ಭಾರತ 2003, 2023ರಲ್ಲಿ ವಿಶ್ವಕಪ್ ಫೈನಲ್ ಪ್ರವೇಶ
ಅಂದು ಗಂಗೂಲಿ ಮಾಡಿದ್ದ ತಪ್ಪು ಏನು ಗೊತ್ತಾ?
ಆ ಒಂದು ನಿರ್ಧಾರ ವಿಶ್ವಕಪ್ ಸೋಲಿಗೆ ಕಾರಣವಾಯ್ತಾ?
ಏಕದಿನ ವಿಶ್ವಕಪ್ ಗೆದ್ದೇ ಗೆಲ್ಲುವ ಭರವಸೆ ಟೀಮ್ ಇಂಡಿಯಾ ಮೇಲಿತ್ತು. ಕ್ರಿಕೆಟ್ ಪಂಡಿತರು, ಮಾಜಿ ಕ್ರಿಕೆಟರ್ಸ್ ಕೂಡ ಭಾರತವನ್ನೇ ವಿಶ್ವಕಪ್ ಗೆಲ್ಲೋ ಫೇವರಿಟ್ಸ್ ಎಂದು ಭವಿಷ್ಯ ನುಡಿದಿದ್ದರು. ಒನ್ ಬ್ಯಾಡ್ ಗೇಮ್ ಹಾಗೂ ಒನ್ ಬ್ಯಾಡ್ ಡಿಸಿಶನ್ ಎಲ್ಲಾ ಕನಸನ್ನ ಛಿದ್ರಗೊಳಿಸಿತು. 2003ರಲ್ಲಿ ಗಂಗೂಲಿ ಈ ಬಾರಿ ರೋಹಿತ್ ಶರ್ಮಾ.. ಇಷ್ಟೇ ವ್ಯತ್ಯಾಸ..!
ಕ್ರಿಕೆಟ್ ಅಂದ್ರೆನೇ ಹೀಗೆ ಒಂದೇ ಒಂದು ನಡೆ.. ಒಂದೇ ಒಂದು ಕ್ಯಾಚ್.. ಒಂದೇ ಒಂದು ಅಚಾತುರ್ಯ ಇಡೀ ಫಲಿತಾಂಶವನ್ನೇ ಬದಲಿಸುತ್ತೆ. ಗೆಲ್ಲೋ ತಂಡ ಸೋಲಿನ ಸುಳಿಗೆ ಸಿಲುಕಿದ್ರೆ ಸೋಲಿನ ಹಾದಿಯಲ್ಲಿದ್ದ ತಂಡ ಗೆಲುವಿನ ಹಳಿಗೆ ಮರಳುತ್ತೆ. ವಿಶ್ವಕಪ್ ಫೈನಲ್ ಪಂದ್ಯದಲ್ಲೂ ಟೀಮ್ ಇಂಡಿಯಾ ಗೆಲ್ಲುತ್ತೆ ಅನ್ನೋದು ಎಲ್ಲರ ಮನದಾಳವಾಗಿತ್ತು. ಒಂದು ತಪ್ಪು ನಿರ್ಧಾರ ಎಲ್ಲವನ್ನ ಬದಲಿಸಿಬಿಡ್ತು.
ಅದೇ ತಪ್ಪುನಿಂದ ಕೈ ತಪ್ಪಿತಾ ವಿಶ್ವಕಪ್.?
ಸೌರವ್ ಗಂಗೂಲಿ ಆ್ಯಂಡ್ ರೋಹಿತ್ ಶರ್ಮಾ.. ಭಾರತೀಯ ಕ್ರಿಕೆಟ್ ಕಂಡ ಗ್ರೇಟ್ ಕ್ಯಾಪ್ಟನ್ಸ್. 2003ರ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾವನ್ನ ಮುನ್ನಡೆಸಿದ್ದ ಸೌರವ್ ಗಂಗೂಲಿ, ಫೈನಲ್ಗೆ ತಂಡವನ್ನ ಕೊಡೊಯ್ದಿದ್ರು. ಫೈನಲ್ ಕದನದಲ್ಲಿ ಆಸ್ಟ್ರೇಲಿಯಾದ ಎದುರು ಭಾರತ ಸೋಲುಂಡಿತ್ತು. 20 ವರ್ಷಗಳ ಬಳಿಕ ಇದೇ ಆಸ್ಟ್ರೇಲಿಯನ್ಸ್ ಎದುರು ರೋಹಿತ್, ವಿಶ್ವಕಪ್ ಗೆಲ್ಲೋ ನಿರೀಕ್ಷೆ ಹುಟ್ಟು ಹಾಕಿದ್ದರು. ನಿರೀಕ್ಷೆ ಹುಸಿಯಾಯ್ತು. 2003 ಫೈನಲ್ಸ್ ಸೋಲಿಗೆ ಗಂಗೂಲಿ ತೆಗೆದುಕೊಂಡಿದ್ದ ಆ ಒಂದು ನಿರ್ಧಾರ ಕಾರಣ ಅನ್ನೋದು ಇಂದಿಗೂ ಹಲವರ ಅಭಿಪ್ರಾಯ. ಇದೀಗ ಈ ಬಾರಿಯೂ ಅಂತದ್ದೇ ಒಂದು ನಿರ್ಧಾರವನ್ನ ರೋಹಿತ್ ತೆಗೆದುಕೊಂಡರು. ಅದೇ ಇದೀಗ ಸೋಲಿಗೆ ಕಾರಣ ಅನ್ನೋದು ಹಲವರ ವಿಶ್ಲೇಷಣೆ. ಸ್ಪಿನ್ನರ್ ಅಶ್ವಿನ್ಗೆ ಚಾನ್ಸ್ ನೀಡಬೇಕಿತ್ತು ಅನ್ನೋದು ಹಲವರ ವಾದ.
ಅಶ್ವಿನ್ಗೆ ಚಾನ್ಸ್ ನೀಡದಿರೋದೇ ಮಿಸ್ಟೇಕ್
ಆಸ್ಟ್ರೇಲಿಯಾ ಎದುರಿನ ಫೈನಲ್ಸ್ನಲ್ಲಿ ಅಶ್ವಿನ್ ಎಂಬ ಸ್ಪಿನ್ ಮಾಂತ್ರಿಕ ಬೇಕಾಗಿತ್ತು. ಟ್ರಿಕಿ ಟ್ರ್ಯಾಕ್ನಲ್ಲಿ ಅಶ್ವಿನ್ರನ್ನ ಎದುರಿಸೋದು ಆಸಿಸ್ ಪಾಲಿಗೆ ಕಬ್ಬಿಣದ ಕಡಲೆಯಾಗ್ತಿತ್ತು. ಮುಖ್ಯವಾಗಿ 340 ಬಾರಿ ಎಡಗೈ ಬ್ಯಾಟ್ಸ್ಮನ್ಗಳನ್ನ ಬೇಟೆಯಾಡಿದ ದಾಖಲೆ ಹೊಂದಿರುವ ಅಶ್ವಿನ್ ಇದ್ದಿದ್ರೆ, ಟ್ರಾವಿಸ್ ಹೆಡ್ ಆಟಕ್ಕೆ ಬ್ರೇಕ್ ಹಾಕಬಹುದಾಗಿತ್ತು. ಸ್ಪಿನ್ಗೆ ನೆರವಾಗ್ತಿದ್ದ ಪಿಚ್ನಲ್ಲಿ ಅನುಭವಿ ಅಶ್ವಿನ್ ಇಂಪ್ಯಾಕ್ಟ್ ಮಾಡ್ತಿದ್ರು. ಪ್ರೆಶರ್ ಹ್ಯಾಂಡಲ್ ಮಾಡಬಲ್ಲ ತಾಕತ್ತು ಅಶ್ವಿನ್ಗಿತ್ತು. ಆದ್ರೆ, ರೋಹಿತ್ ಆ್ಯಂಡ್ ಟೀಮ್ ಮ್ಯಾನೇಜ್ಮೆಂಟ್ ಆಯ್ಕೆಯಲ್ಲೇ ಎಡವಿತು.
2003ರ ವಿಶ್ವಕಪ್ ಫೈನಲ್ನಲ್ಲೂ ಆಗಿತ್ತು ಇಂಥದ್ದೇ ಮಿಸ್ಟೇಕ್..!
2003ರ ವಿಶ್ವಕಪ್ನಲ್ಲಿ ಸೌರವ್ ಗಂಗೂಲಿ ನೇತೃತ್ವದ ಟೀಮ್ ಇಂಡಿಯಾ, ಕಪ್ ಗೆಲ್ಲೋ ಮಹತ್ತರ ಅವಕಾಶ ಹೊಂದಿತ್ತು. ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಬೆಂಚ್ ಕಾಯಿಸಿದ ಗಂಗೂಲಿ, ದೊಡ್ಡ ಮಿಸ್ಟೇಕ್ ಮಾಡಿದ್ರು. ಪರಿಣಾಮ ರೈಟ್ ಹ್ಯಾಂಡ್ ಬ್ಯಾಟರ್ಗಳಾದ ರಿಕಿ ಪಾಂಟಿಂಗ್, ಡೇಮಿಯನ್ ಮಾರ್ಟಿನ್ ಇಂಡಿಯನ್ ಬೌಲರ್ಗಳ ಮೇಲೆ ದಂಡೆಯಾತ್ರೆಯೇ ನಡೆಸಿದ್ರು. ಅಂದು ದಿನೇಶ್ ಮೊಂಗಿಯಾ ಬದಲಾಗಿ ಅನಿಲ್ ಕುಂಬ್ಳೆಯೇ ಹನ್ನೊಂದರ ಬಳಗದಲ್ಲೇ ಕಾಣಿಸಿಕೊಂಡಿದ್ರೆ, ಲೆಕ್ಕ ಬೇರೇಯದ್ದೇ ಇರುತ್ತಿತ್ತು.
ಆಸಿಸ್ ವಿರುದ್ಧದ ಮೊನ್ನೆ ನಡೆದ ಪಂದ್ಯದಲ್ಲಿ ಪ್ಲೇಯಿಂಗ್ ಇಲೆವೆನ್ನಲ್ಲಿದ್ದ ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ ಎಡಗೈ ಬ್ಯಾಟರ್ಗಳ ಪಾಲಿಗೆ ಡೇಂಜರಸ್ ಆಗಲೇ ಇಲ್ಲ. ಹೀಗಾಗುತ್ತೆ ಅನ್ನೋ ಸುಳಿಹು ಮ್ಯಾನೇಜ್ಮೆಂಟ್ಗೂ ಇತ್ತು. ಹೀಗಾಗಿಯೇ ಲೀಗ್ ಹಂತದಲ್ಲಿ ಆಸಿಸ್ ವಿರುದ್ಧದ ಮೊದಲ ಪಂದ್ಯದಲ್ಲಿ ತಂಡ ಅಶ್ವಿನ್ಗೆ ಚಾನ್ಸ್ ನೀಡಿತ್ತು. ಆದ್ರೆ, ಫೈನಲ್ ಫೈಟ್ನಲ್ಲಿ ವಿನ್ನಿಂಗ್ ಕಾಂಬಿನೇಷನ್ ಡಿಸ್ಟರ್ಬ್ ಮಾಡದಿರೋ ಸೂತ್ರಕ್ಕೆ ಮ್ಯಾನೇಜ್ಮೆಂಟ್ ಕಟ್ಟುಬಿತ್ತು. ಅಂತಿಮವಾಗಿ ಇದು ತಂಡಕ್ಕೆ ಹಿನ್ನಡೆಯಾಯ್ತು.
ವಿಶೇಷ ವರದಿ: ಸಂತೋಷ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್