newsfirstkannada.com

ಕೊಹ್ಲಿ ನಾಯಕತ್ವದಿಂದಲೇ ನಾವು ಇಂದು ಇಲ್ಲಿದ್ದೇವೆ- ಕ್ಯಾಪ್ಟನ್​​​ ರೋಹಿತ್​​ ಶರ್ಮಾ ಹೇಳಿದ್ದೇನು..?

Share :

06-06-2023

    ನಾಳೆಯಿಂದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​​ ಫೈನಲ್​​ ಪಂದ್ಯ

    ಫೈನಲ್​​ನಲ್ಲಿ ಟೀಂ ಇಂಡಿಯಾ, ಆಸ್ಟ್ರೇಲಿಯಾ ತಂಡ​ ಸೆಣಸಾಟ

    ಪಂದ್ಯಕ್ಕೆ ಮುನ್ನ ಕ್ಯಾಪ್ಟನ್​​ ರೋಹಿತ್​ ಶರ್ಮಾ ಹೇಳಿದ್ದೇನು..?

ಲಂಡನ್​​: ನಾಳೆಯಿಂದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ಶುರುವಾಗಲಿದೆ. ಫೈನಲ್​​ ಪಂದ್ಯದಲ್ಲಿ ಬಲಿಷ್ಠ ಕ್ರಿಕೆಟ್​​ ತಂಡಗಳಾದ ಟೀಂ ಇಂಡಿಯಾ, ಆಸ್ಟ್ರೇಲಿಯಾ ಮುಖಾಮುಖಿ ಆಗುತ್ತಿವೆ. ಪಂದ್ಯಕ್ಕೂ ಮುನ್ನ ಮಾತಾಡಿದ ಟೀಂ ಇಂಡಿಯಾದ ಕ್ಯಾಪ್ಟನ್​​ ರೋಹಿತ್​ ಶರ್ಮಾ, ಟೆಸ್ಟ್ ಮಾದರಿ ಕ್ರಿಕೆಟ್​​ನಲ್ಲೇ ದಿ ಬೆಸ್ಟ್​​ ಮಾದರಿ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಗೆಲುವೇ ನಮಗೆ ಎಲ್ಲದಕ್ಕಿಂತ ಮುಖ್ಯ ಎಂದರು.

ಟೆಸ್ಟ್​ ಕ್ರಿಕೆಟ್ ಆಡುವುದು​​ ಬಹಳ ಚಾಲೆಂಜಿಂಗ್. ನಾವು ಆಸ್ಟ್ರೇಲಿಯಾದ ವಿರುದ್ಧ ಗೆಲ್ಲಲೇಬೇಕು. ನನ್ನ ನಾಯಕತ್ವದಲ್ಲಿ ಭಾರತ ಕನಿಷ್ಠ 1-2 ಐಸಿಸಿ ಟ್ರೋಫಿಗಳನ್ನು ಗೆಲ್ಲುವ ವಿಶ್ವಾಸವಿದೆ. ಇದು ಬಹಳ ಕಠಿಣ ಪಂದ್ಯಾವಳಿ. ಇಲ್ಲಿ ಸ್ಥಾನ ಪಡೆಯಬೇಕಾದರೆ 2 ವರ್ಷಗಳ ಕಾಲ ಸ್ಥಿರವಾದ ಪ್ರದರ್ಶನ ನೀಡಿರಬೇಕು ಎಂದರು.
ಭಾರತ ಕೊಹ್ಲಿ ನಾಯಕತ್ವದಲ್ಲಿ ಈ ಹಿಂದೆ ಅತ್ಯುತ್ತಮ ಪ್ರದರ್ಶನ ನೀಡಿದೆ. ಹೀಗಾಗಿ ನಾವು ಇಂದು ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್​​ ಫೈನಲ್ಸ್​ ಆಡುತ್ತಿದ್ದೇವೆ. ನಾವು ಬೌಲಿಂಗ್​​, ಬ್ಯಾಟಿಂಗ್​​, ಫೀಲ್ಡಿಂಗ್​​ನಲ್ಲೂ ಉತ್ತಮ ಪ್ರದರ್ಶನ ನೀಡುತ್ತೇವೆ ಎಂದರು.

ಇತ್ತೀಚೆಗೆ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ತಂಡವನ್ನು 2-1 ಅಂತರದಿಂದ ಮಣಿಸಿ WTC ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಈಗ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಪಟ್ಟಕ್ಕಾಗಿ ಆಸ್ಟ್ರೇಲಿಯಾದ ವಿರುದ್ಧ ಟೀಂ ಇಂಡಿಯಾ ಗೆಲ್ಲಲೇಬೇಕಿದೆ.

 ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೊಹ್ಲಿ ನಾಯಕತ್ವದಿಂದಲೇ ನಾವು ಇಂದು ಇಲ್ಲಿದ್ದೇವೆ- ಕ್ಯಾಪ್ಟನ್​​​ ರೋಹಿತ್​​ ಶರ್ಮಾ ಹೇಳಿದ್ದೇನು..?

https://newsfirstlive.com/wp-content/uploads/2023/06/Kohli_Rohit.jpg

Load More