newsfirstkannada.com

ಉದ್ದಂಡ ನಮಸ್ಕಾರ, ಭೂಮಿ ತಾಯಿಗೆ ವಿಜಯದ ಕಣ್ಣೀರು ಅರ್ಪಿಸಿದ ರೋಹಿತ್​! ಇದು 13 ವರ್ಷದಿಂದ ಬೆನ್ನಟ್ಟಿದ ಕನಸು

Share :

Published June 30, 2024 at 9:36am

  ಭಾವನೆ ನಿಯಂತ್ರಿಸಲಾಗದೆ ಏನು ಮಾಡಿದ್ರು ಗೊತ್ತಾ ರೋಹಿತ್​?

  13 ವರ್ಷಗಳ ಕನಸು.. ಕೊನೆಗೂ ಟ್ರೋಫಿ ಗೆದ್ದ ಟೀಂ ಇಂಡಿಯಾ

  ಟಿ20ಗೆ ರೋಹಿತ್ ವಿದಾಯ.. ಕಣ್ಣೀರು ಹಾಕಿದ ಹಿಟ್​ಮ್ಯಾನ್

ಟೀಂ ಇಂಡಿಯಾ ಹಿಂಬಾಲಿಸುತ್ತಿದ್ದ 13 ವರ್ಷಗಳ ಕನಸು ಕೊನೆಗೂ ನನಸಾಗಿದೆ. ರೋಹಿತ್ ಪಡೆ ಟಿ20 ವಿಶ್ವಕಪ್​ನಲ್ಲಿ ಟ್ರೋಫಿ ಗೆದ್ದು ಕೊಳ್ಳುವ ಮೂಲಕ ತನ್ನ ತಾಕತ್ತನ್ನು ಮತ್ತೆ ವಿಶ್ವಕ್ಕೆ ತೋರಿಸಿದೆ. ಸೌತ್​ ಆಫ್ರಿಕಾದ ವಿರುದ್ಧ ಭಾರತ ಗೆದ್ದು ಬೀಗಿದಂತೆ ರೋಹಿತ್​ ಮೈದಾನದಲ್ಲಿ ಉದ್ದಂಡ ನಮಸ್ಕಾರ ಹಾಕಿದ್ದಾರೆ. ಭೂಮಿಗೆ ತಲೆಯಿಟ್ಟು ವಿಜಯದ ಕಣ್ಣೀರು ಅರ್ಪಿಸಿದ್ದಾರೆ. ಈ ದೃಶ್ಯ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ.

ಭಾವನೆಗಳನ್ನು ನಿಯಂತ್ರಿಸಲಾಗದೆ ರೋಹಿತ್​ ಶರ್ಮಾ ಮೈದಾನದಲ್ಲೇ ಬಿದ್ದು ಕಣ್ಣೀರು ಸುರಿಸಿದ್ದಾರೆ. ಉಳಿದವರು ನಾಯಕನ ಬಳಿ ಹೋಗಿ ಗೆಲುವನ್ನು ಸಂಭ್ರಮಿಸಿದ್ದಾರೆ. ಕ್ಯಾಮೆರಾ ಕಣ್ಣಿಗಂತೂ ರೋಹಿತ್​ ಸಂತಸದ ಕ್ಷಣ ಅದ್ಭುತವಾಗಿ ಸೆರೆಯಾಗಿದೆ. ರೋಹಿತ್​ ಕಂಬನಿ ಕಂಡು ಭಾರತೀಯ ಕ್ರಿಕೆಟ್​ ಪ್ರಿಯರು ಕೂಡ ಆನಂದ ಭಾಷ್ಪ ಸುರಿಸಿದ್ದಾರೆ.

ಟೀಂ ಇಂಡಿಯಾ ಸೌತ್​ ಆಫ್ರಿಕಾದ ವಿರುದ್ಧ 7 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಜಯಕ್ಕಾಗಿ ಮತ್ತು ಫೈನಲ್​ ಟ್ರೋಫಿಗೆ ಟೀಂ ಇಂಡಿಯಾ ಮುತ್ತಿಡಲು 13 ವರ್ಷಗಳು ಕಾದಿತ್ತು. ಕೊನೆಗೂ ನಿನ್ನೆ ಸೌತ್​ ಆಫ್ರಿಕಾಗೆ ಶಾಕ್​ ಕೊಡುವ ಮೂಲಕ ರೋಹಿತ್​ ಪಡೆ ಗೆಲುವು ತಮ್ಮದಾಗಿಸಿಕೊಂಡಿದೆ.‘

ಟಿ20ಗೆ ರೋಹಿತ್ ವಿದಾಯ

ವಿರಾಟ್​ ಕೊಹ್ಲಿ ಟಿ20 ವಿಶ್ವಕಪ್​ಗೆ ವಿದಾಯ ಸೂಚಿಸಿದ ಬೆನ್ನಲ್ಲೇ ರೋಹಿತ್​ ಶರ್ಮಾ ಕೂಡ ಇದು ನನ್ನ ಕೊನೆಯ ಟಿ20 ವಿಶ್ವಕಪ್​ ಪಂದ್ಯ ಹೇಳಿದ್ದಾರೆ. ಆದರೆ ಈ ಸಂಗತಿ ಮಾತ್ರ ಅಭಿಮಾನಿಗಳನ್ನು ಮತ್ತಷ್ಟು ಬೇಸರಕ್ಕೆ ದೂಡುವಂತೆ ಮಾಡಿದೆ. ​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉದ್ದಂಡ ನಮಸ್ಕಾರ, ಭೂಮಿ ತಾಯಿಗೆ ವಿಜಯದ ಕಣ್ಣೀರು ಅರ್ಪಿಸಿದ ರೋಹಿತ್​! ಇದು 13 ವರ್ಷದಿಂದ ಬೆನ್ನಟ್ಟಿದ ಕನಸು

https://newsfirstlive.com/wp-content/uploads/2024/06/Rohit-sharma-1-1.jpg

Load More