ಪ್ಲೇಯರ್ ಯಾಕೆ, ತಂಡಗಳೇ ಮೀರಿಸಿಲ್ಲ ಕ್ಯಾಪ್ಟನ್ ರೋಹಿತ್ ರೆಕಾರ್ಡ್
ಓಪನಿಂಗ್ ಬ್ಯಾಟಿಂಗ್ಗೆ ಬಂದ್ರೆ ಸಾಕು ರೋಹಿತ್ ಸಿಕ್ಸರ್ಗಳ ಸುರಿಮಳೆ
ಹಿಟ್ಮ್ಯಾನ್ ಬ್ಯಾಟಿಂಗ್ ಮೊದಲಿಗಿಂತ ಈಗ ಬೇಜಾನ್ ಚೇಂಜ್ ಆಗಿದೆ
ಇಷ್ಟು ದಿನ ಸಿಕ್ಸರ್ ಕಿಂಗ್ ಅಂದ್ರೆ, ಯುವರಾಜ್ ಸಿಂಗ್ ಕಣ್ಮುಂದೆ ಬರುತ್ತಿದ್ದರು. ಆದ್ರೀಗ ಈ ಬಿರುದು ಬದಲಾದ್ರೂ ಅಚ್ಚರಿ ಇಲ್ಲ. ಇದಕ್ಕೆ ಕಾರಣ ಹಿಟ್ಮ್ಯಾನ್ ರೋಹಿತ್. ಕೂಲ್ ಆ್ಯಂಡ್ ಕಾಮ್ ಆಗಿ ಕಾಣೋ ರೋಹಿತ್, ಬ್ಯಾಟಿಂಗ್ನಲ್ಲಿ ಸಿಕ್ಸರ್, ಬೌಂಡರಿಗಳನ್ನೇ ಸುರಿಸುವ ಶೋ ಮ್ಯಾನ್. ಇದೇ ಶೋ ಮ್ಯಾನ್ ಈಗ ವಿಶ್ವಕ್ರಿಕೆಟ್ನ ಸಿಕ್ಸರ್ ಆಗಿ ಬದಲಾಗಿದ್ದಾರೆ.
ನಿಜಕ್ಕೂ ವೈಟ್ಬಾಲ್ ಕ್ರಿಕೆಟ್‌ನ ಹಿಟ್ ಪ್ಲೇಯರ್. ವಿಶ್ವ ಕ್ರಿಕೆಟ್‌ನ ಹಿಟ್ಮ್ಯಾನ್ಗೆ ತಂಡವನ್ನ ಗೆಲುವಿನ ದಡ ಸೇರಿಸೋದೆ ಮೂಲ ಮಂತ್ರ. ಏಕದಿನ ವಿಶ್ವಕಪ್ನಲ್ಲಿ ಎದುರಾಳಿಯನ್ನ ಚೆಂಡಾಡ್ತಿರುವ ರೋಹಿತ್, ಏಕದಿನ ವಿಶ್ವಕಪ್ನಲ್ಲಿ ಸಿಕ್ಸರ್ಗಳ ಸುರಿಮಳೆಯನ್ನೇ ಸುರಿಸುತ್ತಾ ಸಿಕ್ಸರ್ ಕಿಂಗ್ ಆಗಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್.. ಪ್ರಸಕ್ತ ವರ್ಷದಲ್ಲಿ ಕ್ಯಾಪ್ಟನ್ ರೋಹಿತ್ ಸಿಡಿಸಿದ ಸಿಕ್ಸರ್ಗಳು.
2023ರ ODI ಕ್ಯಾಲೆಂಡರ್ನಲ್ಲಿ ರೋಹಿತ್ ಸೆನ್ಸೇಷನ್..!
ಸ್ಫೋಟಕ ಬ್ಯಾಟಿಂಗ್ಗೆ ಹೆಸರುವಾಸಿಯಾಗಿರೋ ರೋಹಿತ್, ಗೇಮ್ ಚೇಂಜರ್. ಬೆಸ್ಟ್ ಓಪನರ್ ಪ್ಲೇಯರ್. ಇದಕ್ಕೆ ತಕ್ಕಂತೆ ವೈಟ್ಬಾಲ್ ಕ್ರಿಕೆಟ್ನಲ್ಲಿ ಅಬ್ಬರಿಸ್ತಿರುವ ಮುಂಬೈಕರ್, 2023ರ ಏಕದಿನ ಕ್ಯಾಲೆಂಡರ್ನಲ್ಲಿ ಬರೋಬ್ಬರಿ 53 ಸಿಕ್ಸರ್ ಸಿಡಿಸಿದ್ದಾರೆ. ಈ ಪೈಕಿ 35 ಸಿಕ್ಸರ್ ಮೊದಲ 10 ಓವರ್ಗಳಲ್ಲೇ ಅನ್ನೋದು ಸ್ಪೆಷಲ್.
ಎ2023ರ ಒಡಿಐ ಕ್ಯಾಲೆಂಡರ್ನ ಪವರ್ ಪ್ಲೇನಲ್ಲಿ 46 ಸಿಕ್ಸರ್ ಸಿಡಿದಿವೆ. ಇಂಟ್ರೆಸ್ಟಿಂಗ್ ಅಂದ್ರೆ, ಪವರ್ ಪ್ಲೇನಲ್ಲಿ ಟೀಮ್ ಇಂಡಿಯಾ ಪರ ಸಿಡಿದ 80ರಷ್ಟು ಸಿಕ್ಸರ್ಗಳು ರೋಹಿತ್ ಶರ್ಮಾದ್ದಾಗಿದೆ.
ವಿಶ್ವಕಪ್ನ ತಂಡಗಳೇ ಸಿಡಿಸಿಲ್ಲ ಇಷ್ಟು ಸಿಕ್ಸ್..!
ಇದು ಅಚ್ಚರಿ ಎನಿಸಿದ್ರೂ ಸತ್ಯ.. ಯಾಕಂದ್ರೆ, 2023ರ ಏಕದಿನ ಕ್ಯಾಲೆಂಡರ್ನ ಪವರ್ ಪ್ಲೇನಲ್ಲಿ ರೋಹಿತ್ ಶರ್ಮಾ, ಅತಿ ಹೆಚ್ಚು ಸಿಕ್ಸರ್ ಸಿಡಿಸಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ, ವಿಶ್ವಕ್ರಿಕೆಟ್ನ ಯಾವೊಬ್ಬ ಬ್ಯಾಟರ್ ಕೂಡ ಪವರ್ ಪ್ಲೇನಲ್ಲಿ ಅರ್ಧದಷ್ಟು ಸಿಕ್ಸರ್ ಸಿಡಿಸಿಲ್ಲ. ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, 13 ಸಿಕ್ಸರ್ ಸಿಡಿಸಿದ್ದೇ 2ನೇ ಗರಿಷ್ಠ ಪವರ್ ಪ್ಲೇ ಸಿಕ್ಸರ್ಗಳಾಗಿವೆ. ಪ್ಲೇಯರ್ಗಳ್ಯಾಕೆ ವಿಶ್ವಕಪ್ನಲ್ಲಿ ಆಡ್ತಾ ಇರೋ ತಂಡಗಳೂ ಕೂಡ ಪವರ್ ಪ್ಲೇನಲ್ಲಿ ರೋಹಿತ್ ಶರ್ಮಾನ ಮೀರಿಸಿಲ್ಲ. ಇದಕ್ಕೆ ಸಾಕ್ಷಿ ಈ ಟ್ರ್ಯಾಕ್ ರೆಕಾರ್ಡ್.
2023ರ ಪವರ್ ಪ್ಲೇನಲ್ಲಿ ಟೀಮ್ಗಳ ಸಿಕ್ಸರ್ಗಳು ಎಷ್ಟು?
What a view, what a shot… what an atmosphere!
This angle of Rohit Sharma hitting a six 🤩
📸 ImHydro45
— Cricket’s great moments (@PitchedInLine) October 23, 2023
ಈ ಸಿಕ್ಸರ್ಗಳ ಟ್ರ್ಯಾಕ್ ರೆಕಾರ್ಡ್ ನೋಡಿದ್ರೆನೇ ಗೊತ್ತಾಗುತ್ತೆ. ಹಿಟ್ಮ್ಯಾನ್ರ ಪವರ್ ಪ್ಲೇ ಬ್ಯಾಟಿಂಗ್ ಪವರ್ ಹೇಗಿದೆ ಅನ್ನೋದು. ಈಗ ವಿಶ್ವಕಪ್ನಲ್ಲಿ ಅಟ್ಯಾಕಿಂಗ್ ಬ್ಯಾಟಿಂಗ್ ನಡೆಸ್ತಿರುವ ರೋಹಿತ್, ಮಿಡಲ್ ಆರ್ಡರ್ ಮೇಲೆ ಒತ್ತಡ ಬೀಳದಂತೆ ನೋಡಿಕೊಳ್ತಿದ್ದಾರೆ. ಇದು ಸಹಜವಾಗೇ ಪಾಸಿಟಿವ್ ರಿಸಲ್ಟ್ ನೀಡ್ತಿದ್ದು, ಗೆಲುವಿನಲ್ಲಿ ಮಹತ್ವದ ಪಾತ್ರವನ್ನೇ ವಹಿಸ್ತಿದೆ.
ಅದೇನೇ ಆಗಲಿ.. ರೋಹಿತ್ ಶರ್ಮಾರ ರಣ ರೌದ್ರವತಾರಾದ ಬ್ಯಾಟಿಂಗ್ ಝಲಕ್ ಹೀಗೆ ಮುಂದುವರಿಯಲಿ, ಏಕದಿನ ವಿಶ್ವಕಪ್ ಮುಕುಟಕ್ಕೆ ಮುತ್ತಿಡುವಂತೆ ಮಾಡಲಿ ಅನ್ನೋದೇ ಕ್ರಿಕೆಟ್ ಅಭಿಮಾನಿಗಳ ಆಶಯ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ