BCCI, ಸೆಲೆಕ್ಟರ್ಸ್ ವಿರುದ್ಧ ತೊಡೆ ತಟ್ಟಿದ ರೋಹಿತ್
ವಿಂಡೀಸ್ ವಿರುದ್ಧ ಯಂಗ್ಸ್ಟರ್ಗಳ ಪ್ಲಾಫ್ ಶೋ
ಟಿ20ಯಲ್ಲಿ ರೋಹಿತ್-ಕೊಹ್ಲಿ ಸೂಪರ್ ಆಟ
ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಸೆಲೆಕ್ಟರ್ಸ್ ಹಾಗೂ ಬಿಸಿಸಿಐ ವಿರುದ್ಧ ತೊಡೆ ತಟ್ಟಿದ್ದಾರೆ. ಸ್ಟ್ರೇಟ್ ಹಿಟ್ ಬಾರಿಸಿರೋ ಹಿಟ್ಮ್ಯಾನ್, ಬಿಸಿಸಿಐ ಬಾಸ್ಗಳ ಆಟಕ್ಕೆ ಬಹಿರಂಗವಾಗಿ ಸವಾಲೆಸೆದಿದ್ದಾರೆ. ಕ್ಯಾಪ್ಟನ್ ರೋಹಿತ್ ಆಡಿದ ಖಡಕ್ ಮಾತುಗಳ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ
ಭಾರತೀಯ ಕ್ರಿಕೆಟ್ನಲ್ಲಿರೋ ಕಮ್ಯೂನಿಕೇಶನ್ನ ಗ್ಯಾಪ್ ಮತ್ತೆ ಬಟಾಬಯಲಾಗಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ ಒಂದು ಮಾತು ಹೇಳುತ್ತಿದ್ರೆ ಬಿಸಿಸಿಐ ಹಾಗೂ ಸೆಲೆಕ್ಟರ್ಸ್ ವಲಯದ ಮಾತೇ ಬೇರೆಯಿದೆ. ಈ ತದ್ವಿರುದ್ಧ ಮಾತುಗಳು ಈಗ ಅಭಿಮಾನಿಗಳನ್ನ ಗೊಂದಲಕ್ಕೆ ತಳ್ಳಿವೆ.
ಏಕದಿನ ವಿಶ್ವಕಪ್ ಟೂರ್ನಿಗೆ ಕೌಂಟ್ಡೌನ್ ಶುರುವಾಗಿದೆ. ಈಗಲೇ ಟೀಮ್ ಇಂಡಿಯಾ ಗೊಂದಲ ಗೂಡಾಗಿದೆ. ಇದ್ರ ನಡುವೆ ರೋಹಿತ್ ಶರ್ಮಾ ವರ್ಸಸ್ ಸೆಲೆಕ್ಟರ್ಸ್ & ಬಿಸಿಸಿಐ ಬಾಸ್ಗಳ ನಡುವೆ ಇದೇನಪ್ಪಾ ಹೊಸ ಸಮಸ್ಯೆ ಅನ್ಕೋಬೇಡಿ. ಇದು ಮುಂಬರೋ ಏಕದಿನ ವಿಶ್ವಕಪ್ ವಿಚಾರವಲ್ಲ. 2024ರಲ್ಲಿ ನಡೆಯೋ ಟಿ20 ವಿಶ್ವಕಪ್ ಕಾ ಬಾತ್.
ಬಿಸಿಸಿಐ ಬಾಸ್ಗಳಿಗೆ ಹಿಟ್ಮ್ಯಾನ್ ಸ್ಟ್ರೇಟ್ಹಿಟ್
ಕಳೆದ ಟಿ20 ವಿಶ್ವಕಪ್ ಟೂರ್ನಿಯ ಹೀನಾಯ ನಿರ್ಗಮನದ ಬಳಿಕ ಟಫ್ ಕಾಲ್ ತೆಗೆದುಕೊಂಡಿರೋ ಬಿಸಿಸಿಐ ಬಾಸ್ಗಳು, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರನ್ನ ಚುಟುಕು ಫಾರ್ಮೆಟ್ನಿಂದ ಕೈಬಿಟ್ಟಿದ್ದಾರೆ. ಅಲ್ಲಿಂದ ಈವರೆಗೆ ಟಿ-20 ಸೆಟಪ್ನಿಂದ ರೋಹಿತ್, ಕೊಹ್ಲಿ ದೂರವಾಗಿದ್ದಾರೆ. ಭವಿಷ್ಯದಲ್ಲೂ ಇವರಿಬ್ಬರಿಗೆ ಟಿ20 ತಂಡದಲ್ಲಿ ಸ್ಥಾನ ಇಲ್ಲ ಅನ್ನೋದು ಬಿಸಿಸಿಐ ಹಾಗೂ ಸೆಲೆಕ್ಟರ್ಸ್ ವಲಯದ ನಿರ್ಧಾರ. ಈಗ ನೋಡಿದ್ರೆ ಅಗ್ರೆಸ್ಸಿವ್ ಆಟವಾಡ್ತಿದ್ದ ಬಾಸ್ಗಳಿಗೆ ಹಿಟ್ಮ್ಯಾನ್ ಸ್ಟ್ರೇಟ್ ಹಿಟ್ ಬಾರಿಸಿದ್ದಾರೆ.
2024ರ ಟಿ20 ವಿಶ್ವಕಪ್ನಲ್ಲಿ ನಾನ್ ಆಡ್ತೀನಿ
ವೆಸ್ಟ್ ಇಂಡೀಸ್ ಹಾಗೂ ಯುಎಸ್ಎನಲ್ಲಿ 2024ರ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಯುಎಸ್ಎ ಪ್ರವಾಸದಲ್ಲಿರೋ ರೋಹಿತ್, ಮೆಗಾ ಟೂರ್ನಿ ನಡೆಯೋ ಜಾಗದಲ್ಲೇ ನಿಂತು ನಾನು ಟಿ20 ವಿಶ್ವಕಪ್ ಆಡ್ತೀನಿ ಅನ್ನೋ ಮಾತನ್ನಾಡಿದ್ದಾರೆ. ಮುಂಬೈಕರ್ ಅಮೆರಿಕಾದಲ್ಲಿ ಆಡಿರೋ ಈ ಮಾತು, ಬಿಸಿಸಿಐ ಲೆಕ್ಕಾಚಾರವನ್ನ ತಲೆಕೆಳಗಾಗಿಸಿದೆ.
ನಾನು ಎಂಜಾಯ್ ಮಾಡ್ತಿದ್ದೀನಿ. ಇಲ್ಲಿಗೆ ಬರಲು ಮತ್ತೊಂದು ಕಾರಣವಿದೆ. ಯಾಕಂದ್ರೆ ವಿಶ್ವಕಪ್ ಬರ್ತಿದೆ. ಜೂನ್ನಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ನನಗೆ ಗೊತ್ತು ಎಲ್ಲರೂ ಎಕ್ಸೈಟ್ ಆಗಿದ್ದೀರಿ. ನಾವು ಅದನ್ನ ಎದುರು ನೋಡ್ತಾ ಇದ್ದೀವಿ-ರೋಹಿತ್ ಶರ್ಮಾ, ಟೀಂ ಇಂಡಿಯಾ ಕ್ಯಾಪ್ಟನ್
ವಿಂಡೀಸ್ ವಿರುದ್ಧ ಯಂಗ್ಸ್ಟರ್ಗಳ ಪ್ಲಾಫ್ ಶೋ..!
ಸದ್ಯ ನಡೀತಿರೋ ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿಯಲ್ಲಿ ಬಿಸಿಸಿಐ ಹಾಗೂ ಸೆಲೆಕ್ಟರ್ಸ್ ಪ್ಲಾನ್ ಮಕಾಡೆ ಮಲಗಿದೆ. ಸೀನಿಯರ್ಸ್ ಅಲಭ್ಯತೆಯಲ್ಲಿ ಯಂಗ್ಸ್ಟರ್ಸ್ ಪ್ಲಾಫ್ ಶೋ ನೀಡ್ತಿದ್ದಾರೆ. ಮ್ಯಾಚ್ ಸಿಚ್ಯವೇಶನ್ ಅರ್ಥ ಮಾಡಿಕೊಳ್ಳದೆ ಬೇಜವಾಬ್ದಾರಿಯುತ ಶಾಟ್ಗೆ ಕೈ ಹಾಕಿ ಫೇಲ್ ಆಗ್ತಿದ್ದಾರೆ. ಇದನ್ನು ನೋಡಿದವರೆಲ್ಲರೂ ಸೀನಿಯರ್ಸ್ ತಂಡಕ್ಕೆ ಬೇಕು ಎಂದೇ ಹೇಳ್ತಿದ್ದಾರೆ. ಈಗಲಾದ್ರೂ ಬಿಸಿಸಿಐ ಬಾಸ್ಗಳು ನಿರ್ಧಾರ ಬದಲಿಸಿಕೊಳ್ಳಬೇಕಿದೆ.
ಟಿ20 ಯಲ್ಲಿ ರೋಹಿತ್-ಕೊಹ್ಲಿ ಸೂಪರ್ ಆಟ
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಟಿ20 ಫಾರ್ಮೆಟ್ನ ಪರ್ಫೆಕ್ಟ್ ಪ್ಲೇಯರ್ಸ್ ಅನ್ನೋದನ್ನ ಇತಿಹಾಸವೇ ಹೇಳುತ್ತೆ. ಹಾಗಿದ್ರೂ ಬಿಸಿಸಿಐ ತೆಗೆದುಕೊಂಡ ನಿರ್ಧಾರ ನಿಜಕ್ಕೂ ಒಪ್ಪುವಂತದಲ್ಲ. ರೋಹಿತ್ ಶರ್ಮಾ ಪಾರ್ಮ್ ಸಮಸ್ಯೆ ಎದುರಿಸ್ತಿರಬಹದು. ಆದ್ರೆ ವಿರಾಟ್ ಕೊಹ್ಲಿ ಚುಟುಕು ಫಾರ್ಮೆಟ್ನಲ್ಲಿ ಸಾಲಿಡ್ ಫಾರ್ಮ್ನಲ್ಲಿದ್ದಾರೆ. ಟಿ-20 ವಿಶ್ವಕಪ್ ಟೂರ್ನಿ ಹಾಗೂ ಐಪಿಎಲ್ನಲ್ಲಿ ಕಿಂಗ್ ಕೊಹ್ಲಿ ಧಮಾಕಾ ಸೃಷ್ಟಿಸಿದ್ರು. ಹಾಗಿದ್ರೂ ಬಿಸಿಸಿಐ ಟಿ20 ಫಾರ್ಮೆಟ್ನಿಂದ ಹೊರಗಿಡೋ ನಿರ್ಧಾರ ಮಾಡಿರೋದು ನಿಜಕ್ಕೂ ವಿಪರ್ಯಾಸವೇ ಸರಿ.
2024ರ ವಿಶ್ವಕಪ್ಗೆ ಈಗಲೇ ಸಿದ್ಧತೆ ಆರಂಭಿಸಿರೋ ಆಸ್ಟ್ರೇಲಿಯಾ ಅನುಭವಿ ಸ್ಟೀವ್ ಸ್ಮಿತ್ ಓಪನರ್ ಆಗಿ ಆಡಿಸೋ ಸ್ಟ್ರಾಟರ್ಜಿ ಮಾಡ್ತಿದೆ. ಆದ್ರೆ ಟೀಮ್ ಇಂಡಿಯಾದಲ್ಲಿ ಅನುಭವಿಗಳಿಗೆ ಕೊಕ್ ಕೊಡೋ ಪ್ಲಾನ್ ನಡೆಯುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್