newsfirstkannada.com

‘ಇದು ನನ್ನ ಕೊನೆಯ ಪಂದ್ಯ..’ ಕೊಹ್ಲಿ, ಬೂಮ್ರಾ, ಪಾಂಡ್ಯ ಬಗ್ಗೆಯೂ ಮಾತನಾಡಿದ ರೋಹಿತ್..

Share :

Published June 30, 2024 at 10:38am

  ಟಿ20 ಕ್ರಿಕೆಟ್​ಗೆ ಗುಡ್​ಬೈ ಹೇಳಿದ ರೋಹಿತ್ ಶರ್ಮಾ

  ಪಂದ್ಯ ಮುಗಿದ ಬಳಿಕ ರೋಹಿತ್ ಶರ್ಮಾ ಘೋಷಣೆ

  ದಕ್ಷಿಣ ಆಫ್ರಿಕಾ ಸೋಲಿಸಿ ವಿಶ್ವಕಪ್​ಗೆ ಮುತ್ತಿಟ್ಟ ಭಾರತ

ಇದು ನನ್ನ ಕೊನೆಯ ಪಂದ್ಯ. ವಿದಾಯ ಹೇಳಲು ಇದು ಸರಿಯಾದ ಸಮಯ. ನಾನು ಯಾವುದೇ ಬೆಲೆ ತೆತ್ತಾದರೂ ಪ್ರಶಸ್ತಿ ಗೆಲ್ಲಲು ಬಯಸಿದ್ದೆ. ಅದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಇದು ನಾನು ಬಯಸಿದ್ದು ಸಂಭವಿಸಿದೆ. ನನ್ನ ಜೀವನದಲ್ಲಿ ಇದಕ್ಕಾಗಿ ತುಂಬಾ ಹತಾಶನಾಗಿದ್ದೆ. ಈ ಬಾರಿ ಗೆದ್ದಿದ್ದಕ್ಕೆ ಖುಷಿಯಾಗಿದೆ ಎಂದು ಭಾರತಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ಕ್ಯಾಪ್ಟನ್ ರೋಹಿತ್ ಶರ್ಮಾ ಹೇಳಿದ್ದಾರೆ.

ಪಂದ್ಯ ಮುಗಿದ ಮೇಲೆ ಮಾತನಾಡಿದ ಅವರು.. ಕಳೆದ 3-4 ವರ್ಷಗಳಲ್ಲಿ ನಾವು ಏನನ್ನು ಅನುಭವಿಸಿದ್ದೇವೆ ಅನ್ನೋದು ಸಂಕ್ಷಿಪ್ತವಾಗಿ ಇಲ್ಲಿ ಹೇಳುವುದು ಕಷ್ಟ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾವು ವೈಯಕ್ತಿಕವಾಗಿ ತುಂಬಾ ಶ್ರಮಪಟ್ಟಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ:ಆರಂಭದಲ್ಲಿ ಟೀಂ ಇಂಡಿಯಾಗೆ ಬಿಗ್ ಶಾಕ್.. ಟ್ರೋಫಿ ಗೆಲ್ಲುವ ಕನಸು ನನಸು ಮಾಡಿಕೊಂಡಿದ್ದೇಗೆ?

ನಮಗೆ ಇಂದು ತುಂಬಾ ಸಂತೋಷದ ವಿಚಾರ. ಇಂದಿನ ಪಂದ್ಯವನ್ನು ಗೆಲ್ಲಲು ತೆರೆಮರೆಯಲ್ಲಿ ಬಹಳಷ್ಟು ಶ್ರಮ ಹಾಕಿದ್ದೇವೆ. ಕಳೆದ 3-4 ವರ್ಷಗಳಲ್ಲಿ ನಾವು ತುಂಬಾ ಶ್ರಮ ಪಟ್ಟಿದ್ದೇವೆ. ನಾವು ಪ್ರತಿ ಪಂದ್ಯವನ್ನೂ ಗೆಲ್ಲಲು ಬಯಸುತ್ತೇವೆ. ಅದಕ್ಕಾಗಿ ತೆರೆಮರೆಯಲ್ಲಿ ಪ್ರಯತ್ನಗಳು ನಡೆಯುತ್ತವೆ. ಎಲ್ಲಾ ಹುಡುಗರು ಶ್ರಮ ಹಾಕಿದ್ದಾರೆ. ನಮಗೆ ಆಡಲು ನೀಡಿದ ಸ್ವಾತಂತ್ರ್ಯದ ಬಗ್ಗೆ ಹೆಮ್ಮೆ ಇದೆ. ಮ್ಯಾನೇಜ್‌ಮೆಂಟ್, ಕೋಚ್ ಎಲ್ಲರಿಗೂ ಅಭಾರಿ ಆಗಿದ್ದೇವೆ ಎಂದರು.

ಕೊಹ್ಲಿ ಬಗ್ಗೆ ರೋಹಿತ್ ಮಾತು..!
ಕೊಹ್ಲಿ ಬಗ್ಗೆ ಮಾತನಾಡಿದ ರೋಹಿತ್.. ಕೊಹ್ಲಿಯ ಫಾರ್ಮ್​​ ಬಗ್ಗೆ ಯಾವುದೇ ಸಂದೇಹ ಇಲ್ಲ. 15 ವರ್ಷಗಳಿಂದ ಆಟದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವಕಾಶ ಸಿಕ್ಕಾಗ ದೊಡ್ಡ ಆಟಗಾರ ಎದ್ದು ನಿಲ್ಲುತ್ತಾನೆ. ವಿರಾಟ್ ನಮಗೆ ಬಹಳ ಮುಖ್ಯ. ಫೈನಲ್​​ನಲ್ಲಿ ವಿರಾಟ್ ಚೆನ್ನಾಗಿ ಆಡಿದರು. ವಿರಾಟ್‌ನ ಅನುಭವ ಇಲ್ಲಿ ಬರುತ್ತದೆ. ಅವರ ಅನುಭವದಿಂದಾಗಿಯೇ ಬೇರೆ ಹುಡುಗರು ಚೆನ್ನಾಗಿ ಆಡಿದರು. ಅಕ್ಷರ್ ಪಟೇಲ್​ರ 47 ರನ್‌ಗಳ ಕಾಣಿಕೆ ತುಂಬಾನೇ ಮುಖ್ಯವಾಗಿದೆ.

ಇದನ್ನೂ ಓದಿ:ಕೊಹ್ಲಿ ಹಾದಿಯಲ್ಲೇ ರೋಹಿತ್ ಶರ್ಮಾ.. ವಿಶ್ವಕಪ್​ ಗೆಲ್ಲಿಸಿಕೊಟ್ಟ ಬೆನ್ನಲ್ಲೇ ಶಾಕ್ ಕೊಟ್ಟ ಕ್ಯಾಪ್ಟನ್..!

ಬುಮ್ರಾ ಬಗ್ಗೆ ರೋಹಿತ್ ಹೇಳಿದ್ದೇನು?
ಬೂಮ್ರಾ ಬಗ್ಗೆ ನೀವು ಪದಗಳಲ್ಲಿ ಹೇಳಲು ಪ್ರಯತ್ನಿಸುತ್ತಿದ್ದೀರಿ. ಆದರೆ ನಾನು ಅವನನ್ನು ಇಷ್ಟು ವರ್ಷಗಳ ಕಾಲ ನೋಡಿದ್ದೇನೆ, ಅವರೊಂದಿಗೆ ಆಡಿದ್ದೇನೆ. ಅವರು ಮಾಸ್ಟರ್‌ಕ್ಲಾಸ್ ಪ್ರದರ್ಶನ ನೀಡುತ್ತಾರೆ. ಏನು ಮಾಡಬೇಕು ಅಂದುಕೊಳ್ಳುತ್ತಾರೋ ಅದನ್ನು ಮಾಡಿಯೇ ತೀರುತ್ತಾರೆ. ಅದು ಬೂಮ್ರಾ ಅವರು ಕಾಣಿಸಿಕೊಂಡ ದಾರಿ.

ಪಾಂಡ್ಯ ಬಗ್ಗೆ ರೋಹಿತ್ ಹೇಳಿದ್ದೇನು?
ಹಾರ್ದಿಕ್ ಕೂಡ ಅದ್ಭುತ. ಕೊನೆಯ ಓವರ್ ಬೌಲ್ ಮಾಡಲು ನೀಡಿದೆ. ಅವರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ಎಂದರು.

ಇದನ್ನೂ ಓದಿ:ಕಣ್ಣೀರು ಹಾಕುತ್ತಲೇ ಕೊನೆಯ ಬಾಲ್​​ ಎಸೆದ ಪಾಂಡ್ಯ.. ಎಂದೂ ಅಳದ ಬೂಮ್ರಾ ಕೂಡ ಅತ್ತರು.. ವಿಡಿಯೋ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಇದು ನನ್ನ ಕೊನೆಯ ಪಂದ್ಯ..’ ಕೊಹ್ಲಿ, ಬೂಮ್ರಾ, ಪಾಂಡ್ಯ ಬಗ್ಗೆಯೂ ಮಾತನಾಡಿದ ರೋಹಿತ್..

https://newsfirstlive.com/wp-content/uploads/2024/06/ROHIT-SHARMA-14.jpg

Load More