newsfirstkannada.com

WTC2023: ರೋಹಿತ್​ ಮುಂದಿದೆ ದೊಡ್ಡ ಸವಾಲು.. ಆಂಗ್ಲರ ನಾಡಲ್ಲಿ ಹಿಟ್​ಮ್ಯಾನ್​ಗೆ ಇದೆ ರಿಯಲ್​ ಟೆಸ್ಟ್​

Share :

02-06-2023

    ಹಿಟ್ ಮ್ಯಾನ್​​ ಮೇಲಿಗೆ ಸವಾಲುಗಳ ಮೇಲೆ ಸವಾಲು

    ಗೆಲ್ಲಲು ಪಣತೊಟ್ಟಿದ್ದಾರೆ ಕ್ಯಾಪ್ಟನ್​ ರೋಹಿತ್​ ಶರ್ಮಾ

    ಆಂಗ್ಲರನ್ನ ಹಿಮ್ಮೆಟ್ಟಿಸಲು ರೋಹಿತ್​ಗೆ ಇದೆ ಟಫ್​ ಚಾಲೆಂಜ್​

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ ಪಂದ್ಯ ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಪಾಲಿಗೆ ಪ್ರತಿಷ್ಠೆಯ ಕಣ. ಸಾಲು ಸಾಲು ಸವಾಲುಗಳು ಹಿಟ್​ಮ್ಯಾನ್​ ಮುಂದಿವೆ. ಇವೆಲ್ಲವನ್ನ ಮೆಟ್ಟಿ ನಿಲ್ಲೋದು ಸುಲಭದ ಮಾತು ಅಲ್ಲವೇ ಅಲ್ಲ. ಟಫ್​​ ಟಾಸ್ಕ್​ಗಳಲ್ಲಿ ಮುಂಬೈಕರ್​ ಪಾಸ್​ ಆಗ್ತಾರಾ.?

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಫೈಟ್​​ಗೆ ವೇದಿಕೆ ಸಜ್ಜಾಗಿದೆ. ಮೊದಲ ಆವೃತ್ತಿಯಲ್ಲಿ ಸ್ವಲ್ಪದರಲ್ಲೇ ವಿಶ್ವದ ಟೆಸ್ಟ್​ ಚಾಂಪಿಯನ್​ ಆಗೋ ಅವಕಾಶ ಮಿಸ್​​ ಮಾಡ್ಕೊಂಡ ಟೀಮ್​ ಇಂಡಿಯಾ, ಈ ಸೀಸನ್​ನಲ್ಲಿ ಗೆದ್ದೇ ಗೆಲ್ಲುವ ಹಠದಲ್ಲಿದೆ. ಅದಕ್ಕಾಗಿ ಐಪಿಎಲ್​ ಮುಗಿದ ಬೆನ್ನಲ್ಲೇ ಇಂಗ್ಲೆಂಡ್​ಗೆ ಹಾರಿರುವ ಟೀಮ್​ ಇಂಡಿಯನ್ಸ್​​, ಸಮಾರಾಭ್ಯಾಸ ನಡೆಸ್ತಿದ್ದಾರೆ. ನೆಟ್ಸ್​ನಲ್ಲಿ ಬೆವರಿಳಿಸ್ತಾ ಇರೋ ಆಟಗಾರರು, ಚಾಂಪಿಯನ್​ ಆಗುವತ್ತ ದಿಟ್ಟ ಹೆಜ್ಜೆ ಇಡ್ತಿದ್ದಾರೆ.

ಟೀಮ್​ ಇಂಡಿಯಾ ನಾಯಕನ ಮುಂದೆ ಟಫ್​ ಚಾಲೆಂಜ್​.!

ಇಂಗ್ಲೆಂಡ್​ನಲ್ಲಿ ಟೀಮ್​ ಇಂಡಿಯಾ ಅಭ್ಯಾಸವನ್ನೇನೋ ಆರಂಭಿಸಿದೆ. ಬಹುಕಾಲದ ಐಸಿಸಿ ಚಾಂಪಿಯನ್​ಶಿಪ್​ನ ಬರಕ್ಕೆ ಈ ಬಾರಿ ಬ್ರೇಕ್​ ಬಿದ್ದೇ ಬೀಳುತ್ತೆ ಅಂತಾ ಫ್ಯಾನ್ಸ್​ ಕೂಡ ಕಾದು ಕುಳಿತಿದ್ದಾರೆ. ಕೋಟ್ಯಂತರ ಅಭಿಮಾನಿಗಳ ಈ ನಿರೀಕ್ಷೆಗಳನ್ನ ಈಡೇರಿಸೋದೆ ಕ್ಯಾಪ್ಟನ್​ ರೋಹಿತ್​ ಶರ್ಮಾ ಮುಂದಿರೋ ದೊಡ್ಡ ಸವಾಲಾಗಿದೆ.

ಐಪಿಎಲ್​ನಲ್ಲಿ ರೋಹಿತ್ ಶರ್ಮಾ​ ಫ್ಲಾಪ್​​​ ಶೋ.!

ಹಿಟ್​​ಮ್ಯಾನ್​ ರೋಹಿತ್​ ಶರ್ಮಾ ಈ ಸೀಸನ್​ನ ಐಪಿಎಲ್​ನಲ್ಲಿ ನೀಡಿದ್ದು ಫ್ಲಾಪ್​ ಶೋ. ಬೌಲರ್​ಗಳ ಎದುರು ರನ್​ಗಳಿಕೆಗೆ ಪರದಾಟವನ್ನ ನಡೆಸಿದ ಹಿಟ್​​ಮ್ಯಾನ್​ ರೋಹಿತ್​ ಶರ್ಮಾ ಪೆವಿಲಿಯನ್​ ಪರೇಡ್​ ನಡೆಸಿದ್ರು. 16 ಪಂದ್ಯಗಳನ್ನಾಡಿ ಕೇವಲ 20.75ರ ಸರಾಸರಿಯಲ್ಲಿ ರನ್​ಗಳಿಸಿದ್ರು. ಹಿಟ್​​ಮ್ಯಾನ್​ ಎಂಬ ಹೆಸರಿಗೆ ವಿರುದ್ಧವಾಗಿ ಬ್ಯಾಟ್​ ಬೀಸಿದ ಮುಂಬೈಕರ್​ 332 ರನ್​ಗಳಿಸುವಷ್ಟರಲ್ಲೇ ಸುಸ್ತಾದ್ರು.. ರೋಹಿತ್​ ಶರ್ಮಾರ ಈ ಫ್ಲಾಪ್​ ಶೋನೇ ಇದೀಗ ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.

ಇಂಗ್ಲೆಂಡ್​ನಲ್ಲಿ ಹಿಟ್​ಮ್ಯಾನ್​ಗೆ ಎಲ್ಲವೂ ಸವಾಲೇ.!

ಒಂದೆಡೆ ಫಾರ್ಮ್​ ಕಂಡುಕೊಳ್ಳಬೇಕಾಗಿರೋ ಅನಿವಾರ್ಯತೆ ಈಗಾಗಲೇ ರೋಹಿತ್​ ತಲೆನೋವನ್ನ ಹೆಚ್ಚಿಸಿದೆ. ಇದರ ಜೊತೆಗೆ ಕಳೆದ 2 ತಿಂಗಳಿಂದ ಟಿ20 ಫಾರ್ಮೆಟ್​​ನಲ್ಲೇ ಬ್ಯುಸಿಯಾಗಿದ್ದ ರೋಹಿತ್​ ಇದೀಗ ಕೆಲವೇ ದಿನಗಳಲ್ಲಿ ಟೆಸ್ಟ್​ ಮಾದರಿಗೆ ಟ್ಯೂನ್​ ಆಗಬೇಕಿದೆ. ವೈಟ್​ಬಾಲ್​ ಮೂಡ್​​ನಿಂದ ರೆಡ್​ಬಾಲ್​ ಮೂಡ್​​ಗೆ ಶಿಫ್ಟ್​ ಆಗೋದು ಮಾತ್ರವಲ್ಲ.. ಆಟದಲ್ಲೂ ಬದಲಾವಣೆ ಮಾಡಿಕೊಂಡು ಕಣಕ್ಕಿಳಿಯಬೇಕಿದೆ. ಇನ್ನು ಇಂಗ್ಲೆಂಡ್​ ಕಂಡೀಷನ್ಸ್​ಗೆ ಹೊಂದಿಕೊಳ್ಳೋದು ಕೂಡ ಸುಲಭ ಆಗೋ ವಿಚಾರವಲ್ಲ..

ಆಂಗ್ಲರ ನಾಡಲ್ಲಿ ಕ್ಯಾಪ್ಟನ್​ ರೋಹಿತ್​ಗೆ ರಿಯಲ್​ ‘ಟೆಸ್ಟ್​’.!

ಇಂಗ್ಲೆಂಡ್​​ನಲ್ಲಿ ಈವರೆಗೆ ರೋಹಿತ್​ ಶರ್ಮಾ ಆಟಗಾರನಾಗಿ ಆಡಿದ್ದಾರೆ. ಆಂಗ್ಲರ ನಾಡಲ್ಲಿ ಆಡಿದ ಟೆಸ್ಟ್ ಪಂದ್ಯಗಳಲ್ಲಿ ಡಿಸೆಂಟ್​​ ರೆಕಾರ್ಡ್ಸ್​​ ಅನ್ನೂ ಹೊಂದಿದ್ದಾರೆ. ಆದ್ರೆ, ಈ ಅಲ್ಟಿಮೇಟ್​​ ಟೆಸ್ಟ್​ನಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್​ನಲ್ಲಿ ರೋಹಿತ್​ ನಾಯಕನ ಜವಾಬ್ದಾರಿ ನಿರ್ವಹಿಸಬೇಕಿದೆ. ಇಂಗ್ಲೆಂಡ್​ನ ಪಿಚ್​ ಮರ್ಮವನ್ನ ಅರಿಯೋದು ನಿಜಕ್ಕೂ ಕಬ್ಬಿಣದ ಕಡಲೆ.. ಅಂತಾದ್ರಲ್ಲಿ, ಪಿಚ್​​ ರೀಡ್​ ಮಾಡಿ, ಬೆಸ್ಟ್​ ಪ್ಲೇಯಿಂಗ್​ ಇಲೆವೆನ್​ ಆಯ್ಕೆ ಮಾಡೋದಲ್ಲದೆ, ಆನ್​ಫೀಲ್ಡ್​​ನಲ್ಲಿ ಗೇಮ್​ಪ್ಲಾನ್​ & ಸ್ಟಾರ್ಟಜಿಗಳನ್ನ ಎಕ್ಸಿಕ್ಯೂಟ್​ ಮಾಡೋದು ಸುಲಭದ ಟಾಸ್ಕ್​ ಅಲ್ಲ.

ಟೀಮ್​ ಇಂಡಿಯಾ ನಾಯಕನ ಮೇಲೆ ನಿರೀಕ್ಷೆಯ ಭಾರ.!

ಟೀಮ್​ ಇಂಡಿಯಾ ನಾಯಕನಾಗಿ ರೋಹಿತ್​ ಶರ್ಮಾ ಆಯ್ಕೆಯಾಗ್ತಿದ್ದಂತೆ, ಅಭಿಮಾನಿಗಳ ವಲಯದಲ್ಲಿ ಸಾಕಷ್ಟು ನಿರೀಕ್ಷೆ ಇತ್ತು. ಬಹುಕಾಲದ ಐಸಿಸಿ ಚಾಂಪಿಯನ್​​ಶಿಪ್​​ನ ಕೊರಗಿಗೆ ಬ್ರೇಕ್​ ಬೀಳುತ್ತೆ ಅನ್ನೋದು ಎಲ್ಲರ ಲೆಕ್ಕಾಚಾರವಾಗಿತ್ತು. ಅದರಲ್ಲೂ ಐಪಿಎಲ್​ನ ಮೋಸ್ಟ್​​ ಸಕ್ಸಸ್​​ಫುಲ್​ ಕ್ಯಾಪ್ಟನ್​, ಟಿ20 ವಿಶ್ವಕಪ್​ ಗೆಲ್ಲಿಸ್ತಾರೆ ಅನ್ನೋ ನಂಬಿಕೆ ಅಭಿಮಾನಿಗಳಲ್ಲಿತ್ತು. ಆದ್ರೆ, ನಂಬಿಕೆ ಹುಸಿಯಾಯ್ತು.

ಇದೀಗ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ರೂಪದಲ್ಲಿ ಐಸಿಸಿ ಚಾಂಪಿಯನ್​ಶಿಪ್​ ಗೆಲ್ಲಿಸಿಕೊಡುವ ಮತ್ತೊಂದು ಅವಕಾಶ ರೋಹಿತ್​ ಶರ್ಮಾ ಮುಂದಿದೆ. ಆಂಗ್ಲರ ನಾಡಲ್ಲಿ ರೋಹಿತ್​ ಫಾರ್ಮ್​ಗೆ ಮರಳ್ತಾರಾ.? ನಾಯಕನಾಗಿ ಸಕ್ಸಸ್​​ ಕಾಣ್ತಾರಾ.? ಭಾರತ ಚಾಂಪಿಯನ್​ ಆಗುತ್ತಾ.? ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್‌ನಲ್ಲಿ

WTC2023: ರೋಹಿತ್​ ಮುಂದಿದೆ ದೊಡ್ಡ ಸವಾಲು.. ಆಂಗ್ಲರ ನಾಡಲ್ಲಿ ಹಿಟ್​ಮ್ಯಾನ್​ಗೆ ಇದೆ ರಿಯಲ್​ ಟೆಸ್ಟ್​

https://newsfirstlive.com/wp-content/uploads/2023/06/Rohit-Sharma-2.jpg

Load More