newsfirstkannada.com

ಕೋಚ್​​ ಹುದ್ದೆ ತೊರೆದ ರಾಹುಲ್​​ ದ್ರಾವಿಡ್​​.. ಭಾವುಕರಾಗಿ ಕಣ್ಣೀರಿಟ್ಟ ರೋಹಿತ್​ ಏನಂದ್ರು?

Share :

Published July 9, 2024 at 5:44pm

  ಬರೋಬ್ಬರಿ 17 ವರ್ಷಗಳ ತಪಸ್ಸಿನ ಬಳಿಕ ವಿಶ್ವಕಪ್​ ಗೆದ್ದ ಟೀಮ್​ ಇಂಡಿಯಾ..!

  ಟೀಮ್​ ಇಂಡಿಯಾ ಮುಖ್ಯ ಕೋಚ್​​ ರಾಹುಲ್​ ದ್ರಾವಿಡ್​ಗೆ ಇದು ಕೊನೆ ಸೀರೀಸ್​​

  ರಾಹುಲ್​ ದ್ರಾವಿಡ್​ ಬಗ್ಗೆ ಭಾವುಕ ಪೋಸ್ಟ್​ ಹಾಕಿದ ಕಣ್ಣೀರಿಟ್ಟ ಕ್ಯಾಪ್ಟನ್​ ರೋಹಿತ್​​

ಬರೋಬ್ಬರಿ 17 ವರ್ಷಗಳ ತಪಸ್ಸಿನ ಬಳಿಕ ಟೀಮ್​ ಇಂಡಿಯಾ ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​ ಗೆದ್ದಿದೆ. ಮುಖ್ಯ ಕೋಚ್​​​ ರಾಹುಲ್​​ ದ್ರಾವಿಡ್​ ಮಾರ್ಗದರ್ಶನದಲ್ಲಿ ರೋಹಿತ್​ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ವಿಶ್ವಕಪ್​ ಟ್ರೋಫಿ ಎತ್ತಿ ಹಿಡಿದಿದೆ. ಇದು ಮುಖ್ಯ ಕೋಚ್​​​ ರಾಹುಲ್​ ದ್ರಾವಿಡ್​ ಮತ್ತು ಕ್ಯಾಪ್ಟನ್​​ ರೋಹಿತ್​ ಶರ್ಮಾ ಅವರಿಗೂ ಕೊನೆ ಟಿ20 ವಿಶ್ವಕಪ್​ ಆಗಿದೆ.

ಇನ್ನು, ಈಗಾಗಲೇ ರೋಹಿತ್​ ಶರ್ಮಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ರಾಹುಲ್​ ದ್ರಾವಿಡ್​​ ಅವರ ಟೀಮ್​ ಇಂಡಿಯಾ ಮುಖ್ಯ ಕೋಚ್​​ ಅಧಿಕಾರದ ಅವಧಿ ಮುಕ್ತಾಯವಾಗಿದೆ. ಹಾಗಾಗಿ ರಾಹುಲ್​ ದ್ರಾವಿಡ್​ ಜತೆಗಿನ ಜರ್ನಿ ಬಗ್ಗೆ ಕ್ಯಾಪ್ಟನ್​ ರೋಹಿತ್​ ಶರ್ಮಾ ಭಾವುಕರಾಗಿ ಇನ್​ಸ್ಟಾಗ್ರಾಮ್​​​ ಪೋಸ್ಟ್​ವೊಂದು ಹಾಕಿದ್ರು.

ಡಿಯರ್​ ರಾಹುಲ್​​ ಭಾಯ್​​, ನಾನು ನನ್ನ ಫೀಲಿಂಗ್​ ಹಂಚಿಕೊಳ್ಳಲು ಸರಿಯಾದ ಪದಗಳಿಗಾಗಿ ಹುಡುಕಾಟ ನಡೆಸುತ್ತಿದೆ. ನನಗೆ ಈಗಲೂ ಸರಿಯಾದ ಪದಗಳನ್ನು ನನ್ನ ಫೀಲಿಂಗ್ಸ್​​​ ಹಂಚಿಕೊಳ್ಳುತ್ತಿದ್ದೇನೆ ಅನ್ನೋ ಖಾತ್ರಿ ಇಲ್ಲ. ನಾನು ಎಲ್ಲರಂತೆ ನಿಮ್ಮ ಕ್ರಿಕೆಟ್​​ ನೋಡುತ್ತಲೇ ಬೆಳೆದಿದ್ದೇನೆ. ನಿಮ್ಮೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ನೀವು ದೊಡ್ಡ ಸ್ಟಾಲ್ವಾರ್ಟ್, ಅಪಾರ ಸಾಧನೆ ಮಾಡಿದ್ದೀರಿ. ಎಲ್ಲವನ್ನೂ ಪಕ್ಕಕ್ಕಿಟ್ಟು ನಮ್ಮೊಂದಿಗೆ ಕೋಚ್​​ ಆಗಿ ಕೆಲಸ ಮಾಡಲು ಬಂದ್ರಿ. ಅದು ನಮಗೆ ದೊಡ್ಡ ಗಿಫ್ಟ್​​. ನಮಗೆ ಎಲ್ಲ ರೀತಿಯಲ್ಲೂ ಆರಾಮಾಗಿ ನೆರವು ನೀಡಿದ್ರಿ. ಕ್ರಿಕೆಟ್​​ ಬಗ್ಗೆ ನಿಮ್ಮ ಪ್ರೀತಿ ಮತ್ತು ಗೌರವದ ಬಗ್ಗೆ ಎಷ್ಟು ಹೇಳಿದ್ರೂ ಸಾಲದು. ನಿಮ್ಮಿಂದ ನಾನು ಸಾಕಷ್ಟು ಕಲಿತಿದ್ದೇನೆ. ನೀವು ನನ್ನ ವರ್ಕ್​ ವೈಫ್​ ಎಂದು ನನ್ನ ಹೆಂಡತಿ ಕಾಲೆಳೆಯುತ್ತಾರೆ. ನಾನು ಒಟ್ಟಿಗೆ ವಿಶ್ವಕಪ್​ ಗೆದ್ದಿದ್ದು ನನ್ನ ಅದೃಷ್ಟ. ನೀವು ನನ್ನ ಕೋಚ್​​, ಸ್ನೇಹಿತರು ಮತ್ತು ಗುರುಗಳು ಎಂದು ಹೇಳಿಕೊಳ್ಳಲು ಖುಷಿಯಾಗುತ್ತದೆ. ನಿಮ್ಮನ್ನು ಮಿಸ್​ ಮಾಡಿಕೊಳ್ಳುತ್ತೇನೆ ಎಂದು ರೋಹಿತ್​ ಭಾವುಕ ಪೋಸ್ಟ್​ ಹಾಕಿ ಕಣ್ಣೀರಿಟ್ಟಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೋಚ್​​ ಹುದ್ದೆ ತೊರೆದ ರಾಹುಲ್​​ ದ್ರಾವಿಡ್​​.. ಭಾವುಕರಾಗಿ ಕಣ್ಣೀರಿಟ್ಟ ರೋಹಿತ್​ ಏನಂದ್ರು?

https://newsfirstlive.com/wp-content/uploads/2023/06/DRAVID_ROHIT-1.jpg

Load More