newsfirstkannada.com

ಪಬ್ಲಿಕ್​​​ನಲ್ಲಿ ಅದನ್ನೆಲ್ಲ ಹೇಳಲ್ಲ.. ಟೀಮ್ ಇಂಡಿಯಾದ ಸ್ಪಿನ್ನರ್ಸ್ ಬಗ್ಗೆ ಸೀಕ್ರೆಟ್​ ಬಿಟ್ಟುಕೊಟ್ಟಿರಲಿಲ್ಲ ರೋಹಿತ್ ಶರ್ಮಾ

Share :

Published June 29, 2024 at 1:47pm

  ನಿಜಕ್ಕೂ ವಿಶ್ವಕಪ್​ ತಂಡದಲ್ಲಿ ನಾಲ್ವರು ಸ್ಪಿನ್ನರ್ಸ್​ ಅಗತ್ಯವಿತ್ತಾ?

  ಟಿ20 ವಿಶ್ವಕಪ್ ಅಖಾಡದಲ್ಲಿ ಪ್ರೂವ್ ಆಯ್ತು ಹಿಟ್​ಮ್ಯಾನ್ ವಾದ

  ವರ್ಕ್​ ಆಯಿತು ನಾಯಕ ರೋಹಿತ್​ರ ಸ್ಪಿನ್ ಟು ವಿನ್ ತಂತ್ರ

ದಕ್ಷಿಣ ಆಫ್ರಿಕಾ ಚೊಚ್ಚಲ ಟಿ20 ವಿಶ್ವಕಪ್​​ ಕನವರಿಕೆಯಲ್ಲಿದೆ. ಕ್ಯಾಪ್ಟನ್​​ ರೋಹಿತ್​ ಆ ಒಂದು ಅಸ್ತ್ರದಿಂದ ಆಫ್ರಿಕಾ ಕನಸನ್ನ ನುಚ್ಚುನೂರಾಗಿಸಲು ಸಜ್ಜಾಗಿದ್ದಾರೆ. ಟೂರ್ನಿ ಆರಂಭದಿಂದ ಇಲ್ಲಿಯತನಕ ಹಿಟ್​ಮ್ಯಾನ್ ನಂಬಿದ ಆ ತಂತ್ರ ಕೈ ಕೊಟ್ಟಿದ್ದೇ ಇಲ್ಲ.

ಇದನ್ನೂ ಓದಿ: IND vs SA; ಹಿಟ್​​​ಮ್ಯಾನ್ ಇಂದಿನ ಬಿಗ್ ಮ್ಯಾಚ್​ ವಿನ್ನರ್.. ಇದಕ್ಕೆ ಅಸಲಿ ಕಾರಣ ಇಲ್ಲಿದೆ!

ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್​ ಶರ್ಮಾ ಯುಎಸ್​​ಗೆ ಫ್ಲೈಟ್ ಏರೋಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಏನ್ ಹೇಳಿದ್ದರು ಅಂದರೆ.. ನಾನು ಖಂಡಿತವಾಗಿ 4 ಸ್ಪಿನ್ನರ್ಸ್​ ಇರಬೇಕೆಂದು ಬಯಸುತ್ತೇನೆ. ನಾವಲ್ಲಿ (ವೆಸ್ಟ್​​ ವಿಂಡೀಸ್) ಸಾಕಷ್ಟು ಪಂದ್ಯಗಳನ್ನು ಆಡಿದ್ದೇವೆ. ಕಂಡಿಷನ್ಸ್ ಚೆನ್ನಾಗಿ ಗೊತ್ತಿದೆ. ಬೆಳಗ್ಗೆ 10 ಅಥವಾ 10.30ಕ್ಕೆ ಪಂದ್ಯ ಆರಂಭಗೊಳ್ಳುತ್ತದೆ. ನಾಲ್ಕು ಜನ ಸ್ಪಿನ್ನರ್ಸ್​ ಆಯ್ಕೆಯ ಹಿಂದೆ ಒಂದು ಕಾರಣ ಇದೆ. ಪಬ್ಲಿಕ್​​​ನಲ್ಲಿ ನಾನೀಗ ಅದನ್ನು ಹೇಳುವುದಿಲ್ಲ. ಅಲ್ಲಿ ಹೋದ ಬಳಿಕ ಹೇಳುತ್ತೇನೆ ಎಂದಿದ್ದರು ರೋಹಿತ್ ಶರ್ಮಾ.

ಇದನ್ನೂ ಓದಿ: IND vs SA; ಆಫ್ರಿಕಾದ ಲಕ್ಕಿ ಕ್ಯಾಪ್ಟನ್​.. ನಾಯಕನಾಗಿ ಮಾಕ್ರಮ್ ಸೋತ ಇತಿಹಾಸವೇ ಇಲ್ಲ..! ರೋಚಕ ಜರ್ನಿ

ರೋಹಿತ್​ರ ಈ ಮಾತನ್ನು ಕೇಳಿ ಹಲವರು ವಿರೋಧಿಸಿದ್ರು. ನಿಜಕ್ಕೂ ವಿಶ್ವಕಪ್​ ತಂಡದಲ್ಲಿ ನಾಲ್ವರು ಸ್ಪಿನ್ನರ್ಸ್​ ಅಗತ್ಯವಿದೆಯಾ ಅನ್ನೋ ಪ್ರಶ್ನೆ ಹುಟ್ಟುಕೊಂಡಿತ್ತು. ಆದ್ರೀಗ ಆ ಪ್ರಶ್ನೆಗೆ ಕ್ಲಿಯರ್​ ಕಟ್ಟಾಗಿ ಆನ್ಸರ್ ಸಿಕ್ಕಿದೆ. ಹಿಟ್​ಮ್ಯಾನ್​​​ ನಾಲ್ವರು ಸ್ಪಿನ್ನರ್ಸ್​ಗೆ ಮಣೆ ಹಾಕಿದ್ದೇಕೆ ಅನ್ನೋ ಅಸಲಿ ಸತ್ಯ ಟಿ20 ವಿಶ್ವಕಪ್ ಅಖಾಡದಲ್ಲಿ ಪ್ರೂವ್ ಆಗಿದೆ.

ವಿಶ್ವಕಪ್​​​ ಅಖಾಡದಲ್ಲಿ ಭಾರತೀಯ ಸ್ಪಿನ್ನರ್ಸ್​ ದರ್ಬಾರ್​​..!

ಸ್ಪಿನ್ ಟು ವಿನ್​​​..! ಕ್ಯಾಪ್ಟನ್ ರೋಹಿತ್ ಶರ್ಮಾರ ನಾಲ್ವರ ಸ್ಪಿನ್ನರ್​ಗಳ ಆಯ್ಕೆ ಹಿಂದಿನ ಅಜೆಂಡಾವೆ ಇದೇ ಆಗಿತ್ತು. ಹಿಟ್​ಮ್ಯಾನ್​​ ತಂತ್ರ ವಿಶ್ವಕಪ್ ರಣರಂಗದಲ್ಲಿ ವರ್ಕ್​ ಆಗಿದೆ. ಇಂಡಿಯನ್ ಸ್ಪಿನ್ನರ್ಸ್​ ಚುಟುಕು ದಂಗಲ್​​ನಲ್ಲಿ ಚಮತ್ಕಾರ ನಡೆಸಿ ವಿಕೆಟ್ ಸರಮಾಲೆಯನ್ನು ಕಟ್ಟಿದ್ದಾರೆ.

T20 WC ನಲ್ಲಿ ಸ್ಪಿನ್ನರ್ಸ್​

ಪ್ರಸಕ್ತ ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್ಸ್​ ಒಟ್ಟು 47 ಓವರ್ಸ್​ ಬೌಲಿಂಗ್ ಮಾಡಿದ್ದಾರೆ. ಆ ಪೈಕಿ 19 ವಿಕೆಟ್​ ಪಡೆದು ಸೈ ಅನ್ನಿಸಿಕೊಂಡಿದ್ದಾರೆ. 5.96 ಬೌಲಿಂಗ್ ಎಕಾನಮಿ ಕಾಯ್ದುಕೊಂಡಿದ್ದಾರೆ.

ಚೈನಾಮ್ಯಾನ್ ಕುಲ್​​​ದೀಪ್​​ ರಗಢ್​ ಪರ್ಫಾಮೆನ್ಸ್​​

2024ರ ಟಿ20 ವಿಶ್ವಕಪ್​ನಲ್ಲಿ ಕುಲ್ದೀಪ್​ ಯಾದವ್ ಸ್ಪಿನ್​​​​ ಮೋಡಿಯಿಂದ ಎಲ್ಲರನ್ನೂ ಮಂತ್ರ ಮುಗ್ದರನ್ನಾಗಿಸಿದ್ದಾರೆ. ಸಿಕ್ಕಿದ್ದು ಕೆಲವೇ ಕೆಲವು ಅವಕಾಶ. ಮಾಡಿದ ಇಂಪ್ಯಾಕ್ಟ್ ಮಾತ್ರ ದೊಡ್ಡದಿದೆ. 4 ಇನ್ನಿಂಗ್ಸ್​ಗಳಿಂದ 10 ವಿಕೆಟ್ ಕಬಳಿಸಿ ತಂಡದ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

ಇದನ್ನೂ ಓದಿ: ಲಡಾಖ್​​ನಲ್ಲಿ ಭಾರೀ ಅನಾಹುತ.. ಐವರು ಯೋಧರ ದಾರುಣ ಸಾವು.. ಆಗಿದ್ದೇನು..?

ಅಕ್ಷರ್ ದಾಳಿಗಿಳಿದ್ರೆ ಬ್ಯಾಟರ್ ಕತೆ​ ಖೇಲ್ ಖತಂ

4 ಸ್ಪಿನ್ನರ್ಸ್​ ಪೈಕಿ ಅಕ್ಷರ್ ಪಟೇಲ್ ಕೂಡ ಪ್ರಸಕ್ತ ವಿಶ್ವಕಪ್​ನಲ್ಲಿ ಧೂಳೆಬ್ಬಿಸಿದ್ದಾರೆ. ಪವರ್​ಪ್ಲೇ ಹಾಗೂ ಮಿಡಲ್ ಓವರ್ಸ್​​ನಲ್ಲಿ​ ಕೈಗೆ ಚೆಂಡು ನೀಡಲಿ ವಿಕೆಟ್​​​​​ ಬೇಟೆ ಮಿಸ್ಸೇ ಆಗಲ್ಲ. ಟೂರ್ನಮೆಂಟ್​ನಲ್ಲಿ 7 ಪಂದ್ಯವಾಡಿರೋ ಅಕ್ಷರ್​ 8 ವಿಕೆಟ್ ಪಡೆದು ಗೆಲುವಿನ ಪ್ರಮುಖ ಪಾತ್ರ ವಹಿಸ್ತಿದ್ದಾರೆ. ಮೂರನೇ ಸ್ಪಿನ್ನರ್​​​​ ರವೀಂದ್ರ ಜಡೇಜಾ ಹೆಚ್ಚೇನೂ ಇಂಪ್ರೆಸ್ಸಿವ್​​​​ ಪರ್ಫಾಮೆನ್ಸ್ ನೀಡಿಲ್ಲ ನಿಜ. ರನ್​ಗೆ ಕಡಿವಾಣ ಹಾಕ್ತಿದ್ದಾರೆ. ಆ ಎದುರಾಳಿ ಪಡೆಯನ್ನು ಒತ್ತಡಕ್ಕೆ ಸಿಲುಕಿಸ್ತಿದ್ದಾರೆ. ಅಲ್ಲಿಗೆ ಕ್ಯಾಪ್ಟನ್ ರೋಹಿತ್​​​ ಆಯ್ಕೆ ಮಾಡಿದ ನಾಲ್ವರು ಸ್ಪಿನ್ನರ್ಸ್​ ಪೈಕಿ ಮೂವರು ಸ್ಪಿನ್ನರ್ಸ್​ ಮಿಂಚು ಹರಿಸಿದ್ದಾರೆ. ಯುಜವೇಂದ್ರ ಚಹಲ್​ಗೆ ಮಾತ್ರ ಇದುವರೆಗೆ ಅವಕಾಶ ಸಿಕ್ಕಿಲ್ಲ.

ಇದನ್ನೂ ಓದಿ: ಜಸ್ಟ್​ ಗುರಾಯಿಸಿದ್ಕೆ.. ಬಿಯರ್ ಬಾಟಲ್​ಗಳಿಂದ ತಲೆಗೆ ಹೊಡೆದು ವ್ಯಕ್ತಿಯ ಭೀಕರ ಕೊಲೆ

ಕ್ಯಾಪ್ಟನ್ ರೋಹಿತ್​​​ ನಾಲ್ವರು ಸ್ಪಿನ್ನರ್​​ಗಳನ್ನ ಆಯ್ಕೆ ಮಾಡಿ ಸಕ್ಸಸ್​ ಕಂಡಿದ್ದಾರೆ. ಇಂದಿನ ಫೈನಲ್ ವಾರ್​​ನಲ್ಲೂ ಸ್ಪಿನ್ನರ್ಸ್​ ಮ್ಯಾಜಿಕ್​ ಮಾಡಲಿ. ಭಾರತ ವಿಶ್ವಕಪ್​ ಎತ್ತಿ ಹಿಡಿದು ಟಿ20 ಕ್ರಿಕೆಟ್​ನ ಅಧಿಪತಿಯಾಗಿ ಮೆರೆದಾಡಲಿ ಅನ್ನೋದು ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆಯಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಪಬ್ಲಿಕ್​​​ನಲ್ಲಿ ಅದನ್ನೆಲ್ಲ ಹೇಳಲ್ಲ.. ಟೀಮ್ ಇಂಡಿಯಾದ ಸ್ಪಿನ್ನರ್ಸ್ ಬಗ್ಗೆ ಸೀಕ್ರೆಟ್​ ಬಿಟ್ಟುಕೊಟ್ಟಿರಲಿಲ್ಲ ರೋಹಿತ್ ಶರ್ಮಾ

https://newsfirstlive.com/wp-content/uploads/2024/06/ROHIT_SHARMA_MIC.jpg

Load More