Advertisment

ಅವಮಾನವಾದ ಜಾಗದಲ್ಲಿ ರೋಹಿತ್ ಉಳಿಯೋದು ಅನುಮಾನ; ಅದಕ್ಕೆ ಕಾರಣ ಇಲ್ಲಿದೆ..

author-image
Ganesh
Updated On
ಮುಂಬೈ ಇಂಡಿಯನ್ಸ್​ಗೆ ಶಾಕ್.. ರೋಹಿತ್​​ ಖರೀದಿಸಲು ಪ್ಲಾನ್ ರೆಡಿ ಎಂದ ಸ್ಟಾರ್ ಕೋಚ್..!
Advertisment
  • ಕುತೂಹಲ ಮೂಡಿಸಿದ IPL ರಿಟೈನ್​-ರಿಲೀಸ್​​ ಲೆಕ್ಕಾಚಾರ
  • ಮುಂಬೈನಿಂದ ಹೊರಬರಲು ರೆಡಿಯಾದ ರೋಹಿತ್
  • ಮೆಗಾ ಆಕ್ಷನ್​ನಲ್ಲಿ ನಡೆಯಲಿದೆ ಮೆಗಾ ಬಿಡ್ಡಿಂಗ್​ ವಾರ್

ಭಾರತೀಯ ಕ್ರಿಕೆಟ್​ ವಲಯದಲ್ಲೀಗ ಐಪಿಎಲ್​ನದ್ದೇ ಚರ್ಚೆ. ರಿಟೈನ್ಶನ್​ ಡೆಡ್​ ಲೈನ್​ ಹತ್ತಿರ ಬರ್ತಿದ್ದಂತೆ ಕ್ರಿಕೆಟ್​ ಲೋಕದ ಕುತೂಹಲದ ಕಣ್ಣು ಐಪಿಎಲ್​ ಮೇಲೆ ಬಿದ್ದಿದೆ. ಅಕ್ಟೋಬರ್​ 31ರ ಒಳಗೆ ಫ್ರಾಂಚೈಸಿಗಳು ರಿಟೈನ್ಡ್​ ಪ್ಲೇಯರ್ಸ್​ ಲಿಸ್ಟ್​ ಅನೌನ್ಸ್​ ಮಾಡಬೇಕಿದೆ. ಯಾವ ಫ್ರಾಂಚೈಸಿ ಯಾರನ್ನ ರಿಲೀಸ್ ಮಾಡುತ್ತೆ? ಯಾರನ್ನ ರಿಟೈನ್ ಮಾಡಿಕೊಳ್ಳುತ್ತೆ? ಅನ್ನೋದಕ್ಕಿಂತ ಸ್ಟಾರ್​ ಪ್ಲೇಯರ್​ ರೋಹಿತ್​ ಶರ್ಮಾ ಮುಂದಿನ ನಡೆಯೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

Advertisment

ಕುತೂಹಲ ಮೂಡಿಸಿದ IPL ರಿಟೈನ್​-ರಿಲೀಸ್​​ ಲೆಕ್ಕಾಚಾರ
ಮೆಗಾ ಹರಾಜಿಗೂ ಮುನ್ನ ಅಂಬಾನಿ ಬ್ರಿಗೆಡ್​ ರೋಹಿತ್​ನ ರಿಟೈನ್​ ಮಾಡಿಕೊಳ್ಳೋ ಸಾಧ್ಯತೆ ತೀರಾ ಕಡಿಮೆಯಿದೆ. ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ, ಸೂರ್ಯಕುಮಾರ್​ ಯಾದವ್​, ಜಸ್​ಪ್ರಿತ್​ ಬೂಮ್ರಾ ತಂಡದ ಟಾಪ್​​ 3 ಪ್ರಿಯಾರಿಟಿಯಾಗಿದ್ದಾರೆ. ಇವರ ಜೊತೆಗೆ ರೋಹಿತ್​ಗೆ ಕೋಟಿ ಕೋಟಿ ನೀಡಿ ರಿಟೈನ್​ ಮಾಡಿಕೊಳ್ಳೋದು ಡೌಟ್​.

ಇದನ್ನೂ ಓದಿ:ಹಾರ್ದಿಕ್​ ಪಾಂಡ್ಯಗೆ ಬಿಗ್​ ಶಾಕ್​ ಕೊಟ್ಟ ಮುಂಬೈ; ರೋಹಿತ್​ ಆಪ್ತನಿಗೆ ಮುಖ್ಯ ಕೋಚ್​​ ಪಟ್ಟ

ಕಳೆದ ಸೀಸನ್​ನಲ್ಲಿ ನಾಯಕತ್ವ ಕಸಿದುಕೊಂಡಾಗಲೇ ಮುಂಬೈ ಇಂಡಿಯನ್ಸ್​ ಫ್ರಾಂಚೈಸಿಯಿಂದ ರೋಹಿತ್​ ಒಂದು ಕಾಲು ಹೊರಗಿಟ್ಟಿದ್ರು. ಫ್ರಾಂಚೈಸಿ ಹಾಗೂ ರೋಹಿತ್​ ಸಂಬಂಧ ಹಳಸಿರಿರೋದು ಮತ್ತೆ ಮತ್ತೆ ಪ್ರೂವ್​ ಆಗ್ತಿದೆ. ಕೆಲ ದಿನಗಳ ಹಿಂದೆ ಮುಂಬೈ ಇಂಡಿಯನ್ಸ್​ ಆಫೀಸ್​​ನಲ್ಲಿ ರೋಹಿತ್​ ಶರ್ಮಾ ಕಾಣಿಸಿಕೊಂಡಿದ್ರು ನಿಜ. ಸ್ವಾಭಿಮಾನಿ ರೋಹಿತ್​ ಶರ್ಮಾ ಅವಮಾನವಾದ ಜಾಗದಲ್ಲಿ ಉಳಿಯೋದು ಅನುಮಾನವೇ.

Advertisment

ಮೆಗಾ ಆಕ್ಷನ್​ನಲ್ಲಿ ಮೆಗಾ ಬಿಡ್ಡಿಂಗ್​ ವಾರ್
ರೋಹಿತ್​ ಶರ್ಮಾ ಆಕ್ಷನ್​ಗೆ ಬಂದಿದ್ದೆ ಆದ್ರೆ ಬಿಡ್ಡಿಂಗ್​ ವಾರ್​ ಜೋರಾಗಿ ನಡೆಯಲಿದೆ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗೆ ರೈಟ್​ ಮ್ಯಾಚ್​​ ಕಾರ್ಡ್​​ ದಾಳವನ್ನ ಉರುಳಿಸೋ ಅವಕಾಶವೇ ಸಿಗಲ್ಲ. ರೋಹಿತ್​ ಮೇಲೆ ಕೋಟಿ ಕೋಟಿ ಸುರಿಯಲು ಹಲವು ಫ್ರಾಂಚೈಸಿಗಳು ಸಜ್ಜಾಗಿವೆ. ರೋಹಿತ್​ ಐಪಿಎಲ್​ ಇತಿಹಾಸದ ಮೋಸ್ಟ್​​ ಎಕ್ಸ್​ಪೆನ್ಸಿವ್​ ಪ್ಲೇಯರ್​ ಆಗೋ ಸಾಧ್ಯತೆಯನ್ನ ತಳ್ಳಿ ಹಾಕುವಂತಿಲ್ಲ.

ಇದನ್ನೂ ಓದಿ:ಬರ್ತ್​​ ಡೇ ದಿನವೂ ಹಾರ್ದಿಕ್​ಗೆ ಕಾಡಿತ್ತು ಬೇಸರ; ಸ್ಟಾರ್ ಯೂಟ್ಯೂಬರ್ ಜೊತೆ ನತಾಶಾ

ಹಿಟ್​ಮ್ಯಾನ್​ಗೆ ಗಾಳ ಹಾಕಲು RCB ಪ್ಲಾನ್
ಮುಂಬೈನ ರೋಹಿತ್​ ಶರ್ಮಾ ಮೇಲೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿಯೂ ಕಣ್ಣಿಟ್ಟಿದೆ. 5 ಟ್ರೋಫಿ ಗೆಲ್ಲಿಸಿಕೊಟ್ಟ ರೋಹಿತ್​, ಆರ್​​ಸಿಬಿ ಕಪ್​ ಬರ ನೀಗಿಸಬಹದು ಅನ್ನೋದು ಮೇಲ್ನೋಟದ ಲೆಕ್ಕಾಚಾರ. ಇನ್​ಸೈಡ್​ ಲೆಕ್ಕಾಚಾರ ಏನಪ್ಪಾ ಅಂದ್ರೆ ಕಮರ್ಷಿಯಲ್​ ಕಮಾಯ್​. ಟೀಮ್​ ಇಂಡಿಯಾದ ಸೂಪರ್​ ಸ್ಟಾರ್​ಗಳಾದ ವಿರಾಟ್​ ಕೊಹ್ಲಿ-ರೋಹಿತ್​ ಶರ್ಮಾ ಒಂದೇ ತಂಡದಲ್ಲಿದ್ರೆ ಆರ್​​ಸಿಬಿ ಜನಪ್ರಿಯತೆ ಹಾಗೂ ಆದಾಯ ಎರಡೂ ದುಪ್ಪಟ್ಟಾಗಲಿದೆ. ತಂಡಕ್ಕೂ ಒಳ್ಳೆ ಬ್ಯಾಲೆನ್ಸ್​ ಬರಲಿದೆ.

Advertisment

ಲಕ್ನೋ ಫ್ರಾಂಚೈಸಿ ಪಾಲಾಗ್ತಾರಾ ರೋಹಿತ್​?
ಕೆ.ಎಲ್​ ರಾಹುಲ್​ಗೆ ಕೊಕ್​ ಕೊಡಲು ಸಜ್ಜಾಗಿರೋ ಲಕ್ನೋ ಸೂಪರ್​ ಜೈಂಟ್ಸ್​ ಫ್ರಾಂಚೈಸಿ ಹೊಸ ನಾಯಕನ ಹುಡುಕಾಟದಲ್ಲಿದೆ. ಐಪಿಎಲ್​ನ ಸಕ್ಸಸ್​ಫುಲ್​ ಕ್ಯಾಪ್ಟನ್​ ರೋಹಿತ್​ ಶರ್ಮಾ ಕರೆ ತಂದು ಹೊಸ ತಂಡ ಕಟ್ಟೋ ಪ್ಲಾನ್​ ಲಕ್ನೋ ವಲಯದಲ್ಲಿ ಚರ್ಚೆಯಾಗ್ತಿದೆ. ಈಗಾಗಲೇ ಈ ವಿಚಾರವಾಗಿ ಫ್ರಾಂಚೈಸಿ ರೋಹಿತ್​ನ ಸಂಪರ್ಕಿಸಿರುವ ಸುದ್ದಿಯೂ ಹರಿದಾಡ್ತಿದೆ.

ಹಿಟ್​​ಮ್ಯಾನ್​ ಮೇಲಿದೆ ಪಂಜಾಬ್​ ಕಿಂಗ್ಸ್​​ ಕಣ್ಣು
ಹೊಸದಾಗಿ ತಂಡ ಕಟ್ಟಲು ಸಜ್ಜಾಗಿರೋ ಪಂಜಾಬ್​ ಕಿಂಗ್ಸ್​ ತಂಡ ಕೂಡ ರೋಹಿತ್​ ಶರ್ಮಾ ಮೇಲೆ ಕಣ್ಣಿಟ್ಟಿದೆ. 18 ಸೀಸನ್​ಗಳಿಂದ ಟ್ರೋಫಿ ಬರ ಎದುರಿಸಿರುವ ಪಂಜಾಬ್​ ತಂಡಕ್ಕೆ, ರೋಹಿತ್​ರಂತ ಅನುಭವಿಯ ಮಾರ್ಗದರ್ಶನದ ಅಗತ್ಯತೆ ಇದೆ. ತಂಡದ ನೂತನ ಹೆಡ್​ಕೋಚ್​ ರಿಕಿ ಪಾಂಟಿಂಗ್​ ಹಾಗೂ ರೋಹಿತ್​ ಶರ್ಮಾ ಈ ಹಿಂದೆ ಒಟ್ಟಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಪಂಟರ್ ಪಾಟಿಂಗ್​ ರೋಹಿತ್​ಗೆ ಖರೀದಿಗೆ ಒಲವು ತೋರೋ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ:ಬಾರ್ಡರ್-ಗವಾಸ್ಕರ್​ ಟೂರ್ನಿಗೆ ಕೈಕೊಟ್ಟ ರೋಹಿತ್ ಶರ್ಮಾ; ಕಾರಣ ರಿವೀಲ್..!

Advertisment

ಸನ್​ರೈಸರ್ಸ್​ ಹೈದ್ರಾಬಾದ್​, ಡೆಲ್ಲಿ ಕ್ಯಾಪಿಟಲ್ಸ್​ ಕೂಡ ರೋಹಿತ್​ ಖರೀದಿಗೆ ತೆರೆಮರೆಯ ಕಸರತ್ತು ಶುರುಮಾಡಿವೆ. ಒಟ್ಟಿನಲ್ಲಿ, ರೋಹಿತ್​ ಶರ್ಮಾ ಮೇಲೆ ಹರಾಜಿನ ಕಣದಲ್ಲಿ ಹಣದ ಹೊಳೆ ಹರಿಯೋದು ಕನ್​ಫರ್ಮ್​.. ಬಿಡ್ಡಿಂಗ್​ ವಾರ್​ನಲ್ಲಿ ಹಿಟ್​ಮ್ಯಾನ್​ ಯಾರ ಪಾಲಾಗ್ತಾರೆ? ಕಾದು ನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment