newsfirstkannada.com

ರೋಹಿತ್​ಗೆ ಆರ್​​​ಸಿಬಿ ಕ್ಯಾಪ್ಟನ್ಸಿ ಜತೆಗೆ ಮತ್ತೊಂದು ಮಹತ್ವದ ಜವಾಬ್ದಾರಿ; ಏನದು..?

Share :

Published July 2, 2024 at 6:08pm

    ವಿರಾಟ್​ ಕೊಹ್ಲಿಯಲ್ಲ ಆರ್​​ಸಿಬಿ ಮುಂದಿನ ಕ್ಯಾಪ್ಟನ್ ರೋಹಿತ್​​!

    ಐಪಿಎಲ್​ ಆಕ್ಷನ್​ನಲ್ಲಿ ರೋಹಿತ್​ ಮೇಲೆ ಆರ್​​ಸಿಬಿ ಫ್ಯಾನ್ಸ್​ ಕಣ್ಣು

    ಕ್ಯಾಪ್ಟನ್ಸಿ ಜೊತೆಗೆ ರೋಹಿತ್​ಗೆ ಮತ್ತೊಂದು ಮಹತ್ವದ ಜವಾಬ್ದಾರಿ

ಬಹುನಿರೀಕ್ಷಿತ 2024ರ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೌತ್​ ಆಫ್ರಿಕಾ ವಿರುದ್ಧ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಈ ಮೂಲಕ 2ನೇ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿದೆ. ವಿಶ್ವಕಪ್​ ಗೆದ್ದ ಕೂಡಲೇ ಟೀಮ್​ ಇಂಡಿಯಾದ ಕ್ಯಾಪ್ಟನ್​ ರೋಹಿತ್​ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ರೂ ತಾನು ಐಪಿಎಲ್​ ಆಡೋದಾಗಿ ರೋಹಿತ್​​ ಹೇಳಿದ್ರು.

ಇನ್ನು, ಮುಂದಿನ ಸೀಸನ್​ ವೇಳೆಗೆ ರೋಹಿತ್​ ಮುಂಬೈ ಇಂಡಿಯನ್ಸ್​ ತೊರೆಯೋದು ಗ್ಯಾರಂಟಿ. ಆಕ್ಷನ್​​ನಲ್ಲಿ ಆರ್​​ಸಿಬಿ ರೋಹಿತ್​ ಶರ್ಮಾ ಅವರನ್ನು ಖರೀದಿ ಮಾಡಲಿ. ರೋಹಿತ್​ ಕ್ಯಾಪ್ಟನ್​ ಆಗಲಿ, ಕೊಹ್ಲಿ ಆರ್​​ಸಿಬಿ ಪರ ಚೆನ್ನಾಗಿ ಆಡಿ ಕಪ್​ ಗೆಲ್ಲಿಸಲಿ ಎಂದು ಫ್ಯಾನ್ಸ್​ ಸೋಷಿಯಲ್​ ಮೀಡಿಯಾದಲ್ಲಿ ಫುಲ್​ ಟ್ರೆಂಡ್​ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ ಆರ್​​ಸಿಬಿ ಫ್ರಾಂಚೈಸಿ ಕೂಡ ಒಂದು ವೇಳೆ ಕೊಹ್ಲಿ ಕ್ಯಾಪ್ಟನ್​​ ಆಗಲು ನಿರಾಕರಣೆ ಮಾಡಿದ್ರೆ ರೋಹಿತ್​ ಶರ್ಮಾ ಅವರನ್ನು ಬೆಂಗಳೂರು ತಂಡಕ್ಕೆ ಕರೆ ತರೋ ಸಾಧ್ಯತೆಗಳು ಇವೆ.

ಆರ್​​ಸಿಬಿ ಪ್ಲಾನ್​ ಏನು?

ಆರ್​​ಸಿಬಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​ ಈಗ 40 ವರ್ಷ. ಹಾಗಾಗಿ ಐಪಿಎಲ್​​ನಿಂದ ಫಾಫ್​ ನಿವೃತ್ತಿ ಆಗೋ ಸಾಧ್ಯತೆ ಇದೆ. ಇದಾದ ಬಳಿಕ ಆರ್​​ಸಿಬಿ ತಂಡಕ್ಕೆ ಹೊಸ ಕ್ಯಾಪ್ಟನ್​ ಬೇಕಿದ್ದಾರೆ. ಆದ್ದರಿಂದ ಮುಂದಿನ ಸೀಸನ್​ಗೆ ಕೊಹ್ಲಿ ಅವರಿಗೆ ಆರ್​​ಸಿಬಿ ಪಟ್ಟ ನೀಡಲು ಫ್ರಾಂಚೈಸಿ ನಿರ್ಧಾರ ಮಾಡಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಕೊಹ್ಲಿ ಕ್ಯಾಪ್ಟನ್​ ಆಗಲು ಒಪ್ಪದಿದ್ರೆ ರೋಹಿತ್​ ಶರ್ಮಾಗೆ ಕ್ಯಾಪ್ಟನ್ಸಿ ನೀಡಲು ಆರ್​​ಸಿಬಿ ಭರ್ಜರಿ ತಯಾರಿ ನಡೆಸಿಕೊಂಡಿದೆ. ರೋಹಿತ್​ಗೆ ಕ್ಯಾಪ್ಟನ್ಸಿ ಮಾತ್ರವಲ್ಲ ತಂಡದ ಓಪನಿಂಗ್​ ಮಾಡೋ ಜವಾಬ್ದಾರಿ ಕೂಡ ಇರಲಿದೆ. ಆರ್​​ಸಿಬಿ ತಂಡಕ್ಕೆ ಬೆಸ್ಟ್​ ಓಪನರ್​ ಕೂಡ ಬೇಕಾಗಿದ್ದಾರೆ.

ಇದನ್ನೂ ಓದಿ: ಅಭಿಮಾನಿಗಳಿಗೆ ಹಬ್ಬ.. ಕೊಹ್ಲಿಗೆ ಹಿಟ್​ಮ್ಯಾನ್​ ಸಾಥ್​​.. ರೋಹಿತ್​​ ಆರ್​​ಸಿಬಿ ಕ್ಯಾಪ್ಟನ್​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೋಹಿತ್​ಗೆ ಆರ್​​​ಸಿಬಿ ಕ್ಯಾಪ್ಟನ್ಸಿ ಜತೆಗೆ ಮತ್ತೊಂದು ಮಹತ್ವದ ಜವಾಬ್ದಾರಿ; ಏನದು..?

https://newsfirstlive.com/wp-content/uploads/2024/07/Kohli_Rohit-RCB-1.jpg

Load More