ಶ್ರೀಲಂಕಾದ ಕ್ಯಾಂಡಿಯಲ್ಲಿ ನಿನ್ನೆ ವಿಶ್ವಕಪ್ಗೆ ಟೀಮ್ ಇಂಡಿಯಾ ಪ್ರಕಟ
ಪ್ರೆಸ್ಮೀಟ್ನಲ್ಲಿ ಅಜಿತ್ ಅಗರ್ಕರ್ ಪಕ್ಕದಲ್ಲಿದ್ದ ರೋಹಿತ್ ಶರ್ಮಾ.!
ಇಂಡಿಯಾದಲ್ಲಿ ನಡೆಸುವ ಮಾಧ್ಯಮಗೋಷ್ಠಿಯಲ್ಲೂ ಆನ್ಸರ್ ಮಾಡಲ್ಲ
2023ರ ವಿಶ್ವಕಪ್ಗಾಗಿ ಬಿಸಿಸಿಐ ಆಯ್ಕೆ ಸಮಿತಿಯು ಭಾರತ ತಂಡದ 15 ಆಟಗಾರರ ಹೆಸರನ್ನು ಪ್ರಕಟ ಮಾಡಿದೆ. ಶ್ರೀಲಂಕಾದ ಕ್ಯಾಂಡಿಯಲ್ಲಿ BCCIನ ಆಯ್ಕೆ ಸಮಿತಿಯ ಚೀಫ್ ಸಲೆಕ್ಟರ್ ಅಜಿತ್ ಅಗರ್ಕರ್ ಆಟಗಾರರ ಹೆಸರನ್ನು ಹೇಳಿದರು. ಈ ವೇಳೆ ಪಕ್ಕದಲ್ಲೇ ಕುಳಿತ್ತಿದ್ದ ರೋಹಿತ್ ಶರ್ಮಾ ಅವರಿಗೆ ಪ್ರಶ್ನೆಯೊಂದನ್ನು ಕೇಳಿದ್ದಕ್ಕೆ ಕೋಪದಿಂದ ಅಂತಹ ಪ್ರಶ್ನೆಗಳನ್ನು ನನಗೆ ಕೇಳಬೇಡಿ ಎಂದಿದ್ದಾರೆ.
ವಿಶ್ವಕಪ್ ಟೂರ್ನಿಗಾಗಿ ಪ್ರಕಟಿಸಿರುವ ತಂಡದಲ್ಲಿ ಇತ್ತೀಚೆಗಷ್ಟೇ ಗಾಯದಿಂದ ಚೇತರಿಸಿಕೊಂಡಿರುವ ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್ ಅವರಿಗೆ ಸ್ಥಾನ ನೀಡಲಾಗಿದೆ. ಆದ್ರೆ ಕಳೆದ ಪಂದ್ಯಗಳಲ್ಲಿ ಚೆನ್ನಾಗಿ ಪ್ರದರ್ಶನ ನೀಡಿದಂತಹ ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ರನ್ನು ತಂಡದಿಂದ ಹೊರಗಿಡಲಾಗಿದೆ. ಈ ಬಗ್ಗೆ ರೋಹಿತ್ರನ್ನು ಪ್ರಶ್ನೆ ಮಾಡಲಾಗಿತ್ತು ಎಂದು ಕೇಳಿ ಬಂದಿದೆ.
ಇದಕ್ಕೆ ಕೋಪದಿಂದಲೇ ಉತ್ತರಿಸಿ ಕ್ಯಾಪ್ಟನ್ ರೋಹಿತ್ ಶರ್ಮಾ, ಮುಂದಿನ ದಿನಗಳಲ್ಲಿ ಇಂಡಿಯಾದಲ್ಲಿ ಮಾಧ್ಯಮಗೋಷ್ಠಿ ನಡೆಸಲಾಗುತ್ತದೆ. ಆಗ ಅದು ಆಗುತ್ತದೆ, ಇದು ಆಗುತ್ತದೆ ಎಂದು ಹೊರಗಿನ ಪ್ರಶ್ನೆಗಳನ್ನು ಕೇಳಿದ್ರೆ ಅದಕ್ಕೆ ನಾನು ಉತ್ತರ ಕೊಡಲ್ಲ. ಈಗಾಗಲೇ ಹಲವು ಬಾರಿ ಅಂತಹ ಪ್ರಶ್ನೆಗಳಿಗೆ ಉತ್ತರಿಸಲ್ಲ ಅಂತ ಹೇಳಿದ್ದೇನೆ. ಈಗ ಆ ಪ್ರಶ್ನೆ ಆನ್ಸರ್ ಇಲ್ಲ ಎಂದು ಹೇಳಿದ್ದಾರೆ. ಸದ್ಯ ರೋಹಿತ್ ಅವರು ಮಾತನಾಡಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.
Rohit sharma in press conference 🔥🔥🔥#Worldcup2023 pic.twitter.com/hJmt6rjQRd
— Awadhesh Mishra (@annnnshull) September 5, 2023
ನಾವು ಉತ್ತಮವಾದ ಟೀಮ್ ಆನ್ನು ಆಯ್ಕೆ ಮಾಡಿದ್ದು ಬ್ಯಾಟಿಂಗ್ ಪಡೆ ಸ್ಟ್ರಾಂಗ್ ಇದೆ. ತಂಡದಲ್ಲಿ ಸ್ಪಿನ್ ಮತ್ತು ಬೌಲಿಂಗ್ ಆಯ್ಕೆಗಳಿವೆ. ವೈಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಒಳ್ಳೆಯ ಫಾರ್ಮ್ನಲ್ಲಿದ್ದು ವಿಶ್ವಕಪ್ ಟೂರ್ನಿಯಲ್ಲಿ ನಿರ್ಣಾಯಕ ಪ್ರದರ್ಶನ ತೋರಲಿದ್ದಾರೆ ಎಂದು ರೋಹಿತ್ ತಂಡದ ಬಗ್ಗೆ ಮಾತನಾಡಿದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ