್ರಿಕೆಟ್​​ನ ಇಬ್ಬರು ದಿಗ್ಗಜರು ಸಾಗುತ್ತಿದ್ದಾರೆ. ಅವ್ರೇ ವಿಶ್ವ ಕ್ರಿಕೆಟ್ ಲೋಕದ ಕಿಂಗ್ ವಿರಾಟ್​ ಕೊಹ್ಲಿ, ವಿಶ್ವ ಕ್ರಿಕೆಟ್​ನ ಹಿಟ್​ಮ್ಯಾನ್ ರೋಹಿತ್ ಶರ್ಮಾ.

ಇದನ್ನೂ ಓದಿ:WTC ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾ ಕುಸಿತ.. ರೋಹಿತ್ ಪಡೆಗೆ ಫೈನಲ್ ಮತ್ತಷ್ಟು ಕಷ್ಟ.. ಕಷ್ಟ!

publive-image

ಸೋಲಿನೊಂದಿಗೆ ಕೊಹ್ಲಿ-ರೋಹಿತ್ ಭವಿಷ್ಯದ ಪ್ರಶ್ನೆ..!

ನ್ಯೂಜಿಲೆಂಡ್‌ ವಿರುದ್ಧದ ಸರಣಿ ಸೋಲು, ತವರಿನಲ್ಲಿ ಟೀಮ್ ಇಂಡಿಯಾದ 18 ಸರಣಿ ಗೆಲುವುಗಳನ್ನಷ್ಟೇ ಅಂತ್ಯಗೊಳಿಲಿಲ್ಲ. ಕೊಹ್ಲಿ, ರೋಹಿತ್ ಶರ್ಮಾರ ವೃತ್ತಿಜೀವನದ ಭವಿಷ್ಯ ಮುಂದೇನು ಎಂಬ ಪ್ರಶ್ನೆಯನ್ನು ಹುಟ್ಟಿಹಾಕಿದೆ. ಇದಕ್ಕೆ ಕಾರಣ ಸೋಲು ಮಾತ್ರವೇ ಅಲ್ಲ. ಈ ದಿಗ್ಗಜ ಆಟಗಾರರ ಆಟವೂ ಕೂಡ ಕಾರಣ ಆಗಿದೆ.

Advertisment

ಬ್ಯಾಟಿಂಗ್ ಪರಾಕ್ರಮಿ ಎನಿಸಿಕೊಳ್ಳುವ ರೋಹಿತ್, ಪುಣೆಯಲ್ಲಿ 8 ರನ್​ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ರೆ. ವಿರಾಟ್​, ಎರಡೂ ಇನ್ನಿಂಗ್ಸ್​ನ ರನ್​ ಜಸ್ಟ್​ 18.. ದಿಗ್ಗಜರ ಆಟ ವಿರಾಟ್​ ಕೊಹ್ಲಿ ಹಾಗೂ ರೋಹಿತ್​ ಶರ್ಮಾಗೆ ನಿವೃತ್ತಿಯ ಟೈಮ್ ಬಂದಾಯ್ತು ಎಂಬ ಚರ್ಚೆ ಹುಟ್ಟು ಹಾಕಿದೆ. ಇದಿಷ್ಟೇ ಅಲ್ಲ, ಇದಕ್ಕೆ ಮತ್ತೊಂದು ಕಾರಣ ಇದೆ.

ರೋಹಿತ್​​ಗಿಂತ ಭಿನ್ನವಾಗಿಲ್ಲ ವಿರಾಟ್​ ಕೊಹ್ಲಿ ಕಥೆ..!

ಹಿಟ್​ಮ್ಯಾನ್ ರೋಹಿತ್ ಫಾರ್ಮ್​ ಸಮಸ್ಯೆ ಟೆಸ್ಟ್ ಕ್ರಿಕೆಟ್‌ನ ಭವಿಷ್ಯದ ಪ್ರಶ್ನೆಗೆ ಕಾರಣ. ಯಾಕಂದ್ರೆ, ರೋಹಿತ್​ರ ವೈಫಲ್ಯದ ಕಥೆ​ ಒಂದೆರೆಡು ಪಂದ್ಯದಲ್ಲ. ಕಳೆದ 8 ಇನ್ನಿಂಗ್ಸ್​ಗಳ ಪೈಕಿ 6 ಬಾರಿ ಸಿಂಗಲ್ ಡಿಜಿಟ್​ಗೆ ಔಟಾಗಿರುವ ರೋಹಿತ್, 2 ಬಾರಿ ಮಾತ್ರವೇ ಡಬಲ್ ಡಿಜಿಟ್​​ ರನ್ ಗಳಿಸಿದ್ದಾರೆ. ಇದು ರೋಹಿತ್ ಶರ್ಮಾರ ಟೆಸ್ಟ್​ ಕ್ರಿಕೆಟ್​ನ ವೈಫಲ್ಯದ ಕಥೆ ಹೇಳುತ್ತದೆ.

ರೋಹಿತ್ ಬ್ಯಾಟಿಂಗ್ ಕಥೆಯಷ್ಟೇ ಅಲ್ಲ, ಕೊಹ್ಲಿ ಬ್ಯಾಟಿಂಗ್​​ ಕೂಡ ನಿರಾಸೆ ಮೂಡಿಸುತ್ತಿದೆ. ಇಂಡಿಯನ್ ಕಂಡೀಷನ್ಸ್​ನಲ್ಲಿ ಹೋರಾಟದ ಇನ್ನಿಂಗ್ಸ್​ ಕಟ್ಟುತ್ತಿದ್ದ ವಿರಾಟ್​, ವಿರಾವೇಶ ಮಾಯವಾಗಿದೆ. ಮನೆಯಂಗಳದಲ್ಲಿ ಶತಕದ ಮೇಲೆ ಶತಕ ಸಿಡಿಸ್ತಿದ್ದ ವಿರಾಟ್​, ಈಗ ಬ್ಯಾಟಿಂಗ್​ನಲ್ಲಿ ಸೋತಿದ್ದಾರೆ. ಇದೇ ಈಗ ಕೊಹ್ಲಿಯನ್ನು ಅಸಲಿ ಅಗ್ನಿಪರೀಕ್ಷೆಗೆ ದೂಡಿದೆ.

Advertisment

ಕೌಂಟ್​ಡೌನ್ ಶುರು.. ಇಂಗ್ಲೆಂಡ್ ಸರಣಿಯಲ್ಲಿ ಅಂತ್ಯ..?

ಸದ್ಯ ಟಿ20ಯಿಂದ ದೂರ ಉಳಿದಿರುವ ವಿರಾಟ್, ರೋಹಿತ್, ಟೆಸ್ಟ್​ ತಂಡದಿಂದ ದೂರ ಉಳಿಯುವ ಸಮಯ ದೂರವೇನಿಲ್ಲ. ಸದ್ಯ 35 ವರ್ಷದ ವಿರಾಟ್​ ಕೊಹ್ಲಿ, 37 ವರ್ಷದ ರೋಹಿತ್​ ಸಂಧ್ಯಾಕಾಲದ ಹೊಸ್ತಿಲ್ಲಿಲ್ಲಿದ್ದಾರೆ. ಒಂದ್ಕಡೆ ಫಾರ್ಮ್​ ಸಮಸ್ಯೆ ಎದುರಿಸ್ತಿರುವ ರೋಹಿತ್, ಮತ್ತೊಂದೆಡೆ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಆಸಿಸ್ ಪ್ರವಾಸದ ಬಳಿಕ ನಡೆಯಲಿರುವ ಇಂಗ್ಲೆಂಡ್ ಪ್ರವಾಸ ಇವರಿಬ್ಬರ ಪಾಲಿಗೆ ಕೊನೆಯಾದರು ಅಚ್ಚರಿ ಇಲ್ಲ.

publive-image

ಟೆಸ್ಟ್ ತಂಡದ ಬದಲಾವಣೆಗೆ ಇದೇ ಸರಿಯಾದ ಟೈಮ್!

ಟೆಸ್ಟ್​ ತಂಡದಲ್ಲಿನ ಬದಲಾವಣೆಗೆ ಇಂಗ್ಲೆಂಡ್ ಟೆಸ್ಟ್​ ಸರಣಿ ಬೆಸ್ಟ್ ಚಾಯ್ಸ್​. ಯಾಕಂದ್ರೆ, ರೋಹಿತ್, ಕೊಹ್ಲಿ ಸ್ಥಾನ ತುಂಬಲು ಯುವ ಆಟಗಾರರು ರೆಡಿ ಇದ್ದಾರೆ. ಈಗಾಗಲೇ ಟೆಸ್ಟ್​ಗೆ ಎಂಟ್ರಿ ನೀಡಿರುವ ಅಭಿಮನ್ಯು ಈಶ್ವರನ್ ಓಪನರ್​​ ಆಗಲು ಸಿದ್ಧರಿದ್ದಾರೆ. ಮತ್ತೊಂದೆಡೆ ಶ್ರೇಯಸ್ ಅಯ್ಯರ್​, ದೇವದತ್ ಪಡಿಕ್ಕಲ್ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. ಬೌಲರ್​ ವಿಭಾಗ ಇದರಿಂದ ಹೊರತಾಗಿಲ್ಲ.

ಈಗಾಗಲೇ ಮೊಹಮ್ಮದ್ ಶಮಿ ನಿವೃತ್ತಿಯ ಅಂಚಿನಲ್ಲಿದ್ದಾರೆ. ಸ್ಪಿನ್ನರ್​ಗಳಾದ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾಗೂ ಪರ್ಯಾಯ ಬೇಕಿದ್ದಾರೆ. ಹೀಗಾಗಿ ಇಂಗ್ಲೆಂಡ್ ಟೆಸ್ಟ್​ ಸರಣಿಯ ಬಳಿಕ ಹೊಸ ಟೀಮ್ ಇಂಡಿಯಾ ರೂಪುಗೊಳ್ಳುವುದಂತು ಫಿಕ್ಸ್​.

Advertisment

ರೋಹಿತ್-ವಿರಾಟ್​ ಶ್ರೇಷ್ಠ ಆಟಗಾರರು ಅನ್ನೋದ್ರಲ್ಲಿ ಡೌಟಿಲ್ಲ. ಆದ್ರೆ, ಸದ್ಯ ಇವರಿಬ್ಬರ ಆಟ. ವಯಸ್ಸು ಟೆಸ್ಟ್ ಕ್ರಿಕೆಟ್​ಗೆ ಬೇಕಿಲ್ಲ. ಹೀಗಾಗಿ ಟೆಸ್ಟ್​ನಿಂದ ದೂರ ಸರಿದು ಏಕದಿನದತ್ತ ಚಿತ್ತ ಹರಿಸಿದ್ರೆ. ಉತ್ತಮ. ಇಲ್ಲ 2027ರ ಏಕದಿನ ವಿಶ್ವಕಪ್ ತನಕ ತಂಡದಲ್ಲಿರುವುದು ನಿಜಕ್ಕೂ ಡೌಟ್.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment