newsfirstkannada.com

I’m So Sorry: ರೋಹಿತ್​ ಮುಂದೆಯೇ ಹಾರ್ದಿಕ್​​ ಪಾಂಡ್ಯಗೆ ಕ್ಷಮೆ ಕೇಳಿದ ಫ್ಯಾನ್ಸ್​​​!

Share :

Published July 4, 2024 at 7:16pm

Update July 4, 2024 at 7:27pm

    ವೆಸ್ಟ್​ ಇಂಡೀಸ್​ನಲ್ಲಿ ನಡೆದ 2024ರ ಟಿ20 ವಿಶ್ವಕಪ್​ ಗೆದ್ದ ಟೀಮ್​ ಇಂಡಿಯಾ

    ಕೊನೆ ಓವರ್​ ಅದ್ಭುತವಾಗಿ ಮಾಡಿ ಭಾರತವನ್ನು ಗೆಲ್ಲಿಸಿದ ಹಾರ್ದಿಕ್​ ಪಾಂಡ್ಯ!

    ಹಾರ್ದಿಕ್​ ಪಾಂಡ್ಯಗೆ ಕ್ಷಮೆ ಕೇಳಿದ ಕ್ಯಾಪ್ಟನ್​​​ ರೋಹಿತ್​ ಶರ್ಮಾ ಅಭಿಮಾನಿಗಳು

ಬಹುನಿರೀಕ್ಷಿತ 2024ರ ಐಸಿಸಿ ಟಿ20 ವಿಶ್ವಕಪ್​ ಗೆದ್ದ ಬಳಿಕ ಟೀಮ್​ ಇಂಡಿಯಾಗೆ ತವರಿಗೆ ವಾಪಸ್​ ಆಗಿದೆ. ಭಾರತಕ್ಕೆ ಬಂದಿಳಿದ ಟೀಮ್​ ಇಂಡಿಯಾ ಆಟಗಾರರಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಈ ಮಧ್ಯೆ ಟೀಮ್​ ಇಂಡಿಯಾದ ಸ್ಟಾರ್​ ಆಲ್​ರೌಂಡರ್​​​ ಹಾರ್ದಿಕ್​ ಪಾಂಡ್ಯಗೆ ರೋಹಿತ್​ ಶರ್ಮಾ ಮಹಿಳಾ ಅಭಿಮಾನಿ ಒಬ್ಬರು ಕ್ಷಮೆ ಕೇಳಿದ್ದಾರೆ ಎಂದು ವರದಿಯಾಗಿದೆ.

ಇನ್ನು, ಭಾರತ ತಂಡವನ್ನು ಸ್ವಾಗತಿಸಲು ಮುಂಬೈ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಮಹಿಳಾ ಅಭಿಮಾನಿ ಐಪಿಎಲ್​ನಲ್ಲಿ ನಿಂದಿಸಿದ್ದಕ್ಕಾಗಿ ಲೈವ್​ನಲ್ಲೇ ಹಾರ್ದಿಕ್​ಗೆ ಕ್ಷಮೆಯಾಚಿಸಿದರು. ಈ ಬಗ್ಗೆ ಮಾತಾಡಿರೋ ಅವರು, ನಾನು ಹಾರ್ದಿಕ್​ ಅವರಿಗೆ ಕ್ಷಮಿಸಿ ಎಂದು ಹೇಳಲು ಬಯಸುತ್ತೇನೆ. ಹಾರ್ದಿಕ್‌ ಅವರನ್ನು ಈ ಹಿಂದೆ ಯಾಕೆ ಟ್ರೋಲ್​ ಮಾಡಿದ್ದೆ ಎಂದು ನೋವಾಗುತ್ತಿದೆ ಎಂದರು.

ನಾನು ರೋಹಿತ್​ ಅಭಿಮಾನಿ. ಅಂದು ರೋಹಿತ್​ ಅವರ ಜಾಗದಲ್ಲಿ ಮುಂಬೈ ಇಂಡಿಯನ್ಸ್​ ತಂಡದ ಕ್ಯಾಪ್ಟನ್​ ನೀವು ಆಗಿದ್ರಿ. ಇದರಿಂದ ಎಲ್ಲರಂತೆ ನನಗೂ ಕೋಪ ಇತ್ತು. ಫೈನಲ್‌ನಲ್ಲಿ ಕೊನೆ ಓವರ್ ಅದ್ಭುತವಾಗಿ ಮಾಡಿ ಭಾರತವನ್ನು ಗೆಲ್ಲಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು ಎಂದರು.

ಏನಿದು ಘಟನೆ?

ಎರಡು ತಿಂಗಳ ಹಿಂದೆ ನಡೆದ 2024ರ ಇಂಡಿಯನ್​ ಪ್ರೀಮಿಯರ್​​ ಲೀಗ್​ನಲ್ಲಿ ಹಾರ್ದಿಕ್​ ಪಾಂಡ್ಯ ಮುಂಬೈ ಇಂಡಿಯನ್ಸ್​ ಕ್ಯಾಪ್ಟನ್​ ಆಗಿದ್ರು. ಈ ಸೀಸನ್​ನಲ್ಲಿ ಮುಂಬೈ ತಂಡದ ಪರ ಕ್ಯಾಪ್ಟನ್​ ಆಗಿ ಅಷ್ಟೇ ಅಲ್ಲದೆ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲೂ ಕಳಪೆ ಪ್ರದರ್ಶನ ನೀಡಿದ್ರು. ಈ ಮೂಲಕ ಹಾರ್ದಿಕ್‌ ರೋಹಿತ್‌ ಶರ್ಮಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ರೋಹಿತ್‌ ಆಭಿಮಾನಿಗಳಿಂದ ಹಾರ್ದಿಕ್‌ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಇದರ ಪರಿಣಾಮ ಟೂರ್ನಿಯಿಂದಲೇ ಮುಂಬೈ ಹೊರ ಬಿದ್ದಿತ್ತು.

ಇದನ್ನೂ ಓದಿ: ಟೀಕೆಗಳನ್ನ ಮೆಟ್ಟಿ ನಿಂತ ಹಾರ್ದಿಕ್​​ ಪಾಂಡ್ಯ.. ಜಗತ್ತಿನ ನಂಬರ್​​ 1 ಆಲ್​ರೌಂಡರ್​​!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

I’m So Sorry: ರೋಹಿತ್​ ಮುಂದೆಯೇ ಹಾರ್ದಿಕ್​​ ಪಾಂಡ್ಯಗೆ ಕ್ಷಮೆ ಕೇಳಿದ ಫ್ಯಾನ್ಸ್​​​!

https://newsfirstlive.com/wp-content/uploads/2024/07/Hardik_Rohit.jpg

Load More