ವಿರಾಟ್ ನಾಯಕತ್ವದಲ್ಲಿ ದ್ವಿಪಕ್ಷೀಯ ಸರಣಿಗಳಲ್ಲಿ ಗೆಲುವು
ಮತ್ತೆ ಮತ್ತೆ ಗೆಲುವಿನ ರುಚಿ ಬಯಸೋದು ರೋಹಿತ್ ಅಭ್ಯಾಸ
ಟ್ರೋಫಿ ಗೆಲ್ಲದ ಮುಂಬೈಗೆ ಕಪ್ ತಂದುಕೊಟ್ಟಿದ್ದ ರೋಹಿತ್
ಟೀಮ್ ಇಂಡಿಯಾ ಟಿ20 ವಿಶ್ವಕಪ್ ಕಿರೀಟಕ್ಕೆ ಮುತ್ತಿಟ್ಟು 2 ತಿಂಗಳು ಮುಗೀತಾ ಬರ್ತಿದೆ. ಈ 2 ತಿಂಗಳು ತುಂಬುತ್ತಿರುವ ಸಮಯದಲ್ಲೇ ರೋಹಿತ್ ಶರ್ಮಾ, ತನ್ನ ನೆಕ್ಸ್ಟ್ ಟಾರ್ಗೆಟ್ ಫಿಕ್ಸ್ ಮಾಡಿದ್ದಾರೆ. ರೋಹಿತ್ ಶರ್ಮಾ ಕೊಟ್ಟಿರೋ ಓಪನ್ ಸ್ಟೇಟ್ಮೆಂಟ್ ಎದುರಾಳಿಗಳಿಗೆಲ್ಲಾ ನಡುಕ ಹುಟ್ಟುವಂತೆ ಮಾಡಿದೆ. ರೋಹಿತ್ ಶರ್ಮಾ ಕೊಟ್ಟ ವಾರ್ನಿಂಗ್ ಏನು?.
ಭಾರತೀಯ ಫ್ಯಾನ್ಸ್ ರೋಹಿತ್ ಶರ್ಮಾ ಭರವಸೆ
2024 ಜೂನ್ 29.. 17 ವರ್ಷಗಳ ಬಳಿಕ ಟೀಮ್ ಇಂಡಿಯಾ ವಿಶ್ವ ಟಿ20 ಕಿರೀಟಕ್ಕೆ ಮುತ್ತಿಟ್ಟ ದಿನ. ಕೋಟ್ಯಾಂತರ ಭಾರತೀಯರ ಕನಸು ನನಸಾದ ದಿನ. ಇಡೀ ಭಾರತ ಹರ್ಷೋದ್ಗಾರದಲ್ಲಿ ಮಿಂದೆದ ದಿನ. ಆ ದಿನ ಅಂತ್ಯ ಕಂಡು 2 ತಿಂಗಳುಗಳು ಮುಗೀತಾ ಬರ್ತಿದೆ. ಇದೇ ಹೊತ್ತಲ್ಲೇ ಟೀಮ್ ಇಂಡಿಯಾದ ಮಿಷನ್ 2025 ಶುರುವಾಗಿದೆ.
ಇದನ್ನೂ ಓದಿ: IPS ಅಧಿಕಾರಿಗೆ ಸಂಬಳ ಎಷ್ಟು.. ಯಾವ ಪೋಸ್ಟ್ಗೆ ಹೆಚ್ಚು ಸ್ಯಾಲರಿ ನೀಡುತ್ತೆ ಸರ್ಕಾರ?
2024ರ ಟಿ20 ವಿಶ್ವಕಪ್ ಮಿಷನ್ನ ಸಕ್ಸಸ್ಫುಲ್ ಆಗಿ ಮುಗಿಸಿರೋ ರೋಹಿತ್, ಈಗ ಮುಂಬರೋ 2 ಐಸಿಸಿ ಟ್ರೋಫಿಗಳ ಮೇಲೆ ಕಣ್ಣಿಟ್ಟಿದ್ದಾರೆ. ಮುಂದಿನ 9 ತಿಂಗಳಲ್ಲಿ ಆ 2 ಟ್ರೋಫಿ ಗೆಲ್ಲೋ ಮಹಾ ಶಪಥ ಮಾಡಿದ್ದಾರೆ. ಇದೇ ಶಪಥ ಎದುರಾಳಿ ತಂಡಗಳಲ್ಲಿ ನಡುಕ ಹುಟ್ಟಿಸಿದೆ.
T20 ವಿಶ್ವಕಪ್ ಗೆದ್ದಾಯ್ತು.. ಇನ್ನು ರೋಹಿತ್ನ ತಡೆಯೋಕೆ ಆಗಲ್ಲ.!
ಟೀಮ್ ಇಂಡಿಯಾಗೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ರೋಹಿತ್ ಶರ್ಮಾ ಇನ್ಮುಂದೆ ಯಾರೂ ತಡೆಯೋಕೆ ಆಗಲ್ಲ. ಇನ್ನೇನಿದ್ದರೂ ರೋಹಿತ್ ನಡೆದಿದ್ದೇ ದಾರಿ. ಯಾಕಂದ್ರೆ ಒಂದು ಬಾರಿ ಗೆಲುವಿನ ರುಚಿ ಕಂಡ್ರೆ, ರೋಹಿತ್ ಮತ್ತೆ ಮತ್ತೆ ಗೆಲುವನ್ನೇ ಬಯಸೋದು. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಐಪಿಎಲ್. ರೋಹಿತ್ ನಾಯಕತ್ವದ ಪಟ್ಟಕ್ಕೇರುವ ತನಕ ಒಂದೇ ಒಂದು ಟ್ರೋಫಿ ಗೆಲ್ಲದ ಮುಂಬೈ, ರೋಹಿತ್ ನಾಯಕತ್ವದಲ್ಲಿ ಬರೋಬ್ಬರಿ 5 ಟ್ರೋಫಿಗಳಿಗೆ ಮುತ್ತಿಟ್ಟಿತ್ತು. ಇದೀಗ ಭಾರತ ತಂಡವೂ ಅಷ್ಟೇ ಹಲವು ಕಪ್ ಗೆಲ್ಲುತ್ತೆ ಅಂತಾ ಭವಿಷ್ಯ ನುಡಿದಿದ್ದಾರೆ ರೋಹಿತ್.
ಗೆಲುವಿನ ರುಚಿ ನಿಲ್ಲಿಸಲ್ಲ.!
ನಾನು 5 ಐಪಿಎಲ್ ಟ್ರೋಫಿ ಗೆದ್ದಿರುವುದಕ್ಕೆ ಕಾರಣವಿದೆ. ಒಮ್ಮೆ ಪಂದ್ಯಗಳನ್ನ ಗೆಲ್ಲುವ ಅಥವಾ ಕಪ್ ಗೆಲ್ಲವ ರುಚಿಯನ್ನ ಕಂಡರೆ ಅದನ್ನ ನಿಲ್ಲಿಸಲು ಸಾಧ್ಯವಿಲ್ಲ. ತಂಡವಾಗಿ ಗೆಲುವಿಗಾಗಿ ಮುನ್ನುಗ್ಗುತ್ತಲೇ ಇರುತ್ತೇವೆ. ನಾವು ಭವಿಷ್ಯದಲ್ಲಿ ಉತ್ತಮ ವಿಷಯಗಳಿಗಾಗಿ ಪ್ರಯತ್ನಿಸುತ್ತಲೇ ಇರುತ್ತೇವೆ.
ರೋಹಿತ್ ಶರ್ಮಾ, ಟೀಮ್ ಇಂಡಿಯಾ ನಾಯಕ
ಐಪಿಎಲ್ನಲ್ಲಿ ಗೆದ್ದಿರಬಹುದು ಹಾಗಂತ ಐಪಿಎಲ್ಗೂ ಟೀಮ್ ಇಂಡಿಯಾಗೂ ಒಂದೇನಾ ಅನ್ನೋ ಪ್ರಶ್ನೆ ಸಹಜವಾಗೇ ಮೂಡುತ್ತೆ. ಆದ್ರೆ, ಟೀಮ್ ಇಂಡಿಯಾ ಮುಂದಿನ 2 ಐಸಿಸಿ ಟ್ರೋಫಿಗಳಲ್ಲಿ ಗೆಲ್ಲೋ ಚಾನ್ಸ್ ಅತಿ ಹೆಚ್ಚಿದೆ. ರೋಹಿತ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಅಷ್ಟು ಪಕ್ವವಾಗಿ ರೂಪುಗೊಂಡಿದೆ.
ಇದನ್ನೂ ಓದಿ: ಟೀಮ್ ಇಂಡಿಯಾ ವಿಕೆಟ್ ಕೀಪರ್ ಸ್ಲಾಟ್ಗೆ ಬಿಗ್ ಫೈಟ್.. ಬೆಸ್ಟ್ಗಳ ನಡುವೆ ದಿ ಬೆಸ್ಟ್ ಯಾರಾಗ್ತಾರೆ..?
ರೋಹಿತ್ ನಾಯಕತ್ವದಲ್ಲಿ ಗೆಲುವೊಂದೆ ಮಂತ್ರ..!
ಧೋನಿ ನಾಯಕತ್ವದ ಬಳಿಕ ಟೀಮ್ ಇಂಡಿಯಾ ಐಸಿಸಿ ಟ್ರೋಫಿಗಳನ್ನ ಗೆಲ್ಲುವಲ್ಲಿ ಫೇಲ್ ಆಗಿತ್ತು. ವಿರಾಟ್ ನಾಯಕತ್ವದಲ್ಲಿ ದ್ವಿಪಕ್ಷೀಯ ಸರಣಿಗಳನ್ನ ಗೆದ್ದರೂ, ಐಸಿಸಿ ಈವೆಂಟ್ಸ್ನಲ್ಲಿ ಹೇಳಿಕೊಳ್ಳುವಂತ ಪರ್ಫಾಮೆನ್ಸ್ ನೀಡಿರಲಿಲ್ಲ. ತಂಡದಲ್ಲಿದ್ದ ಅಂದಿನ ವಾತಾವರಣ ಕೂಡ ಇದಕ್ಕೆ ಕಾರಣ. ಇದೀಗ ರೋಹಿತ್ ನಾಯಕತ್ವದಲ್ಲಿ ಭಿನ್ನ ವಾತಾವರಣವಿದೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್.. ಏಕದಿನ ವಿಶ್ವಕಪ್ ಹಾಗೂ ಟಿ20 ವಿಶ್ವಕಪ್ ಟೂರ್ನಿ.. ಈ ಟೂರ್ನಿಗಳಲ್ಲಿ ಗೆಲುವು ಅನ್ನೋದು ಟೀಮ್ ಇಂಡಿಯಾಗೆ ಸುಲಭವಾತ್ತು. ಇದೇ ಟಿ20 ವಿಶ್ವಕಪ್ ಗೆಲುವಿಗೆ ಕಾರಣ ಆಯ್ತು.
ಇದನ್ನೂ ಓದಿ: ಟೀಮ್ ಇಂಡಿಯಾಕ್ಕೆ 9 ಪ್ಲೇಯರ್ಸ್ ಫಿಕ್ಸ್.. ಉಳಿದ 6 ಸ್ಥಾನಕ್ಕೆ ಆಟಗಾರರ ಮಧ್ಯೆ ಬಿಗ್ ಫೈಟ್!
ಸದ್ಯ ಎಲ್ಲರಲ್ಲೂ ಕಾಡ್ತಿರುವ ಪ್ರಶ್ನೆ ಇದೊಂದೆ. ಮುಂದಿನ 9 ತಿಂಗಳಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಟೀಮ್ ಇಂಡಿಯಾದ ಮುಂದಿದೆ. ಬಿಸಿಸಿಐ ಕಾರ್ಯದರ್ಶಿ ಜಯ ಶಾ ಎರಡೂ ಟೂರ್ನಿಗಳಲ್ಲಿ ಭಾರತ ಗೆಲ್ಲುತ್ತೆ ಎಂಬ ಭವಿಷ್ಯ ನುಡಿದಿದ್ದಾರೆ. ಈ ಹಿಂದೆ 2024 ಟಿ20 ವಿಶ್ವಕಪ್ ವೇಳೆ ಜಯ್ ಶಾ ನುಡಿದಿದ್ದ ಭವಿಷ್ಯವಾಣಿ ನಿಜವಾಯ್ತು. ಇದೀಗ ಈ ಭವಿಷ್ಯವೂ ನಿಜವಾಗಲಿ ಅನ್ನೋದು ಫ್ಯಾನ್ಸ್ ಆಶಯವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ