newsfirstkannada.com

ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು.. ಅಸಮಾಧಾನ ಹೊರ ಹಾಕಿದ ಕ್ಯಾಪ್ಟನ್​ ರೋಹಿತ್​ ಶರ್ಮಾ!

Share :

11-06-2023

    ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್​ ಪಂದ್ಯ

    ಆಸೀಸ್​​ ವಿರುದ್ಧ ಟೀಂ ಇಂಡಿಯಾಗೆ ಸೋಲು

    ಸೋಲಿನ ಬಳಿಕ ರೋಹಿತ್​ ಶರ್ಮಾ ಹೇಳಿದ್ದೇನು?

ಲಂಡನ್​​: ಇಂಗ್ಲೆಂಡ್​​ನ ಓವಲ್​​ ಇಂಟರ್​ ನ್ಯಾಷನಲ್​​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ವಿಶ್ವ ಟೆಸ್ಟ್​ ಚಾಂಪಿನ್​ಶಿಪ್​​ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ಹೀನಾಯ ಸೋಲಿನ ಬಳಿಕ ಮಾತಾಡಿದ ಟೀಂ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ, ಕೇವಲ ಒಂದೇ ಒಂದು ಪಂದ್ಯದಲ್ಲಿ ನಮ್ಮ ಸಾಮರ್ಥ್ಯ ಅಳಿಯಲು ಸಾಧ್ಯವಿಲ್ಲ ಎಂದರು.

ನಮ್ಮ ತಂಡ ಉತ್ತಮ ಪ್ರದರ್ಶನ ನೀಡಿದೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ನಲ್ಲಿ ಕನಿಷ್ಠ ಮೂರು ಪಂದ್ಯ ಇದ್ರೆ ಒಳ್ಳೆಯದು. ಕೇವಲ ಒಂದು ಪಂದ್ಯ ಗೆದ್ದ ತಂಡ ಚಾಂಪಿಯನ್​​ ಎಂದು ಹೇಳಲು ಆಗುವುದಿಲ್ಲ. ಇನ್ಮುಂದೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ರೀತಿಯ ಮಹತ್ವದ ಟೂರ್ನಿಗಳಲ್ಲಿ ಮೂರು ಪಂದ್ಯಗಳ ಇದ್ದರೆ ಉತ್ತಮ ಎಂದು ಅಸಮಾಧಾನ ಹೊರಹಾಕಿದ್ರು.

ಪಂದ್ಯದ ಸೋಲಿನ ಹೊಣೆ ನಾನು ಹೊರುತ್ತೇನೆ. ಐಪಿಎಲ್​ ಮುಗಿದ ಕೂಡಲೇ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ನಡೆಯಿತು. ಪ್ರಿಪರೇಷನ್​​​ಗೆ ನಮಗೆ ಟೈಮ್​​ ಸಿಗಲಿಲ್ಲ ಎಂದು ಹೇಳಿದ್ರು ರೋಹಿತ್​.

ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ಟೀಂ ಇಂಡಿಯಾದ ವಿರುದ್ಧ ಆಸ್ಟ್ರೇಲಿಯಾ ಗೆಲುವು ದಾಖಲಿಸಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡ ಚೊಚ್ಚಲ ಟೆಸ್ಟ್​ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಹೀಗಾಗಿ ಹೀನಾಯ ಸೋಲು ಕಂಡ ಕ್ಯಾಪ್ಟನ್​ ರೋಹಿತ್​ ಶರ್ಮಾ ನಾಯಕತ್ವದ ಟೀಂ ಇಂಡಿಯಾ ರನ್ನರ್​ ಅಪ್​ಗೆ ತೃಪ್ತಿಪಟ್ಟುಕೊಂಡಿದೆ.​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು.. ಅಸಮಾಧಾನ ಹೊರ ಹಾಕಿದ ಕ್ಯಾಪ್ಟನ್​ ರೋಹಿತ್​ ಶರ್ಮಾ!

https://newsfirstlive.com/wp-content/uploads/2023/06/Rohit-Sharma_1.jpg

Load More