ದೈತ್ಯ ಕ್ರಿಸ್ ಗೇಲ್ಗೆ ಪಂಚ್ ಕೊಡಲು ಹಿಟ್ಮ್ಯಾನ್ ರೆಡಿ
ಏಷ್ಯಾಕಪ್ನಲ್ಲಿ ನನಸಾಗುತ್ತಾ ಮುಂಬೈಕರ್ ಮಹಾದಾಸೆ..?
ರೋಹಿತ್ ಕಣ್ಣಿಟ್ಟಿರೋ ಆ ಬಿಗ್ ರೆಕಾರ್ಡ್ ಯಾವುದು..?
ದಾಖಲೆಗಳ ವಿಚಾರದಲ್ಲಿ ರೋಹಿತ್ ಶರ್ಮಾ ಒಂದೇ ಹೆಜ್ಜೆ ಮುಂದೆ ಇರ್ತಾರೆ. ಲೆಕ್ಕವಿಲ್ಲದಷ್ಟು ರೆಕಾರ್ಡ್ಸ್ ಹಿಟ್ಮ್ಯಾನ್ ಹೆಸರಿನಲ್ಲಿವೆ. ಇಷ್ಟಾದ್ರು ರೋಹಿತ್ಗೆ ದಾಖಲೆಗಳ ಮೇಲಿನ ದಾಹ ಮಾತ್ರ ಕಮ್ಮಿ ಆಗಿಲ್ಲ. ಈಗ ಯಾರೂ ಮಾಡಿರದ ವಿಶ್ವ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ.
ರೋಹಿತ್ ಶರ್ಮಾ..! ಆಟದ ವಿಚಾರಕ್ಕೆ ಹಿಟ್ಮ್ಯಾನ್ ವೆರಿ ಡೇಂಜರಸ್. ಅಂದೆಂಥಾ ಬೌಲರ್ ಆಗಿರಲಿ, ಕಂಡೀಷನ್ ಯಾವುದೇ ಆಗಿರಲಿ. ರೋಹಿತ್ ರೋರಿಂಗ್ ನಡೆಯೊದು ಪಕ್ಕಾ. ಒಟ್ಟಾರೆ 446 ಪಂದ್ಯ, 17,452 ರನ್ ಮುಂಬೈಕರ್ ಆರ್ಭಟಕ್ಕೆ ಹಿಡಿದ ಕೈಗನ್ನಡಿ. ಸಾಲದೆಂಬಂತೆ 3 ವಿಶ್ವದಾಖಲೆಯ ದ್ವಿಶತಕ. ಲೆಕ್ಕವಿಲ್ಲದಷ್ಟು ದಾಖಲೆ. ಓರ್ವ ಸಕ್ಸಸ್ಫುಲ್ ಕ್ರಿಕೆಟರ್ಗೆ ಇದಕ್ಕಿಂತಾ ಇನ್ನೇನು ಬೇಕು ಹೇಳಿ? ಆದ್ರೆ, ಇಷ್ಟೆಲ್ಲಾ ಸಾಧಿಸಿ ಜಗಮಗಿಸಿದ್ರು, ರೋಹಿತ್ರಲ್ಲಿ ಸಾಧನೆ ಹಸಿವು ಮಾತ್ರ ಇನ್ನೂ ಕಮ್ಮಿಯಾಗಿಲ್ಲ. ಆ ಒಂದು ವಿಶ್ವದಾಖಲೆಗಾಗಿ ಮುಂಬೈಕರ್ ಮನಸು ಈಗಲೂ ಹಪಾಹಪಿಸ್ತಿದೆ.
‘ಸಿಕ್ಸರ್ ಕಿಂಗ್’ ಪಟ್ಟದ ಮೇಲೆ ರೋಹಿತ್ ಕಣ್ಣು..!
ಸಿಕ್ಸ್.. ಈ ಪದ ಕೇಳಿದ್ರೆ ಸಾಕು ದೈತ್ಯ ಕ್ರಿಸ್ಗೇಲ್ ಥಟ್ಟನೇ ನೆನಪಾಗ್ತಾರೆ. ಸಿಕ್ಸ್ ಬಾರಿಸೋ ವಿಚಾರಕ್ಕೆ ಬಂದ್ರೆ ಯೂನಿವರ್ಸಲ್ ಬಾಸ್ರನ್ನ ಮೀರಿಸೋರೆ ಇಲ್ಲ. ಡೆಡ್ಲಿ ಬ್ಯಾಟರ್ನಿಂದ ಸಿಡಿಯುವ ಸಿಕ್ಸ್ಗಾಗಿಯೇ ಅಭಿಮಾನಿಗಳ ಸಮೂಹವೇ ಹುಟ್ಟಿಕೊಂಡಿತ್ತು. ನಿಜಕ್ಕೂ ಗೇಲ್, ಜಂಟಲ್ಮ್ಯಾನ್ ಗೇಮನ್ನ ರಿಯಲ್ ಸಿಕ್ಸರ್ ಪಂಟರ್.!
ಈಗ ಈ ಸಿಕ್ಸರ್ ಸುಲ್ತಾನ್ಗೆ ಮಾಂಜ ಕೊಡಲು ಡಬಲ್ ಸೆಂಚುರಿ ಸ್ಪೆಶಲಿಸ್ಟ್ ರೋಹಿತ್ ಸಜ್ಜಾಗಿದ್ದಾರೆ. ಸಿಕ್ಸರ್ಗೇ ನಾನೇ ರಾಜ, ನನ್ನನ್ನ ಓಟರ್ ಟೇಕ್ ಮಾಡೋರೆ ಇಲ್ಲ ಅಂತ ಬೀಗ್ತಿದ್ದ ಗೇಲ್ ಸಿಕ್ಸ್ ಸಾಮ್ರಾಜ್ಯ ಸದ್ಯದಲ್ಲೇ ಪತನವಾಗೋದು ಗ್ಯಾರಂಟಿ. ಲೆಜೆಂಡ್ರಿ ರೋಹಿತ್, ಗೇಲ್ ಟೆರಿಟರಿಯನ್ನ ಕಬ್ಜಾ ಮಾಡಲು ಹೊರಟಿದ್ದಾರೆ.
14 ಸಿಕ್ಸ್ ಸಿಡಿಸಿದ್ರೆ ರೋಹಿತ್ ‘ಸಿಕ್ಸರ್ ಕಿಂಗ್’
ಮನಮೋಹಕ ಸಿಕ್ಸ್ ಸಿಡಿಸೋದಕ್ಕೆ ಹೆಸರುವಾಸಿಯಾದ ರೋಹಿತ್ ಈಗ ವಿಶ್ವದಾಖಲೆಯ ಸನಿಹದಲ್ಲಿದ್ದಾರೆ. ಇನ್ನೂ ಜಸ್ಟ್ 14 ಸಿಕ್ಸರ್ ಹೊಡೆದು ಬಿಟ್ರೆ ಮೂರು ಮಾದರಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಹೊಡೆದ ವಿಶ್ವದ ಮೊದಲಿಗ ಅನ್ನಿಸಿಕೊಳ್ಳಲಿದ್ದಾರೆ. ಡಬಲ್ ಸೆಂಚುರಿ ಸ್ಪೆಷಲಿಸ್ಟ್ ಜೊತೆ ಸಿಕ್ಸರ್ ಕಿಂಗ್ ಅನ್ನೋ ಪಟ್ಟವೂ ರೋಹಿತ್ಗೆ ದಕ್ಕಲಿದೆ.
ಮಾದರಿಯಲ್ಲಿ ಅತಿ ಹೆಚ್ಚು ಸಿಕ್ಸರ್
ವೈಸ್ ಇಂಡೀಸ್ ತಂಡದ ಕ್ರಿಸ್ ಗೇಲ್ ಮೂರು ಮಾದರಿ ಕ್ರಿಕೆಟ್ನಲ್ಲಿ ಆಡಿದ 483 ಪಂದ್ಯಗಳಿಂದ 553 ಸಿಕ್ಸ್ ಸಿಡಿಸಿ ಅಗ್ರಸ್ಥಾನದಲ್ಲಿದ್ದಾರೆ. ಇನ್ನು ರೋಹಿತ್ ಶರ್ಮಾ 446 ಪಂದ್ಯಗಳಿಂದ 539 ಸಿಕ್ಸ್ ಬಾರಿಸಿ ಗೇಲ್ ನಂತರದ ಸ್ಥಾನದಲ್ಲಿದ್ದಾರೆ.
ಏಷ್ಯಾಕಪ್ ನಲ್ಲೇ ಸಿಕ್ಸರ್ ಕಿಂಗ್ ಪಟ್ಟ ಒಲಿಯುತ್ತಾ..?
ಏಷ್ಯಾಕಪ್ ಸೂಪರ್-4 ಹಂತಕ್ಕೆ ಪ್ರವೇಶಿಸಿರೋ ಭಾರತ ತಂಡ 3 ಪಂದ್ಯಗಳನ್ನ ಆಡಲಿದೆ. ಒಂದು ವೇಳೆ ಫೈನಲ್ ಆಡಿದ್ರೆ ಆ ಸಂಖ್ಯೆ 4ಕ್ಕೇರಲಿದೆ. ರೋಹಿತ್ ಮನಸ್ಸು ಮಾಡಿದ್ರೆ, ಏಷ್ಯಾಕಪ್ನಲ್ಲಿ 14 ಸಿಕ್ಸ್ ಸಿಡಿಸಿ ಸಿಕ್ಸರ್ ರಾಜ ಅನ್ನಿಸಿಕೊಳ್ಳಬಹುದು. ಒಂದು ವೇಳೆ ಆಗದಿದ್ರೆ ಆಸಿಸ್ ವಿರುದ್ಧ ಏಕದಿನ ಸರಣಿಯಲ್ಲಿ ಈ ಸಾಧನೆ ನಿರ್ಮಿಸುವ ನಿರೀಕ್ಷೆ ಇದೆ.
ಯುನಿಕ್ ಸಾಧನೆಗೆ ದ್ವಿಶತಕ ಸರದಾರ ಉತ್ಸುಕ
ಇನ್ನು ಗೇಲ್ ದಾಖಲೆ ಮುರಿಯುವ ಸನಿಹದಲ್ಲಿರೋ ರೋಹಿತ್ ಶರ್ಮಾ ಆ ಬಗ್ಗೆ ಉತ್ಸುಕ ರಾಗಿದ್ದಾರೆ. ಇಷ್ಟೇ ಅಲ್ಲ.. ನಿಜಕ್ಕೂ ಇದೊಂದು ವಿಭಿನ್ನ ರೆಕಾರ್ಡ್ ಆಗಿರಲಿದೆ ಎಂದು ಹೇಳಿಕೊಂಡಿದ್ದಾರೆ.
ಇದೊಂದು ವಿಭಿನ್ನ ರೆಕಾರ್ಡ್ ಆಗಿರಲಿದೆ. ಯಾಕಂದ್ರೆ ನಾನು ಕ್ರಿಸ್ ಗೇಲ್ರ ಸಿಕ್ಸ್ ರೆಕಾರ್ಡ್ ಮುರಿಯುತ್ತೇನೆ ಎಂದು ಕನಸಲ್ಲೂ ಯೋಚಿಸಿರಲಿಲ್ಲ. ನಿಜಕ್ಕೂ ಇದು ಫನ್ನಿಯಾಗಿರಲಿದೆ ಎಂದರು ರೋಹಿತ್ ಶರ್ಮಾ.
ಇನ್ನು ಗೇಲ್ ತೋಳ್ಬಲ ತಾಕತ್ತಿನಿಂದಲೇ ಮನಮೋಹಕ ಸಿಕ್ಸರ್ ಸಿಡಿಸುತ್ತಿದ್ದರು. ಆದ್ರೆ ಹಿಟ್ಮ್ಯಾನ್ಗೆ ಸ್ಟ್ರಾಂಗ್ ಮಸಲ್ ಇಲ್ಲ. ಆದರೂ ಇದು ಸಾಧ್ಯವಾಗಿದ್ದೇಗೆ ಅನ್ನೊದನ್ನ ಹಿಟ್ಮ್ಯಾನ್ ಬಾಯಲ್ಲೆ ಕೇಳಿ.
ನಾನು ಬಲಿಷ್ಠ ತೋಳುಗಳನ್ನ ಹೊಂದಿಲ್ಲ. ಆದರೆ ಬಾಲ್ ನೋಡಿ ಹೊಡೆಯಲು ಇಷ್ಟಪಡುತ್ತೇನೆ. ಕ್ರಿಕೆಟ್ ಆರಂಭದಲ್ಲಿ ನನ್ನ ಕೋಚ್ ಸಮಯ ತುಂಬಾ ಮಹತ್ವ ಎಂದು ಹೇಳುತ್ತಿದ್ದರು. ಅದನ್ನ ಫಾಲೋ ಮಾಡಿದೆ ಎಂದರು ರೋಹಿತ್.
ಎನಿವೇ ಹಿಟ್ಮ್ಯಾನ್ ರೋಹಿತ್ ಸದ್ಯ ಯುನಿಕ್ ರೆಕಾರ್ಡ್ ಸನಿಹದಲ್ಲಿದ್ದಾರೆ. ಕೆಲವೇ ದಿನಗಳಲ್ಲಿ ಆ ದಾಖಲೆಯನ್ನ ಕಬ್ಜಾ ಮಾಡೋದ್ರಲ್ಲೂ ಯಾವುದೆ ಅನುಮಾನವೇ ಬೇಡ. ಆದಷ್ಟು ಬೇಗನೆ 14 ಸಿಕ್ಸರ್ ಸಿಡಿಸಲಿ. ವಿಶ್ವ ಕ್ರಿಕೆಟ್ನ ಸಿಕ್ಸರ್ ಕಿಂಗ್ ಆಗಿ ಮೆರೆದಾಡುವಂತಾಗಲಿ ಅನ್ನೋದೆ ಅಭಿಮಾನಿಗಳ ಆಶಯ.