newsfirstkannada.com

ABD ದಾಖಲೆ ಧ್ವಂಸ ಮಾಡಿದ ರೋಹಿತ್​ ಶರ್ಮಾ.. 8 ಬೌಂಡರಿ, 2 ಸಿಕ್ಸರ್​​, ಭರ್ಜರಿ ಹಾಫ್​ ಸೆಂಚುರಿ.!

Share :

13-11-2023

    ನೆಚ್ಚಿನ ಚಿನ್ನಸ್ವಾಮಿಯಲ್ಲಿ ಮೈದಾನದಲ್ಲಿ ರೋ‘ಹಿಟ್​’..!

    ರೋಹಿತ್ ಕ್ರಿಕೆಟ್​ ದುನಿಯಾದ ನಯಾ ‘ಸಿಕ್ಸರ್​ ಕಿಂಗ್​’

    ನಾಯಕನಾಗಿಯೂ ರೋಹಿತ್​ ಸ್ಪೆಷಲ್​ ರೆಕಾರ್ಡ್​.!

ನೆದರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಹಾಫ್​ ಸೆಂಚುರಿ ಸಿಡಿಸಿದ ರೋಹಿತ್​ ಶರ್ಮಾ ದಾಖಲೆಗಳಿಗೆಲ್ಲಾ ಡಿಚ್ಚಿ ಕೊಟ್ಟಿದ್ದಾರೆ. ಇದ್ರೊಂದಿಗೆ ಹಿಟ್​ಮ್ಯಾನ್​ ರೋಹಿತ್​, ಸಿಕ್ಸರ್​​ ಕಿಂಗ್​ ಪಟ್ಟವನ್ನೂ ಏರಿದ್ದಾರೆ. ಚಿನ್ನಸ್ವಾಮಿಯಲ್ಲಿ ಹಿಟ್​​ಮ್ಯಾನ್​ ಆರ್ಭಟ ಹೇಗಿತ್ತು.? ಇಲ್ಲಿದೆ ಮಾಹಿತಿ

ನೆದರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಟೀಮ್​ ಇಂಡಿಯಾ ಫ್ಯಾನ್ಸ್​ ಏನನ್ನ ನಿರೀಕ್ಷೆ ಮಾಡಿದ್ರೂ, ಅದನ್ನ ಟೀಮ್​ ಇಂಡಿಯಾ ಆಟಗಾರರು ನೀಡಿದ್ದಾರೆ. ದೀಪಾವಳಿ ಪಟಾಕಿ ಸಿಡಿದಂತೆ, ಮೈದಾನದ ಸುತ್ತ ಬೌಂಡರಿ-ಸಿಕ್ಸರ್​ಗಳ ಸುರಿಮಳೆ ಸುರಿಸಿದ್ದಾರೆ. ಕ್ಯಾಪ್ಟನ್​ ರೋಹಿತ್​ ಶರ್ಮಾ ಅಂತೂ ಮೈದಾನಕ್ಕೆ ಕಾಲಿಟ್ಟ ಕ್ಷಣದಿಂದಲೇ ನೆದರ್ಲೆಂಡ್​ ಬೌಲಿಂಗ್​ ದಾಳಿಯನ್ನ ಧ್ವಂಸ ಮಾಡಿದ್ರು.

ಚಿನ್ನಸ್ವಾಮಿ ಮೈದಾನ ರೋಹಿತ್​ ಶರ್ಮಾ ಪಾಲಿನ ಫೇವರಿಟ್​ ಗ್ರೌಂಡ್​. ಈ ಹಿಂದೆ ಇಲ್ಲಿ ಆಡಿದ ಏಕದಿನ ಪಂದ್ಯಗಳಲ್ಲಿ ಧಮಾಕಾ ಸೃಷ್ಟಿಸಿದ್ರು. ನಿನ್ನೆಯೂ ಪಟಾಕಿ ಸಿಡಿಸೇ ಬಿಟ್ರು. ಬೌಂಡರಿ, ಸಿಕ್ಸರ್​ಗಳನ್ನ ಸಿಡಿಸಿ ಘರ್ಜಿಸಿದ ಪರಿಗೆ ನೆದರ್ಲೆಂಡ್​ ಬೆಚ್ಚಿಬಿದ್ರೆ, ಫ್ಯಾನ್ಸ್​​ ಸಖತ್​​ ಎಂಜಾಯ್​ ಮಾಡಿದ್ರು.

8 ಬೌಂಡರಿ, 2 ಸಿಕ್ಸರ್​​.. ಭರ್ಜರಿ ಹಾಫ್​ ಸೆಂಚುರಿ.!

ಪ್ಯಾಡ್​ ಕಟ್ಟಿ, ಬ್ಯಾಟ್​ ಹಿಡಿದು ಕ್ಷಣದಿಂದಲೇ ಹಿಟ್​​ಮ್ಯಾನ್​ ಬಿಗ್​ ಶಾಟ್ಸ್ ಸಿಡಿಸೋಕೆ ಮುಂದಾದ್ರು. 8 ಬೌಂಡರಿ, 2 ಸಿಕ್ಸರ್​ಗಳನ್ನ ಚಚ್ಚಿದ ಮುಂಬೈಕರ್​, ಬೆಂಗಳೂರಿನ ಅಂಗಳದಲ್ಲಿ ಹಾಫ್​ ಸೆಂಚುರಿ ಪೂರೈಸಿದ್ರು. 61 ರನ್​ಗಳ ಸಾಲಿಡ್​ ಇನ್ನಿಂಗ್ಸ್​​, ಟೀಮ್​ ಇಂಡಿಯಾಗೆ ಭದ್ರ ಅಡಿಪಾಯ ಹಾಕ್ತು.

ಎಬಿಡಿ ದಾಖಲೆಗೆ ರೋಹಿತ್​ ಶರ್ಮಾ ಡಿಚ್ಚಿ.!

ಹಾಫ್​ ಸೆಂಚುರಿ ಇನ್ನಿಂಗ್ಸ್​ ಸಿಡಿಸಿದ ರೋಹಿತ್​ ಶರ್ಮಾ ಮಿಸ್ಟರ್​ 360 ಎಬಿ ಡಿವಿಲಿಯರ್ಸ್​ ದಾಖಲೆಯನ್ನೇ ಧ್ವಂಸ ಮಾಡಿದ್ರು. ಕ್ಯಾಲೆಂಡರ್​ ವರ್ಷದಲ್ಲಿ ಹೆಚ್ಚು ಸಿಕ್ಸರ್​ ಸಿಡಿಸಿದವರ ಪಟ್ಟಿಯಲ್ಲಿ ರೋಹಿತ್​ ಅಗ್ರಸ್ಥಾನಕ್ಕೇರಿದ್ರು. 2015ರಲ್ಲಿ 18 ಇನ್ನಿಂಗ್ಸ್​ಗಳಿಂದ ಎಬಿಡಿ 58 ಸಿಕ್ಸರ್​ ಸಿಡಿಸಿದ್ರು. ಈ ವರ್ಷ 24 ಇನ್ನಿಂಗ್ಸ್​ಗಳಿಂದ 59 ಸಿಕ್ಸರ್​ ಸಿಡಿಸಿದ್ದಾರೆ.

ನಾಯಕನಾಗಿಯೂ ರೋಹಿತ್​ ಸ್ಪೆಷಲ್​ ರೆಕಾರ್ಡ್​.!

ಕ್ಯಾಲೆಂಡರ್​​ ವರ್ಷದಲ್ಲಿ ಮಾತ್ರವಲ್ಲ.. ನಾಯಕನಾಗಿ ವಿಶ್ವಕಪ್​ ಸೀಸನ್​ವೊಂದರಲ್ಲಿ ಹೆಚ್ಚು ಸಿಕ್ಸರ್​​​ ಸಿಡಿಸಿದ ಸಾಧನೆಯನ್ನೂ ಹಿಟ್​ಮ್ಯಾನ್​ ಮಾಡಿದ್ರು. ಈ ಟೂರ್ನಿಯಲ್ಲಿ 23ನೇ ಸಿಕ್ಸರ್​ ಸಿಡಿಸಿದ ರೋಹಿತ್​ ಶರ್ಮಾ, 2019ರಲ್ಲಿ 22 ಸಿಕ್ಸರ್​ ಸಿಡಿಸಿದ್ದ ಇಯಾನ್​ ಮಾರ್ಗನ್​ ದಾಖಲೆಯನ್ನ ಉಡೀಸ್​ ಮಾಡಿದ್ರು.

2ನೇ ಬಾರಿ ವಿಶ್ವಕಪ್​ನಲ್ಲಿ 500 ರನ್​ ಸಾಧನೆ.!

ರೋಹಿತ್​ ಶರ್ಮಾ ವಿಶ್ವಕಪ್​ನಲ್ಲಿ ಹಿಂದೆ ಯಾರೂ ಮಾಡಿರದ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡರು. ವಿಶ್ವಕಪ್​ ಇತಿಹಾಸದಲ್ಲಿ 2 ಟೂರ್ನಿಗಳಲ್ಲಿ 500ಕ್ಕಿಂತ ಹೆಚ್ಚು ರನ್​ ಸಿಡಿಸಿದ ಏಕೈಕ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆಗೂ ಪಾತ್ರರಾದ್ರು. 2019ರಲ್ಲಿ 648 ರನ್​ ಸಿಡಿಸಿದ್ದ ರೋಹಿತ್​, ಈ ಬಾರಿ 503 ರನ್​ಗಳಿಸಿದ್ದಾರೆ.

ಕನ್ಸಿಸ್ಟೆಂಟ್​ ಬ್ಯಾಟಿಂಗ್​ನೊಂದಿಗೆ ವಿಶ್ವಕಪ್​ ಟೂರ್ನಿಯಲ್ಲಿ ರೋಹಿತ್​ ಶರ್ಮಾ ರನ್​ ಸುನಾಮಿ ಸೃಷ್ಟಿಸ್ತಿದ್ದಾರೆ. ಇನ್ನೆರೆಡು ಪಂದ್ಯಗಳಲ್ಲಿ ಇದೇ ಬ್ಯಾಟಿಂಗ್​ ಮುಂದುವರೆಸಿದ್ರೆ, ಈ ಸಲ ಕಪ್​ ನಮ್ದಾಗೋದ್ರಲ್ಲಿ ಅನ್ನೋದ್ರಲ್ಲಿ ಡೌಟೇ ಬೇಡ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ABD ದಾಖಲೆ ಧ್ವಂಸ ಮಾಡಿದ ರೋಹಿತ್​ ಶರ್ಮಾ.. 8 ಬೌಂಡರಿ, 2 ಸಿಕ್ಸರ್​​, ಭರ್ಜರಿ ಹಾಫ್​ ಸೆಂಚುರಿ.!

https://newsfirstlive.com/wp-content/uploads/2023/11/Rohit-sharma-2.jpg

Load More