ಇಂಗ್ಲೆಂಡ್ ಬೌಲರ್ಸ್ ಬೆಂಡೆತ್ತಿದ ಕ್ಯಾಪ್ಟನ್ ರೋಹಿತ್ ಶರ್ಮಾ
ಭಾರೀ ಒತ್ತಡದ ಮಧ್ಯೆಯೂ ಅದ್ಭುತ ಬ್ಯಾಟಿಂಗ್ ಮಾಡಿದ್ರು!
ವಿಕೆಟ್ ಕಳ್ಕಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಆಸರೆಯಾದ್ರು
ಇಂದು ಲಕ್ನೋ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್ ಮುಖಾಮುಖಿ ಆಗಿವೆ.
ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಬೌಲಿಂಗ್ ಆಯ್ದುಕೊಂಡಿದೆ. ಹೀಗಾಗಿ ಟೀಂ ಇಂಡಿಯಾ ಫಸ್ಟ್ ಬ್ಯಾಟಿಂಗ್ ಮಾಡುತ್ತಿದೆ. ಟೀಂ ಇಂಡಿಯಾ ಓಪನರ್ ಆಗಿ ಬಂದ ರೋಹಿತ್ ಶರ್ಮಾ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನೆರವಾದರು.
ಇನ್ನಿಂಗ್ಸ್ ಉದ್ಧಕ್ಕೂ ಅಗ್ರೆಸ್ಸಿವ್ನಿಂದಲೇ ಬ್ಯಾಟ್ ಬೀಸಿದ ರೋಹಿತ್ ಶರ್ಮಾ ಬರೋಬ್ಬರಿ 3 ಸಿಕ್ಸರ್, 10 ಫೋರ್ನಿಂದ 87 ರನ್ ಚಚ್ಚಿದ್ರು. ಈ ಮೂಲಕ ಸಂಕಷ್ಟದಲ್ಲಿ ಟೀಂ ಇಂಡಿಯಾಗೆ ಬಲ ತುಂಬಿದರು.
ಶುಭ್ಮನ್ ಗಿಲ್ ಆಡಿದ 13 ಎಸೆತಗಳಲ್ಲಿ ಕೇವಲ 9 ರನ್ಗೆ ವಿಕೆಟ್ ಒಪ್ಪಿಸಿದರು. ಇನ್ನೂ, ವಿರಾಟ್ ಕೊಹ್ಲಿ 9 ಬಾಲ್ಗಳನ್ನು ಎದುರಿಸಿ ಬೆನ್ಸ್ಟೋಕ್ಸ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ಗೆ ತೆರಳಿದರು.
ಬಳಿಕ ಕ್ರೀಸ್ಗೆ ಬಂದ ಶ್ರೇಯಸ್ ಅಯ್ಯರ್ ಸುಮಾರು 5 ಓವರ್ಗಳು ಕ್ರೀಸ್ನಲ್ಲಿ ಇದ್ದರು. ಆಡಿದ 16 ಬಾಲ್ಗಳಲ್ಲಿ 4 ರನ್ಗೆ ಮಾರ್ಕ್ಗೆ ಕ್ಯಾಚ್ ನೀಡಿ ಔಟಾದ್ರು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್