newsfirstkannada.com

ವಿಶ್ವಕಪ್ ಆಡುವ ಕನಸು ಕಾಣ್ತಿರುವ ಯುವ ಆಟಗಾರರಿಗೆ ಆತಂಕ ತರುವ ಹೇಳಿಕೆ ಕೊಟ್ಟ ರೋಹಿತ್ ಶರ್ಮಾ

Share :

13-08-2023

  ಇಲ್ಲಿ ಯಾರ ಸ್ಥಾನವೂ ಗ್ಯಾರಂಟಿ ಇಲ್ಲ ಎಂದ ಕ್ಯಾಪ್ಟನ್

  ಕ್ಯಾಪ್ಟನ್ ಹೇಳಿಕೆ ಬೆನ್ನಲ್ಲೇ ಕೆಲವರಿಗೆ ಭಯ ಶುರು

  ಅಕ್ಟೋಬರ್ 5 ರಿಂದ ಏಕದಿನ ವಿಶ್ವಕಪ್ ಪಂದ್ಯ

ಏಕದಿನ ವಿಶ್ವಕಪ್ ಆಯ್ಕೆಯ ಕನಸು ಕಾಣುತ್ತಿದ್ದ ಸಹ ಆಟಗಾರರ ಕನಸಿಗೆ ನಾಯಕ ರೋಹಿತ್ ಶರ್ಮಾ ತುಪ್ಪ ಸುರಿದಿದ್ದಾರೆ. ಜೊತೆಗೆ ಆತಂಕ ಕೂಡ ಹುಟ್ಟಿಸಿದ್ದಾರೆ. ಹೌದು, ಅಕ್ಟೋಬರ್ 5 ರಿಂದ ವಿಶ್ವಕಪ್ ಫೆಸ್ಟಿವಲ್ ಶುರುವಾಗಲಿದೆ.

ಈ ಹಿನ್ನೆಲೆಯಲ್ಲಿ ತಂಡದಲ್ಲಿ ಯಾರೆಲ್ಲ ಇರಲಿದ್ದಾರೆ ಅನ್ನೋದ್ರ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ತಂಡದ ಆಯ್ಕೆ ಹೇಗಿರುತ್ತೆ? ಯಾವರೆಲ್ಲ ಹಿರಿಯ ಆಟಗಾರರಿಗೆ ವಿಶ್ವಕಪ್ ಟಿಕೆಟ್ ಸಿಗುತ್ತೆ? ಹಿರಿಯರ ಜೊತೆ ಕಿರಿಯ ಆಟಗಾರರೂ ಇರುತ್ತಾರಾ? ಇಲ್ಲ ಈ ಬಾರಿ ಕಿರಿಯ ಆಟಗಾರರೇ ತಂಡದಲ್ಲಿ ಹೆಚ್ಚಾಗಿ ಇರುತ್ತಾರಾ? ಹೀಗೇ ಹಲವು ಚರ್ಚೆಗಳು ನಡೆಯುತ್ತಿವೆ. ಇದರ ಜೊತೆಗೆ ಕೆಲವು ಯುವ ಆಟಗಾರರು ಕೂಡ ವಿಶ್ವಕಪ್ ಆಡುವ ಕನಸ್ಸನ್ನು ಕಾಣುತ್ತಿದ್ದಾರೆ.

ಏಕದಿನ ವಿಶ್ವಕಪ್ ತಂಡದ ಆಯ್ಕೆಯ ಬಗ್ಗೆ ಮಾತನಾಡಿರುವ ನಾಯಕ ರೋಹಿತ್​ ಶರ್ಮಾ, ಯಾರ ಸ್ಥಾನಕ್ಕೂ ಗ್ಯಾರಂಟಿ ಇಲ್ಲ. ಇದರಿಂದ ನಾನೂ ಕೂಡ ಹೊರತಾಗಿಲ್ಲ. ಯಾರ ಸ್ಥಾನವೂ ಇಲ್ಲಿ ಭದ್ರ ಎಂದು ಹೇಳಲು ಅಸಾಧ್ಯ ಎಂದಿರುವ ನಾಯಕ ರೋಹಿತ್ ಶರ್ಮಾ, ಉತ್ತಮ ಆಟಗಾರರಿಗಾಗಿ ಎದುರು ನೋಡುತ್ತಿರುವ ಸಂದೇಶ ರವಾನಿಸಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

ವಿಶ್ವಕಪ್ ಆಡುವ ಕನಸು ಕಾಣ್ತಿರುವ ಯುವ ಆಟಗಾರರಿಗೆ ಆತಂಕ ತರುವ ಹೇಳಿಕೆ ಕೊಟ್ಟ ರೋಹಿತ್ ಶರ್ಮಾ

https://newsfirstlive.com/wp-content/uploads/2023/06/Dravid_Rohit-2.jpg

Load More