Advertisment

ಹಾರ್ದಿಕ್​​ ಟ್ರೇಡಿಂಗ್​​ಗೆ ರೋಹಿತ್​ ಶರ್ಮಾರಿಂದಲೇ ಭಾರೀ ವಿರೋಧ.. ಇಬ್ಬರ ಫೈಟ್​​ಗೆ ಕಾರಣವೇನು..?

author-image
Ganesh Nachikethu
Updated On
ಪಾಂಡ್ಯ ಬಂದ ಬೆನ್ನಲ್ಲೇ MIನಲ್ಲಿ ಎಲ್ಲವೂ ಉಲ್ಟಾ-ಪಲ್ಟಾ; ಬೇರೆ ತಂಡದ ಜೊತೆ ಬುಮ್ರಾ ಬಿಗ್ ಡೀಲ್..!?
Advertisment
  • ಹಾರ್ದಿಕ್​​ ಪಾಂಡ್ಯ ಟ್ರೇಡಿಂಗ್​​ಗೆ ರೋಹಿತ್​ ಶರ್ಮಾ ವಿರೋಧ
  • ಮುಂಬೈ ಇಂಡಿಯನ್ಸ್​​​ ಕ್ಯಾಪ್ಟನ್​ ರೋಹಿತ್​ ವಿರೋಧಕ್ಕೆ ಕಾರಣವೇನು?
  • ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್​ ಮೈಕ್​ ಹಸ್ಸಿಯಿಂದ ಡ್ರಾಮಾ ರಿವೀಲ್​​!

ಏಕದಿನ ವಿಶ್ವಕಪ್​​ ಬೆನ್ನಲ್ಲೇ 2024ರ ಇಂಡಿಯನ್​ ಪ್ರೀಮಿಯರ್​​ ಲೀಗ್​ ಸೀಸನ್ ಫೀವರ್​​ ಶುರುವಾಗಿದೆ. ಮುಂದಿನ ವರ್ಷ ಮಾರ್ಚ್​​​ ತಿಂಗಳಲ್ಲಿ ನಡೆಯಲಿರೋ ಈ ಐಪಿಎಲ್​​ ಸೀಸನ್​​ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಈ ಬಾರಿ ಹೇಗಾದ್ರೂ ಮಾಡಿ ಐಪಿಎಲ್​​ ಕಪ್​ ಗೆಲ್ಲಲೇಬೇಕು ಎಂದು ಎಲ್ಲಾ ತಂಡಗಳು ಪಣತೊಟ್ಟಿವೆ.

Advertisment

ಇದಕ್ಕೂ ಮುನ್ನ ಮಿನಿ ಐಪಿಎಲ್​​ ಹರಾಜು ನಡೆಯಲಿದೆ. ಹರಾಜಿನಲ್ಲಿ ಬಲಿಷ್ಠ ಆಟಗಾರರನ್ನು ಖರೀದಿ ಮಾಡಲು ಐಪಿಎಲ್​​ ಫ್ರಾಂಚೈಸಿಗಳು ಮುಂದಾಗಿವೆ. ಈ ಮಧ್ಯೆ ಎಲ್ಲಾ ತಮಗೆ ಬೇಕಾದ ಆಟಗಾರರನ್ನು ರೀಟೈನ್​ ಮಾಡಿಕೊಂಡಿವೆ. ಅಲ್ಲದೇ ರೀಟೈನ್​ ಜತೆಗೆ ಟ್ರೇಡಿಂಗ್​ ಕೂಡ ಜೋರಾಗಿದೆ.

ಇನ್ನು, ಹಾರ್ದಿಕ್​​ ಪಾಂಡ್ಯ ಟ್ರೇಡಿಂಗ್​ ವಿಚಾರವಾಗಿ ಕ್ಯಾಪ್ಟನ್​ ರೋಹಿತ್​ ಶರ್ಮಾ ಅವರೊಂದಿಗೆ ಮುಂಬೈ ಇಂಡಿಯನ್ಸ್​ ತಂಡವು ಮಾತುಕತೆ ನಡೆಸಿತ್ತು. ಈ ವೇಳೆ ಹಾರ್ದಿಕ್​ ಪಾಂಡ್ಯ ಟ್ರೇಡಿಂಗ್​​ ವಿಚಾರಕ್ಕೆ ರೋಹಿತ್​ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಇದೇ ವಿಚಾರವಾಗಿ ಮ್ಯಾನೇಜ್ಮೆಂಟ್​​, ರೋಹಿತ್​ ಮಧ್ಯೆ ಹೀಟ್​​ ಡಿಬೇಟ್​ ನಡೆದಿತ್ತು ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್​​​ ಮೈಕ್ ಹಸ್ಸೀ ರಿವೀಲ್​ ಮಾಡಿದ್ದಾರೆ.

ರೋಹಿತ್​ ಶರ್ಮಾ ವಿರೋಧ

ನಿನ್ನೆ ಸಂಜೆ 5 ಗಂಟೆಗೆ ಗುಜರಾತ್​ ಟೈಟಾನ್ಸ್​ ತಂಡವು ಹಾರ್ದಿಕ್​ ಪಾಂಡ್ಯ ಅವರನ್ನು ರೀಟೈನ್​ ಮಾಡಿಕೊಂಡಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಹಾರ್ದಿಕ್​ ಅವರನ್ನು ಮುಂಬೈ ಇಂಡಿಯನ್ಸ್​ ತಂಡಕ್ಕೆ ಟ್ರೇಡ್​ ಮಾಡಲಾಗಿದೆ. ಇಷ್ಟು ಡಿಲೇಗೆ ಕಾರಣ ರೋಹಿತ್​ ಶರ್ಮಾ. ರೋಹಿತ್​ಗೆ ಹಾರ್ದಿಕ್​​ ಟ್ರೇಡಿಂಗ್​ಗೆ ವಿರೋಧ ವ್ಯಕ್ತಪಡಿಸಿದ್ದರು ಎಂದು ಮುಂಬೈ ಇಂಡಿಯನ್ಸ್​ ತಂಡದ ಡ್ರಾಮಾದ ಬಗ್ಗೆ ಮೈಕ್​ ಹಸ್ಸೀ ಹೇಳಿದ್ರು.

Advertisment

ಹೌದು, ಸ್ಟಾರ್​​ ಆಲ್​ರೌಂಡರ್​​​ ಹಾರ್ದಿಕ್​ ಪಾಂಡ್ಯ ಅವರು ಗುಜರಾತ್​​ ಟೈಟಾನ್ಸ್​ ತಂಡದಿಂದ ಮುಂಬೈ ಇಂಡಿಯನ್ಸ್​​ಗೆ ಟ್ರೇಡ್​ ಆಗಿದ್ದಾರೆ. ಹಾರ್ದಿಕ್​​ ಪಾಂಡ್ಯ ಅವರೇ ತನ್ನನ್ನು ಟ್ರೇಡ್​​ ಮಾಡಿ ಎಂದು ವಿನಂತಿ ಮಾಡಿದ್ದರು ಎನ್ನಲಾಗಿದೆ.

ಹಾರ್ದಿಕ್​ ಮುಂಬೈಗೆ ಯಾಕೆ..?

ರೋಹಿತ್​ ಶರ್ಮಾಗೆ 36 ವರ್ಷ. ಈ ಐಪಿಎಲ್​​ ಸೀಸನ್​​ ಬಹುಷ್ಯ ಕೊನೆ ಆಗಬಹುದು. ಹೀಗಾಗಿ ರೋಹಿತ್​​ ಬದಲಿಗೆ ಹಾರ್ದಿಕ್​ ಪಾಂಡ್ಯಗೆ ನಾಯಕತ್ವ ಪಟ್ಟ ಕಟ್ಟೋಕೆ ಮುಂಬೈ ಇಂಡಿಯನ್ಸ್​ ಮುಂದಾಗಿದೆ. ಈ ಸೀಸನ್​​ನಲ್ಲೇ ಹಾರ್ದಿಕ್​​​​ ಮುಂಬೈ ಇಂಡಿಯನ್ಸ್​ ಕ್ಯಾಪ್ಟನ್​ ಆಗಬಹುದು. ರೋಹಿತ್​ ಶರ್ಮಾ ಹಾರ್ದಿಕ್​​ ನಾಯಕತ್ವದಲ್ಲೇ ಕ್ರಿಕೆಟ್​ ಆಡಬಹುದು ಎನ್ನುತ್ತಿವೆ ಮೂಲಗಳು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment